ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಮಾನವ ಸಂವೇದನೆಗೆ ಮಾತೃಭಾಷೆಯೇ ಮೂಲಧಾತು. ಮಾತೃಭಾಷೆಯಿಂದ ದೂರ ಸರಿದಂತೆಲ್ಲಾ ಸಂವೇದನೆಯೂ ಕ್ಷೀಣಿಸುತ್ತದೆ. ಮಕ್ಕಳ ಮೇಲೆ ಪರಭಾಷಾ ಒತ್ತಡ ಹೇರಿದಂತೆಲ್ಲಾ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುವ ಸಾಧ್ಯತೆಯೇ ಹೆಚ್ಚು ಎಂದು ಸಾಹಿತಿ, ಜಾದೂಗಾರ ಓಂ ಗಣೇಶ್ ಉಪ್ಪುಂದ ಹೇಳಿದರು. ಅವರು ಸೋಮವಾರ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಸುದ್ದಿತಾಣ ಹಾಗೂ ಕಾಲೇಜಿನ ವಿವಿಧ ಸಂಘಗಳು ಜಂಟಿಯಾಗಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರದಲ್ಲಿ ಮಾತನಾಡಿ, ಭಾಷೆ ಹೃದಯ ಅರಳಿಸುವ ಸಾಧನ. ಅದರೊಂದಿಗೆ ನೆಲ ಜಲ ಬದುಕಿನ ಸಾಂಗತ್ಯವಿದೆ. ಕನ್ನಡ ಎಂದಾಗ ಮೂಡುವಷ್ಟು ಪ್ರೀತಿ, ಸಂಚಲನ ಮಾತೃಭಾಷೆಯಲ್ಲದೇ ಬೇರೆ ಭಾಷೆಯಿಂದ ಸಾಧ್ಯವಿಲ್ಲ. ಕನ್ನಡಕ್ಕಾಗಿ ನಾವೇ ಶ್ರಮಿಸಬೇಕು, ಭಾಷೆ ಉಳಿಸುವ ಸೈನಿಕರಾಗಲು ಪಣತೊಡೋಣ ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಜ್ಯೋತ್ಸವದ ಹೊತ್ತಿನಲ್ಲಿ ನೈಜ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ರಾಜ್ಯ ಸರಕಾರದಿಂದ ಆಗಿದೆ. ಕನ್ನಡವನ್ನು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ತಾಲೂಕು ಆಡಳಿತದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ರಾಜು ಕೆ. ಅವರು, ವಚನ, ಗಾಯನದಂತೆ ಯಕ್ಷಗಾನವು ಕನ್ನಡ ನುಡಿ ಸೇವೆಗೆ ಮಹತ್ತರ ಕೊಡುಗೆ ನೀಡಿದೆ. ವಿಜ್ಞಾನ, ವೈದ್ಯಕೀಯ, ತಂತ್ರಜ್ಞಾನ ಭಾಷೆಯೂ ಕನ್ನಡವಾಗಬೇಕು ಎನ್ನುವ ಆಶಯ ನಮ್ಮದು. ಕನ್ನಡಕ್ಕೆ ಎರಡೂವರೆ ಸಾವಿರ ವರ್ಷಗಳ ಭವ್ಯವಾದ ಇತಿಹಾಸವಿದೆ. ಕನ್ನಡದ ಶ್ರೇಷ್ಠತೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಜವಬ್ದಾರಿ ನಮ್ಮ ಮೇಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಮಾತನಾಡಿ, ಕನ್ನಡದ ಕಂಪು ದಶ ದಿಕ್ಕುಗಳಿಗೂ ವ್ಯಾಪಿಸಿದೆ. ಕನ್ನಡದ ಶಕ್ತಿ ಅದ್ಭುತ. ಕನ್ನಡ ಭಾಷೆಯ ಬಳಕೆ ಎಲ್ಲ ಕಡೆಗಳಲ್ಲೂ ನಿರಂತರವಾಗಿರಬೇಕು ಎಂದರು. ಪುರಸಭಾ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾಕರ್ ವಿ., ಸಂತೊಷ್ ಶೆಟ್ಟಿ, ಕಮಲ ಮಂಜುನಾಥ್ ಪೂಜಾರಿ, ಪುಷ್ಪಾ ಶೇಟ್, ನಗರ ಯೋಜನಾ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಸರೋಜಿನಿ ಮಹಿಷಿ ವರದಿಯಂತೆ ರಾಜ್ಯದಲ್ಲಿನ ಐಟಿ ಬಿಟಿ ಸೇರಿದಂತೆ ಎಲ್ಲಾ ಖಾಸಗಿ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ನೀಡುವ ಕುರಿತಂತೆ, ಕಾನೂನು ಚೌಕಟ್ಟಿನಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ರಾಜ್ಯದ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು. ಅವರು ಇಂದು ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಿರುದ್ಯೋಗ ನಿವಾರಣೆ ಮತ್ತು ಕನ್ನಡ ಭಾಷಾಭಿಮಾನ ಹೆಚ್ಚಿಸಲು , ಕರ್ನಾಟಕದಲ್ಲಿ ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯವನ್ನು ನೀಡುವ ನಿಟ್ಟಿನಲ್ಲಿ, ಸರೋಜಿನಿ ಮಹಿಷಿ ವರದಿಯಲ್ಲಿ ಕೆಲ ಮಾರ್ಪಾಡುಗಳೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಕನ್ನಡಿಗರಿಗೆ ಕಡ್ಡಾಯವಾಗಿ ಉದ್ಯೋಗ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು. ಯುವ ಜನತೆ ಕನ್ನಡ ಸಾಹಿತ್ಯವನ್ನು ಹೆಚ್ಚು ಹೆಚ್ಚು ಓದುವುದರೊಂದಿಗೆ, ನವ ಸಾಹಿತಿಗಳ ಸಂಖ್ಯೆ ಹೆಚ್ಚಿಸಲು ಬೇಕಾದ ಸೌಲಭ್ಯಗಳನ್ನು ಸರಕಾರದಿಂದ ನೀಡಲು ಸೂಕ್ತ ಯೋಜನೆಗಳನ್ನು ರೂಪಿಸಲಾಗುವುದು ಎಂದ ಅವರು, ಕನ್ನಡ ಪುಸ್ತಕಗಳನ್ನು ಓದುವ ಪ್ರವೃತ್ತಿಯನ್ನು ರೂಢಿಸಿಕೊಳ್ಳುವುದರೊಂದಿಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರಾಥಮಿಕ ಆರೋಗ್ಯ ಕೇಂದ್ರ ವಂಡ್ಸೆ, ರೋಟರಿ ಕ್ಲಬ್ ಕುಂದಾಪುರ, ಗ್ರಾಮ ಪಂಚಾಯಿತಿ ವಂಡ್ಸೆ, ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೆಬಲ್ ಟ್ರಸ್ಟ್, ಶಿರೂರು ಮುದ್ದುಮನೆ ಇವರ ಆಶ್ರಯದಲ್ಲಿ ಕಣ್ಣಿನ ಪೊರೆ ರೋಗ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದದಲ್ಲಿ ನಡೆಯಿತು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಶಶಿಧರ ಹೆಗ್ಡೆ ಶಿಬಿರವನ್ನು ಉದ್ಘಾಟಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಂಕರ ಆಚಾರ್ಯ ಮತ್ತು ಸಿಬ್ಬಂದಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಪಾರ್ವತಿ ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ ಶಿರೂರು ಮುದ್ದುಮನೆ ಇದರ ನೇತ್ರ ತಜ್ಞರಾದ ಡಾ. ಮನೋಜ್ ಭಟ್ ಮತ್ತು ಡಾ. ಅಭಿನಯ ಹಾಗೂ ತಂಡ, ರೋಟರಿ ಕ್ಲಬ್ ಕುಂದಾಪುರದ ಸದಸ್ಯರಾದ ರವಿರಾಜ್ ಶೆಟ್ಟಿ ಮತ್ತು ಗಣೇಶ್ ಐತಾಳ್ ಉಪಸ್ಥಿತರಿದ್ದರು. ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಪ್ರವೀಣ್ ಕುಮಾರ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಕನ್ನಡ ನೆಲದಲ್ಲಿ ಹುಟ್ಟಿದ ನಾವೆಲ್ಲರೂ ಭಾಷೆಯ ಬೆಳವಣಿಗೆ, ಉಳಿವಿಗೆ ಶ್ರಮಿಸಬೇಕು. ಕನ್ನಡ ನಾಡು ನುಡಿಯಿಂದ ಏಕತೆ, ಸಮಗ್ರತೆ ಸಾಧ್ಯವಾಗಿದೆ. ನಮ್ಮ ಕುಂದಾಪ್ರ ಕನ್ನಡ ಶ್ರೇಷ್ಠ ಕನ್ನಡವಾಗಿದ್ದು, ಈ ಭಾಗದ ಜನರು ಎಲ್ಲೆಡೆ ಕುಂದಾಪ್ರ ಕನ್ನಡದ ಕಂಪನ್ನು ಪಸರಿಸಿದ್ದಾರೆ. ಶ್ರೇಷ್ಠ ಕನ್ನಡ ನಾಡು, ಕನ್ನಡ ಭಾಷೆ ಇನ್ನಷ್ಟು ಅಭಿವೃದ್ಧಿಯಾಗಬೇಕು. ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಗಳಲ್ಲಿ ಈ ದಿಸೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಶಾಲೆಯ ಅಭಿವೃದ್ಧಿಗೆ ಸರಕಾರದ ಅನುದಾನ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಹೇಳಿದರು. ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಗಳ ವತಿಯಿಂದ ಸ.ವಿ. ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಸೋಮವಾರ ಜರಗಿದ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಗಂಗೊಳ್ಳಿ ಜಿಎಸ್ವಿಎಸ್ ಅಸೋಸಿಯೇಶನ್ ಅಧ್ಯಕ್ಷ ಡಾ. ಕಾಶೀನಾಥ ಪೈ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಭಾರ್ಗವ್ ಮಧ್ಯಸ್ಥ, ಮಾನ್ಯತಾ ವಿ.ಶೇಟ್, ವರುಣ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಭಾರತೀಯ ವೈದ್ಯ ಸಂಘ (ಐಎಮ್ಎ) ಕುಂದಾಪುರ ಶಾಖೆಯ ಆಶ್ರಯದಲ್ಲಿ ಕೆಎಂಸಿ ಮಂಗಳೂರು ಅವರ ಸಹಯೋಗದಲ್ಲಿ ಮುಂದುವರಿದ ವೈದ್ಯಕೀಯ ಶಿಕ್ಷಣವು ( ಸಿಎಂಇ) ಎಲುಬು ಕೀಲು ವಿಭಾಗ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ಕೋಟೇಶ್ವರದ ಯುವ ಮೆರಿಡಿಯನ್ ಹೋಟೆಲ್ನ ಮಿನಾಲ್ ಹಾಲ್ ನಲ್ಲಿ ನೆರವೇರಿತು. ಈ ಸಂದರ್ಭ ಡಾ ಸಂದೀಪ ನಾವಡ ಪಿ ಎಲುಬು ಕೀಲು ತಜ್ಞರು ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಕೆಎಂಸಿ ಮಂಗಳೂರಿನ ಡಾ. ಯೋಗೀಶ್ ಕಾಮತ್, ಡಾ. ಈಶ್ವರ್ ಕೀರ್ತಿ ಭಾಗವಹಿಸಿದ್ದರು. ಕಾರ್ಯದರ್ಶಿ ಡಾ. ರವೀಂದ್ರ ಮುನೋಲಿ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಕನ್ನಡ ಭಾಷೆಯ ನೆಲೆಗಟ್ಟಿನಲ್ಲಿ ಏಕೀಕರಣಗೊಂಡ ಕನ್ನಡ ನಾಡು ಅತ್ಯಂತ ವಿಶಿಷ್ಟವಾದ ಸಂಸ್ಕೃತಿ ಕಲೆ ಮತ್ತು ಪರಂಪರೆಗೆ ನೆಲೆಯಾಗಿದೆ ಎಂದು ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮೀ ಹೆಚ್. ಎಸ್ ಹೇಳಿದರು. ಅವರು ತಾಲೂಕಿನ ಆಡಳಿತ ಕಛೇರಿ ವತಿಯಿಂದ 66ನೇ ಕನ್ನಡ ರಾಜ್ಯೋತ್ಸವ ಸೋಮವಾರ ಬೈಂದೂರು ಗಾಂಧಿ ಮೈದಾನದಲ್ಲಿ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ ಕನ್ನಡವೆಂದರೆ ಬರಿ ನುಡಿಯಲ್ಲ ಅದು ಜೀವನದ ಅರ್ಥ ಎಂಬ ಕವಿವಾಣಿಯಂತೆ ಇಲ್ಲಿನ ಭಾಷೆ, ಪರಂಪರೆ, ಕಲೆ ಮತ್ತು ಸಾಹಿತ್ಯ ಸಂಸ್ಕೃತಿಗಳೆಲ್ಲವೂ ಕನ್ನಡಮಯವೇ. ಇಲ್ಲಿ ಆಳಿದ ನೂರಾರು ರಾಜಮನೆತನಗಳು, ಕನ್ನಡ ನಾಡಿನ ಶಿಲ್ಪ, ಸಂಗೀತ, ನೃತ್ಯ, ನಾಟಕ, ಸಾಹಿತ್ಯ ಪರಂಪರೆಗಳನ್ನು ಪೋಷಿಸಿವೆ. ನಾಡಿನ ಪ್ರತಿಯೊಬ್ಬ ಪ್ರಜೆಯೂ ಭಾವೈಕತೆ, ನಾಡಪ್ರೇಮ ಮತ್ತು ದೇಶಪ್ರೇಮವನ್ನು ಹೊಂದಿ ಈ ನಾಡಿನ ಸಮಗ್ರ ಅಭಿವೃದ್ಧಿಗೆ ತಮ್ಮ ಸಮಯವನ್ನು ಮೀಸಲಿಡಲು ಶ್ರಮಿಸಬೇಕು ಎಂದರು. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯರಾದ ಬಾಬು ಹೆಗ್ಡೆ, ಸುರೇಶ್ ಬಟವಾಡಿ, ಬೈಂದೂರು ಪೊಲೀಸ್…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ದೀಪಾವಳಿಯ ಪ್ರಯುಕ್ತ ನಡೆಯಲಿರುವ ಅಭ್ಯಂಗ ಸಪ್ತಾಹಕ್ಕೆ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್ ಭಟ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಹ ವೈದ್ಯಾಧಿಕಾರಿಗಳಾದ ಡಾ. ವಿಕ್ರಮ್ ಕುಮಾರ್, ಪಿಜಿ ಡೀನ್ ಡಾ. ರವಿಪ್ರಸಾದ್ ಹೆಗ್ಡೆ, ಪಿಎಚ್ಡಿ ಡೀನ್ ಡಾ. ಕೃ?ಮೂರ್ತಿ ಎಂ. ಎಸ್. ಪಂಚಕರ್ಮ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ್ ಬಿ. ಎಸ್. ಕಾಯಕಲ್ಪ ವಿಭಾಗದ ಮುಖ್ಯಸ್ಥೆ ಡಾ. ರೋಹಿಣಿ ಪುರೋಹಿತ್, ಪಿಜಿ ವಿದ್ಯಾರ್ಥಿಗಳು, ಇಂಟರ್ನಿ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ಅಭ್ಯಂಗ ಸಪ್ತಾಹವು ಅಕ್ಟೋಬರ್ 31ರಿಂದ ನವೆಂಬರ್ 7ರವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಆಯುರ್ವೇದ ಆಸ್ಪತ್ರೆಯ ಕಾಯಕಲ್ಪ ವಿಭಾಗದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಭ್ಯಂಗ, ಸ್ವೇದನ, ರೋಗನಿರೋಧಕ ಶಕ್ತಿ ಹೆಚ್ಚಿಸಲು ಕಾಂಪ್ಲಿಮೆಂಟರಿ ಪ್ಯಾಕ್ ಮುಂತಾದ ಸೌಲಭ್ಯಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮದನ್ವಯ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ನ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಯ 30 ಅಧಿಸೂಚಿತ ಸಂಸ್ಥೆಗಳಿಗೆ ಮರು ಪ್ರಕಟಣೆ ಹಾಗೂ ಹೊಸದಾಗಿ ಬಿ ಪ್ರವರ್ಗ 1 ಮತ್ತು ಸಿ ಪ್ರವರ್ಗದ 21 ಅಧಿಸೂಚಿತ ಸಂಸ್ಥೆಗಳು/ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಭಕ್ತಾಧಿಗಳು, ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಟ 25 ವರ್ಷ ವಯಸ್ಸಿನ ಆಸಕ್ತ ಭಕ್ತಾದಿಗಳು ಯಾವುದೇ ಒಂದು ಅಧಿಸೂಚಿತ ಸಂಸ್ಥೆಯ / ದೇವಾಲಯದ ವ್ಯವಸ್ಥಾಪನಾ ಸಮಿತಿಗೆ ಮಾತ್ರ ಸದಸ್ಯತ್ವ ಕೋರಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ನವೆಂಬರ್ 29 ರ ಒಳಗೆ , ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಜಿಲ್ಲಾ ಕಚೇರಿಗಳ ಸಂಕೀರ್ಣ, ರಜತಾದ್ರಿ, ಮಣಿಪಾಲ ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ. ಬಿ ಪ್ರವರ್ಗದ ದೇವಸ್ಥಾನಗಳು: ಉಡುಪಿ ತಾಲೂಕಿನ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಖೋ-ಖೋ ಕ್ರೀಡೆ ಎಲ್ಲಾ ಕ್ರೀಡೆಗಳಿಗೆ ತಾಯಿಯಿದ್ದಂತೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಎಲ್ಲಾ ಕ್ರೀಡೆಗಳಲ್ಲೂ ಯಶಸ್ಸನ್ನ ಕಾಣಬುಹುದು ಎಂದು ಸ್ಪೋಟ್ಸ್ ಆಥಾರಿಟಿ ಆಫ್ ಕರ್ನಾಟಕದ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಶನ್ನ ಅಧ್ಯಕ್ಷ ಕೆ ಪಿ ಪುರುಷೋತ್ತಮ ನುಡಿದರು ಅವರು ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಹಾಗೂ ದಕ್ಷಿಣ ಕನ್ನಡ ಖೋ-ಖೋ ಅಸೋಸಿಯೇಶನ್ನ ಜಂಟಿ ಆಶ್ರಯದಲ್ಲಿ, ಕಾಲೇಜಿನ ಕುವೆಂಪು ಸಭಾಭವನದಲ್ಲಿ ಜರುಗಿದ ಎರಡು ದಿನಗಳ ‘ಖೋ-ಖೋ ಕ್ರೀಡಾ ತರಬೇತುದಾರರ ಕಾರ್ಯಾಗಾರ’ ಹಾಗೂ ‘ರಾಜ್ಯ ಮಟ್ಟದ ಕ್ರೀಡಾ ತೀರ್ಪುಗಾರರ ಪರೀಕ್ಷೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಖೋ-ಖೋ ಕ್ರೀಡೆ ಸ್ಪರ್ಧಾಳುಗಳಲ್ಲಿ ಚಿತ್ತಾವಧಾನದ ಜತೆಗೆ ಬಹುಮಟ್ಟದ ಚಾಕಚಕ್ಯತೆ, ಸಾಮಾರ್ಥ್ಯ ಹಾಗೂ ಚುರುಕುತನವನ್ನು ಹೊಂದಲು ಸಹಕಾರಿ. ಈ ಕ್ರೀಡೆಯತ್ತಾ ಹೆಚ್ಚಿನ ಜನರು ಆಕರ್ಷಿತರಾಗುವಂತೆ ಮಾಡಬೇಕು ಎಂದರು. ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಶನ್ ಗೌರವಾಧ್ಯಕ್ಷ ಲೋಕೇಶ್ವರ ಮಾತನಾಡಿ, ಖೋ-ಖೋ ಕ್ರೀಡೆಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ…
