ರಾಮಾಯಣ ಮಹಾಭಾರತ ಭಾರತದ ಹಿರಿಮೆ ಸಾರಿದ ಕೃತಿಗಳು: ನರೇಂದ್ರ ಎಸ್ ಗಂಗೊಳ್ಳಿ
ಗಂಗೊಳ್ಳಿ: ರಾಮಾಯಣ ಮತ್ತು ಮಹಾಭಾರತ ಎರಡೂ ಕೃತಿಗಳೂ ನಮ್ಮ ದೇಶದ ಸಾಂಸ್ಕೃತಿಕ ಹಿರಿಮೆಯನ್ನು ಅತ್ಯಂತ ಅಮೋಘವಾಗಿ ಮತ್ತು ಸಮರ್ಥವಾಗಿ ಜಗತ್ತಿಗೆ ಸಾರಿ ಹೇಳಿದಂತಹ ಅತ್ಯಮೂಲ್ಯ ಕೃತಿಗಳು.ಅವುಗಳು ಭಾರತದ ಹೆಮ್ಮೆ. ಅವುಗಳನ್ನು ಸೃಷ್ಟಿಸಿದ
[...]