ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ತಗ್ಗರ್ಸೆ ಹೆಗ್ಡೆಯವರ ಮನೆ ಕಂಬಳಗದ್ದೆಯಲ್ಲಿ ಅನುವಂಶಿಕವಾಗಿ ನಡೆದು ಬಂದ “ಸಾಂಪ್ರದಾಯಕ ಕಂಬಳೋತ್ಸವ”ವು ಡಿಸೆಂಬರ್ 06ರ ಶುಕ್ರವಾರದಂದು ವಿಜೃಂಭಣೆಯಿಂದ ಜರುಗಲಿದೆ.
ಕಂಬಳದಲ್ಲಿ ಹಗ್ಗ ಅತೀ ಕಿರಿಯ ವಿಭಾಗ, ಹಗ್ಗ ಕಿರಿಯ ವಿಭಾಗ, ಹಗ್ಗ ಹಿರಿಯ ವಿಭಾಗ ಹಾಗೂ ಹಲಗೆ ಮುಕ್ತ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ವಿಜೇತ ಕೋಣಗಳಿಗೆ ಹಾಗೂ ಕೋಣ ಓಡಿಸುವವರಿಗೆ ಬಹುಮಾನ ನೀಡಲಾಗುತ್ತದೆ. ಈ ವೇಳೆ ಕಂಬಳಾಭಿಮಾನಿಗಳು ಭಾಗವಹಿಸುವಂತೆ ತಗ್ಗರ್ಸೆ ಕಂಠದಮನೆ ಟಿ. ನಾರಾಯಣ ಹೆಗ್ಡೆ ಹಾಗೂ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










