Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ.ಉಡುಪಿ, ಅ16: ಜಿಲ್ಲೆಯಲ್ಲಿ ಸೋಮವಾರ 107 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಪಾಸಿಟಿವ್ ಪ್ರಕರಣಗಳಲ್ಲಿ ಉಡುಪಿ, ಬ್ರಹ್ಮಾವರ, ಕಾಪು ತಾಲೂಕಿನ 39, ಕುಂದಾಪುರ, ಬೈಂದೂರು ತಾಲೂಕಿನ 38, ಕಾರ್ಕಳ, ಹೆಬ್ರಿ ತಾಲೂಕಿನ 29 ಮಂದಿಗೆ ಹಾಗೂ ಹೊರ ಜಿಲ್ಲೆಯ ಓರ್ವ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. ಒಟ್ಟು 107 ಪ್ರಕರಣಗಳಲ್ಲಿ 84 ಮಂದಿ ಕೋವಿಡ್ ಕೇರ್ ಸೆಂಟರ್, ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಹೆಲ್ತ್ ಆಸ್ಪತ್ರೆಗೆ ದಾಖಲಾಗಿದ್ದರೆ, 84 ಮಂದಿಯನ್ನು ಹೋಮ್ ಐಸೊಲೇಷನ್ ಮಾಡಲಾಗಿದೆ. ಇಂದು 133 ಮಂದಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, 1330 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ಇಂದು ಒಟ್ಟು 3077ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

Read More

ಸ್ವಾತಂತ್ರ್ಯ ಅಮೃತ ಮಹೋತ್ಸವದ ನೆನಪಿಗೆ ಇಲಾಖೆಯಿಂದ ವರ್ಷಪೂರ್ತಿ ಕಾರ್ಯಕ್ರಮ: ಸಚಿವ ವಿ. ಸುನಿಲ್ ಕುಮಾರ್ ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹೊತ್ತಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆ ಇದೆ ಎಂದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಅವರು ಸೋಮವಾರ ಕೋಟ ಡಾ ಶಿವರಾಮ ಕಾರಂತ ಥೀಮ್ ಪಾರ್ಕ್ ಹಾಗೂ ಅಮೃತೇಶ್ವರಿ ದೇವಸ್ಥಾನಗಳಿಗೆ ಭೇಟಿ ನೀಡಿದ ಬಳಿಕ ಥೀಮ್ ಪಾರ್ಕಿನಲ್ಲಿ ಮಾತನಾಡಿ ಶಿವರಾಮ ಕಾರಂತರದ್ದು ಚಲನಶೀಲ ವ್ಯಕ್ತಿತ್ವವಾಗಿದ್ದು, ಎಲ್ಲಾ ವಿಭಾಗದಲ್ಲಿಯೂ ಸೇವೆ ಸಲ್ಲಿಸಿದ್ದರು. ಅವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಡೆಯುತ್ತಿದೆ. ಅದನ್ನು ಮುಂದುವರಿಸಲಾಗುವುದು ಎಂದರು. ಈ ಸಂದರ್ಭ ಡಾ. ಶಿವರಾಮ ಕಾರಂತರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಹುದ್ದೆ ನೇಮಕಾತಿ ಆದೇಶ ರದ್ದುಗೊಳಿಸಿದ್ದ ಅಭ್ಯರ್ಥಿ ಸಂಕಷ್ಟಕ್ಕೆ ಸಿಲುಕುವಂತಾಗಿವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಗಂಗೊಳ್ಳಿ: ಇಲ್ಲಿನ ರೋಟರಿ ಕ್ಲಬ್ ವತಿಯಿಂದ 75ನೇ ಸ್ವಾತಂತ್ರೋತ್ಸವದ ಅಂಗವಾಗಿ ಗಂಗೊಳ್ಳಿ, ಕೊಡಪಾಡಿ ಮತ್ತು ತ್ರಾಸಿ ಗ್ರಾಮದ ರಿಕ್ಷಾ ಚಾಲಕರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್‌ನ್ನು ಭಾನುವಾರ ವಿತರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ ಎಂ.