Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಸಾಲಿಗ್ರಾಮ: ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ, ಗುಂಡ್ಮಿ ಚಿತ್ರಪಾಡಿ ಹಾಗೂ ಪಾರಂಪಳ್ಳಿ ಗ್ರಾಮಗಳ ಬಡನಿವೇಶನ ರಹಿತರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ತಾಲೂಕು ಸಮಿತಿ ನೇತೃತ್ವದಲ್ಲಿ ಮನೆ, ನಿವೇಶನ ಹಕ್ಕು ಪತ್ರ ಕೋರಿ ಸಲಿಸಿದ ಅರ್ಜಿಯನ್ನು ಕೂಡಲೇ ವಿಲೇವಾರಿ ಮಾಡಬೇಕು. ಎಂದು ಒತ್ತಾಯಿಸಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಛೇರಿ ಎದುರು ಬೃಹತ್ ಪ್ರತಿಭಟನಾ ಮುಷ್ಕರ ಮಾಡಿದರು. ಮನೆ, ನಿವೇಶನ ರಹಿತ ಅರ್ಜಿದಾರರು ಪ್ರತಿಭಟನಾ ಮುಷ್ಕರ ಹೋರಾಟದ ಪೂರ್ವದಲ್ಲಿ ಸಾಲಿಗ್ರಾಮದ ಗಣೇಶ ಕೃಪಾ ಸಭಾಭವನದಲ್ಲಿ ಜರಗಿದ ನಿವೇಶನ ರಹಿತ ಅರ್ಜಿದಾರರ ಬೃಹತ್ ಸಮಾವೇಶದಲ್ಲಿ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ಪ್ರಾಸ್ತಾವಿಕ ಭಾಷಣ ಮಾಡುತ್ತಾ- ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ೪ ಗ್ರಾಮಗಳ ಮನೆ, ನಿವೇಶನ ರಹಿತರು ಭೂಮಿ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಸಲ್ಲಿಸಿದ ೮೩೮ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ, ನಿವೇಶನ ರಹಿತರ ಅಂತಿಮ ಪಟ್ಟಿ ೩ ತಿಂಗಳ…

Read More

ಕುಂದಾಪ್ರ ಡಾಟ್ ಕಾಂಸುದ್ದಿ. ಬೈಂದೂರು: ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯತ್ತಿನಲ್ಲಿ ಹಣಕಾಸಿನ ವಿಚಾರದಲ್ಲಿ ಎಡವದಂತೆ ಮಾರ್ಗದರ್ಶನ ಪಡೆಯುವುದು ಅಗತ್ಯವೆಂದು ನಿಟ್ಟೆ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ನ ಪ್ರಾಧ್ಯಾಪಕ ರಾಧಾಕೃಷ್ಣ ಶರ್ಮಾ ಹೇಳಿದರು. ಅವರು ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ’ಹಣಕಾಸು ಉಳಿಕೆ ಹಾಗೂ ಹೂಡಿಕೆ’ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥಡಾ. ಉಮೇಶ ಮಯ್ಯ ಇವರು ಸಂಯೋಜಿಸಿ ಸ್ವಾಗತಿಸಿದರು. ಅಂತಿಮ ಬಿ.ಕಾಂ ತರಗತಿಯ ಕಿರಣ್ ಧನ್ಯವಾದಗೈದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ತೊಡಗಿಸಿದ ಸಮಯ ನಮ್ಮ ಜೀವನವಿಡಿ ನಮ್ಮ ಜೊತೆ ಬರುತ್ತದೆ. ವಿದ್ಯೆಯೆಂಬ ಧನವನ್ನು ಯಾರಿದಂಲೂ ಕದಿಯಲು ಸಾಧ್ಯವಿಲ್ಲ. ವಿದ್ಯೆಯನ್ನು ಹಂಚಿದಷ್ಟು ಕಡಿಮೆಯಾಗುದಿಲ್ಲ. ಶಾಲೆಗಳಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಅವರನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗಬೇಕು, ವಿದ್ಯಾರ್ಥಿಗಳು ತಪ್ಪಿದಾಗ ಬುದ್ಧಿಹೇಳಿ ತಿದ್ದಬೇಕು. ವಿದ್ಯಾಭ್ಯಾಸದಲ್ಲಿ ಮಾನವೀಯ ಗುಣಗಳನ್ನು ಸದ್ಭುದ್ಧಿಗಳ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ಮಾಡುವುದರಲ್ಲಿ ಅಧ್ಯಾಪಕರ ಪಾತ್ರ ಹಿರಿದು ಎಂದು ದುಬೈನ ಕೊಂಚಾಡಿ ಸಬಿತಾ ಗಣಪತಿ ಶೆಣೈ ಹೇಳಿದರು. ಅವರು ಕುಂದಾಪುರ ತಾಲೂಕಿನ ಬೈಂದೂರು ವಲಯದ ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಂಚಾಡಿ ರಾಧಾ ಶೆಣೈ ಮತ್ತು ಕೊಂಚಾಡಿ ಗೋಪಾಲಕೃಷ್ಣ ಶೆಣೈ ಸ್ಮರಣಾರ್ಥ ಕೊಂಚಾಡಿ ರಾಧಾ ಗೋಪಿ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರು ಕೊಡುಗೆಯಾಗಿ ನೀಡಿರುವ ಸುಮಾರು ೧೬.೮೦ ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ವಿದ್ಯೆಯಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘಕ್ಕೆ ಜಿಲ್ಲಾ ಮಟ್ಟದಲ್ಲಿ ಈ ಬಾರಿ 2 ಪ್ರಶಸ್ತಿಗಳು ಲಭಿಸಿದೆ. ಲೆಕ್ಕಪರಿಶೋಧನಾ ಎ ವರ್ಗದ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ 3 ಆಯ್ದ ಸಹಕಾರಿ ಸಂಘಗಳ ಪೈಕಿ ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘವು ಒಂದಾಗಿದೆ. ಅದೇ ರೀತಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಮ್.ಎನ್. ರಾಜೇಂದ್ರಕುಮಾರ್ ಇವರು ಸಂಘದ ಅಧ್ಯಕ್ಷರಾದ ಪ್ರಕಾಶಚಂದ್ರ ಶೆಟ್ಟಿ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ ಪೈ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಬಿ. ರಘುರಾಮ ಶೆಟ್ಟಿ, ಮೋಹನ ಪೂಜಾರಿ, ಗುರುರಾಜ್ ಹೆಬ್ಬಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಅಶೋಕ ಶೆಟ್ಟಿ, ವಲಯ ಮೇಲ್ವಿಚಾರಕ ಶಿವರಾಮ ಪೂಜಾರಿ, ವ್ಯವಸ್ಥಾಪಕರಾದ ಹಾವಳಿ ಬಿಲ್ಲವ ಮುಂತಾದವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಇಲ್ಲಿಯ ವಿದ್ಯಾರ್ಥಿಗಳು ಸ. ಹಿ. ಪ್ರಾ. ಶಾಲೆ ಮರವಂತೆಯಲ್ಲಿ ನಡೆದ ಹೋಬಳಿ ಮಟ್ಟದ ಪ್ರಾಥಮಿಕ ವಿಭಾಗದ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಈ ವಿದ್ಯಾರ್ಥಿಗಳಿಗೆ ಶಾಲಾ ಸಂಸ್ಥಾಪಕರಾದ ಎನ್. ಕೆ. ಬಿಲ್ಲವ, ಆಡಳಿತ ಮಂಡಳಿಯವರಾದ ಬಿ.ಎ.