ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ವೈ.ಶ್ರೀನಿವಾಸ ಖಾರ್ವಿ ಮತ್ತು ಪ್ರೇಮಾ ಸಿ.ಎಸ್.ಪೂಜಾರಿ ಅವಿರೋಧ ಆಯ್ಕೆಯಾಗಿದ್ದಾರೆ. ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ಪಂಚಾಯಿತಿ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿ, ಫಲಿತಾಂಶ ಘೋಷಣೆ ಮಾಡಿದರು. ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬಹುಮತ ಪಡೆದಿದ್ದ ಬಿಜೆಪಿ ಬೆಂಬಲಿತರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು. ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ತಾಲ್ಲೂಕು ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನಾರಾಯಣ ಕೆ, ಸದಸ್ಯ ಸುರೇಂದ್ರ ಖಾರ್ವಿ, ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶೇಖರ ದೇವಾಡಿಗ, ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಜಯರಾಮ ದೇವಾಡಿಗ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು. ಚುನಾವಣಾ ಶಾಖೆಯ ರವಿ, ಆಡಳಿತಾಧಿಕಾರಿ ಚಂದ್ರಶೇಖರ, ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ,…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟದಲ್ಲಿ ನಡೆದ ಯುವರೀರ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣದ ರುವಾರಿ ಉಡುಪಿ ಜಿ. ಪಂ ಸದಸ್ಯ ರಾಘವೇಂದ್ರ ಕಾಂಚನ್(38) ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಒಟ್ಟು ಆರು ಮಂದಿ ಬಂಧಿತರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಫೆ.7ರಂದು ಮಡಿಕೇರಿಯಲ್ಲಿ ರಾಜಶೇಖರ ರೆಡ್ಡಿ(44), ರವಿ ಯಾನೆ ಮೆಡಿಕಲ್ ರವಿ(42) ಎಂಬವರನ್ನು ಬಂಧಿಸಲಾಗಿತ್ತು. ರಾಘವೇಂದ್ರನನ್ನು ಇಂದು ಕೋಟದಲ್ಲಿ ಬಂಧಿಸಲಾಗಿದೆ. ಹೊಸನಗರದಲ್ಲಿ ಮಣೂರು ಗ್ರಾಮದ ಹರೀಶ್ ರೆಡ್ಡಿ(40), ಕೊಡವೂರು ಗ್ರಾಮದ ಮಹೇಶ್ ಗಾಣಿಗ(38), ಉಡುಪಿ ಲಕ್ಷ್ಮಿ ನಗರದ ರವಿಚಂದ್ರ ಪೂಜಾರಿ(23) ಎಂಬವರನ್ನು ಬಂಧಿಸಲಾಗಿದೆ. ಜ.27ರಂದು ನಡೆದ ಯುವಕರ ಬರ್ಬರ ಕೊಲೆ ಆರೋಪಿಗಳು ರಾಘವೇಂದ್ರ ಕಾಂಚನ್ ಜೊತೆ ಸಂಪರ್ಕದಲ್ಲಿದ್ದರು. ಕೊಲೆ ನಡೆದ ರಾತ್ರಿಯೇ ರಾಘವೇಂದ್ರ ಕಾಂಚನ್ ಸಂಪರ್ಕಿಸಿದ್ದರು. ಪೊಲೀಸ್ ತನಿಖೆ ಸಂದರ್ಭ ರಾಘವೇಂದ್ರ ಕಾಂಚನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿತ್ತು. ರಾಘವೇಂದ್ರ ಕಾಂಚನ್ ಅಧ್ಯಕ್ಷನಾಗಿದ್ದ ಸಂಘಟನೆಗೆ ಪರ್ಯಾಯವಾಗಿ ಭರತ್ ಬೇರೊಂದು ಸಂಘಟನೆಯಲ್ಲಿ ಸಕ್ರೀಯವಾಗಿದ್ದೇ ದ್ವೇಷಕ್ಕೆ ಕಾರಣವಾಗಿತ್ತು ಎನ್ನಲಾಗಿದ್ದು, ಇದರೊಂದಿಗೆ ಟಾಯ್ಲೆಟ್ ಪಿಟ್ ಹೊಂಡದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಕಾಲೇಜು ರಸ್ತೆಯಲ್ಲಿ ರಾಜಾರೋಷವಾಗಿ ಹೊಡೆದಾಟಕ್ಕೆ ನಿಂತು ಮಾರಾಮಾರಿಗೆ ಕಾರಣವಾಗಿದ್ದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ವಿದ್ಯಾರ್ಥಿಗಳ ಪೈಕಿ ಓರ್ವನನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬೈಂದೂರು ತಾಲೂಕು ಕಿರಿಮಂಜೇಶ್ವರ ನಿವಾಸಿ ಸುಬ್ರಹ್ಮಣ್ಯ ಶೆಟ್ಟಿ (19) ಬಂಧಿತ ಆರೋಪಿ. ಹಾಡುಹಗಲೇ ವಿದ್ಯಾರ್ಥಿಗಳ ರೌಡಿಸಂನನನು ಗಂಭೀರವಾಗಿ ಪರಿಗಣಿಸಿದ ಕುಂದಾಪುರ ಎಸ್ಐ ಹರೀಶ್ ಆರ್. ನಾಯ್ಕ್ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಸಿಬ್ಬಂಧಿಗಳಾದ ಚೇತನ್ ಹಾಗೂ ಪ್ರಸನ್ನ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುವ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾರೆ. ಇದನ್ನು ಓದಿ ► ಕುಂದಾಪುರ: ನಡುರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳ ಮಾರಾಮಾರಿ – https://kundapraa.com/?p=30986 . Video
ಕುಂದಾಪ್ರ ಡಾಟ್ ಕಾಂ ಸುದ್ದಿ ಮೂಡುಬಿದಿರೆ: ಚಂಡಿಗಡ್ ವಿಶ್ವವಿದ್ಯಾಲಯ ಮತ್ತು ಆಲ್ ಇಂಡಿಯಾ ವಿಶ್ವವಿದ್ಯಾಲಯ ಆಶ್ರಯದಲ್ಲಿ ಫೆ.1ರಿಂದ 5ವರೆಗೆ ನಡೆದ 34ನೇ ರಾಷ್ಟ್ರಮಟ್ಟದ ಅಂತರ್ ವಿ.ವಿ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಏಕಾಂಕ ನಾಟಕ ಧೂತ ವಾಕ್ಯ ದ್ವಿತೀಯ, ಜಾನಪದ ನೃತ್ಯ ತೃತೀಯ ಸ್ಥಾನವನ್ನು ಪಡೆಯುವುದರ ಮೂಲಕ 10ನೇ ಬಾರಿ ಪ್ರಶಸ್ತಿ ಗಳಿಸಿ ಆಳ್ವಾಸ್ ದಾಖಲೆ ನಿರ್ಮಿಸಿದೆ. ತಂಡದಲ್ಲಿರುವ 26 ಮಂದಿ ವಿದ್ಯಾರ್ಥಿಗಳು ಕೂಡ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅವರು ತರಬೇತುದಾರರನ್ನು ಹಾಗೂ ಪ್ರೋತ್ಸಾಹಿಸಿದ ಮಂಗಳೂರು ವಿ.