ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಲಯನ್ಸ್ ಕ್ಲಬ್ ಕುಂದಾಪುರ ಇವರ ಆಶ್ರಯದಲ್ಲಿ ಕಾಂಪೋಸ್ಟ್ ಗೊಬ್ಬರ ತಯಾರಿ ಮಾಹಿತಿ ಕಾರ್ಯಕ್ರಮ ಇಲ್ಲಿನ ಜಪ್ತಿ ಗ್ರಾಮದಲ್ಲಿ ನಡೆಯಿತು . ಪ್ರತಿಯೊಂದು ಮನೆಗೆ ಪಿವಿಸಿ ಪೈಪ್ ಬಳಸಿ ಮನೆಯಲ್ಲಿ ಇರುವ ಒಣ ಕಸವನ್ನು ಸಂಗ್ರಹಿಸಿ ನಮಗೆ ಬೇಕಾಗುವ ಸಾವಯವ ಗೊಬ್ಬರ ತಯಾರಿಸುವ ಬಗ್ಗೆ ಮಾಹಿತಿ ನೀಡಲಾಯಿತು. ಸುಮಾರು ೫೦ ಜನರು ಇದರ ಉಪಯೋಗವನ್ನು ಪಡೆದರು. ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಚಂದ್ರಶೇಖರ, ಲಯನ್ ಪ್ರಕಾಶ್ ಬೆಟ್ಟನ್, ಲಯನ್ ನವೀನ್ ಕುಮಾರ್ ಶೆಟ್ಟಿ, ಲಯನ್ ನಾರಾಯಣ ಶೆಟ್ಟಿ, ಲಯನ್ ರಾಜೀವ್ ಕೋಟ್ಯಾನ್, ಲಯನ್ ವೇಣುಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಪಿ.ಯು.ಸಿ ಎರಡನೇ ವರ್ಷ ಹಾಗೂ ಡಿಪ್ಲೋಮಾ ಮೂರನೇ ವರ್ಷದಲ್ಲಿ ಶೇ. 60 ಅಂಕ ಪಡೆದು ಪ್ರಸಕ್ತ ಸಾಲಿನಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದಿರುವ ಮಾಜಿ ಸೈನಿಕರ ಮಕ್ಕಳು ಪ್ರಧಾನ ಮಂತ್ರಿ ಶಿಷ್ಯ ವೇತನ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ http://www.ksb.gov.in ಅನ್ನು ಸಂಪರ್ಕಿಸುವಂತೆ ಮಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಜಿಲ್ಲೆಯ ಮಲ್ಪೆ ಬಂದರಿನಲ್ಲಿ ಮೀನಿನಲ್ಲಿ ಫಾರ್ಮಲಿನ್ ಬಳಕೆ ಮಾಡುತ್ತಿರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಮೀನುಗಾರಿಕಾ ಅಧಿಕಾರಿಗಳು ಡಿ.18ರಂದು ಮಲ್ಪೆ ಬಂದರಿಗೆ ಭೇಟಿ ನೀಡಿ ವಿವಿಧ 12 ಜಾತಿಯ ಮೀನುಗಳ ಆಹಾರ ಮಾದರಿಯನ್ನು ತೆಗೆದು ಬೆಂಗಳೂರಿನ ಪ್ರಯೋಗಾ ಶಾಲಾ ವಿಶ್ಲೇಷಣೆಗೆ ಕಳುಹಿಸಿದ್ದು, ಇದರ ವರದಿಯಲ್ಲಿ ಮೀನಿನಲ್ಲಿ ಫಾರ್ಮಲಿನ್ ಇರುವುದು ಕಂಡು ಬಂದಿರುವುದಿಲ್ಲ. ಫಾರ್ಮಲಿನ್ ಟೆಸ್ಟ್ ಕಿಟ್‌ನ್ನು ತರಿಸಲಾಗಿದ್ದು, ಮೀನಿನಲ್ಲಿ ಫಾರ್ಮಲಿನ್ ಇರುವ ಬಗ್ಗೆ ಪರೀಕ್ಷೆ ನಡೆಸಲಾಗುವುದರಿಂದ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ. ಫಾರ್ಮಲಿನ್ ಕಂಡುಬಂದರೆ ಮೀನಿನ ಆಹಾರ ಮಾದರಿಯನ್ನು ತೆಗೆದು ಪ್ರಯೋಗ ಶಾಲಾ ವಿಶ್ಲೇಷಣೆಗೆ ಕಳುಹಿಸಿ ಫಲಿತಾಂಶದ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ಬೈಂದೂರು: ಶಾಲೆಗಳನ್ನು ಹಂತ ಹಂತವಾಗಿ ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿರುವುದರಿಂದ ಸರ್ಕಾರದ ವೇಳಾಪಟ್ಟಿಯಂತೆ 6 ರಿಂದ 9ನೇ ತರಗತಿ ವರೆಗಿನ ಮೊದಲ ಬ್ಯಾಚಿನ ವಿದ್ಯಾರ್ಥಿಗಳು ಹಾಗೂ 10ನೇ ತರಗತಿ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ತಾಲೂಕಿನಾದ್ಯಾಂತ ತಮ್ಮ ತಮ್ಮ ಶಾಲೆಗಳಿಗೆ ಆಗಮಿಸಿದ್ದರು. ಶಾಲೆಯ ಆವರಣದ ಒಳಗೆ ಬಂದ ವಿದ್ಯಾರ್ಥಿಗಳು ತರಗತಿ ಕೊಠಡಿಗಳಿಗೆ ಹೋಗುವ ಮೊದಲು ದೇಹದ ಉಷ್ಣತೆ ಪರೀಕ್ಷೆ ಹಾಗೂ ಸ್ಯಾನಿಟೈಸೇಶನ್ ಕಡ್ಡಾಯವಾಗಿ ಮಾಡಲಾಗುತ್ತಿತ್ತು. ಕಳೆದ 10 ತಿಂಗಳಿಂದ ಶಾಲಾಂಗಣವನ್ನು ಮರೆತಿದ್ದ ವಿದ್ಯಾರ್ಥಿಗಳು ಇಂದು ಶಾಲಾ ಸಮವಸ್ತ್ರ ಹಾಗೂ ಶಾಲಾ ಸಾಮಾಗ್ರಿಯನ್ನು ಹೊಂದಿದ್ದ ಬ್ಯಾಗ್ ಗಳೊಂದಿಗೆ ಶಾಲೆಗೆ ಆಗಮಿಸಿದ್ದರು. ಹಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಶಿಕ್ಷಕರು ಸ್ವಾಗತಿಸಿಕೊಂಡರು. ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಬೈಂದೂರು ಬಿಇಓ ಜಿ. ಎಂ. ಮಂದಿನಮನಿ ಅವರು ವಿಧ್ಯಾರ್ಥಿಗಳಿಗೆ ಸಿಹಿ ನೀಡಿ ಸ್ವಾಗತಿಸಿದರು. ಪಾಳಿಯ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ವಿಂಗಡನೆ ಮಾಡಿರುವುದರಿಂದ ತರಗತಿಯ ಒಳ ಭಾಗದಲ್ಲಿ ಪ್ರತಿಯೊಂದು ಡೆಸ್ಕ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಭಾರತ ಸರಕಾರದ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಯುವ ಸಂಸತ್ತು ವಿಭಾಗೀಯ ಮಟ್ಟದ ಭಾಷಣ ಸ್ಪರ್ಧೆಯು ಜಿಲ್ಲಾಧಿಕಾರಿಯವರ ಕಛೇರಿಯ, ವಿಡೀಯೊ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆಯಿತು. ಉಡುಪಿ ಜಿಲ್ಲೆಯು ನೊಡೆಲ್ ಕೇಂದ್ರವಾಗಿದ್ದು, ಇದರ ಆಶ್ರಯದಲ್ಲಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಹಾಗೂ ಉಡುಪಿ ಜಿಲ್ಲೆಯ 18 ರಿಂದ 25 ವರ್ಷದೊಳಗಿನ 38 ಯುವ ಜನರು ಆನ್‌ಲೈನ್ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಜಿಲ್ಲೆಯಿಂದ ಶ್ರೇಯಸ್ ಜಿ ಕೋಟ್ಯಾನ್ ಹಾಗೂ ಶೆರ್ಲಿನ್ ಡಿ ಆಲ್‌ಮೇಡಾ ವಿಜೇತರಾಗಿದ್ದು, ಜನವರಿ 5 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಫರ್ದೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸ್ಪರ್ಧೆಯ ತೀರ್ಪುಗಾರರಾಗಿ ಉಡುಪಿ ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವಿಜಯ್, ಕುಂದಾಪುರ ಭಂಡಾರ್‌ರ‍್ಸ್ ಕಲೆ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ನಾರಾಯಣ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎ ಪ್ರವರ್ಗದ ಅಧಿಸೂಚಿತ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಜನವರಿ 15 ರಂದು ಬೆಳಗ್ಗೆ 10.30 ರಿಂದ 11.15 ರ ವರೆಗೆ ನಡೆಯಲಿದ್ದು, ಅರ್ಜಿ ಸಲ್ಲಿಸಲು ಜನವರಿ 7 ಕೊನೆಯ ದಿನ ಹಾಗೂ ಜನವರಿ 20 ರಂದು ಬೆಳಗ್ಗೆ 10.15 ರಿಂದ 10.45 ರ ವರೆಗೆ ವಿವಾಹ ನಡೆಯಲಿದ್ದು, ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವಾಗಿದೆ. ಫೆಬ್ರವರಿ 17 ರಂದು ಬೆಳಗ್ಗೆ 12 ರಿಂದ 12.30 ರ ವರೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 8 ಕೊನೆಯ ದಿನ ಹಾಗೂ ಫೆಬ್ರವರಿ 25 ರಂದು ಬೆಳಗ್ಗೆ 10.30 ರಿಂದ 11ರ ವರೆಗೆ ಸಾಮೂಹಿಕ ವಿವಾಹ ನಡೆಯಲಿದ್ದು, ಅರ್ಜಿ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ. ಜಿಲ್ಲೆಯ ಎ ಪ್ರವರ್ಗದ ಅಧಿಸೂಚಿತ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಮಹಿಳೆಯರು ಸಬಲರಾದಾಗ ಸಮಾಜದಲ್ಲಿ ಮಹಿಳೆಯರು ಉನ್ನತ ಮಟ್ಟಕ್ಕೇರಲು ಸಾಧ್ಯವಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಸ್ವ ಉದ್ಯೋಗ ಮತ್ತಿತರ ಚಟುವಟಿಕೆಗಳಿಂದ ತೊಡಗಿಸಿಕೊಳ್ಳುವುದು ಅಗತ್ಯ. ಸರಕಾರ ಮಹಿಳೆಯರ ವಿವಿಧ ಕಾರ್ಯಕ್ರಮ, ತರಬೇತಿಗಳನ್ನು ಹಮ್ಮಿಕೊಂಡು ವಿವಿಧ ಯೋಜನೆಗಳ ಮೂಲಕ ಅನುದಾನ ನೀಡುತ್ತಿದೆ. ಇದರ ಸದುಪಯೋಗಪಡಿಸಿಕೊಂಡು ಸ್ವಾವಲಂಬಿ ಜೀವನ ನಡೆಸಲು ಮಹಿಳೆಯರು ಮುಂದಾಗಬೇಕು ಎಂದು ಉಡುಪಿ ನೆಹರು ಯುವಕೇಂದ್ರದ ಯುವ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಹೇಳಿದರು. ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಉಡುಪಿ ಮತ್ತು ಮಾರಿಕಾಂಬಾ ಮಹಿಳಾ ಸಹಕಾರಿ ಸಂಘ ಗುಜ್ಜಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿದ ಉಚಿತ ಟೈಲರಿಂಗ್ ತರಬೇತಿ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಮಾರಿಕಾಂಬಾ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಫಿಲೋಮಿನಾ ಫೆರ್ನಾಂಡಿಸ್, ಚೈತನ್ಯ ಸ್ತ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಲ್ಲೂರು ಗುಡ್ಡೆಯಂಗಡಿಯ 17 ವರ್ಷದ ಬಾಲಕಿಗೆ 28 ವರ್ಷದ ಹುಡುಗನೊಂದಿಗೆ ತ್ರಾಸಿ ಮಹಾಗಣಪತಿ ಸಭಾಭವನದಲ್ಲಿ ಮದುವೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ, ಪೊಲೀಸ್ ಇಲಾಖೆ ಗಂಗೊಳ್ಳಿ, ಗ್ರಾಮ ಪಂಚಾಯತ್ ತ್ರಾಸಿಯ ಅಧಿಕಾರಿಗಳ ತಂಡ ಸುಮಾರು 200 ಮಂದಿ ಸೇರಿದ್ದ ಮದುವೆ ಹಾಲಿಗೆ ಹಠಾತ್ ಭೇಟಿ ನೀಡಿ ಬಾಲ್ಯವಿವಾಹವನ್ನು ತಡೆದಿದ್ದಾರೆ. ಈ ಸಂದರ್ಭ ಎರಡೂ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಬಾಲ್ಯವಿಹಾಹ ನಿಷೇದ ಮತ್ತು ತಡೆಗಟ್ಟುವಿಕೆ ಕಾಯ್ದೆ ಬಗ್ಗೆ ಅರಿವು ಮೂಡಿಸಿದರು. ಕುಟುಂಬಿಕರಿಂದ ಮತ್ತು ಹಾಲ್ ಮಾಲಿಕರು ಮತ್ತು ಪುರೋಹಿತರಿನಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಯಿತು. ಮದುವೆಗೆ ಬಂದವರೆನ್ನೆಲ್ಲಾ ವಾಪಸು ಮನೆಗೆ ಕಳುಹಿಸಿ ಕೊಡಲಾಯಿತು. ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿಯ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ಕುಂದಾಪುರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ ಶೆಟ್ಟಿ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೇಶ್ವರ ಗ್ರಾಮ ಪಂಚಾಯತಿಯಲ್ಲಿ 13 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಕಿರಿಮಂಜೇಶ್ವರ ಶೇಖರ ಖಾರ್ವಿ ತಿಳಿಸಿದ್ದಾರೆ. ಹಿಂದಿನ ಅವಧಿಯಲ್ಲಿ ನೀಡಿದ ಉತ್ತಮ ಆಡಳಿತದ ಫಲವಾಗಿ ವಿರೋಧ ಪಕ್ಷಗಳ ಅಪಪ್ರಚಾರದ ನಡುವೆಯೂ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆಮಾಡಿದ ಮತದಾರರಿಗೂ ಹಾಗೂ ಶ್ರಮಿಸಿದ ಕಾರ್ಯಕರ್ತರಿಗೂ ಧನ್ಯವಾದ ಸಲ್ಲಿಸುವುದಾಗಿ ಅವರು ತಿಳಿಸಿದರು. ನಮ್ಮ ತಂಡದ ಎಸ್. ಪ್ರೀತಿ ಶೆಟ್ಟಿ, ರಾಜು ಎನ್ ದೇವಾಡಿಗ, ಗೀತಾ, ಕೃಷ್ಣ, ಸುಶೀಲಾ, ಸಂತೋಷ, ವಿಶಾಲಾಕ್ಷಿ, ರಮೇಶ ಖಾರ್ವಿ, ಸರಸ್ವತಿ ನಾಯರಿ, ಜಯಲಕ್ಷ್ಮಿ ದೇವಾಡಿಗ, ಶೇಖರ ಖಾರ್ವಿ, ವಸಂತಿ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ ► ಬೈಂದೂರು ತಾಲೂಕಿನ 15 ಗ್ರಾಮ ಪಂಚಾಯತಿಗಳ ವಿಜೇತರ ವಿವರ – https://kundapraa.com/?p=43731 . ► ಕುಂದಾಪುರ ತಾಲೂಕು 43 ಗ್ರಾಮ ಪಂಚಾಯತಿಯ ವಿಜೇತ ಅಭ್ಯರ್ಥಿಗಳ ವಿವರ – https://kundapraa.com/?p=43738 .
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗ್ರಾಮ ಪಂಚಾಯತ್ ಚುಣಾವಣೆಯಲ್ಲಿ ವಿಜೇತರಾದ ಕುಂದಾಪುರ ತಾಲೂಕಿನ 43 ಗ್ರಾಮ ಪಂಚಾಯತಿಗಳ ವಿಜೇತರ ಸಂಪೂರ್ಣ ವಿವರ ಆಲೂರು ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ) 14 ಸ್ಥಾನಗಳಲ್ಲಿ ಸಿಂಗಾರಿ (288), ರಾಘವೇಂದ್ರ (309), ಶ್ರೀಮತಿ (405), ಸುಬ್ಬಣ್ಣ ಶೆಟ್ಟಿ (476), ಗಂಗೆ (412), ಮಂಜುಳಾ (364), ರಾಜೇಶ್ ಎನ್ ದೇವಾಡಿಗ (436), ಜಲಜಾ ಶೆಡ್ತಿ(331), ರವಿ ಶೆಟ್ಟಿ (402), ರಾಜೇಂದ್ರ (244), ಪ್ರಮೋದ್ ಕೆ. ಶೆಟ್ಟಿ (201), ಪ್ರಸನ್ನಕುಮಾರ್ (178), ಜಯಲಕ್ಷ್ಮೀ (285), ಸುಧಾಕರ ಶೆಟ್ಟಿ (320) ವಿಜಯಿಶಾಲಿಯಾಗಿದ್ದಾರೆ. ಕೆರಾಡಿ ಗ್ರಾಮ ಪಂಚಾಯತ್: (ಕುಂದಾಪ್ರ ಡಾಟ್ ಕಾಂ ಸುದ್ದಿ) 14 ಸ್ಥಾನಗಳಲ್ಲಿ ಸುಜಾತ ನಾಯಕ್ (325), ರಾಘವೇಂದ್ರ (444), ದಿನೇಶ್ ನಾಯಕ್ (435), ಮಂಜು ಕೊಠಾರಿ (317), ಗಿರಿಜಾ ಶೆಡ್ತಿ (286), ಕುಸುಮಾ (303), ಸಂದೀಪ್ ಕುಮಾರ್ ಶೆಟ್ಟಿ (304), ಗೋವಿಂದ (360), ಸುಜಾತ (323), ಲಕ್ಷ್ಮೀ (345), ಶಶಿಕಲಾ ಮೊಗವೀರ (343), ಸುದರ್ಶನ…
