Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರದ ಇತಿಹಾಸದಲ್ಲೇ ಪ್ರಪ್ರಥಮವಾಗಿ ಮನೆ, ಶಾಲೆ, ದೇವಸ್ಥಾನಗಳು, ಸಭಾ ಮಂದಿರಗಳು ಹಾಗೂ ಸಾರ್ವಜನಿಕ ಸ್ಥಳದಲ್ಲಿ ಒಂದೇ ದಿನ ಐದುಸಾವಿರಕ್ಕೂ ಹೆಚ್ಚು ರಂಗೋಲಿ ರಚನೆ ಮಾಡುವ ಮೂಲಕ ಕುಂದಾಪುರದ ರಂಗೋಲಿ ಪ್ರಿಯರು ದಾಖಲೆಯನ್ನೇ ನಿರ್ಮಿಸಿದ್ದಾರೆ. ಈ ನಡುವೆ ರಾಜ್ಯಮಟ್ಟದ ರಂಗೋಲಿ ಸ್ಪರ್ಧೆಯು ಕುಂದಾಪುರದ ಶ್ರೀ ವೆಂಕಟರಮಣ ಆಂಗ್ಲಮಾಧ್ಯಮ ಶಾಲಾ ವಠಾರದಲ್ಲಿ ನಡೆದು ಬಹಳ ಆಕರ್ಷಣೆ ಪಡೆಯಿತು. ನೂರಾರು ಮಂದಿ ವಿದ್ಯಾರ್ಥಿಗಳು , ಹಾಗೂ ಹಿರಿಯರು ಪೈಪೋಟಿಯಲ್ಲಿ ರಂಗೋಲಿ ರಚಿಸುವ ಮೂಲಕ ರಂಗೋಲಿಯ ವೈವಿಧ್ಯಮಯ ಚಿತ್ರಣದ ಪ್ರದರ್ಶನ ನೀಡಿದರು. ಕುಂದಾಪುರದ ಬಹುತೇಕ ರಸ್ತೆ ಬದಿಯಲ್ಲಿರುವ ಮನೆಗಳಲ್ಲಿ ಮುಂಜಾನೆಯಿಂದಲೇ ಗೃಹಿಣಿಯರು ಮಕ್ಕಳು ರಂಗೋಲಿ ರಚಿಸಿದ್ದು ರಂಗೋಲಿ ಉತ್ಸವಕ್ಕೆ ಸ್ಫೂರ್ತಿ ತುಂಬಿದರು. ಕುಂದಾಪುರದ ಶ್ರೀ ವೆಂಕಟರಮಣ ದೇವಸ್ಥಾನದ ರಸ್ತೆ, ಚಿಕ್ಕನ್‌ಸಾಲ್ ರಸ್ತೆ , ರಾಮ ಮಂದಿರ ರಸ್ತೆ ಖಾರ್ವಿಕೇರಿ ಮದ್ದುಗುಡ್ಡೆ ಈಸ್ಟ್ ಬ್ಲಾಕ್ ರಸ್ತೆ, ವೆಸ್ಟ್ ಬ್ಲಾಕ್ ರಸ್ತೆ , ಬಡಾಕೆರೆ, ಕುಂದೇಶ್ವರ ದೇವಸ್ಥಾನದ ರಸ್ತೆ , ಸಲೀಂ ಆಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನಾಚರಣೆಯ ಅಂಗವಾಗಿ ಜ.೨೮ರಂದು ಬೈಂದೂರಿನಲ್ಲಿ ಸಮರ್ಥ ಭಾರತ ಸಂಘಟನೆ ಹಮ್ಮಿಕೊಂಡಿರುವ ವಿವೇಕ ಪರ್ವ ಸಾರ್ವಜನಿಕ ಸಮಾರಂಭಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬೈಂದೂರು ಪ್ರಖಂಡ ಬೆಂಬಲ ವ್ಯಕ್ತಪಡಿಸುತ್ತದೆ ಎಂದು ವಿಹಿಂಪ ಬೈಂದೂರು ಪ್ರಖಂಡದ ಅಧ್ಯಕ್ಷ ಶ್ರೀಧರ ಬಿಜೂರು ಹೇಳಿದರು. ಬೈಂದೂರಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಉತ್ತಮನಾಗು ಉಪಕಾರಿಯಾಗು ಎಂಬ ಸಂದೇಶದಡಿಯಲ್ಲಿ ಸಮರ್ಥ ಭಾರತ ಬೈಂದೂರು ಹಮ್ಮಿಕೊಂಡಿರುವ ವಿವೇಕ ಪರ್ವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣದ ಸಹಸಂಘಚಾಲಕ ಡಾ. ವಾಮನ ಪೈ, ಚಿತ್ರನಟ ಉಪೇಂದ್ರ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಮೊದಲಾದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಆರಂಭಕ್ಕೂ ಮುನ್ನ ಯಡ್ತರೆ ಬೈಪಾಸ್‌ನಿಂದ ಬೈಂದೂರು ಗಾಂಧಿ ಮೈದಾನದ ತನಕ ಬೃಹತ್ ಶೋಭಾಯಾತ್ರೆ ಜರುಗಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಸ್ವಪ್ರೇರಣೆಯಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವಂತೆ ವಿನಂತಿಸಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಸುಳ್ಯದ ರಂಗಮನೆ ರಿ. ಸಾಂಸ್ಕೃತಿಕ ಕಲಾ ಕೇಂದ್ರವು ಕೊಡಮಾಡುವ 2017ರ ರಂಗಮನೆ ಪ್ರಶಸ್ತಿಯನ್ನು ಪ್ರಸಿದ್ಧ ರಂಗ ಶಿಕ್ಷಕ, ರಂಗವಿಮರ್ಶಕ, ನಾಟಕಕಾರ ಹಾಗೂ ಪ್ರಕಾಶಕರಾದ ಕೆ. ವಿ. ಅಕ್ಷರ ಅವರಿಗೆ ನೀಡಲಾಗುವುದೆಂದು ರಂಗ ನಿರ್ದೇಶಕ, ರಂಗಮನೆ ರೂವಾರಿ ಜೀವನ್‌ರಾಂ ಸುಳ್ಯ ತಿಳಿಸಿದ್ದಾರೆ. ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಕೆ.ವಿ.ಸುಬ್ಬಣ್ಣರವರ ಪುತ್ರರಾದ ಅಕ್ಷರ ಅವರು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಪದವಿ ಹಾಗೂ ಅಮೇರಿಕಾದ ಲೀಡ್ಸ್ ವಿಶ್ವ ವಿದ್ಯಾಲಯದ ರಂಗಶಾಲೆಯಿಂದ ಸ್ನಾತಕೋತ್ತರ ಎಂ.ಎ ಪದವಿಯನ್ನು ಪಡೆದವರು. ನೀನಾಸಂ ರಂಗಶಿಕ್ಷಣ ಕೇಂದ್ರದ ರಂಗಶಿಕ್ಷಕರಾಗಿ, ನಿರ್ದೇಶಕರಾಗಿ, ನೂರಾರು ರಂಗಪ್ರತಿಭೆಗಳನ್ನು ನಾಡಿಗೆ ನೀಡಿದವರು. ಕನ್ನಡದ ಪ್ರಸಿದ್ಧ ಪುಸ್ತಕ ಪ್ರಕಾಶನ ಅಕ್ಷರ ಪ್ರಕಾಶನದ ಮೂಲಕ ಅನೇಕ ಅಮೂಲ್ಯ ಪುಸ್ತಕಗಳನ್ನು ಹೊರತಂದವರು. ಸ್ವತಃ ನಾಟಕಕಾರರಾಗಿ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಸ್ಕೃತಿ ಹಾಗೂ ಅನುವಾದಕ್ಕೆ ಸಂಬಂಧಿಸಿದಂತೆ 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದವರು. ನೀನಾಸಂ ಬಳಗ, ನೀನಾಸಂ ತಿರುಗಾಟ ಮುಂತಾದ ತಂಡಕ್ಕೆ ಸ್ಮಶಾನ, ಕುರುಕ್ಷೇತ್ರ, ಅಹಲ್ಯಾ, ನೀಲಿ ಕುದುರೆ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ಯಾಂಕುಗಳು ಗ್ರಾಹಕರ ಅನುಕೂಲಕ್ಕಾಗಿ ವಿನೂತನವಾದ ತಂತ್ರಜ್ಞಾನಗಳನ್ನು ಬಳಕೆಗೆ ತರುತ್ತಲೇ ಇವೆ. ಇದರಿಂದ ವೇಗದ ಬ್ಯಾಂಕಿಂಗ್ ವ್ಯವಹಾರ ಸರಳವಾಗಿ ಸಾಧ್ಯವಾಗುತ್ತದೆ. ಗ್ರಾಹಕರು ಈ ನಿಟ್ಟಿನಲ್ಲಿ ಅರಿವನ್ನು ಪಡೆದುಕೊಳ್ಳಬೇಕು ಎಂದು ವಾರಂಬಳ್ಳಿ ಕೆನರಾ ಬ್ಯಾಂಕಿನ ಅಧಿಕಾರಿ ಮನಿಷ್ ಹೇಳಿದರು. ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ನಗದು ರಹಿತ ವ್ಯವಹಾರ ಮತ್ತು ಮೊಬೈಲ್ ಬ್ಯಾಂಕಿಂಗ್ ಬಗೆಗೆ ಮಾಹಿತಿ ನೀಡುವ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಗಂಗೊಳ್ಳಿ ಕೆನರಾ ಬ್ಯಾಂಕಿನ ಅಧಿಕಾರಿ ಜಿ.ವಿ.ಅಶೋಕ್ ಮಾತನಾಡಿ ನಗದು ರಹಿತ ವ್ಯವಹಾರ ಇಂದಿನ ಅದ್ಯತೆಯಾಗಿದೆ.. ಬ್ಯಾಂಕಿನಿಂದ ದೊರೆಯುವ ಉತ್ತಮ ಸೌಲಭ್ಯಗಳನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸುಜಯೀಂದ್ರ ಹಂದೆ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೋಟೇಶ್ವರ ಸಮೀಪದ ಕಟ್ಕೆರೆಯ ಯುವಶಕ್ತಿ ಯುವಕ ಮಂಡಲ(ರಿ)ಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಗಣೇಶ ಶೆಟ್ಟಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಪ್ರವೀಣಕುಮಾರ್ ಶೆಟ್ಟಿ, ಉಪಾಧ್ಯಕ್ಷರಾಗಿ ರಾಘವೇಂದ್ರ ಸ್ವಾಮಿ, ಸುಧಾಕರ ಕಟ್ಕೆರೆ, ಶಂಕರ ಕಟ್ಕೆರೆ, ಕಾರ್ಯದರ್ಶಿಯಾಗಿ ಸಂತೋಷ ಪೂಜಾರಿ, ಜತೆ ಕಾರ್ಯದರ್ಶಿಯಾಗಿ ರಮೇಶ್ ಕಟ್ಕೆರೆ, ಕೋಶಾಧಿಕಾರಿಯಾಗಿ ದಯಾನಂದ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ಪ್ರಸಾದ ಕಟ್ಕೆರೆ, ಕ್ರೀಡಾ ಕಾರ್ಯದರ್ಶಿಯಾಗಿ ಯೋಗೀಶ ಕಟ್ಕೆರೆ, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಪ್ರದೀಪ ಕಟ್ಕೆರೆ ಪದಾಧಿಕಾರಿಗಳಾಗಿ ಆಯ್ಕೆಯಾದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿಯಲ್ಲಿಡಲು ಯೋಗ ಸಹಕಾರಿ. ಮಾನವ ತನ್ನನ್ನು ತಾನು ಅರಿತು ಸರಿ-ತಪ್ಪುಗಳನ್ನು ವಿಮರ್ಶಿಸಿ ಕೇವಲ ಸರಿಯಾದ ಮಾರ್ಗವನ್ನು ಅಳವಡಿಸಿಕೊಂಡು ಅಭಿವೃದ್ಧಿ ಹೊಂದುವುದೇ ಆಧ್ಯಾತ್ಮದ ತಳಹದಿ. ದೊರೆತಿರುವ ಸೌಲಭ್ಯವನ್ನು ಉಪಯೋಗಿಸಿಕೊಂಡು ಸ್ಪರ್ಧಾತ್ಮಕ ಜಗತ್ತಿಗೆ ತಯಾರಾಗಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಕೃಷ್ಣ ಶರ್ಮಾ ಹೇಳಿದರು. ಅವರು ಕಾಲೇಜಿನ ‘ಯೋಗ ಮತ್ತು ಆಧ್ಯಾತ್ಮ ಸಂಘ’ವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್‌ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರಾಜೇಶ್ ಶೆಟ್ಟಿ ವಕ್ವಾಡಿ, ವಾಣಿಜ್ಯ ಉಪನ್ಯಾಸಕರಾದ ಹರೀಶ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ದೀಕ್ಷಾ ಸ್ವಾಗತಿಸಿದರು. ಅಭಿನಯ ಅತಿಥಿಗಳನ್ನು ಪರಿಚಯಿಸಿದರು. ಪ್ರಗತಿ ಶೆಟ್ಟಿ ವಂದಿಸಿದರು. ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಶ್ರೀ ಕ್ಷೇತ್ರ ಧರ್ಮಸ್ಥಳದ ಚೇತನಾಶಕ್ತಿಯಾಗಿದ್ದ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರು ಆತಿಥ್ಯವೇ ಪರಮಧರ್ಮವೆಂದು ನಂಬಿದವರು. ಅವರ ದೂರದರ್ಶಿತ್ವದ ಫಲವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಬಹಳಷ್ಟು ಅಭಿವೃದ್ಧಿಗೊಂಡು ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ರತ್ನಮ್ಮ ಹೆಗ್ಗಡೆಯವರು ಶ್ರೀ ಕ್ಷೇತ್ರದ ಮೂಲಕ ಮಕ್ಕಳ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದರು. ಅವರು ಮಾಡಿದ ದಾನ, ಧರ್ಮ ಹಾಗೂ ಆತಿಥ್ಯವೇ ಅವರನ್ನು ಇಂದು ಅಜರಾಮರನ್ನಾಗಿಸಿದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಟಿ.ವಿಮಲಾ ವಿ.ಪೈ ಸಭಾಂಗಣದಲ್ಲಿ ಮೇಲ್‌ಗಂಗೊಳ್ಳಿ ಬಾವಿಕಟ್ಟೆಯ ಓಂ ಶ್ರೀ ಮಾತೃ ಮಂಡಳಿ ಆಶ್ರಯದಲ್ಲಿ ಡಾ.ಕಲಾಶ್ರೀ ಪ್ರಾಯೋಜಕತ್ವದಲ್ಲಿ ಜರಗಿದ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರ ಪುಣ್ಯಸ್ಮೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಎನ್.ಸುಭಾಶ್ಚಂದ್ರ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ 2016ನೇ ಸಾಲಿನ ವಲಯ ಮಟ್ಟದ ಸಮಾಜ ಸೇವಾ ಸಾಧನೆಗಾಗಿ ಸಮಾಜ ಸೇವಕ, ಪ್ರಸ್ತುತ ಎಸ್.ಡಿ.ಎಂ.ಸಿ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಎಂ.ಅಬ್ದುಲ್ ಸಲಾಂ ಚಿತ್ತೂರು ಅವರಿಗೆ ಪುತ್ತೂರಿನಲ್ಲಿ ನಡೆದ ಜೇಸಿಐ ಸಂಭ್ರಮದಲ್ಲಿ ಸಾಧನಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇವರು ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೇಸಿಐನಂತಹ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕಟ್ಕರೆ ಬಾಲಾ ಯೇಸುವಿನ ಆಶ್ರಮದ ವಾರ್ಷಿಕ ಮಹಾ ಹಬ್ಬ ಶಿವಮೊಗ್ಗ ಧರ್ಮ ಪ್ರಾಂತ್ಯ ಬಿಶಪ್ ಅ.ವಂ.ಡಾ.ಫ್ರಾನ್ಸಿಸ್ ಸೆರಾವೊ ನೇತೃತ್ವದಲ್ಲಿ ಪವಿತ್ರ ಬಲಿದಾನದ ಮೂಲಕ ಆಚರಿಸಲಾಯಿತು. ಯೇಸುವಿನ ಪ್ರೀತಿ ಮಾಡುವುದೆಂದರೆ, ದೀನ ದಲಿತರ ಸೇವೆ ಮಾಡುವುದು.ಇತರನ್ನು ಪ್ರೀತಿಸಿ ಯೇಸುವಿನ ಶಿಸ್ಯರೆಂದು ಜಗತ್ತಿಗೆ ಸಾಬಿತು ಪಡಿಸುವ ಈ ಧ್ಯೇಯ ವಾಕ್ಯದಂತೆ ಪ್ರಪಂಚದಲ್ಲಿ ಹಲವರಿಗೆ ಉಣ್ಣಲು ಅನ್ನವಿಲ್ಲಾ, ಕೆವರಿಗಂತೂ ಉಣ್ಣಲು ಬಟ್ಟಲೂ ಕೂಡ ಇಲ್ಲ, ಅವರಿಗಾಗಿ ಸ್ಪಂದಿಸಿ, ಅವರಿಗೆ ನೆರವಾಗೋಣ ಎಂದು ಬಿಶಪ್ ಅ.ವಂ.ಡಾ.ಫ್ರಾನ್ಸಿಸ್ ಸೆರಾವೊ ಸಂದೇಶ ನೀಡಿದರು. ಇದೆ ಸಂದರ್ಭದಲ್ಲಿ ಅವರು ಕಾರ್ಮೆಲ್ ಯಾಜಕರು ಆರಂಭಿಸಿದ ‘ಕಾರ್ಮೆಲ್ ಎಪ್’ ನ್ನು ಬಿಡುಗಡೆ ಮಾಡಿದರು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂ. ಅನಿಲ್ ಡಿಸೋಜಾ ಕುಂದಾಪುರ ವಲಯದ ಪರವಾಗಿ ಬಿಶಪರ ಸನ್ಮಾನಿಸಿ. ಕಾರ್ಮೆಲ್ ಯಾಜಕರು ಪ್ರಕಟಿಸಿದ 2017 ರ ‘ಬೈಬಲ್ ಡೈರಿ’ಯನ್ನು ಉದ್ಘಾಟಿಸಿದರು. ಹಬ್ಬದಲ್ಲಿ ವಲಯದ ಹಲವಾರು ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಧರ್ಮ ಭಗಿನಿಯರು ಭಕ್ತಾಧಿಗಳು ಪಾಲ್ಗೊಂಡಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲೆ ಹಾಗೂ ಕುಂದಾಪುರ ತಾಲೂಕಿನ ೨೫ ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡಿರುವ ಅಂತರಗಂಗೆ ಕಳೆಯು ಸುಮಾರು ೪೦೦ರಿಂದ ೫೦೦ ಎಕರೆಯಷ್ಟು ಕೃಷಿ ಪ್ರದೇಶಕ್ಕೆ ಹಾನಿಯನ್ನುಂಟುಮಾಡುತ್ತಿದ್ದು, ರೈತರು ಕಾಯಕದಿಂದ ವಿಮುಖರಾಗುವಂತೆ ಮಾಡಿದೆ. ರೈತರಿಗೆ ತೊಡಕಾಗಿರುವ ಅಂತರಗಂಗೆಯನ್ನು ನಿರ್ಮೂಲನೆಗೊಳಿಸವಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ. ಅವರು ಕುಂದಾಪುರ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ನಿಧಾನವಾಗಿ ಹರಿಯುವ ಮತ್ತು ನಿಂತ ನೀರಿನಲ್ಲಿ ವ್ಯಾಪಕವಾಗಿ ಬೆಳೆಯುವ ಅಂತರಗಂಗೆ ನೀರಿನ ಹರಿವಿಕೆಯನ್ನೂ ಸ್ಥಗಿತಗೊಳಿಸುತ್ತದೆ. ಬಳಿಕ ನೀರಿನ ಮೇಲ್ಮೈಯನ್ನೂ ಆವರಿಸಿಕೊಂಡು ಒತ್ತಾದ ಪದರವನ್ನು ನಿರ್ಮಿಸಿ ಜಲಚರಗಳು ಹಾಗೂ ಬೆಳೆಗೆ ಆಮ್ಲಜನಕ ಪೂರೈಕೆಯಾಗದಂತೆ ಮಾಡಿ ಬೆಳೆಯನ್ನು ಕುಂಠಿತಗೊಳಿಸುತ್ತದೆ ಎಂದರು. ಈ ಹಿಂದೆ ಅಂತರಗಂಗೆ ಬೆಳೆಯುವ ಪ್ರದೇಶಕ್ಕೆ ಭೇಟಿ ನೀಡಿದ್ದ ನಿವೃತ್ತ ಹಿರಿಯ ಭೂವಿಜ್ಞಾನಿ ಎನ್. ರಂಗನಾಥ್, ಅಂತರಗಂಗೆಯ ಹರಡುವಿಕೆಯಿಂದ ಸುತ್ತಲಿನ ಕೃಷಿ ಭೂಮಿಗೆ ಹಾನಿಯಾಗುವ ಬಗ್ಗೆ ಸಮಗ್ರ ವರದಿ…

Read More