ವಿ ಕಲುಪತಿ, ವಿದ್ಯಾರ್ಥಿ ಕ್ಷೇಮಪಾಲನ ವಿಭಾಗದ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಏಕಾಂಕ ನಾಟಕವನ್ನು ಖ್ಯಾತ ರಂಗಕರ್ಮಿ ಜೀವನರಾಮ ಸುಳ್ಯ ನಿರ್ದೇಶಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಫ್ರೆಂಡ್ಸ್ ನಾಯಕವಾಡಿ ಸಂಸ್ಥೆಯ ವಾರ್ಷಿಕೋತ್ಸವದ ಪ್ರಯುಕ್ತ ಜರುಗಿದ ತ್ರಾಸಿ ವಲಯ ಮಟ್ಟದ ಕಿರಿಯ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಸ್ಪರ್ಧೆ-೨೦೧೯ರಲ್ಲಿ ದೇಶ ಭಕ್ತಿ ನೃತ್ಯದಲ್ಲಿ ಮೇಲ್‌ಗಂಗೊಳ್ಳಿ ಸರಕಾರಿ ಕಿರಿಯ ಪ್ರಾಥಮಿಕ (ಹವೇ) ಶಾಲೆ ಪ್ರಥಮ ಸ್ಥಾನ ಗಳಿಸಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ರಾಜ್ಯದ ಕರಾವಳಿಯಲ್ಲಿ ಕೃಷಿ ಮತ್ತು ಮೀನುಗಾರಿಕೆ ಕ್ಷೇತ್ರಗಳು ಇಲ್ಲಿನ ಎಲ್ಲ ಉದೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡಲಾರವು. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಬಳಸಿಕೊಂಡು ನಡೆಸಬಹುದಾದ ಪ್ರವಾಸೋದ್ಯಮ ಆ ಕೊರತೆಯನ್ನು ಖಂಡಿತ ನೀಗಿಸಬಲ್ಲುದು ಎಂದು ಉಡುಪಿಯ ಕಡಲತೀರ ಪ್ರವಾಸೋದ್ಯಮ ಸಂಘಟನೆಯ ಅಧ್ಯಕ್ಷ ಮನೋಹರ ಎಸ್. ಶೆಟ್ಟಿ ಅಭಿಪ್ರಾಯಪಟ್ಟರು. ಬುಧವಾರ ಗುಜ್ಜಾಡಿಯ ಹೆಬ್ಬಾರ್‌ಬೈಲು ಎಂಬಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಸಾಂಪ್ರದಾಯಿಕ ದೋಣಿಮನೆ ’ಗಂಗೋತ್ರಿ ಹಾಲಿಡೇಸ್ ಕ್ರೂಸ್’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ರಾಜ್ಯ 98 ಕಿಲೋ ಮೀಟರ್ ಉದ್ದದ ಕರಾವಳಿಯನ್ನು ಹೊಂದಿದೆ. ಸುಂದರ ಕಡಲತೀರ ಮತ್ತು ಸಮೃದ್ಧವಾದ ಹಿನ್ನೀರುಗಳಿವೆ. ಇಲ್ಲಿ ಜಲಕ್ರೀಡೆ, ಜಲಯಾನ, ಜಲಸಾಹಸಕ್ಕೆ ವಿಫುಲ ಅವಕಾಶಗಳಿವೆ. ಇವನ್ನು ನಡೆಸಲು ವಿಶೇಷ ಶಿಕ್ಷಣದ ಅಗತ್ಯವಿಲ್ಲ. ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಯಾವುದೇ ತೊಂದರೆ ಆಗುದಿಲ್ಲ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಲು ಮುಂದಾಗುವವರಿಗೆ ಸರ್ಕಾರ ಸಹಾಯಧನ ನೀಡಬೇಕು ಎಂದು ಅವರು ಹೇಳಿದರು. ರಾಷ್ಟ್ರೀಯ ಕಬ್ಬಡಿ ಆಟಗಾರ ರಿಶಾಂಕ್ ದೇವಾಡಿಗ ಸಾಂಪ್ರದಾಯಿಕ ದೋಣಿಮನೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಲೇಜಿನ ಮೈದಾನದಲ್ಲಿ ಮಂಗಳೂರು ವಿ.