ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರು ತಮ್ಮ ಪತ್ನಿ ಜಿಲ್ ಬೈಡನ್ ಅವರ ನೀತಿ ನಿರ್ದೇಶಕ ಸ್ಥಾನಕ್ಕೆ ಕುಂದಾಪುರ ಮೂಲದ ಅಮೆರಿಕನ್ ಮಾಲಾ ಅಡಿಗ ಅವರನ್ನು ಶುಕ್ರವಾರ ನೇಮಕ ಮಾಡಿದ್ದು, ಮಾಲಾ ಅವರ ಕುಟುಂಬಿಕರಲ್ಲಿ ಸಂಭ್ರಮ ಮನೆಮಾಡಿದೆ. ಅಮೆರಿಕದಲ್ಲೇ ಹುಟ್ಟಿ ಬೆಳೆದ ಮಾಲಾ ಅವರು ಕುಂದಾಪುರದ ಕಕ್ಕುಂಜೆಯ ರಮೇಶ್ ಅಡಿಗ ಹಾಗೂ ಜಯಾ ಅಡಿಗ ದಂಪತಿಯ ಹಿರಿಯ ಪುತ್ರಿ. ಅವರು ಕಾನೂನು ಪದವಿ ಪಡೆದು ವಕೀಲಿ ವೃತ್ತಿಯಲ್ಲಿ ಸಾಕಷ್ಟು ಅನುಭವ ಪಡೆದಿದ್ದಾರೆ. ತಂದೆ ರಮೇಶ್ ಅಡಿಗರು ಬೆಂಗಳೂರಿನಲ್ಲಿ ಎಂಬಿಬಿಎಸ್ ಮುಗಿಸಿದ ಕೂಡಲೇ ಅಮೆರಿಕಕ್ಕೆ ತೆರಳಿ ದಶಕಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತರಾಗಿದ್ದಾರೆ. ಜಿಲ್ ಬೈಡನ್ ನೀತಿ ನಿರ್ದೇಶಕಿಯಾಗಿ ಮಾಲಾ ನೇಮಕವಾದ ಸುದ್ದಿ ತಿಳಿಯುತ್ತಿದ್ದಂತೆ ಕುಂದಾಪುರ ದಲ್ಲಿರುವ ಅವರ ಸೋದರತ್ತೆ ನಿರ್ಮಲಾ ಉಪಾಧ್ಯಾಯ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ಸಂದರ್ಭ ಸಂಭ್ರಮ ಹಂಚಿಕೊಂಡ ನಿರ್ಮಲಾ ‘ಮಾಲಾ ಹುಟ್ಟಿ ಬೆಳೆದಿದ್ದು…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ದಿವ್ಯ ಮತ್ತು ನಾಗರಾಜ್ ಇವರ ಚಿತ್ತೂರಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಏಳು ವರುಷದ ಕಿರಿಯ ಸ್ಯಾಕ್ಸೋಫೋನ್ ಪ್ರತಿಭೆ ಗಂಗೊಳ್ಳಿಯ ಮಾಧವ ದೇವಾಡಿಗರ ಪುತ್ರ ಸಂಜಿತ್ ಎಂ. ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪ್ರಕಾಶ್ ಕಮಲಶಿಲೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕುದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ತ್ರಾಸಿ ಮಂಜು ದೇವಾಡಿಗರ ಮನೆ ವಠಾರದಲ್ಲಿ ಭಾರತೀಯ ಜನತಾ ಪಕ್ಷದ ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ಚಟುವಟಿಕೆ ಇರುವುದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಪರಿಕಲ್ಪನೆ ಸಾಕಾರವಾಗಬೇಕಾದರೆ ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್ನ್ನು ಕಿತ್ತೊಗೆಯಬೇಕು. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಬೇಕು. ಇದಕ್ಕಾಗಿ ಎಲ್ಲರೂ ಒಂದೇ ಮನೆ ಒಂದೇ ಕುಟುಂಬ ಎನ್ನುವ ಕಲ್ಪನೆಯೊಂದಿಗೆ ಒಗ್ಗಟ್ಟಿನಿಂದ ದುಡಿದು ಭಾರತೀಯ ಜನತಾ ಪಕ್ಷವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಹೇಳಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್, ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಚೈಲ್ಡ್ ಲೈನ್-1098 ಉಡುಪಿಯ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಮಕ್ಕಳಮನೆ ಕುಂಭಾಶಿಯಲ್ಲಿ ಇತ್ತಿಚೆಗೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಂಭಾಶಿ ಪಂಚಾಯತ್ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ ಕುಂದಾಪುರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕ ರಾಘವೇಂದ್ರ ವರ್ಣೇಕರ್, ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ, ಮಕ್ಕಳಮನೆ ಸಂಸ್ಥೆಯ ಸಿಬ್ಬಂದಿ ವಿನೀತಾ, ಕುಂದಾಪುರ ಪೋಲಿಸ್ ಠಾಣೆಯ ಸಿಬ್ಬಂದಿ ಅಶ್ವಿನ್ ಕುಮಾರ್, ಚೈಲ್ಡ್ ಲೈನ್-1098 ಉಡುಪಿಯ ಸಿಬ್ಬಂದಿಗಳು, ಮಕ್ಕಳ ಮನೆಯ ಸಿಬ್ಬಂದಿಗಳು ಹಾಗೂ ಮಕ್ಕಳು ಉಪಸ್ಥಿರಿದ್ದರು. ಗಣೇಶ ಕುಂಭಾಶಿ ಇವರನ್ನು ಚೈಲ್ಡ್ಲೈನ್-1098 ಉಡುಪಿಯ ವತಿಯಿಂದ ಸನ್ಮಾನಿಸಲಾಯಿತು. ಮಕ್ಕಳ ಮನೆಯಲ್ಲಿರುವ ಮಕ್ಕಳಿಗೆ ಚಿತ್ರಕಲೆ ಹಾಗೂ ಕ್ರಾಫ್ಟ್ ಸ್ಪರ್ಧೆ ಏರ್ಪಡಿಸಲಾಗಿದ್ದು ವಿಜೇತರಿಗೆ ಈ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಯಿತು ಹಾಗೂ ಮಕ್ಕಳ ಮನೆಯಲ್ಲಿರುವ ಎಲ್ಲಾ ಮಕ್ಕಳಿಗೆ ಉಪಯುಕ್ತ ವಸ್ತುಗಳ ಕಿಟ್ನ್ನು ವಿತರಿಸಲಾಯಿತು. ಚೈಲ್ಡ್ ಲೈನ್ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಚೈಲ್ಡ್ ಲೈನ್ ಸೇ ದೋಸ್ತಿ ಸಪ್ತಾಹದ ಬಗ್ಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಕಾರ್ಮಿಕ ಸಂಘಟನೆಗಳ ಜಂಟಿ ಸಮಾವೇಶ ನಡೆಯಿತು. ಜೆಸಿಟಿಯು ಮುಖಂಡ ಎಚ್.ನರಸಿಂಹ ಮಾತನಾಡಿ ಕೋವಿಡ್ನಿಂದ ಹಲವು ಕ್ಷೇತ್ರಗಳಲ್ಲಿ ದುಡಿಯುವ ಜನರು ಕೆಲಸ ಕಳೆದುಕೊಂಡಿದ್ದಾರೆ. ಜನರ ಕಷ್ಟಗಳಿಗೆ ಧಾವಿಸಬೇಕಾದ ಸರ್ಕಾರಗಳು ದುಡಿಯುವ ಜನರಿಗಿರುವ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿವೆ, ಸಹಾಯಧನ ಕಸಿದುಕೊಂಡಿದೆ’ ಕೇಂದ್ರ ಸರ್ಕಾರ ತಂದಿರುವ 11 ಸುಗ್ರೀವಾಜ್ಞೆಗಳು ನೇರವಾಗಿ ದುಡಿಯುವ ಜನರ ಆದಾಯದ ಮೇಲೆ ದುಷ್ಪರಿಣಾಮಗಳು ಬೀಳಲಿದೆ. ಎಪಿಎಂಸಿ ತಿದ್ದುಪಡಿ, ಭೂಸುಧಾರಣ ಕಾಯ್ದೆ ತಿದ್ದುಪಡಿ, ರೈಲ್ವೆ ಖಾಸಗೀಕರಣ, ವಿದ್ಯುತ್ ಖಾಸಗೀಕರಣ, ಕಲ್ಲಿದ್ದಲು, ತೈಲ ಖಾಸಗೀಕರಣವು ದೇಶದ ದೊಡ್ಡ ಬಂಡವಾಳಗಾರರನ್ನು ಬೆಳೆಸಲು ಇದೆ, ಸಾಮಾನ್ಯ ಜನರ ಆದಾಯ ಹೆಚ್ಚಿಸುವ ನೀತಿಗಳಲ್ಲ. ಹಕ್ಕುಗಳನ್ನು ಬಿಜೆಪಿ ಕಸಿಯುತ್ತಿರುವುದರಿಂದ, ಇದೇ 26 ರಂದು ಸಂವಿಧಾನ ರಚನ ದಿವಸ್ ದಿನದ ಮುಷ್ಕರ ಅತ್ಯಂತ ಮಹತ್ವದ್ದಾಗಿದೆ’ ಎಂದರು. ಜೆಸಿಟಿಯು ಮುಖಂಡ ಸುರೇಶ್ ಕಲ್ಲಾಗರ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ವಿಮಾನ ನಿಲ್ದಾಣವನ್ನು ಅದಾನಿ ಕಂಪನಿಗೆ 50 ವರ್ಷಗಳ ಅವಧಿಗೆ ಗುತ್ತಿಗೆಗೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಾರವಾರದ ಕೈಗಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 20ಕ್ಕೂ ಹೆಚ್ಚು ಯುವಕರಿಗೆ ವಂಚಿಸಿರುವ ಘಟನೆ ನಡೆದಿದ್ದು, ಪ್ರಮುಖ ಆರೋಪಿ ಎನ್ನಲಾಗಿರುವ ರಿತೇಶ್ ಪಟ್ವಾಲ್ ಎಂಬಾತನನ್ನು ಶುಕ್ರವಾರ ಬೈಂದೂರು ಪೊಲೀಸರು ಶೃಂಗೇರಿಯಲ್ಲಿ ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ರಿತೇಶ್ ಎಂಬಾತ ಒಂದಿಷ್ಟು ಯುವಕರನ್ನು ಸಂಪರ್ಕಿಸಿ ಕೈಗಾದಲ್ಲಿ ಉತ್ತಮ ಕೆಲಸ ಕೊಡಿಸುವ ಆಮಿಷವೊಡ್ಡಿದ್ದ. ತಾನು ಕೂಡ ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿಯೇ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಉದ್ಯೋಗಾಕಾಂಕ್ಷಿಗಳಿಗೆ ತನ್ನ ಗುರುತಿನ ಚೀಟಿ ತೋರಿಸಿ ನಂಬಿಸಿದ್ದಲ್ಲದೇ, ಆಗಾಗ್ಗೆ ಕಾರವಾರ ಹೋಗಿ ಬರುವ ನಾಟಕವಾಡುತ್ತಿದ್ದ. ಸಂಸ್ಥೆಯಲ್ಲಿ ಕಂಪ್ಯೂಟರ್ ಆಧಾರಿತ ಹುದ್ದೆ ಖಾಲಿ ಇರುವುದಾಗಿ ಹೇಳಿಕೊಂಡು, ಉದ್ಯೋಗಾಕಾಂಕ್ಷಿಗಳಿಂದ ರೆಜ್ಯೂಮ್ ಪಡೆದುಕೊಂಡಿದ್ದ. ನಕಲಿ ನೇಮಕಾತಿ ಪತ್ರವನ್ನು ತಯಾರಿಸಿ ಉದ್ಯೋಗಾಕಾಂಕ್ಷಿಗಳಿಂದ ತಲಾ ರೂ.20,000ಕ್ಕೂ ಹೆಚ್ಚು ಹಣ ಪಡೆದಿದ್ದಲ್ಲದೆ ಅವರೆಲ್ಲರನ್ನೂ ಕೈಗಾಕ್ಕೆ ತೆರಳುವಂತೆಯೂ ಸೂಚಿಸಿದ್ದ. ಆದರೆ ಕೈಗಾದಲ್ಲಿ ಉದ್ಯೋಗಾಕಾಂಕ್ಷಿಗಳನ್ನು ಒಳಕ್ಕೆ ಬಿಡದೆ, ಅವರ ದಾಖಲಾತಿ ಪರಿಶೀಲಿಸಿದ ಬಳಿಕ ತಾವು ನಕಲಿ ದಾಖಲೆಯಿಂದ ಮೋಸ ಹೋಗಿರುವುದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು : ಮರಂತೆ ಪಂಚಾಯಿತಿಯ ಸುವರ್ಣ ಸೌಧದಲ್ಲಿ ವರ್ಷದ ಮೊದಲ ಸುತ್ತಿನ ಗ್ರಾಮಸಭೆ ನಡೆಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಆಡಳಿತಾಧಿಕಾರಿ ಜ್ಯೋತಿ ಬಿ., ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ಪ್ರಸ್ತುತ ಆಡಳಿತಾಧಿಕಾರಿ ಪಂಚಾಯಿತಿಯ ಹೊಣೆ ನಿರ್ವಹಿಸುತ್ತಿದ್ದು, ಸಿಬ್ಬಂದಿ ನೆರವಿನಿಂದ ಪಂಚಾಯಿತಿಯ ದೈನಂದಿನ ಚಟುವಟಿಕೆಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಶಿವರಾಮ ಕಾರಂತ ಮಾರ್ಗದಲ್ಲಿ ರಸ್ತೆಗೆ ಹೊಂದಿಕೊಂಡು ನಿವಾಸಿಯೊಬ್ಬರು ನಿರ್ಮಿಸಿರುವ ಗೊಬ್ಬರಗುಂಡಿ ತೆರವುಗೊಳಿಸುವಂತೆ ಅಲ್ಲಿನ ಸಾರ್ವಜನಿಕರು ಸಲ್ಲಿಸಿರುವ ಆಕ್ಷೇಪಣೆಯ ಮೇಲೆ ಕೈಗೊಂಡ ಕ್ರಮದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು ಸ್ಥಳ ಪರಿಶೀಲನೆ ಮತ್ತು ಮಹಜರಿನಲ್ಲಿ ಗುಂಡಿ ಅಪಾಯಕಾರಿ ಮತ್ತು ಅಸಹ್ಯಕರ ವಾತಾವರಣ ನಿರ್ಮಿಸಿರುವದನ್ನು ಮನಗಾಣಲಾಗಿದೆ. ನಿಯಮದಂತೆ ಅದರ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ ಪೂಜಾರಿ ಪಂಚಾಯಿತಿಗೆ ಒದಗಿಸಲಾದ ಅನುದಾನದ ಮಾಹಿತಿ ನೀಡಿದರು. ಕಾರ್ಯದರ್ಶಿ ದಿನೇಶ ಶೇರುಗಾರ್ ವಾರ್ಷಿಕ ವರದಿ ಓದಿದರು. ಕರಸಂಗ್ರಾಹಕ ಶೇಖರ ಮರವಂತೆ ಆಯವ್ಯಯದ ವಿವರ ಮಂಡಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷರಾಗಿ ಹೆಚ್. ಹರಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷರಾಗಿ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನ.20ರಂದು ಸಂಘದ ಕಚೇರಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಎಸ್.ರಾಜು ಪೂಜಾರಿ, ಮೋಹನ್ ದಾಸ್ ಶೆಟ್ಟಿ, ಕೆ.ಭುಜಂಗ ಶೆಟ್ಟಿ ವಂಡ್ಸೆ, ರವಿ ಗಾಣಿಗ , ಕೆ. ಮೋಹನ್ ಪೂಜಾರಿ, ಆನಂದ ಬಿಲ್ಲವ, ಕೆ. ಸುಧಾಕರ ಶೆಟ್ಟಿ, ಪ್ರಭಾಕರ ಶೆಟ್ಟಿ ಜಡ್ಕಲ್, ಎಸ್. ಜಯರಾಮ ಶೆಟ್ಟಿ ಬೆಳ್ವೆ, ಚಂದ್ರಶೇಖರ ಶೆಟ್ಟಿ, ದಿನಪಾಲ ಶೆಟ್ಟಿ ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾದ ಕುಂದಾಪುರ ಉಪ ವಿಭಾಗದ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್. ವಿ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಅಧಿಕೃತ ಘೋಷಣೆ ಮಾಡಿದರು. ನೂತನ ಅಧ್ಯಕ್ಷರಾದ ಹೆಚ್. ಹರಿಪ್ರಸಾದ್ ಶೆಟ್ಟಿ ಅವರು