ಕುಂದಾಪ್ರ ಡಾಟ್ ಕಾಂ ಸುದ್ದಿ ಕುವೈಟ್: ಕಳೆದ 35 ವರ್ಷಗಳಿಂದ ಕುವೈತ್ನಲ್ಲಿ ಅಸ್ತಿತ್ವದಲ್ಲಿರುವ ಭಾರತದ, ಕರ್ನಾಟಕ ರಾಜ್ಯ ಮೂಲದ ಸಾಮಾಜಿಕ, ಸಾಂಸ್ಕೃತಿಕ ಸಂಘವಾದ ಕುವೈತ್ಕನ್ನಡಕೂಟದ (ಕು.ಕ.ಕೂ.)ವಾರ್ಷಿಕ ಮಹಾಸಭೆಯನ್ನು ೨೦೧೯ ರ ಡಿಸೆಂಬರ್ ೨೮ ರಂದು ಖೈತಾನ್ನ ಭಾರತೀಯ ಸಮುದಾಯ ಶಾಲೆಯಲ್ಲಿ ನಡೆಸಲಾಯಿತು. ಮಹಾಸಭೆಯ ಜೊತೆಜೊತೆಗೆ ವಿವಿಧ ವಿನೋದಾವಳಿಯನ್ನೊಳಗೊಂಡ ಕಾರ್ಯಕ್ರಮದಲ್ಲಿ, 2020 ರ ಕೂಟದ ನಿರ್ವಹಣೆಯ ಮೇಲ್ವಿಚಾರಣೆ ನಡೆಸಲು ಹೊಸ ಕಾರ್ಯಕಾರಿ ಸಮಿತಿಯನ್ನು ಆಯ್ಕೆಮಾಡಲಾಯಿತು. ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಿಎಗುರುರಾಜ್ರಾವ್ ಅವರು ಸರ್ವಾನುಮತದಿಂದ ಚುನಾಯಿತರಾದ ಸದಸ್ಯರನ್ನು ಘೋಷಿಸಿದರು. ಅಧ್ಯಕ್ಷರು: ರಾಜೇಶವಿಟ್ಟಲ್ ಉಪಾಧ್ಯಕ್ಷರು: ಸಂದೀಪ್ಚಬ್ಬಾ ಕಾರ್ಯದರ್ಶಿ: ಪ್ರವೀಣ್ಕುಮಾರ್ಶೆಟ್ಟಿ ಖಜಾಂಚಿ: ಪ್ರದೀಪ್ರಾವ್‌ಆಳುಗ್ಗೇಲು ಚುನಾಯಿತರಾದ ಸದಸ್ಯರು 2020 ರ ವರ್ಷಕ್ಕೆಕುವೈತ್ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಭೆಯಲ್ಲಿ ನೆರೆದ ಸದಸ್ಯರು ಅಧಿಕಾರ ಪದಗ್ರಹಣ ಮಾಡಿದ ಹೊಸ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ದೇವಾಡಿಗರ ಸಮಾಜ ಸೇವಾ ಸಂಘ ಕುಂದಾಪುರ ಇದರ ವತಿಯಿಂದ ಮಹಾಸಭೆ, ಪ್ರತಿಭಾ ಪುರಸ್ಕಾರ, ಸಾಮೂಹಿಕ ಗಣಹೋಮ, ಸತ್ಯನಾರಾಯಣ ಪೂಜೆ, ಸಮ್ಮಾನ ಕೋಣಿ ಗ್ರಾಮದ ಹುಣ್ಸೆಕಟ್ಟೆ ಸಮೀಪ ನಿರ್ಮಾಣವಾಗಲಿರುವ ದೇವಾಡಿಗರ ಸಂಘದ ಸಭಾಭವನದ ಸ್ಥಳದಲ್ಲಿ ನಡೆಯಿತು. ಸಮಾರಂಭ ಉದ್ಘಾಟಿಸಿದ ಮುಂಬಯಿನ ಉದ್ಯಮಿ ಸುರೇಶ ಡಿ ಪಡುಕೋಣೆ ಮಾತನಾಡಿ, ಇಲ್ಲಿ ನಿರ್ಮಾಣವಾಗಲಿರುವ ಸಭಾಭವನವು ದೇವಾಡಿಗರ ಸಂಘಕ್ಕೆ ಬಹು ದೊಡ್ಡ ಕೊಡುಗೆಯಾಗಲಿದೆ. ಇದರ ನಿರ್ಮಾಣಕ್ಕೆ ಎಲ್ಲರೂ ಸಂಘಟಿತರಾಗಿ ಸಹಕರಿಸಿ ಎಂದರು. ಕುಂದಾಪುರ ದೇವಾಡಿಗರ ಸಮಾಜ ಸೇವಾ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ಕ್ಷೇತ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಶಂಕರ ಅಂಕದಕಟ್ಟೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಾಚಿತ್ರಗ್ರಾಹಕ ಸಂತೋಷ ಕುಂದೇಶ್ವರ, ಬಿಎಸ್ಸಿ ಪದವಿಯಲ್ಲಿ ಮಂಗಳೂರು ವಿವಿ ಮಟ್ಟದ ರ‍್ಯಾಂಕ್ ವಿಜೇತೆ ಸಹನಾ, ಯಕ್ಷಗಾನ ಭಾಗವತ ರವಿ ಸೂರಾಲು, ಮಾತೃಶ್ರೀ ಟುಟ್ಯೋರಿಯಲ್ ಕುಂದಾಪುರದ ವಾಸುದೇವ ಬೈಂದೂರು ಅವರನ್ನು ಸನ್ಮಾನಿಸಲಾಯಿತು. ಬಾರ್ಕೂರು ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ:ಸೈಂಟ್‌ಅಲೋಷಿಯಸ್ ಕಾಲೇಜು ವತಿಯಿಂದ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ’ಮೀಡಿಯಾ ಮಂಥನ್’ ಮಾಧ್ಯಮೋತ್ಸವದಲ್ಲಿ ಸತತವಾಗಿ ಮೂರನೇ ಬಾರಿ ಆಳ್ವಾಸ್ ವಿದ್ಯಾರ್ಥಿಗಳ ತಂಡ ಸಮಗ್ರ ವಿರಾಗ್ರಣಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ. ವರದಿಗಾರಿಕೆಯಲ್ಲಿ ದುರ್ಗಾಪ್ರಸನ್ನಾ ಪ್ರಥಮ, ಆರ್.ಜೆ ಸ್ಪರ್ಧೆಯಲ್ಲಿ ದಿಶಾ ಶೆಟ್ಟಿ ದ್ವಿತೀಯ, ಪಿ ಟು ಸಿಯಲ್ಲಿ ಚೈತ್ರಾ ಪ್ರಥಮ, ನೃತ್ಯದಲ್ಲಿ ವೀಕ್ಷಿತಾ ಶೆಟ್ಟಿ ಮತ್ತು ತಂಡ ಪ್ರಥಮ, ಫೊಟೋಗ್ರಾಫಿಯಲ್ಲಿ ಶರದ್‌ಆಚಾರ್ ದ್ವಿತೀಯ, ಮೇಕಿಂಗ್ ಎ ಪ್ರೊಡಕ್ಟ್ ಶ್ರೀಲಕ್ಷ್ಮಿ ಘಾಟೆ ಮತ್ತು ತಂಡ ಪ್ರಥಮ ಸ್ಥಾನವನ್ನು ಪಡೆದು ಪ್ರಶಸ್ತಿಯನ್ನು ಪಡೆದುಕೊಂಡರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ್ ಆಳ್ವ, ಮ್ಯಾನೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ‍್ಯ ಡಾ. ಕುರಿಯನ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಹಾಗೂ ಮಾನವಿಕ ವಿಭಾಗದ ಡೀನ್ ಸಂಧ್ಯಾ ಕೆ ಎಸ್, ಪದವಿ ವಿಭಾಗದ ಮುಖ್ಯಸ್ಥೆ ರೇಷ್ಮಾ ಬಂಟ್ವಾಳ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಭಂಡಾರ್ಕಾರ‍್ಸ್ ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಕಲ್ಚರಲ್ ಕಮಿಟಿ (ಸಾಂಸ್ಕೃತಿಕ ಸಂಘ)ಯಿಂದ ಮಣಿಪಾಲ ವಿಶ್ವವಿದ್ಯಾನಿಲಯದ ಕಲಾವಿದೆ ಶಿಲ್ಪಾ ಜೋಶಿಯವರ ನನ್ನೊಳಗಿನ ಅವಳು ಏಕವ್ಯಕ್ತಿ ರಂಗ ನಾಟಕ ಪ್ರದರ್ಶನ ನಡೆಯಿತು. ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಮಾತನಾಡಿ ಇದೊಂದು ಅದ್ಭುತ ಪ್ರದರ್ಶನವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ನಾಟಕದದ ರಂಗವಿನ್ಯಾಸ ಮತ್ತು ನಿರ್ದೇಶಕರಾದ ರವಿರಾಜ್ ಹೆಚ್.ಪಿ, ಸಂಗೀತ ನೀಡಿದ ಗೀತಂ ಗೀರೀಶ್, ಮತ್ತು ಪರ್ಕದ ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ದ ಡಾ. ಹರೀಶ್ ಜೋಷಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಮತ್ತು ಮಹಿಳಾ ವೇದಿಕೆಯ ಸಂಯೋಜಕರಾದ ಡಾ.