ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್: ಗವರ್ನರ್ ಶ್ರೀಧರ ಶೆಣವ ಭೇಟಿ

Call us

Call us

Call us

ಬೈಂದೂರು: ಸಮಾಜಮುಖಿ ಚಿಂತನೆಯ ಜೊತೆಗೆ ಕಷ್ಟದಲ್ಲಿರುವ ಬಡವರ, ಅಸಾಯಕರ, ರೋಗಿಗಳ, ಅಂಗವಿಕಲರ ಮುಖದಲ್ಲಿ ನಗು ಕಾಣಬೇಕಾದರೆ ನಾವು ಅಂತವರನ್ನು ಗುರುತಿಸಿ ತಕ್ಷಣ ಸ್ಪಂದಿಸಬೇಕು. ಇದಕ್ಕಿಂತ ದೊಡ್ಡ ಯಜ್ಞ ಮತ್ತೊಂದಿಲ್ಲ ಎಂದು ಲಯನ್ಸ್ ಜಿಲ್ಲೆ 317ಸಿ ಗವರ್ನರ್ ಶ್ರೀಧರ ಶೆಣವ ಹೇಳಿದರು.

Call us

Click Here

ಬೈಂದೂರು-ಉಪ್ಪುಂದ ಲಯನ್ಸ್ ಹಾಗೂ ಲಯನೆಸ್ ಕ್ಲಬ್‌ಗೆ ಪತ್ನಿ ಜ್ಯೋತಿ ಶೆಣವರೊಂದಿಗೆ ಅಧಿಕೃತ ಭೇಟಿ ನೀಡಿ, ಸಂಜೆ ನಾಗೂರು ಆಕಾಶ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು. 210 ರಾಷ್ಟ್ರಗಳಲ್ಲಿ 14.58ಕ್ಷ ಸದಸ್ಯರನ್ನು ಹೊಂದಿದ ಸೇವಾ ಸಂಸ್ಥೆ ಈಗ ಶತಮಾನೋತ್ಸವದ ಹೊಸ್ತಿಲಿನಲ್ಲಿದೆ. ಶೇ.೬೫ರಷ್ಟು ಯುವಜನರನ್ನು ಹೊಂದಿದ ನಮ್ಮ ದೇಶದಲ್ಲಿ ಸೇವಾ ಮನೋಭಾವನೆಯಿರುವ ಯುವಕರನ್ನು ಕ್ಲಬ್‌ಗೆ ಸೇರಿಸಿಕೊಂಡು ಗ್ರಾಮೀಣಾಭಿವೃದ್ಧಿಯತ್ತ ಗಮನ ಹರಿಸಬೇಕು. ಸೇವೆಯೇ ನಮ್ಮೆಲ್ಲರ ಪ್ರಮುಖ ಅಜೆಂಡವಾಗಬೇಕು. ಸಹೋದರತೆಯ ಮನೋಭಾವನೆಯಿಂದ ಎಲ್ಲರೂ ಪರಸ್ಪರ ಸಂತೋಷ ಹಂಚಿಕೊಂಡು ಜೀವನ ಸಾಗಿಸುವಂತಾಗಬೇಕು ಎಂದರು.

ಘಟಕದ ಅಧ್ಯಕ್ಷ ಜಿ.ಗೋಕುಲ್ ಶೆಟ್ಟಿ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಉಪ್ಪುಂದ ಮತ್ತು ಖಂಬದಕೋಣೆ ಸರಕಾರಿ ಪ್ರೌಢಶಾಲೆಗೆ ತಲಾ ರೂ. ಒಂದು ಲಕ್ಷ ವೆಚ್ಚದ ಸ್ಮಾರ್ಟ್ ಕ್ಲಾಸ್ ಸಲಕರಣೆ ನೀಡಿದ ಉದ್ಯಮಿ ಜೆ.ಎನ್.ಶೆಟ್ಟಿ ಘಟಪ್ರಭಾ, ಯು.ಬಿ.ಶೆಟ್ಟಿ ಧಾರವಾಡ, ಕ್ಲಬ್ಬಿನ ಕಾರ್ಯಕ್ರಮಕ್ಕೆ ಧ್ವನಿವರ್ಧಕ ನೀಡಿದ ಪ್ರಭಾಕರ ಶೆಟ್ಟಿಯವರನ್ನು ಗೌರವಿಸಲಾಯಿತು. ಅಲ್ಲದೇ ಟೆಂಪೋ ಚಾಲಕ, ಬೈಂದೂರು ಕೊಟ್ಟಿಗೆಮನೆ ಮಹಾಬಲ ದೇವಾಡಿಗ ಇವರ ಸಮಾಜಸೇವೆ ಗುರುತಿಸಿ ಸನ್ಮಾನಿಸಲಾಯಿತು.

ನಿಕಟಪೂರ್ವ ಗವರ್ನರ್ ಮಧುಸೂದನ್ ಹೆಗ್ಡೆ, ಜಿಲ್ಲಾ ಲಯನ್ಸ್ ಕಾರ್ಯದರ್ಶಿ ಎನ್.ಎಂ.ಹೆಗ್ಡೆ, ರಿಜನಲ್ ಚೇರ್‌ಮನ್ ಫಿಲಿಪ್ ಡಿ’ಕೋಷ್ಟ, ಝೋನ್ ಚೇರ್‌ಮನ್ ನಿರಂಜನ್, ಲಯನೆಸ್ ಜಿಲ್ಲಾ ಕಾರ್ಡಿನೇಟರ್ ನಿರುಪಮಾ ಪ್ರಸಾದ್ ಶೆಟ್ಟಿ, ಬೈಂದೂರು-ಉಪ್ಪುಂದ ಘಟಕದ ಕಾರ್ಯದರ್ಶಿ ಶೇಖ್ ಫಯಾಜ್ ಅಲಿ, ಮಾಜಿ ಅಧ್ಯಕ್ಷ ದೀಪಕ್‌ಕುಮಾರ್ ಶೆಟ್ಟಿ, ಲಯನೆಸ್ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸತೀಶ್ ಶೆಟ್ಟಿ ನಿರೂಪಿಸಿ, ಕೋಶಾಧಿಕಾರಿ ಸುರೇಂದ್ರ ಶೇಟ್ ವಂದಿಸಿದರು. ಕ್ಲಬ್ ಸದಸ್ಯರಾದ ಹೆಚ್. ವಿಜಯ್ ಶೆಟ್ಟಿ, ಬಿ. ಅಣ್ಣಪ್ಪ ಶೆಟ್ಟಿ ಮತ್ತು ರಾಜು ಶೆಟ್ಟಿ ಈ ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು.

??????????????????????????????? ???????????????????????????????

Click here

Click here

Click here

Click Here

Call us

Call us

Leave a Reply