ರಝಾಕ್, ಮುಖ್ಯೋಪಾಧ್ಯಾಯರಾದ ಪ್ರವೀಣ್ ಕುಮಾರ್ ಕೆ.ಪಿ., ದೈಹಿಕ ಶಿಕ್ಷಕರುಗಳಾದ ಕಿರಣ್ ಗೌಡ ಮತ್ತು ಗೋವಿಂದರಾಜು ಹಾಗೂ ಶಾಲಾ ಶಿಕ್ಷಕರುಗಳು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಸ್ಟಾಪ್ ಕ್ಲಬ್‌ನವರು ಶಿಕ್ಷಕರ ದಿನಾಚರಣೆಯನ್ನು ಆಚರಿಸಿಕೊಂಡು ಬರುತ್ತಿದ್ದು ಇದೀಗ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವು ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಶಿಕ್ಷಕರನ್ನು ಗೌರವಿಸಿ, ಪ್ರತಿಭೆ ಪುರಸ್ಕಾರಕ್ಕೆ ಅವಕಾಶ ಕಲ್ಪಿಸುತ್ತಿರುವುದು ಅರ್ಥಪೂರ್ಣವಾಗಿದೆ ಹಳೆ ವಿದ್ಯಾರ್ಥಿ ಸಂಘದ ಕಾರ್ಯ ಶ್ಲಾಘನೀಯ ಎಂದು ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ಹೇಳಿದರು ಅವರು ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಶಿಕ್ಷಕರ ಪ್ರತಿಭಾ ಸ್ಪರ್ಧೆ ಮತ್ತು ಮನೋರಂಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಂಡಾರ್‌ಕಾರ‍್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ. ಎಂ.ಗೋಂಡ, ಹಳೆ ವಿದ್ಯಾರ್ಥಿ ಸಂಘದ ಪೂರ್ವಾಧ್ಯಕ್ಷರಾದ ಮಡಾಮಕ್ಕಿ ಶಶಿಧರ ಶೆಟ್ಟಿ, ರಾಘವೇಂದ್ರ ಚರಣ ನಾವಡ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶಿಕ್ಷಕರ ಬಗೆಗಿನ ಗೌರವ ಮತ್ತು ಪ್ರೀತಿ ಕೇವಲ ತೋರಿಕೆ ಮತ್ತು ತಾತ್ಕಾಲಿಕವಾಗಿರಬಾರದು. ವಿದ್ಯಾರ್ಥಿಗಳು ನಿಜವಾದ ಗೌರವವನ್ನು ಬೆಳೆಸಿಕೊಳ್ಳಬೇಕು.ಶಿಕ್ಷಕರು ಕೂಡ ಗೌರವದ ವ್ಯಕ್ತಿತ್ವವನ್ನು ತಮ್ಮದಾಗಿಸಿಕೊಳ್ಳಬೇಕು ಎಂದು ರಸಾಯನ ಶಾಸ್ತ್ರ ಪ್ರಾಧ್ಯಾಪಕ ಆರ್ ಎನ್ ರೇವಣ್‌ಕರ್ ಹೇಳಿದರು. ಅವರು ಇತ್ತೀಚೆಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು. ಶಿಸ್ತುಬದ್ಧತೆ ಎನ್ನುವುದು ಎಲ್ಲರಲ್ಲೂ ಅಗತ್ಯ.ಉತ್ತಮ ಜೀವನಕ್ಕೆ ಗುರುವಿನ ಅಗತ್ಯತೆ ಇದೆ ಎಂದು ಅವರು ಹೇಳಿದರು. ಪ್ರಾಂಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು. ಎಲ್ಲಾ ಉಪನ್ಯಾಸಕರು ಉಪಸ್ಥಿರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ನಾರಾಯಣ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಾಗರಾಜ ನಾಯಕ್ ಸ್ವಾಗತಿಸಿದರು. ಅಶ್ಮಿತಾ ಮತ್ತು ಸುಪ್ರೀತ ಪ್ರಾರ್ಥಿಸಿದರು.