ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹಟ್ಟಿಯಂಗಡಿ ಹಾಗೂ ಶಾಲೆಯವರು ಗಣೇಶ ಚತುರ್ಥಿಯ ಅಂಗವಾಗಿ ನಡೆಸಿದ ತಾಲೂಕು ಮಟ್ಟದ ಸಾಂಸ್ಕ್ರತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಶ್ವ ವಿನಾಯಕ ಸಿ.ಬಿ.ಎಸ್.ಇ ಸ್ಕೂಲ್‌ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಒಟ್ಟು 11 ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಪ್ರಾಥಮಿಕ ವಿಭಾಗ:
ಭಾವಗೀತೆ – ಸುಹಾನ್, ತೃತೀಯ ಸ್ಥಾನ, ಕನ್ನಡ ಉಕ್ತಲೇಖನ – ಅಧಿತಿ, ಪ್ರಥಮ ಸ್ಥಾನ, ಆಕಾಂಕ್ಷ – ದ್ವಿತೀಯ ಸ್ಥಾನ, ರಸ ಪ್ರಶ್ನೆ – ಅರ್ಷ್, ಪ್ರಥಮ ಸ್ಥಾನ, ಶ್ರೀಯಾ – ದ್ವಿತೀಯ ಸ್ಥಾನ.
ಪ್ರೌಢ ವಿಭಾಗ:
ಕುಂದಾಪ್ರ ಕನ್ನಡ ಭಾಷಣ – ಹನಿ ಶೆಟ್ಟಿ, ಪ್ರಥಮ ಸ್ಥಾನ, ಇಂಗ್ಲೀಷ್ ಭಾಷಣ – ಅವನಿ – ದ್ವಿತೀಯ ಸ್ಥಾನ, ಸ್ಪರ್ಶ – ತೃತೀಯ ಸ್ಥಾನ
ಕ್ರೀಡಾ ವಿಭಾಗ:
ಗುಂಡು ಎಸೆತ – ಶ್ರದ್ದಾ – ತೃತೀಯ ಸ್ಥಾನ, ಸುಡೋಕು – ಸಮೀಕ್ಷಾ – ತೃತೀಯ ಸ್ಥಾನ, ಸುಡೋಕು – ವನ್ಮಯಿ – ತೃತೀಯ ಸ್ಥಾನ
ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಮ್ಯಾನೇಜಿಂಗ್ ಡೈರೆಕ್ಟರ್ ಎಮ್. ಪ್ರಭಾಕರ ಶೆಟ್ಟಿ ಅವರು ಬಹುಮಾನಗಳನ್ನು ವಿತರಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ನಿತಿನ್ ಡಿ. ಆಲ್ಮೇಡಾ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.