ಜಿ., ಕಾರ್ಯದರ್ಶಿ ನಾರಾಯಣ ಇ.ನಾಯ್ಕ್, ಜೋನಲ್ ಲೆಫ್ಟಿನೆಂಟ್ ಕೆ.ರಾಮನಾಥ ನಾಯಕ್, ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷರಾದ ಬಿ. ಲಕ್ಷ್ಮೀಕಾಂತ ಮಡಿವಾಳ, ಪ್ರದೀಪ ಡಿ.ಕೆ., ರೋಟರಿ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿಯಿಂದ ೭ನೇ ತರಗತಿಯ ತನಕದ ವಿದ್ಯಾರ್ಥಿಗಳಿಗೆ ಎಮ್.ಎಸ್. ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಕೊಡಮಾಡಿದ ನೋಟ್ ಪುಸ್ತಕ ಮತ್ತು ಪಠ್ಯ ಪುಸ್ತಕ ವಿತರಣೆ ಇತ್ತೀಚೆಗೆ ನಡೆಯಿತು. ಪುಸ್ತಕ ವಿತರಿಸಿ ಮಾತನಾಡಿದ ಎಮ್.ಎಸ್.ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಮೂರ್ತಿ ಮಂಜರು, ಕೋವಿಡ್-19 ನಂತಹ ಕಷ್ಟಕಾಲದಲ್ಲಿಯೂ ನಮ್ಮ ಶಾಲೆಯ 400 ಮಂದಿ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇರುವುದರಲ್ಲಿ ಸ್ವಲ್ಪ ದಾನ ಮಾಡುವ ಮನದಾಸೆಯಿಂದ ಕಷ್ಟಕಾಲವಾದರೂ ನೀಡುತ್ತಿದ್ದೇನೆ ಎಂದರು. ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ, ಗ್ರಾ.ಪಂ. ಅಧ್ಯಕ್ಷರಾದ ಉದಯ ಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಈ ಶಾಲೆಗೆ ಕೃಷ್ಣಮೂರ್ತಿ ಮಂಜರ ಸಹಕಾರ ಶ್ಲಾಘನಾರ್ಹವಾದುದು. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ನಮ್ಮ ಶಾಲೆಗೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿ ಅದರ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವುದು ಮೆಚ್ಚುವಂತಹದ್ದು. ಇವರೊಂದಿಗೆ ಶಿಕ್ಷಣ ಇಲಾಖೆ ಸಹಕರಿಸಿದ್ದಲ್ಲಿ ಉತ್ತಮವಿದೆ ಎಂದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವೈದ್ಯಕೀಯ ಕಾಲೇಜುಗಳ ಭಾಗವಾಗಿ ಆರಂಭಗೊಂಡಿರುವ ‘ಆಳ್ವಾಸ್ ನಿರಾಮಯ’- ಆಯುಷ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಉದ್ಘಾಟನೆ ಇಂದು ನಡೆಯಿತು. ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಿರ್ಮಾಣಗೊಂಡಿರುವ ಈ ನೂತನ ಆಸ್ಪತ್ರೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರ ತಂದೆ ಶತಾಯುಷಿ ಆನಂದ ಆಳ್ವ ಉದ್ಘಾಟಿಸಿದರು. ಮೂಡುಬಿದಿರೆ ಹಾಗೂ ಸುತ್ತಲಿನ ಪ್ರದೇಶಗಳ ಜನರಿಗೆ ಉನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ‘ಆಳ್ವಾಸ್ ನಿರಾಮಯ’ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಆರಂಭಿಸಲಾಗಿದೆ. ಆಯುರ್ವೇದ, 60 ಬೆಡ್‌ಗಳ ಈ ಆಸ್ಪತ್ರೆಯಲ್ಲಿ ನ್ಯಾಚುರೋಪತಿ ಹಾಗೂ ಹೋಮಿಯೋಪತಿ ಚಿಕಿತ್ಸಾ ಸೌಲಭ್ಯಗಳಿದ್ದು, ಜನಸಾಮಾನ್ಯರ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೇವೆಯನ್ನು ನೀಡುವ ಆಶಯವನ್ನು ಹೊಂದಿದೆ. ಸುಸಜ್ಜಿತವಾದ ಒಳರೋಗಿ ಹಾಗೂ ಹೊರರೋಗಿ ವಿಭಾಗಗಳಿದ್ದು, ಒಳರೋಗಿಗಳಿಗೆ ಸಕಲ ಸೌಲಭ್ಯಗಳಿರುವ ಸ್ಪೆಷಲ್, ಡಿಲಕ್ಸ್ ಹಾಗೂ ಸೂಟ್ ರೂಮ್‌ಗಳು ಲಭ್ಯವಿರುತ್ತವೆ. ಚಿಕಿತ್ಸೆಗೆ ಬರುವ ಉದ್ಯೋಗಿಗಳಿಗೆ ‘ವರ್ಕ್ ಫ್ರಂ ಹಾಸ್ಪಿಟಲ್’ ವಿಶಿಷ್ಟ ಅವಕಾಶವಿದ್ದು, ವೈ ಫೈ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಮರವಂತೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಾಗರಪಂಚಮಿಯಂದು ವಿಶೇಷ ಪೂಜೆ ಪುನಸ್ಕಾರಗಳು ನಡೆಯಿತು. ಈ ಸಂದರ್ಭ ಊರಿನ ಪರಿಣಿತ ನಾಗಸ್ವರ ವಾದಕ ಉಮೇಶ್ ದೇವಾಡಿಗ ಅವರನ್ನು ಧರ್ಮದರ್ಶಿ ವಿ. ತಿಮ್ಮ ದೇವಾಡಿಗ ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಉದ್ಯಮಿ ನಾಣು ಚಂದನ್ ಮುಂಬೈ, ನರಸಿಂಹ ದೇವಾಡಿಗ ಮರವಂತೆ, ವೆಂಕ್ಟ ದೇವಾಡಿಗ ಮರವಂತೆ, ಇತರರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವೀತಿಯ ಸ್ಥಾನ ಪಡೆದ ಸುವಿಧಾ ಸುರೇಶ್ ಶೆಟ್ಟಿ ಅವರನ್ನು ಬೈಂದೂರು ಅರ್ಬನ್ ಸೌಹಾರ್ದ ಕ್ರೇಡಿಟ್ ಕೋ- ಆಪರೇಟಿವ್ ಸೊಸೈಟಿಯ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು ಈ ಸಂದರ್ಭ ಸಂಸ್ಥೆಯ ನಿರ್ದೇಶಕರಾದ ಸುರೇಶ್ ಶೆಟ್ಟಿ, ಅಧ್ಯಕ್ಷರಾದ ಮಣಿಕಂಠ ಎಸ್. ಬೈಂದೂರು, ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಿದ್ಕಲ್ ಕಟ್ಟೆಯ ಹಾರ್ದಳ್ಳಿ ಮಂಡಳ್ಳಿ ಶಂಕರ ಆಚಾರ್ಯರ ಮಗ ನಂದೀಶ್ (13) ಎರಡು ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು. ಹೆಚ್ಚಿನ ಚಿಕಿತ್ಸೆಗೆ ಸಹೃದಯಿಗಳ ನೆರವಿನ ಅಗತ್ಯವಿದೆ. ಪ್ರಸ್ತುತ ಯನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ತಿಳಿಸಿದಂತೆ ಕಿಡ್ನಿ ಮರುಜೋಡಣೆ ಆಗುವ ತನಕ ವಾರಕ್ಕೆ 3 ಡಯಾಲಿಸಿಸ್ ಮಾಡುವ ಅನಿವಾರ್ಯತೆ ಇದೆ. ಪ್ರತಿ ತಿಂಗಳು ಸುಮಾರು 15ರಿಂದ 20 ಸಾವಿರದಂತೆ ಅಂದಾಜು 20 ಲಕ್ಷ ಹಣ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ನೆರವಿಗೆ ಮನವಿ: ನಂದೀಶ್ ಅವರ ತಂದೆ ಜೀವನಕ್ಕಾಗಿ ಪುಟ್ಟ ವಾಚ್ ರೀಪೆರಿ ಅಂಗಡಿ ನಡೆಸುತ್ತಿದ್ದು ಬರುವ ಅಲ್ಪ ಸ್ವಲ್ಪ ಸಂಪಾದನೆಯಲ್ಲಿ ಜೀವನ ನಡೆತ್ತಿದ್ದಾರೆ. ಈ ಬಡ ಕುಟುಂಬಕ್ಕೆ ಚಿಕಿತ್ಸೆಗೆ ಇಷ್ಟೊಂದು ಹಣ ಹೊಂದಿಸಲು ಸಾದ್ಯವಾಗುತ್ತಿಲ್ಲ ಹೆಚ್ಚಿನ ಚಿಕಿತ್ಸೆಗೆ ಹಣ ಹೊಂದಿಸಲು ದಾನಿಗಳ ಮೊರೆ ಹೋಗಿದ್ದಾರೆ. ನಂದೀಶ್‌ಗೆ ಸಹಾಯ ಮಾಡಲಿಚ್ಚಿಸುವವರು. ಕೆನರಾ ಬ್ಯಾಂಕ್ ಬಿದ್ಕಲ್ ಕಟ್ಟೆ ಖಾತೆ ಸಂಖ್ಯೆ ನಂ: 01622210020948, ಐಎಫ್‍ಸಿ ಕೋಡ್: CNRB0010162, Phone pay…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾನ್ಕಿ ಸ್ನೇಹಿತರ ವತಿಯಿಂದ ನಿತ್ಯ ಸಂಚರಿಸುವ ರಸ್ತೆಯನ್ನು ಸ್ವಚ್ಛ ಮಾಡುವ ಕಾರ್ಯ ನಡೆಯಿತು. ಈ ಸಂದರ್ಭ ಸ್ನೇಹಿತರಾದ ರವೀಂದ ಶೆಟ್ಟಿ ಹಾಸ್ಕಲ್ಪಾರೆ, ಸುಕೇತ್ ಶೆಟ್ಟಿ ಭಂಡಾರಗಡಿ, ಜೀವನ್ ಶೆಟ್ಟಿ ಮಕ್ಕಿಮನೆ, ಕೃಷ್ಣ ಪೂಜಾರಿ ಕಾನ್ಕಿ, ಪುನೀತ್ ಶೆಟ್ಟಿ ಭಂಡಾರಗಡಿ, ಅಜಿತ್ ಶೆಟ್ಟಿ ಭಂಡಾರಗಡಿ, ಪ್ರದೀಶ್ ಶೆಟ್ಟಿ ಕರ್ಕಾಡಿ, ಜೋಸೆಫ್ ವಡಕಾ ಮೊದಲಾದವರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಬಸ್ರೂರು ವಿಲಾಸಕೇರಿ ದಿ.ಗೋಪಾಲಕೃಷ್ಣ ಶೆಣೈ ಇವರ ಮನೆಗೆ ‘ಸ್ವರಾಜ್ಯ 75’ರ ಕಾಯ೯ಕ್ರಮ ದಡಿಯಲ್ಲಿ ‘ಸ್ವಾತಂತ್ರ್ಯ ಹೋರಾಟಗಾರರ ಮನೆ’ ಎನ್ನುವ ನಾಮ ಫಲಕವನ್ನು ಸ್ವಾತಂತ್ರ್ಯ ದಿನದಂದು ಶಿವಮೊಗ್ಗ ಚಾಟ೯ರ್ಡ್ ಇಂಜಿನಿಯರ್ ಅಜಯ್ ಕುಮಾರ್ ಶಮಾ೯ ಅವರು ನಾಮಫಲಕ ಅನಾವರಣಗೊಳಿಸಿದರು. ಸಂಪನ್ಮೂಲ ವ್ಯಕ್ತಿ ಬಸ್ರೂರು ಶ್ರೀ ಶಾರದಾ ಕಾಲೇಜು ಉಪನ್ಯಾಸಕರಾದ ಅಕ್ಷಯ್ ಹೆಗ್ಡೆ ‘ಭಾರತದ ಸ್ವಾತಂತ್ರ್ಯಕ್ಕೆ ಕರಾವಳಿಗರ ಕೊಡುಗೆ’ ಎನ್ನುವ ವಿಚಾರವನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಬಿ.ಎಸ್.ಎಫ್ ನಿವೃತ್ತ ಮಾಜಿ ಸೈನಿಕರಾದ ಗಣಪತಿ ಖಾವಿ೯, ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಗ ಅಶೋಕ್ ಕಾಮತ್ ಉಪಸ್ಥಿತರಿದ್ದರು. ವಿಳ್ಯದೆಲೆ ನೀಡುವುದರ ಮೂಲಕ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ಕಾಯ೯ಕ್ರಮ ಆರಂಭಿಸಿದರು. ಖ್ಯಾತ ಬರಹಗಾರ ವಸಂತ ಗಿಳಿಯಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಶೋಕ್ ಕೆರೆಕಟ್ಟೆ ಧನ್ಯವಾದಗೈದರು.

Read More