ವಿ. ವ್ಯಾಪ್ತಿಯ ಅಂತರ್ ಕಾಲೇಜು ಕ್ರೀಡಾಳುಗಳ ಪುರುಷರ ನೆಟ್‌ಬಾಲ್ ಆಯ್ಕೆ ಶಿಬಿರ ನಡೆಯಿತು. ಪೂರ್ವಾಭಾವಿಯಾಗಿ ನಡೆದ ಸಭೆಯಲ್ಲಿ ಕಾಲೇಜಿನ ನಿರ್ದೇಶಕರಾದ ಪ್ರೊ. ದೋಮ ಚಂದ್ರಶೇಖರ್, ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕ ಡಾ. ರಮೇಶ್, ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಆಯ್ಕೆ ತಂಡದ ಸದಸ್ಯರಾದ ಪ್ರೇಮನಾಥ ಶೆಟ್ಟಿ, ಉಜಿರೆ ಎಸ್.ಡಿ.ಎಮ್. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುದಿನ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ.ಎನ್. ಉಪಸ್ಥಿತರಿದ್ದರು. ಮಂಗಳೂರು ವಿ.ವಿ. ವ್ಯಾಪ್ತಿಯ ವಿವಿಧ ಕಾಲೇಜುಗಳ ೭೦ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬಾಲ್ಯದಲ್ಲಿ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಜೀವನದಲ್ಲಿ ವಿಶೇಷ ಸಾಧನೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಪೋಷಕರು ಮತ್ತು ಶಿಕ್ಷಕರು ಅಂತಹ ಕೆಲಸ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್ ಹೇಳಿದರು. ಬುಧವಾರ ನಡೆದ ನಾವುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್. ನರಸಿಂಹ ದೇವಾಡಿಗ ಶಾಲೆ ಈಚಿನ ದಿನಗಳಲ್ಲಿ ಉತ್ತಮ ಅಭಿವೃದ್ಧಿ ಸಾಧಿಸಿದೆ. ಅದಕ್ಕೆ ಮುಖ್ಯೋಪಾಧ್ಯಾಯ, ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಸಂಘಟಿತ ಪ್ರಯತ್ನ ಕಾರಣ ಎಂದರು. ಗ್ರಾಮ ಪಂಚಾಯಿತಿ ಸದಸ್ಯರಾದ ದಿನೇಶ ಗಾಣಿಗ, ಗಣೇಶ ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಮೋದ್ ಪೂಜಾರಿ, ಕಾರ್ಯದರ್ಶಿ ಎಂ. ಶಂಕರ ಬಿಲ್ಲವ, ಗೌರವಾಧ್ಯಕ್ಷ ವೆಂಕಟರಮಣ ಗಾಣಿಗ, ಬೆಂಕಿ ಬಾಯ್ಸ್ ತಂಡದ ಅಧ್ಯಕ್ಷ ಅಣ್ಣಪ್ಪ ಗಾಣಿಗ, ರಿಚರ್ಡ್ ಅಲ್ಮೇಡಾ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲ ಪೊ. ಜಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟೇಶ್ವರ ಜಾತ್ರೆಯ ಸಂದರ್ಭ ಸಾರ್ವಜನಿಕರ ಹಿತದೃಷ್ಟಿಯಿಂದ ಬೀಜಾಡಿ ಸರ್ವೀಸ್ ರಸ್ತೆಯನ್ನು ಅಗೆದು