ಸ್ವಾತಿ ಬಿಲ್ಲವ ಕಾರ‍್ಯಕ್ರಮ ನಿರ್ವಹಿಸಿದರು. ಸಾಯೀ ಪ್ರಸಾದ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಶೈಕ್ಷಣಿಕ ಕ್ಷೇತ್ರ ವ್ಯಾಪ್ತಿಯ ಶಿಕ್ಷಕರ ದಿನಾಚರಣೆಯು ಸೋಮವಾರ ಇಲ್ಲಿನ ರೋಟರಿ ಸಮುದಾಯ ಭವನದಲ್ಲಿ ನಡೆಯಿತು. ಶಾಸಕ ಕೆ. ಗೋಪಾಲ ಪೂಜಾರಿ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕ್ಷಕ ದಿನ ದೇಶದ ಅಪ್ರತಿಮ ತತ್ವವೇತ್ತ ಡಾ. ಎಸ್. ರಾಧಾಕೃಷ್ಣನ್ ಅವರ ಬದುಕು, ಸಾಧನೆ ಮತ್ತು ವಿಚಾರಗಳನ್ನು ಮನನ ಮಾಡಬೇಕಾದ ದಿನ. ಅವರು ರಾಷ್ಟ್ರದ ಗುರು ಸ್ಥಾನದಲ್ಲಿರುವವರು. ಶಿಕ್ಷಕರು ಅವರ ಆದರ್ಶಗಳನ್ನು ಅನುಸರಿಸುವ ಮೂಲಕ ಸಮಾಜ ರೂಪಿಸುವ ತಮ್ಮ ಕೆಲಸ ನಿರ್ವಹಿಸಬೇಕು ಎಂದರು. ಉಡುಪಿ ಜಿಲ್ಲೆಯ ಉತ್ಕೃಷ್ಟ ಶೈಕ್ಷಣಿಕ ಸಾಧನೆಯ ಹಿಂದೆ ಎಲ್ಲ ಶಿಕ್ಷಕರ ಪ್ರಾಮಾಣಿಕ ದುಡಿಮೆ, ಶ್ರಮ ಇದೆ. ಅವರಿಂದಾಗಿ ಜಿಲ್ಲೆಯ ಜನರಿಗೆ, ಜನಪ್ರತಿನಿಧಿಗಳಿಗೆ ಗೌರವ ಬಂದಿದೆ. ಇಲ್ಲಿನ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಸದಾ ಸ್ಪಂದಿಸಲಾಗಿದೆ. ಸುಗಮ ಶೈಕ್ಷಣಿಕ ಆಡಳಿತದ ಉದ್ದೇಶದಿಂದ ವಂಡ್ಸೆ ಕೇಂದ್ರಿತವಾಗಿ ಕ್ಷೇತ್ರ ಶಿಕ್ಷಣ ಕಚೇರಿ ತೆರೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಅವರು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್ ಸ್ವಾಗತಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬಾರ್ಕೂರು: ಸ್ವರ್ಗಕ್ಕೆ ಸಮನಾದದು ಎನಾದರೂ ಇದ್ದರೆ ಅದು ನಮ್ಮ ತುಳುನಾಡು ಎನ್ನಬಹುದು. ಪ್ರಪಂಚದ ಯಾವುದೇ ಮೂಲೆಗೆ ಹೋದರು ಕೂಡ ಇಲ್ಲಿರುವಷ್ಟು ಸಂಸ್ಕೃತಿ ಸಂಸ್ಕಾರರ ಸಮ್ಮಿಲನ ಬೇರೆಲ್ಲೂ ಕಾಣಲು ಸಿಗುವುದಿಲ್ಲ. ಸುಸಂಸ್ಕೃತರ ಸಮ್ಮಿಳಿತವಾಗಿರುವ ಈ ಭಾಗಕ್ಕೆ ಕಲ್ಚರಲ್ ಲ್ಯಾಂಡ್ ಎಂದು ಕರೆದರೆ ಅತಿಶಯೋಕ್ತಿ ಅಲ್ಲ ಎಂದು ಶ್ರೀಮತ್ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತಿ ಮೀಠಾಧೀಶ್ವರ ಅಷ್ಟೋತ್ರ ಶತಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿ ಹೇಳಿದರು. ಅವರು ಬಾರ್ಕೂರು ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ, ಕಾಸರಗೋಡು ಬದಿಯಡ್ಕದಲ್ಲಿ ಡಿಸೆಂಬರ್ ೯ರಿಂದ ೧೩ರವರೆಗೆ ನಡೆಯಲಿರುವ ವಿಶ್ವ ತುಳುವೆರೆ ಆಯನೋ ೨೦೧೬ರ ರಥ ಯಾತ್ರೆಗೆ ಆರತಿ ಬೆಳಗಿ ಚಾಲನೆ ನೀಡಿ ಮಾತನಾಡಿದರು. ನಮ್ಮಲ್ಲಿ ಇಂದಿಗೂ ಕೂಡ ಕೃಷಿ ಮತ್ತು ಋಷಿ ಸಂಸ್ಕೃತಿಯನ್ನು ಕಾಣಬಹುದು. ನಮ್ಮ ನೆಲ, ಜಲ ