ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚಿನ ವಾರ್ಷಿಕ ಉತ್ಸವ ತೆರಾಲಿ ಹಬ್ಬವು ಸಡಗರ, ಸಂಭ್ರಮದಿಂದ ಜರುಗಿತು. ಬಲಿಪೂಜೆಯಲ್ಲಿ ಬೈಂದೂರು ಚರ್ಚಿನಲ್ಲಿ ಈ ಹಿಂದೆ ಗುರುಗಳಾಗಿ ಸೆವೆ ಸಲ್ಲಿಸಿದ ಹಾಗೂ ಪ್ರಸ್ತುತ ಶಂಕರಪುರ ಪಾಂಗ್ಳಾ ಚರ್ಚಿನ ಧರ್ಮಗುರುಗಳಾದ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ಬಲಿಪೂಜೆಯ ಪ್ರಧಾನ ಗುರುಗಳಾಗಿ ಬಲಿಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ರೆ. ಫಾ. ಫರ್ಡಿನಾಂಡ್ ಗೊನ್ಸಾಲ್ವಿಸ್ ನಾವುಗಳು ನಿರ್ಗತಿಕರಿಗೆ, ಅಸಹಾಯಕರಿಗೆ ಸಹಾಯ ಮಾಡಿದಲ್ಲಿ ದೇವರು ನಮಗೆ ನಮ್ಮ ಜೀವನದ ಕಷ್ಟ-ಸಂಕಷ್ಟಗಳಿಗೆ ಸದಾ ರಕ್ಷಾ-ಕವಚನಾಗಿರುತ್ತಾನೆ ಎಂದು ಸಂದೇಶವನ್ನು ನೀಡಿದರು. ಇದೇ ಸಂದರ್ಭದಲ್ಲಿ ದಾನಿಗಳಿಗೆ ಹಾಗೂ ಸೆವಾಕರ್ತರಿಗೆ ಗೌರವಾರ್ಥಕವಾಗಿ ಮೇಣದ ಬತ್ತಿ ನೀಡಿ ಗೌರವಿಸಲಾಯಿತು. ಎರಡನೇ ದಿನದ ಹಬ್ಬದ ಆಚರಣೆಯಲ್ಲಿ ಉಡುಪಿಯ ರೆ. ಫಾ. ಚೇತನ್ ಲೋಬೊ, ಕಾರ್ಕಳ ಆತ್ತೂರು ಬಸಿಲಕಾದ ನಿರ್ದೇಶಕ ರೆ. ಫಾ. ಜಾರ್ಜ್ ಡಿ’ಸೋಜಾ, ಕುಂದಾಪುರದ ಮುಖ್ಯ ಧರ್ಮಗುರುಗಳಾದ ರೆ.ಫಾ. ಸ್ಟ್ಯಾನಿ ತಾವ್ರೊ, ಉಡುಪಿ ಧರ್ಮಪ್ರಾಂತ್ಯದ ಸಹಸ್ರಾರು ಧರ್ಮಗುರುಗಳು, ಚರ್ಚಿನ ಪಾಲನ ಮಂಡಳಿಯ ಉಪಾಧಕ್ಷ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬದುಕಿನಲ್ಲಿ ಅನುಮಾನ, ಅವಮಾನ ಎದುರಿಸಿದರೆ ಒಂದಲ್ಲಾ ಒಂದು ದಿನ ಸನ್ಮಾನ ದೊರೆಯುತ್ತದೆ. ಜೀವನದಲ್ಲಿ ಮೆಟ್ಟಿಲನ್ನು ಹಂತ ಹಂತವಾಗಿ ಏರಿದರೆ ಯಶಸ್ಸು ದೊರೆಯುತ್ತದೆ ಎಂದು ಬಿಗ್‌ಬಾಸ್ ಸೀಸನ್ 7 ವಿಜೇತ ಶೈನ್ ಶೆಟ್ಟಿ ಹೇಳಿದರು. ತಾಲೂಕಿನ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸಭಾಭವನದಲ್ಲಿ ಟೀಮ್ ಪಾವನಿ ಸಂಘಟನೆಯನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮಾರಣಕಟ್ಟೆ ಅನುವಂಶೀಯ ಆಡಳಿತ ಮುಕ್ತೇಸರರಾದ ಸದಾಶಿವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಐ.ಟಿ. ಮಣಿಪಾಲ ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ. ಅತುಲ್ ಕುಮಾರ್ ಶೆಟ್ಟಿ, ಕೊಲ್ಲೂರು ಉಪ ವಲಯ ಅರಣ್ಯಾಧಿಕಾರಿ ರೂಪೇಶ್ ಚೌವಾಣ್, ಕಮಲಶಿಲೆ ಯಕ್ಷಗಾನ ಮೇಳ ಸಂಸ್ಥಾಪಕ ಹಾಗೂ ಯಕ್ಷ ಸಂಚಲನ ಟ್ರಸ್ಟ್ ಅಧ್ಯಕ್ಷ ಕೃಷ್ಣ ಕನ್ನಂತ್ ಕುಡೇರಿ, ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಸದಸ್ಯ ವಂಡಬಳ್ಳಿ ಜಯರಾಮ ಶೆಟ್ಟಿ ಚಿತ್ತೂರು ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ರವಿರಾಜ್ ಶೆಟ್ಟಿ, ಪಾವನ ಟ್ರಸ್ಟ್ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮಾರಣಕಟ್ಟೆ: ಇಲ್ಲಿನ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ಸಭಾಭವನದಲ್ಲಿ ಟೀಮ್ ಪಾವನಿ ಸಂಸ್ಥೆಯ ಉದ್ಘಾಟನೆ ಹಾಗೂ ಚಿತ್ತೂರಿನಿಂದ ಮಾರಣಕಟ್ಟೆಯ ತನಕ ಸ್ವಚ್ಚತಾ ಜಾಗೃತಿ-ಜಾಥಾ ಜರುಗಿತು. ಈ ಸಂದರ್ಭ ಬಿಗ್‌ಬಾಸ್ ಸೀಸನ್ 7 ವಿಜೇತ ಶೈನ್ ಶೆಟ್ಟಿ ಟೀಮ್ ಪಾವನಿ ಸಂಘಟನೆಯನ್ನು ಅಡಿಕೆ ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿ ನಾಯಕತ್ವವನ್ನು ಮೈಗೂಡಿಸಿಕೊಂಡು ಸಮಾಜದ ಒಳಿತಿಗಾಗಿ ಸಂಘಟನೆಯನ್ನು ಕಟ್ಟಿಕೊಂಡು ಸಮಾಜದಲ್ಲಿ ಇಂತಹ ಉತ್ತಮ ಕಾರ್ಯಗಳನ್ನು ಮಾಡಬೇಕು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಸಮಾಜಕ್ಕೆ ಕಿಂಚಿತ್ತು ಗೌರವವನ್ನು ನೀಡುವ ಕೆಲಸ ಮಾಡಬೇಕು ಎಂದರು. ಮಾರಣಕಟ್ಟೆ ಅನುವಂಶೀಯ ಆಡಳಿತ ಮುಕ್ತೇಸರರಾದ ಸದಾಶಿವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಐ.ಟಿ. ಮಣಿಪಾಲ ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಮಾಜಿ ಧರ್ಮದರ್ಶಿ ಡಾ. ಅತುಲ್ ಕುಮಾರ್ ಶೆಟ್ಟಿ, ಕೊಲ್ಲೂರು ಉಪ ವಲಯ ಅರಣ್ಯಾಧಿಕಾರಿ ರೂಪೇಶ್ ಚೌವಾಣ್, ಕಮಲಶಿಲೆ ಯಕ್ಷಗಾನ ಮೇಳ ಸಂಸ್ಥಾಪಕ ಹಾಗೂ ಯಕ್ಷ ಸಂಚಲನ ಟ್ರಸ್ಟ್ ಅಧ್ಯಕ್ಷ ಕೃಷ್ಣ ಕನ್ನಂತ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮ ಪಂಚಾಯಿತಿ ಪಕ್ಷಾತೀತ ವ್ಯವಸ್ಥೆ. ಹಾಗಿದ್ದರೂ ಅದರ ಚುನಾವಣೆಯಲ್ಲಿ ರಾಜಕೀಯ ಕೆಲಸ ಮಾಡುತ್ತದೆ. ಆಯ್ಕೆಯಾದ ಸದಸ್ಯರು ಪಕ್ಷಬೇಧ ಮರೆತು ಒಂದಾಗಿ ಕೆಲಸ ಮಾಡಿದರೆ ಗ್ರಾಮದ ಅಭಿವೃದ್ಧಿ ಸಾಧಿಸಬಹುದು ಎನ್ನುವುದಕ್ಕೆ ನಾವುಂದ ಗ್ರಾಮ ಪಂಚಾಯಿತಿ ಉದಾಹರಣೆ ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು. ನಾವುಂದ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡ ಮತ್ತು ಸಮುದಾಯ ಭವನವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ನಾವುಂದ ಗ್ರಾಮದ ಅಭಿವೃದ್ಧಿಗೆ ಅಗತ್ಯ ಹಣ ನೀಡಲಾಗುವುದು. ಈಗ ಬೇಡಿಕೆ ಇರುವ ಬಾಂಗ್ ರಸ್ತೆ ದುರಸ್ತಿ ಮತ್ತು ಸಾಲುಬುಡ ವೆಂಟೆಡ್ ಡ್ಯಾಮ್ ನಿರ್ಮಾಣಕ್ಕೆ ಶೀಘ್ರ ಅನುದಾನ ಒದಗಿಸಲಾಗುವುದು. ಮಳೆಗಾಲದಲ್ಲಿ ನದಿಯಲ್ಲಿ ಪ್ರವಾಹ ಬಂದಾಗ ತೊಂದರೆಗೊಳಗಾಗುವ ಜನ ಮತ್ತು ಜಾನುವಾರು ಉಳಿದುಕೊಳ್ಳಲು ಸೂಕ್ತ ಆಶ್ರಯ ನಿರ್ಮಿಸಲಾಗುವುದು ಎಂದರು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಯಾವುದೇ ಕಚೇರಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬೇಕಾದರೆ ಸುಸಜ್ಜಿತ ಕಟ್ಟಡ ಅಗತ್ಯ. ಆಗ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ವಿವಿಧ ಶಿವ ದೇವಾಲಯಗಳಲ್ಲಿ ಮಹಾಶಿವರಾತ್ರಿ ಆಚರಣೆಗೆ ಭಕ್ತಿ ಭಾವದಿಂದ ನಡೆಯಿತು. ಸಹಸ್ರಾರು ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಭಕ್ತಿಪೂರ್ವಕವಾಗಿ ಶ್ರೀ ದೇವರಿಗೆ ನವಿಸಿ ಶಿವಸ್ತುತಿ, ಶಿವನಾಮ ಪಾರಾಯಣದಿಂದ ಪುನಿತರಾದರು. ಶಿವರಾತ್ರಿ ಉಪವಾಸವನ್ನು ಕೈಗೊಂಡು ಕೃತಾರ್ಥರಾದರು. ಶಿವರಾತ್ರಿಯ ಅಂಗವಾಗಿ ಬೈಂದೂರು ವಣಕೊಡ್ಲುವಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಲಿಂಗವನ್ನು ಮುಟ್ಟಿ ಪೂಜಿಸುವ ಅಪೂರ್ವ ಅವಕಾಶ ಭಕ್ತರದ್ದಾಗಿತ್ತು. ಐತಿಹಾಸಿಕ ಹಾಗೂ ಐತಿಹ್ಯವಿರುವ ಶಿವಾಲಯಗಳಿಗೆ ಭಕ್ತ ದಂಡು ಹರಿದು ಬಂದಿತ್ತು. ಪಂಚ ಶಂಕರನಾರಾಯಣ ಕ್ಷೇತ್ರಗಳಾದ ಬೆಳ್ವೆ ಶ್ರೀ ಶಂಕರನಾರಾಯಣ, ಆವರ್ಸೆ ಶ್ರೀ ಶಂಕರನಾರಾಯಣ, ಮಾಂಡವಿ ಶ್ರೀ ಶಂಕರನಾರಾಯಣ, ಶ್ರೀ ಕ್ರೋಢ ಶಂಕರನಾರಾಯಣ, ಶ್ರೀ ಹೊಳೆ ಶಂಕರನಾರಾಯಣ ದೇವಾಲಯಗಳು, ಆಜ್ರಿ ಶ್ರೀ ತ್ರೈಂಬಕೇಶ್ವರ ದೇವಾಲಯ, ಬೈಂದೂರು ಐತಿಹಾಸಿಕ ಶ್ರೀ ಸೇನೇಶ್ವರ ದೇವಾಲಯ, ಪಡುವರಿಯ ಶ್ರೀ ಸೋಮೇಶ್ವರ ದೇವಾಲಯ, ಕಿರಿಮಂಜೇಶ್ವರದ ಶ್ರೀ ಅಗಸ್ತೇಶ್ವರ ದೇವಾಲಯ, ಹೆರಂಜಾಲಿನ ಶ್ರೀ ಗುಡೆಮಹಾಲಿಂಗೇಶ್ವರ ದೇವಾಲಯ, ಗುಜ್ಜಾಡಿಯ ಗುಹೇಶ್ವರ ದೇವಾಲಯ, ಮರವಂತೆ ಶ್ರೀ ಗಂಗಾಧರೇಶ್ವರ ದೇವಾಲಯ, ಗಂಗೊಳ್ಳಿಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಪರಶುರಾಮ ಸೃಷ್ಟಿಯ ಸಪ್ತ ಮೊಕ್ಷದಾಯಕ ಕ್ಷೇತ್ರಗಳ ಪೈಕಿ ಒಂದಾದ ಧ್ವಜಪುರ ಖ್ಯಾತಿಯ ಶ್ರೀ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ಪೂಜೆ, ಶಿವನಾಮ ಸ್ಮರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ದೇವರಿಗೆ ರುದ್ರಾಭಿಷೇಕ – ಜಲಾಭಿಷೇಕ – ಕ್ಷೀರಾಭಿಷೇಕ – ಬಿಲ್ವಾರ್ಚನೆ-ನಂದಾದೀಪ, ಶಿವರಾತ್ರಿಯ ಅರ್ಘ್ಯಪ್ರದಾನ – ಇತ್ಯಾದಿ ಪೂಜೆಗಳನ್ನು ನಡೆದವು. ಇದನ್ನೂ ಓದಿ: ► ವಣಕೊಡ್ಲುವಿನಲ್ಲಿ ಶಿವಲಿಂಗ ಸ್ವರ್ಶಿಸಿ ಪುನೀತರಾದ ಶಿವಭಕ್ತರು – https://kundapraa.com/?p=35517 ► ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=35543 ► ಕುಂದಾಪುರ: ಶ್ರೀ ಕುಂದೇಶ್ವರನ ಸ್ಮರಿಸಿ ಕೃತಾರ್ಥರಾದ ಭಕ್ತರು – https://kundapraa.com/?p=35553 ► ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=35569 ► ಕೋಟೇಶ್ವರ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಐತಿಹ್ಯ – https://kundapraa.com/?p=1512 . https://kundapraa.com/?p=35553
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಪ್ರಾಚೀನ ದೇವಾಲಯಗಳಲ್ಲಿ ಒಂದೆನಿಸಿರುವ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ದೇವರಿಗೆ ಪೂಜೆ, ಶಿವನಾಮ ಸ್ಮರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಿದವು. ದೇವರಿಗೆ ರುದ್ರಾಭಿಷೇಕ – ಜಲಾಭಿಷೇಕ – ಕ್ಷೀರಾಭಿಷೇಕ – ಬಿಲ್ವಾರ್ಚನೆ-ನಂದಾದೀಪ, ಶಿವರಾತ್ರಿಯ ಅರ್ಘ್ಯಪ್ರದಾನ – ಇತ್ಯಾದಿ ಪೂಜೆಗಳನ್ನು ನಡೆದವು. ದೇವರ ದೀಪಕ್ಕೆ ಎಣ್ಣೆ ತಂದವರು ಅದನ್ನು ಉರಿಯುತ್ತಿರುವ ದೀಪದ ಸುರಿದು ದೇವರಿಗೆ ನಮಿಸುವುದು ಕಂಡುಬಂತು. ದೇವಾಲಯದ ಬಯಲು ರಂಗಮಂಟಪದಲ್ಲಿ ಭಜನಾ ಕಾರ್ಯಕ್ರಮ ಜರುಗಿತು. ರಾತ್ರಿ ಕಾಲದಲ್ಲಿ ಕುಂದೇಶ್ವರನ ಸನ್ನಿಧಿಯಲ್ಲಿ ನಡೆಯುವ ರಂಗಪೂಜೆ ಮತ್ತು ಮಹಾಮಂಗಳಾರತಿಯಲ್ಲಿ ಭಕ್ತಾದಿಗಳೆಲ್ಲ ಭಾಗವಹಿಸಿ, ಮಂತ್ರ ಪುಷ್ಪ ಸಮರ್ಪಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ. ಇದನ್ನೂ ಓದಿ: ► ವಣಕೊಡ್ಲುವಿನಲ್ಲಿ ಶಿವಲಿಂಗ ಸ್ವರ್ಶಿಸಿ ಪುನೀತರಾದ ಶಿವಭಕ್ತರು – https://kundapraa.com/?p=35517 ► ಕೊಡಪಾಡಿ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=35543 ► ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಸಂಭ್ರಮ – https://kundapraa.com/?p=35569 ► ಕುಂದಾಪುರ ಶ್ರೀ ಕುಂದೇಶ್ವರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯ ಐತಿಹಾಸಿಕ ಶ್ರೀ ಗುಹೇಶ್ವರ ದೇವಾಲಯದಲ್ಲಿ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ, ಶಿವನಾಮ ಸ್ಮರಣೆ, ಭಜನಾ ಕಾರ್ಯಕ್ರಮಗಳು ಜರುಗಿದವು. ಐತಿಹ್ಯ: ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ಕೊಡಪಾಡಿಯಲ್ಲಿನ ಈ ಐತಿಹಾಸಿಕ ಗುಹೇಶ್ವರ ದೇವಾಲಯದಲ್ಲಿ ಶಿವನ ಮೂಲ ಸಾನಿಧ್ಯಕ್ಕೊಂದು ಮೆರಗಿದೆ. ೨೦ ಅಡಿ ಉದ್ದದ ಕಲ್ಲಿನ ಪೊಟರೆಯ ಅಂತ್ಯದಲ್ಲಿ ಉದ್ಘವಿಸಿರುವ ಈ ಶಿವಲಿಂಗದಲ್ಲೊಂದು ಬೆರಗಿದೆ. ಈಶ್ವರನೊಂದಿಗೆ ಸ್ಕಂದ ದೇವರ ಉದ್ಭವ ಸನ್ನಿಧಿಯೂ ಇದೆ. ಈ ಮೊದಲು ಶಿವರಾತ್ರಿಯಂದು ಗುಹೆಯೋಳಗಿನ ಉದ್ಭವರೂಪಿ ಗುಹೇಶ್ವರ ದರ್ಶನಕ್ಕೆ ವಿಶೇಷ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಕಳೆದ ವರ್ಷದಿಂದ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಅರ್ಚಕರು ಪೂಜೆ ಸಲ್ಲಿಸುತ್ತಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಪ್ರಾಚಿನ ದೇವಾಲಯಗಳಲ್ಲೊಂದಾಗ ಶ್ರೀ ಗುಹೇಶ್ವರ ದೇವಾಲಯದ ಈಶ್ವರ, ಸ್ಕಂದ, ಗಣಪತಿ ಹಾಗೂ ಅಮ್ಮನವರ ಸಾನಿಧ್ಯವಿದ್ದು ಪ್ರತಿನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಸ್ವಯಂ ಸೇವಕರು, ಗುಜ್ಜಾಡಿಯ ಯುವಕರು ಶಿವರಾತ್ರಿಯಂದು ಒಂದಾಗಿ ದೇವರ ಕಾರ್ಯದಲ್ಲಿ ಭಾಗವಹಿಸಿ ಭಕ್ತರಿಗೆ ಮಾರ್ಗದರ್ಶನ…
ಕುಂದಾಪ್ರ ಡಾಟ್ ಕಾಂ ವರದಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಶಿವದೇವಾಲಯಗಳಲ್ಲಿ ಶಿವಲಿಂಗ ಸ್ಪರ್ಶಪೂಜೆಯ ಏಕೈಕ ಶಿವದೇಗುಲ ಎಂಬ ಪ್ರಸಿದ್ಧಿಗೆ ಪಾತ್ರವಾದ ಬೈಂದೂರಿನ ಗಂಗಾನಾಡು ಗ್ರಾಮದ ವಣಕೊಡ್ಲುವಿನ ಪುರಾತನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದಂದು ಸಹಸ್ರಾರು ಭಕ್ತರು ಭಕ್ತಿ-ಭಾವದೊಂದಿಗೆ ಶಿವಲಿಂಗ ಸ್ವರ್ಶಿಸಿ ಪುನೀತರಾದರು. Video ಬೆಳಿಗ್ಗೆ 7 ಗಂಟೆಯಿಂದಲೇ ಭಕ್ತಾದಿಗಳಿಗೆ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮತ್ತು ಸ್ಪರ್ಶಪೂಜೆ ಆರಂಭಗೊಂಡಿದ್ದು ರಾತ್ರಿ 10 ಗಂಟೆಗೆ ದೇವರ ಸುತ್ತು ಉತ್ಸವ, ಕಟ್ಟೆಪೂಜೆ ಹಾಗೂ ಪ್ರಸಾದ ವಿತರಣೆ, ಮಾರ್ಚ್ 8ರಂದು ಶುದ್ಧಕಳಶ, ಕಲಾವೃದ್ಧಿಹೋಮ, ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮಗಳು ನಡೆಯಲಿವೆ. ಕುಂದಾಪ್ರ ಡಾಟ್ ಕಾಂ ಲೇಖನ ಹಲವು ಗಣ್ಯ ಮಹನೀಯರು ಮಹಾಶಿವರಾತ್ರಿ ಮಹೋತ್ಸವದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಹೊತ್ತಿಗೆ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಕುಟುಂಬ ಸಮೇತ ಆಗಮಿಸಿ ದರ್ಶನ ಪಡೆದರು. ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದಡಾ ರಾಜಮೋಹನ್ ಶೆಟ್ಟಿ ಡಾ. ಮಿಥುನ್ ಶೆಟ್ಟಿ, ಡಾ. ತಿಲಕ್ ಶೆಟ್ಟಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತದಲ್ಲಿ ಅದೆಷ್ಟೊ ಕಾಲದಿಂದ ಎಲ್ಲ ಧರ್ಮ, ಜಾತಿ, ವರ್ಗಗಳ ಜನರು ಒಂದಾಗಿ ಜೀವಿಸುತ್ತ ಬಂದಿದ್ದಾರೆ. ಆದರೆ ಕೆಂದ್ರದ ಪ್ರಸಕ್ತ ಬಿಜೆಪಿ ಸರ್ಕಾರ ನಾಗರಿಕತೆ ಕಾಯ್ದೆಗೆ ಮಾಡಿರುವ ತಿದ್ದುಪಡಿ ಮೂಲಕ ಅವರ ನಡುವೆ ಭೇದ ಸೃಷ್ಟಿಸಿ ವಿಭಜಿಸುವ ಕೆಲಸಕ್ಕೆ ಮುಂದಾಗಿದೆ. ಈ ಕೃತ್ಯವನ್ನು ಎಲ್ಲ ಸೇರಿ ವಿರೋಧಿಸಬೇಕು ಎಂದು ಮಾನವ ಹಕ್ಕುಗಳ ಹೋರಾಟಗಾರ ಫಾ. ವಿಲಿಯಂ ಮಾರ್ಟಿಸ್ ಹೇಳಿದರು. ಕುಂದಾಪುರ ಸಿಎಎ ಮತ್ತು ಎನ್‌ಆರ್‌ಸಿ ವಿರೋಧಿ ಹೋರಾಟ ಸಮಿತಿ ಬುಧವಾರ ನಾವುಂದದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆ ಉದ್ಘಾಟಿಸಿ ಮಾತನಾಡಿದರು. ಇಂತಹ ಒಂದು ಕರಾಳ ಕ್ರಮಕ್ಕೆ ಅಸ್ಸಾಂ ರಾಜ್ಯವನ್ನು ಪ್ರಯೋಗ ಭೂಮಿಯಾಗಿ ಆರಿಸಿಕೊಳ್ಳಲಾಗಿದೆ. ಅಲ್ಲಿ ನಡೆದ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ೧೯ ಲಕ್ಷ ಜನರು ದೇಶದ ನಾಗರಿಕರಲ್ಲ ಎಂದು ಕಂಡುಕೊಳ್ಳಲಾಗಿದೆ. ಅವರಲ್ಲಿ೧೪ ಲಕ್ಷ ಜನರು ಹಿಂದುಗಳಿದ್ದಾರೆ. ಅವರೆಲ್ಲ ಈಗ ಸಂಕಷ್ಟದಲ್ಲಿದ್ದಾರೆ. ಆದರೂ ತಿದ್ದುಪಡಿ ಕಾಯಿದೆಯಿಂದ ದೇಶದ ಹಿಂದುಗಳಿಗೆ ತೊಂದರೆಯಾಗದು ಎಂದು ಸುಳ್ಳು ಹೇಳುತ್ತಿದ್ದಾರೆ. ನಿಜವಾಗಿ ಶೇ ೪೦…
