Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ನಿಟ್ಟೆ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ ೩೧೮೨ ಇದರ ಜಿಲ್ಲಾ ಮಟ್ಟದ ಕ್ರೀಡಾಕೂಟ ಸ್ಪೂರ್ತಿ ೨೦೧೬ರಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಕುಂದಾಪುರ ವಿವಿಧ ಸ್ಪರ್ಧೆಗಳಲ್ಲಿ ೨೩ ಪ್ರಥಮ, ೧೯ ದ್ವಿತೀಯ, ೧೧ ತೃತೀಯ ಸ್ಥಾನದೊಂದಿಗೆ ಅತೀ ಹೆಚ್ಚು ಪ್ರಶಸ್ತಿಯನ್ನು ಗಳಿಸಿ ಚಾಂಪಿಯನ್‌ಶಿಪ್ ಪಡೆದು ರೋಟರಿ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಿದೆ. ಹುಡುಗರ ವಿಭಾಗದಲ್ಲಿ ಪ್ರಭಾವ್, ಹುಡುಗಿಯರ ವಿಭಾಗದಲ್ಲಿ ರೋಶನಿ, ಆನ್ಸ್ ಕಿರಿಯರ ವಿಭಾಗದಲ್ಲಿ ನಯನ ಕಿಶೋರ್, ಆನ್ಸ್ ಹಿರಿಯರ ವಿಭಾಗದಲ್ಲಿ ಗೀತಾಂಜಲಿ ಆರ್. ನಾಯ್ಕ್ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು. ಆನ್ಸ್ ಹಿರಿಯರ ವಿಭಾಗದಲ್ಲಿ ೫೦ ಮೀ. ಓಟದಲ್ಲಿ, ಶಾಟ್‌ಪುಟ್, ಸ್ಟ್ಯಾಂಡಿಂಗ್ ಜಂಪ್‌ನಲ್ಲಿ ಗೀತಾಂಜಲಿ ಆರ್. ನಾಯ್ಕ್ ಪ್ರಥಮ, ಆನ್ಸ್ ಕಿರಿಯರ ವಿಭಾಗದಲ್ಲಿ ೧೦೦ ಮೀ. ಓಟದಲ್ಲಿ, ೨೦೦ ಮೀ. ಓಟದಲ್ಲಿ, ಲಾಂಗ್‌ಜಂಪ್‌ನಲ್ಲಿ ನಯನ ಕಿಶೋರ್ ಪ್ರಥಮ, ಕೇರಂ ಸಿಂಗಲ್ಸ್‌ನಲ್ಲಿ ಸುರೇಖಾ ಕಿಶೋರ್ ಪ್ರಥಮ, ಹುಡುಗಿಯರ ವಿಭಾಗದಲ್ಲಿ ಶಾಟ್‌ಪುಟ್, ಕೇರಂನಲ್ಲಿ…

Read More

ಶ್ರೀ ಪಡ್ರೆ ಅವರಿಗೆ ಕುಸುಮಾಶ್ರೀ ಪ್ರಶಸ್ತಿ. ಗಾಯನ ಸ್ವರ್ಧೆ ವಿಜೇತ ಪ್ರತಿಭೆಗಳಿಗೆ ಗಾನಕುಸುಮ ಪ್ರಶಸ್ತಿ. ಕುಂದಾಪ್ರ ಡಾಟ್ ಕಾಂ ವರದಿ. ಉದ್ಯಮದೊಂದಿಗಿನ ಸಾಮಾಜಿಕ ಬದ್ಧತೆ. ಬದ್ಧತೆಯಲ್ಲೊಂದು ಉತ್ಕಷ್ಟತೆ. ಇದು ಕಳೆದ ಹದಿನೇಳು ವರ್ಷದ ಹಿಂದೆ ಹುಟ್ಟಿಕೊಂಡ ನಾಗೂರಿನ ಕುಸುಮ ಸಮೂಹ ಸಂಸ್ಥೆಗಳಲ್ಲಿ ಕಾಣಬಹುದಾದ ವಿಶೇಷತೆ. ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದಿರುವ ಕುಸುಮ ಸಮೂಹ ಸಂಸ್ಥೆಗಳು ಉತ್ಕೃಷ್ಟ ಹಾಗೂ ಶಿಸ್ತುಬದ್ಧ ವ್ಯವಹಾರ ಮೌಲ್ಯಗಳನ್ನು ಅಳವಡಿಸಕೊಂಡು ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯನ್ನೂ ಮರೆಯದೇ ಶೈಕ್ಷಣಿಕ, ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸಂಗೀತಾಸಕ್ತರಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಛಾಪು ಮೂಡಿಸಿದ ಛಾತಿ ಸಂಸ್ಥೆಯದ್ದು. ಪರಿಸರದ ಪ್ರತಿಭೆಗಳಿಗೆ ಧ್ವನಿಯಾಗಬೇಕು ಎಂಬ ಸದುದ್ದೇಶದಿಂದ ಕುಸುಮ ಸಂಸ್ಥೆಯ ಹದಿನೈದನೇ ವರ್ಷದ ಸಂಭ್ರಮದೊಂದಿಗೆ ಆಯೋಜಿದ ‘ಕುಸುಮಾಂಜಲಿ’ ಸಾಂಸ್ಕೃತಿಕ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಸ್ಫೂರ್ತಿಯನ್ನು ಮುಂದುವರಿಸಿಕೊಂಡು ಈ ಭಾರಿ ‘ಕುಸುಮಾಂಜಲಿ – 2016’ ಆಯೋಜಿಸಲಾಗಿದೆ. ಡಿ.11ರ ಸಂಜೆ ನಡೆಯಲಿರುವ ಕಾರ್ಯಕ್ರಮಕ್ಕೊಂದು ಗರಿ ಎಂಬಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತನ್ನ ಸೇವೆಗಳ ಮೂಲಕ ಜನಮನ ಗೆದ್ದಿರುವ ವಿಜಯಾ ಬ್ಯಾಂಕ್ ತನ್ನ ಗ್ರಾಹಕರಿಗೆ ಇನ್ನಷ್ಟು ಹೆಚ್ಚಿನ ಸೇವೆ, ಸೌಲಭ್ಯ ಸೇವೆಗಳನ್ನು ನೀಡುವ ನೆಲೆಯಲ್ಲಿ ಕಾರ್ಯಪ್ರವೃತ್ತವಾಗಿದ್ದು, ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ನಾಗೇಶ್ವರ ರಾವ್ ವೈ. ಹೇಳಿದರು. ಖಂಬದಕೋಣೆಯ ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಸಮುದಾಯ ಭವನಕ್ಕೆ ಸ್ಥಳಾಂತರಗೊಂಡ ವಿಜಯಾ ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ವಿಜಯಾ ಬ್ಯಾಂಕ್ ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನ್ಮತಾಳಿದ್ದು, ಬ್ಯಾಂಕಿನ ೨೫೬ನೇ ಶಾಖೆಯಾಗಿ ಖಂಬದಕೋಣೆಯಲ್ಲಿ ೧೯೭೪ರಲ್ಲಿ ಪ್ರಾರಂಭಿಸಲಾಯಿತು. ಈಗ ದೇಶಾದ್ಯಂತ ೧೯೯೫ ಶಾಖೆಗಳನ್ನು ಬ್ಯಾಂಕ್ ಹೊಂದಿದೆ. ಎಲ್ಲಾ ಶಾಖೆಗಳಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಅಲ್ಲದೇ ಹಿಂದೆ ಆರ್ಥಿಕ ವಿಪ್ಲವದ ಕಾಲಘಟ್ಟದಲ್ಲಿ ವಿಜಯಾ ಬ್ಯಾಂಕ್ ಸ್ಥಾಪಿಸುವುದರ ಮೂಲಕ ಹಣಕಾಸಿನ ವ್ಯವಹಾರದ ಪುನಃಶ್ಚೇತನಕ್ಕೆ ನಾಂದಿಯಾಗಿದ್ದ ಬ್ಯಾಂಕಿನ ಸಂಸ್ಥಾಪಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಮೀನುಗಾರರು ರಾಮಾಯಣದ ಕಾಲದಿಂದಲೂ ಶ್ರೀರಾಮನ ಅನನ್ಯ ಭಕ್ತರು ಎನ್ನುವುದಕ್ಕೆ ಅರಸ ಗುಹ ಸಾಕ್ಷಿ. ವನವಾಸಕ್ಕೆ ಹೊರಟ ಶ್ರೀರಾಮನನ್ನು ಮೀನುಗಾರರ ಅರಸನಾದ ಗುಹ ಬರಮಾಡಿಕೊಂಡು ತನ್ನ ರಾಜ್ಯವನ್ನು ಅವನಿಗೆ ಸಮರ್ಪಿಸಲು ಮುಂದಾದವ. ಅಂದಿನಿಂದ ಇಂದಿನ ವರೆಗೂ ಈ ಪರಂಪರೆ ಮುಂದುವರಿದಿರುವುದಕ್ಕೆ ಎಲ್ಲೆಡೆಯ ಮೀನುಗಾರರು ಶ್ರೀರಾಮನನ್ನು ಆರಾಧ್ಯ ದೇವರಾಗಿ ಸ್ವೀಕರಿಸಿರುವುದೇ ನಿದರ್ಶನ ಎಂದು ಶೃಂಗೇರಿ ಶಾರದಾ ಪೀಠದ ಕಿರಿಯ ಯತಿ ಶ್ರೀ ವಿಧುಶೇಖರಾನಂದ ಸ್ವಾಮೀಜಿ ಹೇಳಿದರು. ಮರವಂತೆಯ ಮೀನುಗಾರರ ಶ್ರೀರಾಮ ಮಂದಿರಕ್ಕೆ ಸಂಜೆ ಆಗಮಿಸಿ, ಸಮುದಾಯದವರಿಂದ ಗುರುವಂದನೆ ಸ್ವೀಕರಿಸಿದ ಬಳಿಕ ಅವರು ಅನುಗ್ರಹ ಪ್ರವಚನಗೈದರು. ಶ್ರೀರಾಮ ಆದರ್ಶ ಪುರುಷನ ರೂಪದಲ್ಲಿ ಅವತಾರವೆತ್ತಿದ ಭಗವಂತ. ಮಾರಿಚನಂತಹ ರಕ್ಕಸ ಶ್ರೀರಾಮನನ್ನು ಧರ್ಮದ ಶರೀರ ರೂಪಿ ಎಂದು ವರ್ಣಿಸಿದ್ದ. ಶ್ರೀರಾಮ ನಾಮ ಉಚ್ಚಾರದಿಂದ ಸಕಲ ಪಾಪಗಳು ದೂರಾಗುತ್ತವೆ. ಅದು ಎಲ್ಲಕರ ಪಾಲಿನ ತಾರಕ ಮಂತ್ರ. ಕಷ್ಟ ಸಹಿಷ್ಣುಗಳಾದ ಮೀನುಗಾರರು ರಾಮಾರಾಧನೆಯ ಮೂಲಕ ಕಷ್ಟ ಪರಿಹರಿಸಿಕೊಳ್ಳುತ್ತಾರೆ, ಸಮೃದ್ಧಿ ಹೊಂದುತ್ತಾರೆ ಎಂದು ಅವರು ಹೇಳಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಸಿದ್ದಾಪುರ: ಕೆನರಾ ಬ್ಯಾಂಕ್‌ನ ಬೆಂಗಳೂರು ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ರವೀಂದ್ರ ಭಂಡಾರಿ ಅವರ ಗ್ರಾಮೀಣ ಅಭಿವೃದ್ಧಿ ಹಾಗೂ ಸಾಮಾಜಿಕ ಸೇವೆಯನ್ನು ಗುತಿಸಿರುವ ಬೆಂಗಳೂರು ಹೆಬ್ಬಾಳದ ಆಲೂಮ್ನಿ ಅಸೋಸಿಯೇಶನ್ ಯೂನಿವರ್ಸಿಟಿ ಆಫ್ ಅಗ್ರಿಕಲ್ಚರಲ್ ಸಾಯನ್ಸ್ ಇವರ ವತಿಯಿಂದ ೨೦೧೫-೧೬ನೇ ಸಾಲಿನ ವಿಶೇಷ ಅಲೂಮ್ನಿ ಅವಾರ್ಡ್‌ನ್ನು ನೀಡಿ ಗೌರವಿಸಿದೆ. ರವೀಂದ್ರ ಭಂಡಾರಿ ಅವರಿಗೆ ೨೦೧೫-೧೬ನೇ ಸಾಲಿನ ವಿಶೇಷ ಅಲೂಮ್ನಿ ಅವಾರ್ಡ್‌ನ್ನು ಕೇಂದ್ರ ಸಚಿವ ಸದಾನಂದ ಗೌಡ, ಹೆಬ್ಬಾಳ ಶಾಸಕ ನಾರಾಯಣ ಸ್ವಾಮಿ, ಉಪ ಕುಲಪತಿ ಶಿವಣ್ಣ ಹಾಗೂ ಮಾಜಿ ಉಪಕುಲಪತಿ ನಾರಾಯಣ ಗೌಡ ಅವರು ನೀಡಿ, ಗೌರವಿಸಿದ್ದಾರೆ. ಕೆನರಾ ಬ್ಯಾಂಕ್‌ನ ಬೆಂಗಳೂರು ಕೇಂದ್ರ ಕಚೇರಿಯ ಜನರಲ್ ಮ್ಯಾನೇಜರ್ ಆಗಿರುವ ರವೀಂದ್ರ ಭಂಡಾರಿ ಅವರು ಮೂಲತ ಕುಂದಾಪುರ ತಾಲೂಕಿನ ಹಾಲಾಡಿಯ ಜಿ. ರಾಜೀವ ಭಂಡಾರಿ ಹಾಗೂ ರುಕ್ಮೀಣಿ ಭಂಡಾರಿ ದಂಪತಿಗಳ ಪತ್ರರಾಗಿದ್ದಾರೆ. ಅಗ್ರಿಕಲ್ಚರಲ್ಲಿ ಬಿ.ಎಸ್‌ಸಿ ಮಾಡಿರುವ ರವೀಂದ್ರ ಭಂಡಾರಿ ಅವರು ೧೯೮೨ರಲ್ಲಿ ಕೆನರಾ ಬ್ಯಾಂಕಿಗೆ ಅಗ್ರಿಕಲ್ಚರಲ್ ಅಽಕಾರಿಯಾಗಿ ಸೇರ್ಪಡೆಗೊಂಡರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಶಿರೂರು: ಶಿರೂರು ಪೇಟೆಯ ನಿವಾಸಿ ದಲಿತ ಮುಖಂಡ ದಿನೇಶ್ ಕುಮಾರ್ ಅವರ ಮನೆಯಲ್ಲಿ ಜಿಜೆಪಿ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಡಾ. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ, ಸಾಮಾಜಿಕ ಸಾಮರಸ್ಯ ದಿನ ಹಾಗೂ ಸಹಭೋಜನ ನಡೆಯಿತು. ಗೋಪಾಲಕೃಷ್ಣ ಶಿರೂರು ಮಾತನಾಡಿ, ನಮ್ಮ ದೇಶಕ್ಕೆ ವಿಶ್ವವೇ ಮೆಚ್ಚುವ ರೀತಿಯಲ್ಲಿ ಅಸಾಮಾನ್ಯ ದೂರದೃಷ್ಠಿತ್ವದಿಂದ ಕಾನೂನಾತ್ಮಕ ಚೌಕಟ್ಟಿನಿಂದ ಕೂಡಿದ ಸಂವಿಧಾನವನ್ನು ನೀಡಿದ ಅಂಬೇಡ್ಕರ್ ಅವರ ಆದರ್ಶಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿವರೆಗೂ ತಲುಪಿಸಿ ಜನಜಾಗೃತಿ ಮೂಡಿಸಬೇಕು. ಅಸಮಾನತೆಗಾಗಿ ಸಮರ ಸಾಧಿಸದೇ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ತೊಡಗಿಸಿಕೊಂಡ ಅಂಬೇಡ್ಕರ್ ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲಾ ವರ್ಗದವರಿಗೂ ಮಾದರಿಯಾಗಿದ್ದಾರೆ. ಎಲ್ಲಾ ಸಂಘಟನೆಗಳಲ್ಲಿ ವಿಕಟನೆಯಿಂದ ಸ್ವಲ್ಪ ಮಟ್ಟಿನ ಭಿನ್ನಾಭಿಪ್ರಾಯಗಳಿದ್ದರೂ ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಒಗ್ಗಟ್ಟಿನಿಂದ ಬಾಳಬೇಕು ಸಾಮಾಜಿಕ ಸಾಮರಸ್ಯವೇ ನಮ್ಮ ಜೀವವಾಗಿರಬೇಕು ಎಂದರು. ನಂತರ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೭೦ ವರ್ಷಗಳು ಕಳೆದುಹೋಗಿದೆ. ಈಗಿನ ಕಾಲ ಬದಲಾಗಿದ್ದು,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಂಸ್ಕೃತಿಕ ಜಗತ್ತನ್ನು ೬೪ ಕಲೆಗಳು ಶ್ರೀಮಂತಗೊಳಿಸಿದಂತೆ ಜನಪದ, ಗ್ರಾಮೀಣ ಕಲೆಗಳಲ್ಲಿ ಒಂದಾದ ಯಕ್ಷಗಾನ ಗೊಂಬೆಯಾಟದ ತವರೂರು ಉಪ್ಪಿನಕುದ್ರುವಿನ್ನು ಸಾಂಸ್ಕೃತಿಕವಾಗಿ ಶ್ರೀಮಂತಗೊಳಿಸಿದೆ. ಅಂತಹ ಗೊಂಬೆಮನೆಯಲ್ಲಿ ನಟರಾಜನ ಸ್ಥಾಪನೆಯಾಗಿರುವುದು ಸಂತಸದ ಸಂಗತಿ. ಸುದೀರ್ಘ ಇತಿಹಾಸ ಹೊಂದಿರುವ ಕಲೆ ಇನ್ನಷ್ಟು ಸಮೃದ್ಧಗೊಳ್ಳಲಿ ಎಂದು ಸಿಂಡಿಕೇಟ್ ಬ್ಯಾಂಕ್‌ನ ಫೀಲ್ಡ್ ಜನರಲ್ ಮೆನೇಜರ್ ಸತೀಶ್ ಕಾಮತ್ ಹೇಳಿದರು. ಅವರು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ನಟರಾಜ ವಿಗ್ರಹದ ಅನಾವರಣ ಮಾಡಿ ಶುಭಹಾರೈಸಿದರು. ಪರಂಪರಾಗತವಾಗಿ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಅದರ ಹಿಂದಿನ ಕಲಾವಿದರ, ಯಜಮಾನನ ಪರಿಶ್ರಮ ಅಪರಿಮಿತವಾದುದು. ಭಾಸ್ಕರ ಕೊಗ್ಗ ಕಾಮತ್‌ರು ಯಕ್ಷಗಾನ ಗೊಂಬೆಯಾಟ ಬೆಳವಣಿಗೆಗೆ ತಮ್ಮನ್ನು ಮುಡಿಪಾಗಿಸಿಕೊಂಡು ಸಾಗುತ್ತಿರುವ ಕಾರ್ಯ ಅಭಿನಂದನೀಯ. ಇಂತಹ ಕಲೆಯನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಿದಾಗ ಯಕ್ಷಗಾನ ಗೊಂಬೆಯಾಟ ಅಕಾಡೆಮಿ ಬೆಳಗಲು ಸಾಧ್ಯ ಎಂದು ನುಡಿದರು. ತಿಂಗಳ ಕಾರ್ಯಕ್ರಮದ ಅಂಗವಾಗಿ ಏಕವ್ಯಕ್ತಿ ಯಕ್ಷಗಾನ ಪ್ರದರ್ಶನವನ್ನು ಪ್ರಾಯೋಜಿಸಿದ ಸುರೇಶ್ ಕಾರಂತ್ ಉಪ್ಪಿನಕುದ್ರು ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಿಂಡಿಕೇಟ್ ಬ್ಯಾಂಕ್‌ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ನೆಲಮಂಗಲದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಟೆನ್ನಿಕಾಯ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮೊಹಮ್ಮದ್ ಯಾಸಿರ್ ಉತ್ತಮ ನಿರ್ವಹಣೆ ತೋರಿ ತಮಿಳುನಾಡಿನ ಧರ್ಮಪುರಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಟೆನ್ನಿಕಾಯ್ಟ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುತ್ತಾನೆ. ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ತರಬೇತಿ ನೀಡಿದ್ದರು. ಸರಸ್ವತಿ ವಿದ್ಯಾಲಯ ಬಳಗ ಯಾಸಿರ್ ಸಾಧನೆಯನ್ನು ಅಭಿನಂದಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನ ರಾಜ್ಯ ಸರಕಾರಿ ನೌಕರರ ಸಂಘವು ಬೆಂಗಳೂರಿನ ಕಬ್ಬನ್ ಉದ್ಯಾನವನದಲ್ಲಿ ಆಯೋಜಿಸಿದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕುಂದಾಪುರದ ಚಿಕ್ಕನ್‌ಸಾಲ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರತ್ನ ಅವರಿಗೆ ಪ್ರತಿಭಾನ್ವಿತ ಲೇಖಕಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಗುರುತಿಸಿ ಸಾಹಿತ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಷ್ಟ ಬಂದಾಗ ಮೊದಲು ನೆನಪಿಗೆ ಬರುವುದು ತಾಯಿ, ತಾಯಿ ಪ್ರೀತಿ ಮತ್ತು ವಾತ್ಸಲ್ಯದ ಸಾಕಾರಮೂರ್ತಿಯಾಗಿದ್ದು, ಈ ಸ್ಥಾನ ಬೇರೆ ಯಾರಿಗೂ ನೀಡಲು ಸಾಧ್ಯವಿಲ್ಲ. ಮಹಾತಾಯಿ ಸ್ಮರಣೆ ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯ ಎಂದು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿ ಹೇಳಿದರು. ಮಹಾಕಾಳಿ ದೇವರ ಪ್ರತಿಷ್ಠಾ ರಜತಮಹೋತ್ಸವದ ನಿಮಿತ್ತ ನಡೆದ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅಷ್ಟೋತ್ತರ ಸಹಸ್ರ ಬ್ರಹ್ಮಕುಂಭಾಭಿಷೇಕ ಮತ್ತು ಶತ ಚಂಡಿಕಾಯಾಗ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಮಾತನಾಡಿದರು. ನಮ್ಮ ಗುರುಗಳು ಇಲ್ಲಿ ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಿದ್ದರು. ನಾನು ಕುಂಭಾಭಿಷೇಕ ನೆರವೇರಿಸಿದ್ದೇನೆ. ಪ್ರಸ್ತುತ ನಮ್ಮ ಶಿಷ್ಯರಿಂದ ಸಹಸ್ರ ಕುಂಭಾಭಿಷೇಕ ನೆರವೇರುತ್ತಾ ಇರುವುದು ವಿಶೇಷವಾಗಿದೆ. ಹೀಗೆ ಮೂರು ಮಂದಿ ಜಗದ್ಗುರುಗಳು ಈ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಗಳಲ್ಲಿ ಪಾಲ್ಗೊಂಡಿರುವುದು ಒಂದು ಭಾಗ್ಯ ಎಂದು ಹೇಳಿದರು. ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿ ಅವರ ದಿವ್ಯ ಉಪಸ್ಥಿತಿಯಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ…

Read More