Author: ನ್ಯೂಸ್ ಬ್ಯೂರೋ

ನಾಡಿನ ಪ್ರಸಿದ್ದ ಜಾತ್ರಾ ಮಹೋತ್ಸವಗಳಲ್ಲಿ ಒಂದಾದ, ಕರಾವಳಿಯ ಅತ್ಯಂತ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಟ್ಟಿರುವ ‘ಕೊಡಿ ಹಬ್ಬ’ದ ಮನ್ಮಹಾರಥೋತ್ಸವ ಈ ಬಾರಿ ಕಾರ್ತಿಕ ಮಾಸದ ಹುಣ್ಣಿಮೆಯಂದು (ನ.30 ಸೋಮವಾರ) ಜರುಗಲಿದೆ. ಕೋಟೇಶ್ವರ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ರಥೋತ್ಸವಕ್ಕೆ ಸಕಲ ಸಿದ್ದತೆಗಳು ನಡೆದಿದೆ. ಏಳು ದಿವಸಗಳ ಕಾಲ ನಡೆಯುವ ಉತ್ಸಕ್ಕೆ 60 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಗರ್ನಪಠಾರೋಹಣ ಮಾಡುವುದರ ಮೂಲಕ ಚಾಲನೆ ನೀಡಲಾಗಿದೆ. ಈ ಸಂದಂರ್ಭದಲ್ಲಿ ಜರುಗುವ ಧಾರ್ಮಿಕ ಆಚರಣೆಗಳು, ಕಟ್ಟೆಪೂಜೆ, ರಥೋತ್ಸವ ಮರುದಿನ ನಡೆಯುವ ಓಕುಳಿ ಆಟ ಹಬ್ಬಕ್ಕೆ ಮತ್ತಷ್ಟು ಕಳೆಗಟ್ಟಲಿದೆ. ಜಾತ್ರಾ ಪ್ರಯುಕ್ತ ಇಡೀ ಕೋಟೇಶ್ವರ ಪಟ್ಟಣ ಸಿಂಗರಿಸಿಕೊಂಡಿದೆ. ಭಾವೈಕ್ಯತೆಯ ಸಂಗಮ: ಇಲ್ಲಿನ ಬ್ರಹ್ಮರಥವನ್ನು ನಿರ್ಮಿಸುವಲ್ಲಿ ಮುಸ್ಲಿಂ ಬಾಂಧವರ ಕೊಡುಗೆಯೂ ಇದೆ. ಪಾರಂಪರಿಕವಾದ ಧಾರ್ಮಿಕ ಕಾರ್ಯವನ್ನು ಸ್ಥಳೀಯ ಮುಸ್ಲಿಂ ಬಂಧುಗಳು ಅತ್ಯಂತ ಭಯ ಭಕ್ತಿಯಿಂದ ನೆರವೇರಿಸುತ್ತಾರೆ. ಮೈಸೂರು ರಾಜ್ಯದ ದೊರೆ ಟಿಪ್ಪು ಸುಲ್ತಾನ್ ಕಾಲದಿಂದ ನಡೆದು ಬಂದಿರುವ `ದೀವಿಟಿಗೆ ಸಲಾಮ್` ಎನ್ನುವ ವಿಶಿಷ್ಠ ಧಾರ್ಮಿಕ ಸೇವೆ ಇಂದಿಗೂ ಮುಂದುವರೆಯುತ್ತಿದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಇಲ್ಲಿನ ಶ್ರೀಮೂಕಾಂಬಿಕಾ ದೇವಳಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭಾನುವಾರ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಸಲ್ಲಿಸಿದರು. ದೇವಳದ ವತಿಯಿಂದ ಡಿ. ಕೆ ಶಿವಕುಮಾರ್ ಅವರನ್ನು ಗೌರವಿಸಲಯಿತು. ಈ ಸಂದರ್ಭ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು , ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಉದ್ಯಮಿ ಯು. ಬಿ. ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಎಸ್. ರಾಜು ಪೂಜಾರಿ , ಯು.