Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ:  ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ) ಕೋಟ ಅವರು 2020ನೇ ಸಾಲಿನ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕನ್ನಡ ನಾಡಿನ ಖ್ಯಾತ ಬರಹಗಾರ, ಪದ್ಮಶ್ರೀ ಪುರಸ್ಕೃತ , ನಾಡೋಜ ಡಾ. ಎಸ್ ಎಲ್ ಭೈರಪ್ಪನವರಿಗೆ ನೀಡಲು ನಿರ್ಧರಿಸಿದ್ದಾರೆ. ಮಾನ್ಯ ಭೈರಪ್ಪನವರು ಈ ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಗೆ ನೀಡಿದ್ದಾರೆ. ಈ ಪ್ರಶಸ್ತಿ ಕಾರಂತರ ಜನ್ಮ ದಿನವಾದ ಅಕ್ಟೋಬರ್ 10 ರಂದು ನೀಡಲಾಗುತ್ತದೆ. ಕಳೆದ ಹದಿನೈದು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡುತ್ತಾ ಬಂದಿದ್ದು, ಕಾರಂತ ಆಸಕ್ತಿ ಕ್ಷೇತ್ರವಾದ ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಎಸ್. ಎಲ್ ಭೈರಪ್ಪನವರ ಗಣನೀಯ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ. ಈಗಾಗಲೇ ವೀರಪ್ಪ ಮೊಯ್ಲಿ, ವೇಂಕಟಾಚಲ, ಕೆ. ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ್ ಕಾಸರವಳ್ಳಿ, ಜಯಶ್ರೀ, ಮೋಹನ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಸನದ ನ್ಯಾಷನಲ್ ಕ್ಲಾಸಿಕಲ್ ಡಾನ್ಸ್ ಅಕಾಡೆಮಿ ಇತ್ತೀಚಿಗೆ ಆನ್‌ಲೈನ್ ಮೂಲಕ ನಡೆಸಿದ ಆರನೇ ಹಂತದ ರಾಷ್ಟ್ರ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಕೋಟದ ಶರ್ಮದಾ ಎಮ್. ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ. ಬೇರೆ ಬೇರೆ ರಾಜ್ಯಗಳಿಂದ ಭಾಗವಹಿಸಿದ್ದ ಸ್ಪರ್ಧಿಗಳ ಪೈಕಿ ಶರ್ಮದಾ ಎಮ್. ಅವರೊಂದಿಗೆ ಉಡುಪಿಯ ಅನ್ವಿತಾ ಹಾಗೂ ತೆಲಂಗಾಣದ ಪೆಂಡ್ಯಾಲಾ ಲಕ್ಷ್ಮೀ ಪ್ರಿಯಾ ಮೊದಲ ಸ್ಥಾನವನ್ನು ಹಂಚಿಕೊಂಡಿರುತ್ತಾರೆ. ಭರತನಾಟ್ಯ ಹಾಗೂ ಸಂಗೀತದಲ್ಲಿ ಆಸಕ್ತಿ ಹೊಂದಿರುವ ಶರ್ಮದಾ ಕಳೆದ ೫ ವರ್ಷಗಳಿಂದ ಸಾಲಿಗ್ರಾಮದ ಚಿತ್ರಪಾಡಿಯ ’ಶ್ರೀ ನಟರಾಜ ನೃತ್ಯ ನಿಕೇತನ’ ಕೇಂದ್ರದಲ್ಲಿ ವಿದೂಷಿ ಭಾಗೀರಥಿ ಎಮ್. ರಾವ್ ಅವರ ಬಳಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ೨೦೧೯ ರ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಶೇಕಡಾ ೯೩ ಅಂಕ ಪಡೆದು ಉರ್ತ್ತೀಣರಾಗಿದ್ದಾರೆ. ಜೊತೆಗೆ ಈ ವರ್ಷ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆಯನ್ನು ಬರೆಯಲಿದ್ದಾರೆ. ಮೂಲತ ಉಪ್ಪುಂದ ಮಕ್ಕಿ ದೇವಸ್ಥಾನದವರಾಗಿದ್ದು, ಪ್ರಸ್ತುತ ಕೋಟದಲ್ಲಿ ನೆಲೆಸಿರುವ ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು,ಸೆ.24: ಬೈಂದೂರು ಮಂಜುನಾಥ ಸ್ಟೋರ್ಸ ಸ್ಥಾಪಕ  ಸುಬ್ರಹ್ಮಣ್ಯ ನಾವುಡ ಅವರು ವಯೋಸಹಜ ಬಳಲಿಕೆಯಿಂದ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಅವರು ಈ ಹಿಂದೆ ಕೂಟ ಮಹಾಜಗತ್ತು ಕಿರಿಮಂಜೇಶ್ವರ ವಲಯದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮಿತಭಾಷಿ, ವ್ಯವಹಾರದಲ್ಲಿ ಅತ್ಯಂತ ಪ್ರಾಮಾಣಿಕರಾಗಿ, ಸ್ನೇಹಜೀವಿಯಾಗಿದ್ದರು. ಮೃತರು ಪತ್ನಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಕಳೆದ ಕೆಲವಾರು ವರ್ಷಗಳಿಂದ ಬೈಂದೂರು ಮಂಜುನಾಥ ಸ್ಟೋರ್ಸ್’ನ್ನು ಗಣೇಶ್ ನಾಯಕ್ ಹಾಗೂ ಶ್ರೀನಿವಾಸ ನಾಯಕ್ ಸಹೋದರರು ಮುನ್ನಡೆಸುತ್ತಿದ್ದು, ಇಂದಿಗೂ ಅದು ನಾವಡರ ಅಂಗಡಿ ಎಂದೇ ಪ್ರಸಿದ್ಧಿ ಪಡೆದಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ವಿಶ್ವ ಇಂಜಿನಿಯರ್ ದಿನಾಚರಣೆ ಪ್ರಯುಕ್ತ ಗಂಗೊಳ್ಳಿ ರೋಟರಿ ಕ್ಲಬ್ ವತಿಯಿಂದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ, ಇಂಜಿನಿಯರ್ ಎಚ್.ಗಣೇಶ ಕಾಮತ್ ಅವರನ್ನು ಬುಧವಾರ ಗಂಗೊಳ್ಳಿಯಲ್ಲಿನ ಅವರ ಕಛೇರಿಯಲ್ಲಿ ಗೌರವಿಸಿ ಅಭಿನಂದಿಸಲಾಯಿತು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಬಿ.ಲಕ್ಷ್ಮೀಕಾಂತ ಮಡಿವಾಳ, ಕಾರ್ಯದರ್ಶಿ ಎಂ.ನಾಗೇಂದ್ರ ಪೈ, ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷರಾದ ಜನಾರ್ದನ ಪೂಜಾರಿ ಪೆರಾಜೆ, ಕೆ.ರಾಮನಾಥ ನಾಯಕ್, ಉಪನ್ಯಾಸಕ ನಾರಾಯಣ ಇ. ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ:  ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಯಮದನ್ವಯ ಜಿಲ್ಲೆಯಲ್ಲಿರುವ ಬಿ ಪ್ರವರ್ಗದ 8 ಮತ್ತು ಸಿ ಪ್ರವರ್ಗದ 44 ಅಧಿಸೂಚಿತ ಸಂಸ್ಥೆಗಳು/ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ಮೂರು ವರ್ಷದ ಅವಧಿಗೆ ರಚಿಸಲು ಆಸಕ್ತ ಭಕ್ತಾಧಿಗಳು/ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಅಥವಾ ಸಹಾಯಕ ಆಯುಕ್ತರ ಕಛೇರಿ ಯಿಂದ ಪಡೆದು ಭರ್ತಿ ಮಾಡಿ ಅಕ್ಟೋಬರ್ 21 ರ ಒಳಗೆ ಸಹಾಯಕ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಉಡುಪಿ ಇವರಿಗೆ ಸಲ್ಲಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ:  ಸಫಾಯಿ ಕರ್ಮಚಾರಿಗಳ ಕಲ್ಯಾಣ ಅಭಿವೃದ್ಧಿಗೆ ಸರ್ಕಾರ ರೂಪಿಸಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು. ಅವರು ಇಂದು ತಮ್ಮ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಫಾಯಿ ಕರ್ಮಚಾರಿಗಳ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಜನಪರ ಕಲ್ಯಾಣ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದೆ, ಇವುಗಳ ಬಗ್ಗೆ ಅವರುಗಳಿಗೆ ಅರಿವು ಮೂಡಿಸುವುದರೊಂದಿಗೆ ಅವರನ್ನು ಫಲಾನುಭವಿಗಳನ್ನಾಗಿಸಬೇಕು ಎಂದರು. ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಕಾರ್ಯಕ್ರಮವು ಸರ್ಕಾರ ನಿಗದಿಪಡಿಸಿದಂತೆ ಮಾಡಿಸಬೇಕು. ಅದರ ಜೊತೆಗೆ ವರ್ಷಕ್ಕೊಮ್ಮೆ ಕಡ್ಡಾಯವಾಗಿ ಹೆಲ್ತ್ ಚೆಕ್ಆವಪ್ ಕಾರ್ಯವು ಉನ್ನತ ಆಸ್ಪತ್ರೆಯ ಸಹಯೋಗದೊಂದಿಗೆ ಚಿಕಿತ್ಸೆ ನೀಡಬೇಕೆಂದರು. ಸ್ಥಳೀಯ ಸಂಸ್ಥೆ ವ್ಯಾಪ್ತಿ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಸಕ್ಕಿಂಗ್ ಯಂತ್ರ ಖರೀದಿಸಲು ಸಫಾಯಿ ಕರ್ಮಚಾರಿಗಳಿಗೆ ಬ್ಯಾಂಕಿನಿಂದ ಸಾಲ-ಸೌಲಭ್ಯ ಒದಗಿಸಬೇಕು ಎಂದ ಅವರು ಇದಕ್ಕೆ ಪೂರಕವಾಗಿ ಬ್ಯಾಂಕುಗಳು ರಿಯಾಯಿತಿ ದರದಲ್ಲಿ ಸಾಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು :  ಭಾರತ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಕಾರ್ಯಪಡೆಯ ಸದಸ್ಯರಾಗಿ ಇಲ್ಲಿನ ಸಾತ್ವಿಕ್ ವೀಗನ್ ಸೊಸೈಟಿಯ ಸಂಸ್ಥಾಪಕ ಶಂಕರನಾರಾಯಣ ನೇಮಕಗೊಂಡಿದ್ದಾರೆ. ಮೂಲತ ಭಾರತೀಯ ವೀಗನ್ ಸೊಸೈಟಿಯ ಸಂಸ್ಥಾಪಕರಾಗಿದ್ದ ಅವರು ಕೆಲವು ವರ್ಷಗಳ ಹಿಂದೆ ಬೈಂದೂರು ಸಮೀಪದ ಹೊಸೂರು ಎಂಬಲ್ಲಿ ಸಾತ್ವಿಕ ವೀಗನ್ ಸೊಸೈಟಿಯ ಹೆಸರಿನಲ್ಲಿ ಸಾತ್ವಿಕ ಆಹಾರ ಸೇವನೆಯ ಅಭಿಯಾನ ನಡೆಸುತ್ತಿದ್ದಾರೆ. ಅವರ ಸಂಘಟನೆಗೆ ಭಾರತ ಮತ್ತು ವಿದೇಶಗಳಲ್ಲಿ ಅನುಯಾಯಿಗಳು ಇದ್ದಾರೆ. ಭಾರತವೂ ಸೇರಿದಂತೆ ಜಗತ್ತಿನಲ್ಲಿ ಲಭ್ಯವಿರುವ ವೀಗನ್ ಆಹಾರಗಳ (ಅಹಿಂಸಾಹಾರ) ವ್ಯಾಖ್ಯಾನವನ್ನು ಮರುಪರಿಶೀಲಿಸುವ, ಜಾಗತಿಕವಾಗಿ ಲಭ್ಯವಿರಬಹುದಾದ ಮಾದರಿಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ವೀಗನ್ ಆಹಾರಗಳ ಪರಿವೀಕ್ಷಣೆ ಮತ್ತು ದೃಢೀಕರಣಕ್ಕೆ ಮಾರ್ಗದರ್ಶನ ಅಥವಾ ಸಲಹೆಗಳನ್ನು ರೂಪಿಸುವ ಮತ್ತು ಆಹಾರ ಪ್ರಾಧಿಕಾರವು ಸೂಚಿಸುವ ಇನ್ನಿತರ ಕಾರ್ಯಗಳನ್ನು ನಿರ್ವಹಿಸುವ ಹೊಣೆಯನ್ನು ಕಾರ್ಯಪಡೆಗೆ ಒಪ್ಪಿಸಲಾಗಿದೆ. ಭೋಪಾಲದ ಐಸಿಎಆರ್‌ನ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಸುಮೇಧಾ ಎಸ್. ದೇಶಪಾಂಡೆ, ಬೆಂಗಳೂರು ಮೌಂಟ್ ಕಾರ್ಮೆಲ್ ಕಾಲೇಜಿನ ಪೌಷ್ಠಿಕಾಹಾರ ಮತ್ತು ಆಹಾರ ವಿಜ್ಞಾನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು:  ಜನರು ಕೋವಿಡ್-19 ಸಂಕಷ್ಟದಲ್ಲಿರುವಾಗ ಕೇಂದ್ರದ ಬಿಜೆಪಿ ಸರ್ಕಾರ 11 ಸುಗ್ರೀವಾಜ್ಞೆಗಳ ಮೂಲಕ ಜನವಿರೋಧಿ ಶಾಸನಗಳನ್ನು ತರಲು ಮುಂದಾಗಿದೆ. ರಾಜ್ಯದ ಜನರಿಂದ ಸಂಗ್ರಹಿಸಿದ ಜಿಎಸ್‌ಟಿ ಪಾಲು ನೀಡದೆ ಜನರ ಮೇಲೆ ಸಾಲದ ಹೊರೆ ಹೊರಿಸಿದೆ. ಇದು ಖಂಡನೀಯ ಎಂದು ಸಿಪಿಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು. ಸಿಪಿಎಂ ಬೈಂದೂರು ವಲಯ ಸಮಿತಿ  ಕೇಂದ್ರದ ನಡೆ ವಿರುದ್ಧ ಇಲ್ಲಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ  ಮಾತನಾಡಿದರು. ಬೈಂದೂರು ಭಾಗವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರು ಸಂಸತ್ ಅಧಿವೇಶನದಲ್ಲಿ ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕು. ರೈತರು, ಕಾರ್ಮಿಕರು ಅನುಭವಿಸುತ್ತಿರುವ ಬವಣೆಯ ಕುರಿತು ಚರ್ಚೆಗೆ ಒತ್ತಾಯಿಸಿ ಅವರ ಪರ ಮಾತನಾಡಬೇಕು ಎಂದು  ಆಗ್ರಹಿಸಿದರು. ಸಿಪಿಎಂ ರಾಜ್ಯ ಮುಖಂಡ ಕೆ. ಶಂಕರ್ ಮಾತನಾಡಿ ಪ್ರಜಾಸತ್ತಾತ್ಮಕವಾಗಿ, ಶಾಂತಿಯುತವಾಗಿ ನಡೆಸಿದ ರಾಜಕೀಯ ಚಳವಳಿಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೇಲೆ ಹೂಡಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು. ಹೋರಾಟಗಾರರನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇನ್ ಸೈಟ್ ಫೌಂಡೇಶನ್ ಯು.