ಹಾಕಿದ್ದು ಜಾತ್ರೆ ಮುಗಿದ ಬಳಿಕ ರಸ್ತೆಯನ್ನು ಮುಗಿಸುತ್ತೇವೆ ಎಂದು ಭರವಸೆ ನೀಡಿದ್ದರು. ಹಲವು ತಿಂಗಳು ಕಾಲ ಭರವಸೆ ಕೇವಲ ಮಾತಾಗಿಯೇ ಉಳಿದಿತ್ತು. ಬೀಜಾಡಿ ಸರ್ವೀಸ್ ರಸ್ತೆ ಹೋರಾಟ ಸಮಿತಿ ನೇತೃತ್ವದ ಸಂಘಟನೆ ಹುಟ್ಟಿಕೊಂಡು ಪ್ರತಿಭಟನೆಗೆ ಮುಂದಾದಾಗ ಶಿವಮೊಗ್ಗ ಲೋಕಸಭಾ ಉಪ ಚುಣಾವಣೆ ನೀತಿ ಸಂಹಿತೆ ಹೆಸರಲ್ಲಿ ಪ್ರತಿಭಟಿಸಲು ಅನುಮತಿ ನೀಡರಲಿಲ್ಲ. ಅದರೂ ಸಹ ಸಂಕೇತಿಕವಾಗಿ ಪ್ರತಿಭಟನೆ ಮಾಡಿ ನವಯುಗ ಕಂಪನಿಯನ್ನು ಎಚ್ಚರಿಸಿತು. ಇದಾದ ಬಳಿಕ ೨೦೧೯ ರ ಬಳಿಕ ಇನ್ನೂ ಕಾಮಗಾರಿ ಕೈಗೈತ್ತಿಕೊಳ್ಳದೇ ಕಂಪನಿ ತಟಸ್ಥವಾದಗ ಪುನಃ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿದಾಗ ಜಿಲ್ಲಾಧಿಕಾರಿ, ಉಪವಿಭಾಗಧಿಕಾರಿ, ಸೇರಿದಂತೆ ನವಯುಗ ಕಂಪನಿ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕಾಮಗಾರಿ ಮುಂದುವರಿಸುವ ಬಗ್ಗೆ ಕ್ರಮ ಕೈಗೊಂಡು ಮೊದಲ ಹಂತದಲ್ಲಿ ಬೀಜಾಡಿ ಕೆನಾರ ಬ್ಯಾಂಕ್ ಸಮೀಪ ಚರಂಡಿ ನಿರ್ಮಾಣ ಮತ್ತು ಬೀಜಾಡಿ ಪೂಜಾ ಮಾರ್ಬಲ್…
ಕುಂದಾಪ್ರ ಡಾಟ್ ಕಾಂ ಲೇಖನ. ಮೊರೆತು ನಿಲುವೆ ಏಕ ಮಾವ ಅಳಿಯನಲ್ಲವೇ.. ಉರಿವುದೊಂದೇ ದೀಪವಾದರೂ.. ಎರಡಾಗುತ..ಮೂರಾಗುತ.. ಕರೆಸಿ ಕೊಲುವೆ ಏಕೆ ಮಾವ ಅಳಿಯನಲ್ಲವೇ ಎಂಬ ಪದ್ಯಗಳಿಗೆ ಹಾಲುಗಲ್ಲದ ಮಕ್ಕಳ ನೃತ್ಯಾಭಿನಯಕ್ಕೆ ತಲೆ ದೂಗದವರಿಲ್ಲ.. ಕಂಡೆನೊಂದು ಕನಸಿನ ಪದ್ಯಕ್ಕೆ ಕಂಸ ವೇಷಧಾರಿ ಅಭಿನಯ ಅಲ್ಲಲ್ಲಿ ಚಿಟ್ಟಾಣಿ ನೆನಪು ಮೂಡಿಸಿದ್ದು ಸುಳ್ಳಲ್ಲ.. ಧೂರ್ವಾಸ ಮುನಿಯ ಶಾಪಕ್ಕೆ ಒಳಗಾಗುವ ಗಂಧರ್ವನ ಪಾತ್ರ ನಿರ್ವಹಸಿದ ಪುಣಾಣಿ ಬಾಲಕಿಯ ನೃತ್ಯ ಕೌಶಲ್ಯ ತರಬೇತುದಾರರ ಪರಿಶ್ರಮಕ್ಕೆ ಸಿಕ್ಕ ಫಲ. ರಾಜಾರಜಕ, ಆಸ್ತಿ ಪಾಸ್ತಿ ಹೀಗೆ ಪಾತ್ರಗಳಲ್ಲಿ ಕಾಣಿಸಿಕೊಂಡವರೆಲ್ಲಾ.. ನಾಲ್ಕನೇ ತರಗತಿ ಒಳಗಿನ ಮಕ್ಕಳು..! ಗಂಡು ಮತ್ತು ಹೆಣ್ಣು ಮಕ್ಕಳು ಒಟ್ಟಾಗಿ ರಂಗದಲ್ಲಿ ಮೂರು ಗಂಟೆ ಕಾಲ ವೀಕ್ಷಕರ ಸೆರೆ ಹಿಡಿದು ಕೂರಿಸಿದ ಮಕ್ಕಳ ಯಕ್ಷಗಾನ ಕಸರತ್ತು.. ಯಾಕ್ಷಗಾನಕ್ಕೆ ಉಳಿಗಾಲವಿಲ್ಲ ಎಂದು ಬೊಬ್ಬೆಯಿಡುವವರಿಗೆ ಉತ್ತರವೂ ಹೌದು. ೩೦ಕ್ಕೂ ಮಿಕ್ಕ ಮಕ್ಕಳ ಸಿದ್ದ ಪಡಿಸಿ, ಮಕ್ಕಳ ರಂಗದಲ್ಲಿ ತರುವ ಕೆಲಸ ಸುಲಭ ಸಾಧ್ಯವೂ ಅಲ್ಲ. ಎಲ್ಲವೂ ಸಾಧ್ಯವಾಗಿದ್ದು ಮರವಂತೆ ಶ್ರೀ ದುರ್ಗಾಪರಮೇಶ್ವರಿ ಜಾತ್ರೆ…
