Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿಯಿಂದ ೭ನೇ ತರಗತಿಯ ತನಕದ ವಿದ್ಯಾರ್ಥಿಗಳಿಗೆ ಎಮ್.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಕೊಡಮಾಡಿದ ನೋಟ್ ಪುಸ್ತಕ ಮತ್ತು ಪಠ್ಯ ಪುಸ್ತಕ ವಿತರಣೆ ಇತ್ತೀಚೆಗೆ ನಡೆಯಿತು. ಪುಸ್ತಕ ವಿತರಿಸಿ ಮಾತನಾಡಿದ ಎಮ್.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು, ಕೋವಿಡ್-19 ನಂತಹ ಕಷ್ಟಕಾಲದಲ್ಲಿಯೂ ನಮ್ಮ ಶಾಲೆಯ 400 ಮಂದಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇರುವುದರಲ್ಲಿ ಸ್ವಲ್ಪ ದಾನ ಮಾಡುವ ಮನದಾಸೆಯಿಂದ ಕಷ್ಟಕಾಲವಾದರೂ ನೀಡುತ್ತಿದ್ದೇನೆ ಎಂದರು. ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ, ಗ್ರಾ.ಪಂ. ಅಧ್ಯಕ್ಷರಾದ ಉದಯ ಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಈ ಶಾಲೆಗೆ ಕೃಷ್ಣಮೂರ್ತಿ ಮಂಜರ ಸಹಕಾರ ಶ್ಲಾಘನಾರ್ಹವಾದುದು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ನಮ್ಮ ಶಾಲೆಗೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ಅದರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಮೆಚ್ಚುವಂತಹದ್ದು. ಇವರೊಂದಿಗೆ ಶಿಕ್ಷಣ ಇಲಾಖೆ ಸಹಕರಿಸಿದ್ದಲ್ಲಿ ಉತ್ತಮವಿದೆ ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವೈದ್ಯಕೀಯ ಕಾಲೇಜುಗಳ ಭಾಗವಾಗಿ ಆರಂಭಗೊಂಡಿರುವ ‘ಆಳ್ವಾಸ್ ನಿರಾಮಯ’- ಆಯುಷ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ ಇಂದು ನಡೆಯಿತು. ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಆಸ್ಪತ್ರೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರ ತಂದೆ ಶತಾಯುಷಿ ಆನಂದ ಆಳ್ವ ಉದ್ಘಾಟಿಸಿದರು. ಮೂಡುಬಿದಿರೆ ಹಾಗೂ ಸುತ್ತಲಿನ ಪ್ರದೇಶಗಳ ಜನರಿಗೆ ಉನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ‘ಆಳ್ವಾಸ್ ನಿರಾಮಯ’ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಆಯುರ್ವೇದ, 60 ಬೆಡ್‌ಗಳ ಈ ಆಸ್ಪತ್ರೆಯಲ್ಲಿ ನ್ಯಾಚುರೋಪತಿ ಹಾಗೂ ಹೋಮಿಯೋಪತಿ ಚಿಕಿತ್ಸಾ ಸೌಲಭ್ಯಗಳಿದ್ದು, ಜನಸಾಮಾನ್ಯರ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆಯನ್ನು ನೀಡುವ ಆಶಯವನ್ನು ಹೊಂದಿದೆ. ಸುಸಜ್ಜಿತವಾದ ಒಳರೋಗಿ ಹಾಗೂ ಹೊರರೋಗಿ ವಿಭಾಗಗಳಿದ್ದು, ಒಳರೋಗಿಗಳಿಗೆ ಸಕಲ ಸೌಲಭ್ಯಗಳಿರುವ ಸ್ಪೆಷಲ್, ಡಿಲಕ್ಸ್ ಹಾಗೂ ಸೂಟ್ ರೂಮ್‌ಗಳು ಲಭ್ಯವಿರುತ್ತವೆ. ಚಿಕಿತ್ಸೆಗೆ ಬರುವ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹಾಸ್ಪಿಟಲ್’ ವಿಶಿಷ್ಟ ಅವಕಾಶವಿದ್ದು, ವೈ ಫೈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮರವಂತೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯಿತು. ಈ ಸಂದರ್ಭ ಊರಿನ ಪರಿಣಿತ ನಾಗಸ್ವರ ವಾದಕ ಉಮೇಶ್ ದೇವಾಡಿಗ ಅವರನ್ನು ಧರ್ಮದರ್ಶಿ ವಿ. ತಿಮ್ಮ ದೇವಾಡಿಗ ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಉದ್ಯಮಿ ನಾಣು ಚಂದನ್ ಮುಂಬೈ, ನರಸಿಂಹ ದೇವಾಡಿಗ ಮರವಂತೆ, ವೆಂಕ್ಟ ದೇವಾಡಿಗ ಮರವಂತೆ, ಇತರರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದ ಸುವಿಧಾ ಸುರೇಶ್ ಶೆಟ್ಟಿ ಅವರನ್ನು ಬೈಂದೂರು ಅರ್ಬನ್ ಸೌಹಾರ್ದ ಕ್ರೇಡಿಟ್ ಕೋ- ಆಪರೇಟಿವ್ ಸೊಸೈಟಿಯ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು ಈ ಸಂದರ್ಭ ಸಂಸ್ಥೆಯ ನಿರ್ದೇಶಕರಾದ ಸುರೇಶ್ ಶೆಟ್ಟಿ, ಅಧ್ಯಕ್ಷರಾದ ಮಣಿಕಂಠ ಎಸ್. ಬೈಂದೂರು, ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಿದ್ಕಲ್ ಕಟ್ಟೆಯ ಹಾರ್ದಳ್ಳಿ ಮಂಡಳ್ಳಿ ಶಂಕರ ಆಚಾರ್ಯರ ಮಗ ನಂದೀಶ್ (13) ಎರಡು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು. ಹೆಚ್ಚಿನ ಚಿಕಿತ್ಸೆಗೆ ಸಹೃದಯಿಗಳ ನೆರವಿನ ಅಗತ್ಯವಿದೆ. ಪ್ರಸ್ತುತ ಯನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ತಿಳಿಸಿದಂತೆ ಕಿಡ್ನಿ ಮರುಜೋಡಣೆ ಆಗುವ ತನಕ ವಾರಕ್ಕೆ 3 ಡಯಾಲಿಸಿಸ್ ಮಾಡುವ ಅನಿವಾರ್ಯತೆ ಇದೆ. ಪ್ರತಿ ತಿಂಗಳು ಸುಮಾರು 15ರಿಂದ 