ಎಸ್.ಎ.ಆಯೋಜಿಸಿರುವ ಅಂತಾರಾಷ್ಟ್ರೀಯ ಮಟ್ಟದ ಹಿರಿಯರ ವಿಭಾಗದ ಆನ್ ಲೈನ್ ಭರತನಾಟ್ಯ ಸ್ಪರ್ಧೆಯಲ್ಲಿ ಕುಂದಾಪುರ ವೆಂಕಟರಮಣ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನ ನೆಂಪು ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕುಂದಾಪುರದ ರಾಜ್ ಕುಮಾರ್ ನೆಂಪು ಮತ್ತು ಪ್ರತಿಮಾ ಇವರ ಪುತ್ರಿಯಾಗಿರುವ ಸಿಂಚನ ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜರುಗಿದ ಹಂಸ ಭ್ರಮರಿ ಬೆಂಗಳೂರು, ಹೆಜ್ಜೆ ಗೆಜ್ಜೆ ಉಡುಪಿ, ಡ್ಯಾನ್ಸ್ ಜಾತ್ರೆ ಧಾರವಾಡ, ರವೀಂದ್ರ ಕಲಾಕ್ಷೇತ್ರ ಬೆಂಗಳೂರು, ಆಳ್ವಾಸ್ ನುಡಿಸಿರಿ, ಆಳ್ವಾಸ್ ವಿರಾಸತ್, ಹನಿವೆಲ್ ಕಂಪೆನಿ ಬೆಂಗಳೂರು, ದಿಕ್ಸೂಚಿ ನಾಟ್ಯಾಲಯ ಬೆಂಗಳೂರು, ಇವರು ನಡೆಸಿದ ನ್ರತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆದಿರುತ್ತಾರೆ. ಕಲಿಕೆಯಲ್ಲಿಯೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ಈಕೆ ವಿದುಷಿ ಪ್ರವೀತಾ ಅಶೋಕ್ ಇವರ ಮಾರ್ಗದರ್ಶನದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಭರತನಾಟ್ಯವನ್ನು ಅಭ್ಯಸಿಸುತ್ತಿದ್ದು, ಪ್ರಸ್ತುತ ವಿದ್ವತ್ ಪೂರ್ವದ ವಿದ್ಯಾರ್ಥಿನಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಯನ್ನು ಶ್ರೀ ವೆಂಕಟರಮಣ ದೇವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಶಿರೂರು ಸಮೀಪದ ಕಳಿಹಿತ್ಲು ಸಮುದ್ರ ತೀರದಲ್ಲಿ ಮಂಗಳವಾರ ಕ್ಷಿಪಣಿ ಮಾದರಿಯ ವಸ್ತುವೊಂದು ಪತ್ತೆಯಾಗಿದೆ. ಸುಮಾರು 10 ಅಡಿ ಉದ್ದವಿರುವ ಕೆಂಪು ಬಣ್ಣದ ಉಪಕರಣ ಸಮುದ್ರ ತೀರದಲ್ಲಿ ಕಂಡುಬಂದಿದೆ. ಈ ಬಗ್ಗೆ ಸ್ಥಳೀಯರು ಕರಾವಳಿ ಕಾವಲು ಪಡೆಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಸಿಬ್ಬಂದಿ ವಸ್ತುವನ್ನು ವಶಕ್ಕೆ ಪಡೆದುಕೊಂಡರು. ಕರಾವಳಿ ಕಾವಲುಪಡೆಯ ಎಸ್ಪಿ ಆರ್. ಚೇತನ್ ಈ ಬಗ್ಗೆ ಮಾಹಿತಿ ನೀಡಿ ‘ಮೇಲ್ನೋಟಕ್ಕೆ ಹಡಗಿನ ದಿಕ್ಕು ಸೂಚಕ ವಸ್ತುವಿನಂತೆ ಕಾಣುತ್ತಿದೆ. ಸಾಮಾನ್ಯವಾಗಿ ಬಂದರಿನ ಸಮೀಪದಲ್ಲಿ ಇಂತಹ ಉಪಕರಣವನ್ನು ಅಳವಡಿಸಲಾಗುತ್ತದೆ. ಹಡಗುಗಳು ಬಂದರು ತಲುಪಲು ಈ ಉಪಕರಣಗಳು ಸಹಾಯ ಮಾಡುತ್ತವೆ ಎಂದಿದ್ದಾರೆ.

Read More