ಯಶವಂತಿ ಕೆ. ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಲ್ಲಿ ರಂಗಸ್ಥಳದಲ್ಲಿ ಯಕ್ಷಗಾನ ಸಾಂಗವಾಗಿ ನಡೆಯುತ್ತಿದ್ದರೇ, ಎದುರಿನಲ್ಲಿ ಕುಳಿತು ನೋಡುತ್ತಿದ್ದ ಪುಟ್ಟ ಪೋರನೋರ್ವ ವೇಷಧಾರಿಯ ಹೆಜ್ಜೆ ಹಾಗೂ ಅಭಿಯನವನ್ನು ತಾನೂ ಅನುಕರಿಸಲು ಆರಂಭಿಸಿದ್ದಲ್ಲದೇ, ಸುತ್ತಮುತ್ತಲಿನ ಪರಿವೇ ಇಲ್ಲದೇ ಅಭಿನಯದಲ್ಲಿ ಮುಳುಗಿಹೋಗಿದ್ದ. Video ಹೌದು. ಜನ್ನಾಲಿಯಲ್ಲಿ ನಡೆಯುತ್ತಿದ್ದ ಮಾರಣಕಟ್ಟೆ ಮೇಳದ ಯಕ್ಷಗಾನದಲ್ಲಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ್ದು ನಂದ್ರೋಳ್ಳಿ ಗುಣಕರ ಶೆಟ್ಟಿ ಹಾಗೂ ಪ್ರಿಯಾಂಕ ಗುಣಕರ ಶೆಟ್ಟಿ ಅವರು ಎರಡೂವರೆ ವರ್ಷ ಪುತ್ರ ದ್ರಿತಿಲ್ ಶೆಟ್ಟಿ. ಯಾವುದೇ ಕಲಿಕೆ ಇಲ್ಲದೇ, ಆಸಕ್ತಿಯಿಂದಷ್ಟೇ ಮುದ್ದಾಗಿ ಕುಣಿಯುತಿದ್ದ ದ್ರಿತಿಲ್ ಶೆಟ್ಟಿಯ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಂದಾಪುರ ತಾಲೂಕಿನ ನಂದ್ರೋಳ್ಳಿಯವರಾದ ಗುಣಕರ ಶೆಟ್ಟಿ ಅವರು ಬೆಳಗಾವಿ ಲೋಕಾಪುರದಲ್ಲಿ ಶಾಂತಿಪ್ರಿಯ ಹೋಟೆಲ್ ನಡೆಸುತ್ತಿದ್ದಾರೆ. ಗುಣಕರ ಶೆಟ್ಟಿ ಹಾಗೂ ಪ್ರಿಯಾಂಕ ಶೆಟ್ಟಿ ದಂಪತಿಗಳೀರ್ವರೂ ಕಲಾಸಕ್ತರಾಗಿದ್ದು, ಮಗ ದ್ರಿತಿಲ್‌ನಲ್ಲಿಯೂ ಸುಪ್ತವಾಗಿ ಮೂಡಿಬರುತ್ತಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸನಾತನ ಹಿಂದೂ ಧರ್ಮದ ಪ್ರತಿಯೊಂದು ಧಾರ್ಮಿಕ ಆಚರಣೆಗಳು ವೈಜ್ಞಾನಿಕವಾಗಿಯೂ ಸಂಬಂಧ ಹೊಂದಿದೆ. ಭಜನೆಯಲ್ಲಿ ಮೂಲಾಧಾರಚಕ್ರ, ಸ್ವಾಧಿಷ್ಠಾನಚಕ್ರ ಮಣಿಪುರಚಕ್ರ ಹಾಗೂ ಸಹಸ್ರಾಳಚಕ್ರ ಎಂಬ ವಿಧಗಳಿವೆ. ಹೀಗಾಗಿ ನಾವು ಮಾಡುವ ಪ್ರತಿಯೊಂದು ಧಾರ್ಮಿಕ ಪದ್ದತಿಗಳು ಗಣಪತಿ ಸ್ತುತಿಯೊಂದಿಗೆ ಆರಂಭಗೊಳ್ಳಲಿದ್ದು, ಇದು ಶಾಸ್ತ್ರದ ನಿಯಮವಾಗಿದೆ ಎಂದು ವೇ. ಮೂ. ಹಳಗೇರಿ ವಾಸುದೇವ ಕಾರಂತ ಹೇಳಿದರು. ಹೇರಂಜಾಲು ಶ್ರೀ ಗುಡೇ ಮಹಾಲಿಂಗೇಶ್ವರ ಭಜನಾ ಮಂಡಳಿಯ ವತಿಯಿಂದ ನಡೆದ ಮಹಾಶಿವರಾತ್ರಿ ಅಖಂಡ ಭಜನಾ ಸಪ್ತಾಹದ ಮಂಗಲೋತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಧ್ಯಾನಮಾರ್ಗ, ಭಕ್ತಿಮಾರ್ಗ ಮತ್ತು ಕರ್ಮಮಾರ್ಗಗಳಿಂದ ಮಾತ್ರ ನಮ್ಮ ಆಂತರಿಕ ಕೊಳೆಯನ್ನು ತೊಳೆದುಕೊಳ್ಳಬಹುದು. ಭಕ್ತಿ ಮಾರ್ಗ ಅಂದರೆ ಭಜನೆಯ ಮೂಲಕ ಶೀಘ್ರ ಭಗವಂತನ ಒಲುಮೆ ಸಾಧ್ಯವಾಗುತ್ತದೆ. ಬ್ರಾಹ್ಮಿ ಹಾಗೂ ಗೋದೂಳಿ ಸಮಯದಲ್ಲಿ ದೇವರ ಸ್ಮರಣೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಇದಕ್ಕೆ ಮೂಲವಾಗಿರುವ ವಿಧಾನವೇ ಭಜನೆ. ಇದು ತಪಸ್ಸಿಗೆ ಸಮನಾಗಿರುವುದಲ್ಲದೇ ಭಗವಂತನ ಅನುಗ್ರಹಕ್ಕೆ ಪಾತ್ರರಾಗಿ ಶೀಘ್ರವಾಗಿ ಆತನನ್ನು ಒಲಿಸಿಕೊಳ್ಳುವ ಸುಲಭದ ದಾರಿಯಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ಹಾಗೂ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನೀಕೆಷನ್ ಇಂಜಿನಿಯರಿಂಗ್ ವಿಭಾಗಕ್ಕೆ ರಾಷ್ಟ್ರೀಯ ಮಾನ್ಯತಾ ಮಂಡಳಿಯ (ಎನ್‌ಬಿಎ) ಮಾನ್ಯತೆ ಲಭಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶೈಕ್ಷಣಿಕ ಸಂಸ್ಥೆಯು ನಿರ್ದಿಷ್ಟಗುಣ ಮಟ್ಟವನ್ನು ಹೊಂದಿದೆಯೇ ಅಥವಾ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುತ್ತದೆಯೇ ಎನ್ನುವುದನ್ನು ವೃತ್ತಿಪರ ಪರಿಶೀಲನೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಿ ದೃಢೀಕರಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಮಾನ್ಯತೆಯ ಪರಿಣಾಮವಾಗಿ ಸಂಸ್ಥೆಗಳಿಂದ ಗುಣಮಟ್ಟದ ಸುಧಾರಣೆಗಳ ಉಪಕ್ರಮಗಳನ್ನು ಉತ್ತೇಜಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಪದವೀಧದರಿಗೆ ಉದ್ಯೋಗಾವಕಾಶವನ್ನು ಪಡೆಯಲು ಅನುಕೂಲ ಮಾಡಿಕೊಡುತ್ತದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ೨೦೦೮ ರಲ್ಲಿ ಆರಂಭಗೊಂಡ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು, ದೇಶದಲ್ಲಿನ ಪ್ರಮುಖ ತಾಂತ್ರಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಪದವೀಧರರ ಹಾಗೂ ಸ್ನಾತಕೋತ್ತರ ಪದವಿಯ ಸಮಗ್ರ ಅಭಿವೃದ್ಧಿಗೆ ನವೀನ ಬೋಧನಾ-ಕಲಿಕಾ ಪ್ರಕ್ರಿಯೆಯ ಮೂಲಕ ಗುಣಮಟ್ಟ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲೆಯ ಹಿಂದಿ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಬೈಂದೂರು ಸರಕಾರಿ ಪದವಿಪೂರ್ವ ಕಾಲೇಜಿನ ಹಿಂದಿ ಶಿಕ್ಷಕ ರವೀಂದ್ರ ಪಿ. ಬೈಂದೂರು ಆಯ್ಕೆಯಾಗಿದ್ದಾರೆ. ರವೀಂದ್ರ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಐದು ವ್ಯಾಕರಣ ಸಂಬಂಧಿ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿರುವ ಅವರು ಈವರೆಗೆ ಭಕ್ತಿಗೀತೆ, ಭಾವಗೀತೆ, ಪರಿಸರ ಸಂಬಂಧಿತ ಗೀತೆಗಳನ್ನು ರಚಿಸಿ ಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಭಾಷೆ ಮನುಷ್ಯನ ವಿಚಾರ ವಿನಿಮಯ ಮತ್ತು ಭಾವನೆಯನ್ನು ವ್ಯಕ್ತಪಡಿಸುವ ಸಾಧನ. ಸಂಪರ್ಕ ಭಾಷೆಯು ಜನ ಭಾಷೆಯಾಗಿದೆ. ಭಾಷೆಯು ಸಾಹಿತ್ಯ ರೂಪ ಮತ್ತು ರಾಜನೀತಿಕ ರೂಪವನ್ನು ಕಲ್ಪಿಸುತ್ತದೆ. ಭಾರತ ದೇಶದಲ್ಲಿ ವಿಭಿನ್ನ ವರ್ಗದವರು ವಿಭಿನ್ನ ಭಾಷೆಯಲ್ಲಿ ಸಂಪರ್ಕ ಭಾಷೆಯ ರೂಪದಲ್ಲಿ ಮಾತನಾಡುತ್ತಾರೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ಸಂಪರ್ಕ ಭಾಷೆಯ ಉದ್ದೇಶ ಎಂದು ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಡಾ| ಮಾಧವಿ ಎಸ್. ಭಂಡಾರಿ ಹೇಳಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಂದಿ ವಿಭಾಗದ ವತಿಯಿಂದ ನಡೆದ ಸಂಪರ್ಕ್ ಭಾಷಾ ಮೇ ಹಿಂದಿ ಕಾ ಮಹತ್ವ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಕೊತ್ತಾಡಿ ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ| ದೀಪಾ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ತನ್‌ಸಿಲಾ ಪ್ರಾರ್ಥಿಸಿ, ರಾನಿಯಾ ಸುಲ್ತಾನ ಅತಿಥಿಗಳನ್ನು ಪರಿಚಯಿಸಿ, ಸೋನಾಲ್ ಪ್ರತಿಷ್ಠಾ ವಂದಿಸಿ, ಹೆಗ್ಡೆ ಸುಭೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖ್ಯಾತ ಕೊಂಕಣಿ-ಕನ್ನಡ ಸಾಹಿತಿ, ನಾಟಕ ರಚನೆಗಾರ, ಪತ್ರಕರ್ತ ಕುಂದಾಪುರದ ಬರ್ನಾರ್ಡ್ ಜೆ. ಕೊಸ್ತಾರವರಿಗೆ ಬೈಂದೂರು ಚರ್ಚಿನ ಕಲಾವಿದರ ಸಂಸ್ಥೆಯಾದ ’ಕ್ರಿಸ್ತಿ ಕಲಾಂಗಣ್” ಸಂಸ್ಥೆಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಚರ್ಚಿನ ಧರ್ಮಗುರುಗಳಾದ ರೆ.ಫಾ. ವಿನ್ಸೆಂಟ್ ಕುವೆಲ್ಲೊ, ಬೆಳ್ವೆ ಚರ್ಚಿನ ಧರ್ಮಗುರುಗಳಾದ ರೆ.ಫಾ. ಡೆನ್ನಿಸ್, ಚರ್ಚ್ ಮಂಡಳಿಯ ಉಪಾಧ್ಯಕ್ಷರಾದ ಸ್ಟ್ಯಾನಿ ಡಾಯಸ್, ಕ್ರಿಸ್ತಿ ಕಲಾಂಗಣ್ ಸಂಸ್ಥೆಯ ಸಂಯೋಜಕ ಇಗ್ನೇಶಿಯಸ್ ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು ನಂತರ್ ಬರ್ನಾರ್ಡ್ ಜೆ. ಕೊಸ್ತಾರವರು ರಚಿಸಿದ “ಮಹಾ ಪಿಟ್ಟಾಷಿ” ಕೊಂಕಣಿ ಹಾಸ್ಯ ನಾಟಕವನ್ನು ಕ್ರಿಸ್ತಿ ಕಲಾಂಗಣ್ ಸದಸ್ಯರು ಪ್ರದರ್ಶಿಸಿದರು.