ಆರ್. ಸಭಾಪತಿ , ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ , ವಂಡ್ಸೆ ಬಾಕ್ಲ ಕಾಂಗ್ರೆಸ್ ಅಧ್ಯಕ ಪ್ರದೀಪ್ ಕುಮಾರ್ ಶೆಟ್ಟಿ , ಮಾಜಿ ಅಧ್ಯಕ್ಷ ಕೆ. ರಮೇಶ್ ಗಾಣಿಗ ಕೊಲ್ಲೂರು , ತಾಲೂಕು ಪಂಚಾಯತ್ ಸದಸ್ಯೆ ಗ್ರೀಷ್ಮಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಶನಿವಾರ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ದೇವಸ್ಥಾನದ ಆಡಳಿತ ಧರ್ಮದರ್ಶಿ ಶೆಟ್ಟಿಪಾಲ್ ಸಚ್ಚಿದಾನಂದ ಚಾತ್ರ ಅವರು ಶಿ.ಕೆ. ಶಿವಕುಮಾರ್ ಅವರನ್ನು ಗೌರವಿಸಿದರು. ಈ ಸಂದರ್ಭ ಮಾಜಿ ಸಚಿವ ವಿನಯಕುಮಾರ ಸೊರಕೆ, ಮಾಜಿ ಶಾಸಕರಾದ ಕೆ. ಗೋಪಾಲ ಪೂಜಾರಿ, ಯು. ಆರ್. ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ್ ಕೊಡವೂರು, ಎಸ್ ರಾಜು ಪೂಜಾರಿ, ವಂಡ್ಸೆ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು. ­   

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಕೋಟದ ಕೃಷ್ಣಭವನ ಹೋಟೆಲ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಒಬ್ಬರು ಯುವತಿ ಮೃತರಾಗಿದ್ದು, ಇನ್ನೊಬ್ಬರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೇಳೂರು ನಿವಾಸಿ ಶ್ರೇಯಾ ಶಾನುಭಾಗ್ (24) ಮೃತರು. ಉಜಿರೆ ಮೂಲದ ಪ್ರಜ್ಞಾ (25) ಗಾಯಾಳು. ಕುಂದಾಪುರದಿಂದ ಬ್ರಹ್ಮಾವರ ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದಾಗ ಫಾರ್ಚೂನ್ ವಾಹನ ಡಿಕ್ಕಿ ಹೊಡೆದು ಇಬ್ಬರೂ ರಸ್ತೆಗೆ ಬಿದ್ದಿದ್ದರು ಎಂದು ತಿಳಿಸಲಾಗಿದೆ. ಪರಾರಿಯಾಗಲೆತ್ನಿಸಿದ ಫಾರ್ಚೂನ್ ವಾಹನವನ್ನು ಕೋಟದ ಜೀವನ್ ಮಿತ್ರ ಆಂಬುಲನ್ಸ್ ಮಾಲೀಕ ನಾಗರಾಜ್ ಪುತ್ರನ್ ಅವರ ಸಮಯ ಪ್ರಜ್ಞೆಯಿಂದ ಸಾಸ್ತಾನ ಟೋಲ್ ಬಳಿ ವಾಹನ ತಡೆದು‌ ಕೋಟ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ ಬಿ.ಎಸ್.ಡಬ್ಲೂ ಹಾಗೂ ಫುಡ್ ಆಂಡ್ ನ್ಯೂಟ್ರೀಷನ್ ವಿಭಾಗದ ವತಿಯಿಂದ ‘ಅನ್ವೇಷಣಾ’ ರಿಸರ್ಚ್ ಫೋರಂ ಉದ್ಘಾಟನಾ ಕಾರ್ಯಕ್ರಮವು ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ಜರುಗಿತು. ಆಳ್ವಾಸ್ ಕಾಲೇಜಿನ ಸಂಶೋಧನಾ ವಿಭಾಗದ ಸಂಯೋಜಕ ಡಾ. ಸುಕೇಶ್ ಮಾತನಾಡಿ, ಸಂಶೋಧನೆಯ ಹಲವು ಆಯಾಮಗಳ ಬಗ್ಗೆ ಮಾಹಿತಿ ನೀಡಿದರು. ಸಂಶೋಧನೆಯ ಕೌಶಲ್ಯ ತರಗತಿಯಲ್ಲಿ ಪಾಠ ಕೇಳುವುದರಿಂದ ಬರುವುದಲ್ಲ, ಪರಸ್ಪರ ಚರ್ಚಿಸಿ ಪ್ರಶ್ನೆಗಳು ಹುಟ್ಟಿಕೊಂಡಾಗ, ಉತ್ತರವನ್ನು ಸಂಶೋಧನೆಯ ಮೂಲಕ ಕಂಡುಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು. ಸಂಶೋಧನೆಯ ಪ್ರಕ್ರಿಯೆಗೆ ಹೆಚ್ಚಿನ ಒದು ಅಗತ್ಯ ಎಂದು ತಿಳಿಸಿದರು. ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್ ವಿದ್ಯಾರ್ಥಿಗಳು ಪರಸ್ಪರ ಚರ್ಚೆ ನಡೆಸುವುದರಿಂದ ಯಾವುದೇ ವಿಷಯದ ಆಳ-ಅಗಲ ತಿಳಿಯಲು ಸಾಧ್ಯ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು. ಪದವಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕೆ. ಹಾಗೂ ಫುಡ್ ಆಂಡ್ ನ್ಯೂಟ್ರೀಷನ್ ವಿಭಾಗದ ಮುಖ್ಯಸ್ಥೆ ಆಶಿತಾ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಉಡುಪಿ, ರಾಷ್ಟೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ, ಕುಂದಾಪುರ, ತಾಲೂಕು ಆಯುಷ್ ಘಟಕ, ಕುಂದಾಪುರ ಇವರ ಆಶ್ರಯದಲ್ಲಿ ಮತ್ತು ರೋಟರಿ ಕುಂದಾಪುರ ರಿವರ್ ಸೈಡ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಸಹಭಾಗಿತ್ವದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಯೋಗ ತರಬೇತಿ ಶಿಬಿರ ಕುಂದಾಪುರದ ಮಿನಿ ವಿಧಾನ ಸೌಧದ ಆವರಣದಲ್ಲಿ ಜರಗಿತು. ಶಿಬಿರ ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಯೋಗ ಭಾರತೀಯ ಸಂಸ್ಕೃತಿಯಲ್ಲಿ ಅಮೂಲ್ಯ ವಾದ ಪದ್ಧತಿ, ಜಗತ್ತಿಗೆ ಮಹತ್ತರ ಕೊಡುಗೆಯನ್ನು ದೇಶ ಕೊಟ್ಟಿದೆ. ವಿಜ್ಞಾನ, ತಂತ್ರಜ್ಞಾನ, ಗಣಿತದಿಂದ ಹಿಡಿದು ಹಲವು ವಲಯಗಳಲ್ಲಿ ಕೊಡುಗೆಯನ್ನು ಕೊಟ್ಟಿದೆ. ಅದರಲ್ಲಿ ಯೋಗವು ಒಂದು, ಆಧ್ಯಾತ್ಮ ಯೋಗದ ಒಂದು ಭಾಗ. ನಮಗೆ ಏಕಾಗ್ರತೆ, ಸಕಾರಾತ್ಮಕ ಯೋಚನೆ ಮಾಡಲು ಮತ್ತು ಲವಲವಿಕೆಯಿಂದಿರಲು ಸಹಾಯ ಮಾಡುತ್ತವೆ. ಯೋಗಾಸನವು ಸೌಮ್ಯವಾದ ವ್ಯಾಯಾಮವಾಗಿದ್ದು ಅದು ನಿಮ್ಮ ಮನಸ್ಸನ್ನು ಶಾಂತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತ ಸಂವಿಧಾನ ಅರ್ಪಣಾ ದಿನವನ್ನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ಜಿಲ್ಲಾ ಕಚೇರಿಯಲ್ಲಿ ಮಾಲಾರ್ಪಣಾ ಮಾಡಿ ಸಂವಿಧಾನ ಅರ್ಪಣಾ ದಿನವನ್ನ ಆಚರಿಸಲಾಯಿತು. ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು ಮಾಲಾಪರ್ಣೆ ಮಾಡಿ, ಸಂವಿಧಾನ ಹಂತ,ಹಂತವಾಗಿ ಬದಲಾವಣೆ ಮಾಡುತ್ತಿದ್ದು ದಲಿತರು ಹಿಂದುಳಿದ ವರ್ಗ ಅಲ್ಪ ಸಂಖ್ಯಾತರು ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು. ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ತಾಲೂಕು ಸಂಘಟನಾ ಸಂಚಾಲಕ ಕೆ.ಎಸ್ ವಿಜಯ್, ಗೋಪಾಲ ವಿ.ಬೈಂದೂರು ತಾಲೂಕು ಸಂಚಾಲಕ ಚಂದ್ರಮ ತಲ್ಲೂರು, ಸಂದೇಶ್ ನಾಡ, ಸಂತೋಷ್ ಕುಮಾರ್ ಕಿರಿಮಂಜೇಶ್ವರ, ನಗರ ಶಾಖೆ ಸಂಚಾಲಕ ಸುರೇಶ್ ಬಾಬು, ಹಾಗೂ ತಲ್ಲೂರು ಶಾಖೆಯ ಉದಯ್ ಕೆ.ಮತ್ತು ಅರುಣ್ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿರಿಯ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಅವರು ಸಂಪಾದಿಸಿರುವ ‘ಕುಂದಾಪ್ರ ಕನ್ನಡ ನಿಘಂಟು’ನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸ್ಥಾಪಿಸಿರುವ ಹಿಗ್ಗು – ಅರಿವಿನ ಮಾಲೆ ಪುಸ್ತಕ ದತ್ತಿಯ ಚೊಚ್ಚಲ ಗ್ರ್ಯಾಂಟ್‌ಗೆ ಆಯ್ಕೆಮಾಡಲಾಗಿದೆ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಸುರೇಶ್ ತಲ್ಲೂರು ತಿಳಿಸಿದ್ದಾರೆ. ಅವರು ಶುಕ್ರವಾರ ಕುಂದಾಪುರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಹಿಗ್ಗು – ಅರಿವಿನ ಮಾಲೆ ಪುಸ್ತಕ ದತ್ತಿ ಯೋಜನೆಯಡಿ 2 ಲಕ್ಷ ರೂ.ಗಳ ದತ್ತಿಯನ್ನು ನಿಘಂಟು ಪ್ರಕಾಶನಕ್ಕೆ ನೀಡಲಾಗುತ್ತದೆ. ಮುಂಬೈನ ಬುಸಿನೆಸ್ ಇಂಡಿಯಾ ಪತ್ರಿಕೆಯಲ್ಲಿ ಕಾರ್ಟೂನಿಷ್ಠ್ ಆಗಿರುವ ಪಂಜು ಗಂಗೊಳ್ಳಿ ಅವರು ಸುಮಾರು 10,000 ಮಿಕ್ಕಿದ ಕುಂದಾಪ್ರ ಕನ್ನಡದ ಪದಗಳು ಮತ್ತು 1,700ಕ್ಕೂ ಮಿಕ್ಕಿದ ನುಡಿಗಟ್ಟುಗಳು, ಕುಂದಾಪ್ರ ಕನ್ನಡದ ರೀತಿ ರಿವಾಜು, ಕಟ್ಟುಪಾಡು, ಆಚರಣೆಗಳ ಮಾಹಿತಿ ಒಳಗೊಂಡಿರುವ ಅಂದಾಜು 700 ಪುಟಗಳಾಗುಷ್ಟು ಸಾಂಸ್ಕೃತಿಕ ಶಬ್ದಕೋಶವನ್ನು ಸಿದ್ದಪಡಿಸಿದ್ದಾರೆ. ಈ ಪುಸ್ತಕಕ್ಕೆ ದತ್ತಿನಿಧಿ ನೀಡಿ ಪ್ರಕಾಶಿಸುವ ಮೂಲಕ ವಿಶ್ವವಿದ್ಯಾನಿಲಯ ಮಾಡಬೇಕಾದ ಕೆಲಸವನ್ನು ಟ್ರಸ್ಟ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೂತನ ಬೈಂದೂರು ತಾಲೂಕು ರಚನೆಗೊಂಡು ಮೂರು ವರ್ಷ ಕಳೆದು, ತಾಲೂಕು ಪಂಚಾಯತ್ ರಚನೆಗೊಂಡು ಮೂರು ತಿಂಗಳು ಕಳೆದಿದೆ. ಇಷ್ಟರ ನಂತರವೂ ಬೈಂದೂರಿನಲ್ಲಿ ತಾಲೂಕು ಪಂಚಾಯತಿಗಾಗಿ ಒಂದು ಸುಸಜ್ಜಿತ ಕಟ್ಟಡವಿಲ್ಲ. ತಾಲೂಕು ಪಂಚಾಯತ್ ಸಾಮಾನ್ಯ ಸಭೆಯನ್ನು ಕುಂದಾಪುರದಲ್ಲಿ ನಡೆಸುವುದು ಸರಿಯಲ್ಲ ನಡೆಸುತ್ತಿರುವುದು ಸರಿಯಲ್ಲ. ಇದು ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಬೈಂದೂರು ತಾಲೂಕಿನ 3ನೇ ಸಾಮಾನ್ಯ ಸಭೆಯಲ್ಲಿ ಕೇಳಿಬಂದ ಮಾತುಗಳು. ಸದಸ್ಯ ಜಗದೀಶ್ ದೇವಾಡಿಗ ಕುಂದಾಪುರದಲ್ಲಿ ಸಭೆ ನಡೆಸುತ್ತಿರುವುದಕ್ಕೆ ಆಪ್ಷೇಕಿಸಿ, ಬೈಂದೂರಿನಲ್ಲಿಯೇ ಮುಂದಿನ ಸಭೆ ನಡೆಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಹೇಂದ್ರ ಪೂಜಾರಿ ಬೈಂದೂರು ತಾಲೂಕು ಪಂಚಾಯತಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಸಭಾಂಗಣದ ವ್ಯವಸ್ಥೆ ಇಲ್ಲ. ಖಾಸಗಿ ಸಭಾಂಗಣದಲ್ಲಿ ಸಭೆ ನಡೆಸಿದರೆ ಗೌಪ್ಯತೆಗೆ ಧಕ್ಕೆಯಾಗಲಿದೆ. ಎ2 ತಂತ್ರಾಂಶವೂ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗಿಲ್ಲ. ಈ ಬಗ್ಗೆ ಕ್ಷೇತ್ರದ ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಗ್ರಾಮಸ್ಥರಿಗಿಲ್ಲ ಪಡಿತರ: ಸದಸ್ಯೆ ಗಿರಿಜಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಂಗ್ರೆಸ್ ಮುಕ್ತ ಭಾರತವಾಗಬೇಕಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಪಂಚಾಯತಿಗಳು ಆಗಬೇಕು. ಮುಂದಿನ ದಿನಗಳಲ್ಲಿ ಪಂಚಾಯತ್ಗಳಿಗೆ ಅದ್ಬುತ ಶಕ್ತಿ ಬರಲಿದೆ. ಸ್ವರಾಜ್ಯ ಸಂಕಲ್ಪ ಈಡೇರಲಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ಪಂಚಸೂತ್ರಗಳ ಅಡಿಯಲ್ಲಿ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಮುಂದೆ ತಾ.ಪಂ., ಜಿ.ಪಂ.ಚುನಾವಣೆಯಲ್ಲಿಯೂ ಜಯಭೇರಿ ಭಾರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. ಬಿಜೆಪಿ ಕರ್ನಾಟಕದ ವತಿಯಿಂದ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷದ ಸಾಮಾನ್ಯ ಕಾರ್ಯಕರ್ತ ನಾಯಕನಾಗುವುದೆ ಪಂಚಾಯತ್ ಚುನಾವಣೆ. ಅದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಗ್ರಾಮ ಮಟ್ಟದಲ್ಲಿ ಸಾಧನೆ, ವಿಚಾರಧಾರೆಯ ಪರಿಶ್ರಮದ ಮೂಲಕ ಗೆಲುವು ಸಾಧಿಸುವುದು ಈ ಗ್ರಾಮ ಸ್ವರಾಜ್ಯ ಯಾತ್ರೆ. ರಾಮರಾಜ್ಯ ಮಹತ್ಮಾ ಗಾಂಧಿಯವರ ಕನಸು. ದೆಹಲಿ, ಮುಂಬಯಿ ಬೆಳೆದರೆ ರಾಮರಾಜ್ಯವಾಗದು. ಹಳ್ಳಿಗಳಲ್ಲಿಯೂ ಸ್ವರಾಜ್ಯದ ಕಲ್ಪನೆಯ ಬೆಳೆಯಬೇಕು ಎನ್ನುವುದು ಗಾಂಧಿಯವರ ಆಶಯವಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರ, ಕುಟುಂಬ ರಾಜಕೀಯ ಲಾಲಸೆಯಿಂದಲೇ ಮುಂದುವರಿಯಿತು. ಇದೀಗ…

Read More