20 ಸಾವಿರದಂತೆ ಅಂದಾಜು 20 ಲಕ್ಷ ಹಣ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ನೆರವಿಗೆ ಮನವಿ: ನಂದೀಶ್ ಅವರ ತಂದೆ ಜೀವನಕ್ಕಾಗಿ ಪುಟ್ಟ ವಾಚ್ ರೀಪೆರಿ ಅಂಗಡಿ ನಡೆಸುತ್ತಿದ್ದು ಬರುವ ಅಲ್ಪ ಸ್ವಲ್ಪ ಸಂಪಾದನೆಯಲ್ಲಿ ಜೀವನ ನಡೆತ್ತಿದ್ದಾರೆ. ಈ ಬಡ ಕುಟುಂಬಕ್ಕೆ ಚಿಕಿತ್ಸೆಗೆ ಇಷ್ಟೊಂದು ಹಣ ಹೊಂದಿಸಲು ಸಾದ್ಯವಾಗುತ್ತಿಲ್ಲ ಹೆಚ್ಚಿನ ಚಿಕಿತ್ಸೆಗೆ ಹಣ ಹೊಂದಿಸಲು ದಾನಿಗಳ ಮೊರೆ ಹೋಗಿದ್ದಾರೆ. ನಂದೀಶ್‌ಗೆ ಸಹಾಯ ಮಾಡಲಿಚ್ಚಿಸುವವರು. ಕೆನರಾ ಬ್ಯಾಂಕ್ ಬಿದ್ಕಲ್ ಕಟ್ಟೆ ಖಾತೆ ಸಂಖ್ಯೆ ನಂ: 01622210020948, ಐಎಫ್‍ಸಿ ಕೋಡ್: CNRB0010162, Phone pay…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾನ್ಕಿ ಸ್ನೇಹಿತರ ವತಿಯಿಂದ ನಿತ್ಯ ಸಂಚರಿಸುವ ರಸ್ತೆಯನ್ನು ಸ್ವಚ್ಛ ಮಾಡುವ ಕಾರ್ಯ ನಡೆಯಿತು. ಈ ಸಂದರ್ಭ ಸ್ನೇಹಿತರಾದ ರವೀಂದ ಶೆಟ್ಟಿ ಹಾಸ್ಕಲ್ಪಾರೆ, ಸುಕೇತ್ ಶೆಟ್ಟಿ ಭಂಡಾರಗಡಿ, ಜೀವನ್ ಶೆಟ್ಟಿ ಮಕ್ಕಿಮನೆ, ಕೃಷ್ಣ ಪೂಜಾರಿ ಕಾನ್ಕಿ, ಪುನೀತ್ ಶೆಟ್ಟಿ ಭಂಡಾರಗಡಿ, ಅಜಿತ್ ಶೆಟ್ಟಿ ಭಂಡಾರಗಡಿ, ಪ್ರದೀಶ್ ಶೆಟ್ಟಿ ಕರ್ಕಾಡಿ, ಜೋಸೆಫ್ ವಡಕಾ ಮೊದಲಾದವರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಸ್ರೂರು ವಿಲಾಸಕೇರಿ ದಿ.ಗೋಪಾಲಕೃಷ್ಣ ಶೆಣೈ ಇವರ ಮನೆಗೆ ‘ಸ್ವರಾಜ್ಯ 75’ರ ಕಾಯ೯ಕ್ರಮ ದಡಿಯಲ್ಲಿ ‘ಸ್ವಾತಂತ್ರ್ಯ ಹೋರಾಟಗಾರರ ಮನೆ’ ಎನ್ನುವ ನಾಮ ಫಲಕವನ್ನು ಸ್ವಾತಂತ್ರ್ಯ ದಿನದಂದು ಶಿವಮೊಗ್ಗ ಚಾಟ೯ರ್ಡ್ ಇಂಜಿನಿಯರ್ ಅಜಯ್ ಕುಮಾರ್ ಶಮಾ೯ ಅವರು ನಾಮಫಲಕ ಅನಾವರಣಗೊಳಿಸಿದರು. ಸಂಪನ್ಮೂಲ ವ್ಯಕ್ತಿ ಬಸ್ರೂರು ಶ್ರೀ ಶಾರದಾ ಕಾಲೇಜು ಉಪನ್ಯಾಸಕರಾದ ಅಕ್ಷಯ್ ಹೆಗ್ಡೆ ‘ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ’ ಎನ್ನುವ ವಿಚಾರವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಬಿ.ಎಸ್.ಎಫ್ ನಿವೃತ್ತ ಮಾಜಿ ಸೈನಿಕರಾದ ಗಣಪತಿ ಖಾವಿ೯, ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗ ಅಶೋಕ್ ಕಾಮತ್ ಉಪಸ್ಥಿತರಿದ್ದರು. ವಿಳ್ಯದೆಲೆ ನೀಡುವುದರ ಮೂಲಕ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ಕಾಯ೯ಕ್ರಮ ಆರಂಭಿಸಿದರು. ಖ್ಯಾತ ಬರಹಗಾರ ವಸಂತ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶೋಕ್ ಕೆರೆಕಟ್ಟೆ ಧನ್ಯವಾದಗೈದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ, ಉದ್ಯೋಗದ ಹಕ್ಕಿಗಾಗಿ ಡಿವೈಎಫ್ಐ ರಾಜ್ಯ ಸಮಿತಿಯ ಕರೆಯ ಮೇರೆಗೆ ರಾಜ್ಯಾದ್ಯಂತ ಜರಗಿದ ಯುವಜನರ ಪ್ರತಿಭಟನೆಯ ಭಾಗವಾಗಿ ಬೈಂದೂರು ತಾಲೂಕು ಡಿವೈಎಫ್ಐ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ಡಿವೈಎಫ್ಐ ಬೈಂದೂರು ತಾಲೂಕು ಸಮಿತಿ ಮುಖಂಡರಾದ ವಿಜಯ. ಬಿ. ಕಿರಿಮಂಜೇಶ್ವರ, ಜೊಕಿಮ್ ಗ್ರಾಸ್, ಯಡ್ತರೆ,ಹರೀಶ್ ಬೈಂದೂರು, ಚಾಕೊ ಥೋಮಸ್ ಬೈಂದೂರು, ಉದಯ ಗಾಣಿಗ ಮೊಗೇರಿ, ರೋನಿ ಶಿರೂರು, ನಾಗರತ್ನ ಪಡುವರಿ, ಭವಾನಿ ಹೇನಬೇರು, ಪಡುವರಿ, ರತ್ನಿ ಪಡುವರಿ, ಲಕ್ಷ್ಮಿ ಯಡ್ತರೆ, ಬಾಬು ಕೆ ದೇವಾಡಿಗ, ಉಪ್ಪುಂದ, ರವೀಂದ್ರ ಮರಾಠಿ ಯಳಜೀತ್ ಮೊದಲಾದವರು ಹೋರಾಟದ ನೇತೃತ್ವ ವಹಿಸಿದ್ದರು. ಕಾಮಿ೯ಕ ಮುಖಂಡರಾದ ಗಣೇಶ ತೊಂಡೆಮಕ್ಕಿ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಗಣೇಶ ಮೊಗವೀರ ಬೈಂದೂರು, ವೆಂಕಟೇಶ್ ಕೋಣಿ, ಸಾವಿತ್ರಿ ಹೆಮ್ಮಾಡಿ, ಸರಸ್ವತಿ ಬೈಂದೂರು, ಲಕ್ಷ್ಮಿ ಯಡ್ತರೆ, ಡಾ. ಬಿ. ವಿ. ಬೇಬಿ ಹಾಲ್ಕಲ್ ಮೊದಲಾದವರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆ ಸಾಧನಾ ಮತ್ತು ಸಾಧನಾ ಜನಾರ್ದನ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಭಾನುವಾರ ಸಾಧನಾ ಸಮುದಾಯ ಭವನದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ನಡೆಯಿತು. ಸಾಧನಾ ಅಧ್ಯಕ್ಷ ಚಂದ್ರ ಬಿಲ್ಲವ ರಾಷ್ಟ್ರಧ್ವಜ ಅರಳಿಸಿ, ಬಳಿಕ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದೇಶ ವಿದೇಶಗಳಲ್ಲಿ ನಡೆದ ಯೋಗ ಸ್ಪರ್ಧೆಗಳಲ್ಲಿ ಉತ್ಕೃಷ್ಟತೆ ಮೆರೆದು ಚಿನ್ನ ಬೆಳ್ಳಿ ಗೆದ್ದುಕೊಂಡಿರುವುದಲ್ಲದೆ ಈಚೆಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆಯಾದ ಮತ್ತು ಫ್ರೈಡ್ ಆಫ್ ಇಂಡಿಯ ಪ್ರಶಸ್ತಿ ಪಡೆದ ಬಾಲಕಿ ಧನ್ವಿ ಮರವಂತೆ ಅವರನ್ನು ಸನ್ಮಾನಿಸಲಾಯಿತು. ಜತೀಂದ್ರ ಮರವಂತೆ ಧನ್ವಿಯನ್ನು ಪರಿಚಯಿಸಿದರು. ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಮರವಂತೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಅನುರಾಗ್ ಆರ್. ಕೆ, ಅಂಕಿತಾ ಪೂಜಾರಿ, ಪ್ರಥ್ವಿ ಪೂಜಾರಿ ಅವರನ್ನು ಪುರಸ್ಕರಿಸಲಾಯಿತು. ಸಾಧನಾ ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಮರವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕೋಶಾಧಿಕಾರಿ ಕೃಷ್ಣಯ್ಯ ಆಚಾರ್ಯ, ಸದಸ್ಯರು, ವಿದ್ಯಾರ್ಥಿಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಹಿರಿಯ ಯಕ್ಷಗಾನ ಕಲಾವಿದರಾದ ಚಿತ್ತೂರು ನಾರಾಯಣ ದೇವಾಡಿಗ (70) ಬೈಂದೂರಿನ ಅವರ ಪುತ್ರಿಯ ಮನೆಯಲ್ಲಿ ನಿಧನರಾದರು. ಕುಂದಾಪುರ ತಾಲೂಕಿನ ಹಳ್ನಾಡಿನ ದೇವಾಡಿಗರು ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಗೆಜ್ಜೆ ಕಟ್ಟಿ, ಉಡುಪಿ ಯಕ್ಷಗಾನ ಕೇಂದ್ರದಲ್ಲಿ ಗುರು ವೀರಭದ್ರ ನಾಯಕ, ನೀಲಾವರ ರಾಮಕೃಷ್ಣಯ್ಯ, ಹಿರಿಯಡ್ಕ ಗೋಪಾಲರಾಯರ ಗರಡಿಯಲ್ಲಿ ಪಳಗಿ ಸ್ತ್ರೀವೇಷಧಾರಿಯಾಗಿ ಮೇಳ ಸೇರಿದ ಅವರು ಕಮಲಶಿಲೆ, ಸಾಲಿಗ್ರಾಮ, ಹಳವಾಡಿ, ಗೋಳಿಗರಡಿ, ಮಾರಣಕಟ್ಟೆ, ಸೌಕೂರು, ಮಡಾಮಕ್ಕಿ, ಪೆರ್ಡೂರು ಹಾಗು ಹಾಲಾಡಿ ಮೇಳಗಳಲ್ಲಿ ಸುದೀರ್ಘ ಐದು ದಶಕಗಳ ಕಲಾಸೇವೆ ಗೈದಿರುತ್ತಾರೆ. ಕಳೆದೆರಡು ವರ್ಷಗಳಲ್ಲಿ ಅಸೌಖ್ಯದಿಂದಾಗಿ ಮನೆಯಲ್ಲಿದ್ದು ಅದರ ಪೂರ್ವದಲ್ಲಿ ಮಾರಣಕಟ್ಟೆ ಮೇಳದಲ್ಲಿ ಕಲಾಸೇವೆ ಮಾಡಿದ್ದರು. ಅಂಬೆ, ಮೀನಾಕ್ಷಿ, ದ್ರೌಪದಿ, ದಮಯಂತಿ, ಚಿತ್ರಾಂಗದೆ ಮೊದಲಾದ ಪೌರಾಣಿಕ ಸ್ತ್ರೀಪಾತ್ರಗಳನ್ನು ಅನನ್ಯವಾಗಿ ಚಿತ್ರಿಸಿದ್ದಾರೆ. ಕೃಷ್ಣ, ಭೀಷ್ಮ, ರಾಮ, ರಾವಣ, ಈಶ್ವರ, ಅರ್ಜುನ ಮೊದಲಾದ ಪುರುಷ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಇವರ ಕಲಾಸಾಧನೆಗೆ ಹಲವು ಪುರಸ್ಕಾರಗಳು ಅರಸಿ ಬಂದಿವೆ. ನಾಲ್ಕು ವರ್ಷಗಳ ಹಿಂದೆ ಸಂಸ್ಥೆಯು ಶಿರಿಯಾರ ಮಂಜು…

Read More