ಮಾತನಾಡಿ ಈ ಭಾಗದ ಹಿರಿಯ ಸಹಕಾರಿಗಳು ಕಟ್ಟಿ ಮುನ್ನೆಡಿಸಿದ ಈ ಪ್ರತಿಷ್ಠಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಜಾನಪದ ಪರಿಷತ್ ಬೆಂಗಳೂರು,ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಮತ್ತು ವರಸಿದ್ದಿವಿನಾಯಕ ಪದವಿಪೂರ್ವ ಮತ್ತು ಪದವಿ ಕಾಲೇಜು ಇದರ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಗಣೇಶ್ ಗಂಗೊಳ್ಳಿ ಮಾತನಾಡಿ ಜಾನಪದ ಆಚರಣೆ ಮತ್ತು ಸಂಸ್ಕೃತಿ ಜಾನಪದ ಕಲೆ ಮತ್ತು ಕಲಾವಿದರ ಗ್ರಾಮೀಣ ಭಾರತದ ತಾಯಿಬೇರು ಗಳಿದ್ದಂತೆ, ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜಾನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳ ಎಂದು ಹೇಳಿದರು. ವರಸಿದ್ದಿವಿನಾಯಕ ಪದವಿಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆರಾಡಿ ಗ್ರಾಮದ ಜಾನಪದ ಪ್ರತಿಭೆ ತಿಮ್ಮ ನಾಯ್ಕ ಹಾಗೂ ಪದವಿಯ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕಾವ್ಯ ಕುಲಾಲ್ ಇವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿ ಸಚಿನ್ ಜನಪದ ಗೀತೆ ಹಾಡಿದರು. ಕುಂದಾಪುರ ತಾಲೂಕು ಕನ್ನಡ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಗಂಡು ಮತ್ತು ಹೆಣ್ಣು ಅನುಪಾತದಲ್ಲಿ ಅಸಮತೋಲನ ಉಂಟಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆಯ ಸಲಹಾ ಸಮಿತಿ ಸಭೆಯ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ (ಪಿ.ಸಿ & ಪಿ.ಎನ್.ಡಿ.ಟಿ) ಕಾಯಿದೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಲಿಂಗಾನುಪಾತದಲ್ಲಿ ಆಗುವ ವ್ಯತ್ಯಾಸದಿಂದ ದುಷ್ಪರಿಣಾಮವನ್ನು ತಡೆಗಟ್ಟಲು ಹೆಣ್ಣು ಭ್ರೂಣ ಹತ್ಯೆಗಳು ಆಗದಂತೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು. ಜಿಲ್ಲೆಯಲ್ಲಿ ಪ್ರಸುತ್ತ 1,000 ಪುರುಷರಿಗೆ 956 ಮಹಿಳೆಯರಿದ್ದಾರೆ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಮಾಡುವುದು ಕಾನೂನು ಬಾಹಿರ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ ಎಂದರು. ಸ್ಕ್ಯಾನಿಂಗ್ ಸೆಂಟರ್ಗಳಲ್ಲಿ ಸರಕಾರ ನಿಯಮಾನುಸಾರ ನಿಗಧಿಪಡಿಸಿರುವ ನಮೂನೆಗಳ ದಾಖಲೆಗಳ…
