‘ಲೈಫ್ ಇಸ್ ಬ್ಯೂಟಿಫುಲ್’ ಛಾಯಾಚಿತ್ರ ಸ್ವರ್ಧೆಯಲ್ಲಿ ನಿತೀಶ್ ಪಿ. ಬೈಂದೂರು ಅವರಿಗೆ ಪ್ರಥಮ ಸ್ಥಾನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:
ದುಬೈನ ಹೆಚ್.ಸಿ.ಟಿ ಅಪ್ಲೈಡ್ ಮೀಡಿಯಾ ವಿಭಾಗ ಡಿಜಿಟಲ್ ಸಾಕ್ಷರತೆ ನಾಯಕತ್ವ ಉಪಕ್ರಮದ ಭಾಗವಾಗಿ ಆಯೋಜಿಸಿದ್ದ ‘ಲೈಫ್ ಇಸ್ ಬ್ಯೂಟಿಫುಲ್’ ಅಂತರಾಷ್ಟ್ರೀಯ ಛಾಯಾಚಿತ್ರ ಸ್ವರ್ಧೆಯಲ್ಲಿ ನಿತೀಶ್ ಪಿ. ಬೈಂದೂರು ಪ್ರಥಮ ಸ್ಥಾನ ಗಳಿಸಿದ್ದಾರೆ.

Call us

Click Here

ಬಹುಮಾನಿತ ಪೋಟೋ

ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಎಂ.ಎ ಪತ್ರಿಕೋದ್ಯಮ ಪದವೀದರರಾಗಿದ್ದು ಪ್ರಸ್ತುತ ಛಾಯಾಚಿತ್ರ ಪತ್ರಿಕೋದ್ಯಮ ವಿಷಯದ ಮೇಲೆ ಪಿ.ಎಚ್.ಡಿ ಮಾಡುತ್ತಿದ್ದಾರೆ. ಪ್ರತಿಭಾವಂತ ಹಾಗೂ ಛಾಯಾಗ್ರಹಣದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ನಿತೀಶ್ ಅವರು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ ಪಡೆಯುತ್ತಿರುವ ಅವಧಿಯಲ್ಲಿ ವಿವಿಧ ಮಾಧ್ಯಮಗಳಲ್ಲಿ ಇಂಟರ್ಶಿಫ್ ವಿದ್ಯಾರ್ಥಿಯಾಗಿ ದುಡಿದು ಸೈ ಏನಿಸಿಕೊಂಡಿದ್ದಾರೆ. ಪೋಟೋಗ್ರಫಿಯೊಂದಿಗೆ ಪದವಿ ಪಡೆಯುತ್ತಿದ್ದ ದಿನಗಳಲ್ಲಿಯೇ ಮೀನಿನ ಹೆಜ್ಜೆ-ಬೆಸ್ತರ ಲೋಕ, ದುರ್ಗದ ಅವಾಂತರ, ಡಾ. ಎಂ. ಮೊಹನ ಆಳ್ವ ಕಿರುಚಿತ್ರಗಳನ್ನು ತನ್ನದೇ ನಿರ್ದೇಶನದಲ್ಲಿ ನಿರ್ಮಿಸಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅಂತಿಮ ಪದವಿಯಲ್ಲಿರುವಾಗ ವಿಶ್ವವಿದ್ಯಾನಿಲಯ ಮಟ್ಟದ ಸ್ಪಾಟ್ ಫೋಟೊಗ್ರಫಿಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು. ಅವರ ಪೋಟೋಗಳು ಸಾಗರ್ ಪೋಟೋಗ್ರಾಫಿಕ್ ಸೊಸೈಟಿ ಮತ್ತು ಫಿಶ್ರಿ ಪೋಟೋಗ್ರಫಿ ಕ್ಲಬ್ನ ಫೋಟೊ ಪ್ರದರ್ಶನದಲ್ಲಿ ಸ್ಥಾನ ಪಡೆದಿತ್ತು. ಸ್ನಾತಕೋತ್ಸವ ಪದವಿ ಪಡೆಯುವ ಸಂದರ್ಭದಲ್ಲಿಯೂ ನಿತೀಶ್ ಅವರು ಹತ್ತಾರು ಛಾಯಾಚಿತ್ರ ಸ್ವರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಜೀವನ ಆರಂಭಿಸಿದ ನಿತೀಶ್ ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾನಿಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಅರಣ್ಯ ಇಲಾಖೆಯ ನಿವೃತ್ತ ಉಪವಲಯ ಅರಣ್ಯಾಧಿಕಾರಿ ಬೈಂದೂರು ಪಡುವರಿಯ ಸುಬ್ರಾಯ ಪಿ. ಮತ್ತು ಕಲಾವತಿ ದಂಪತಿಗಳ ಪುತ್ರರಾಗಿದ್ದಾರೆ.

Leave a Reply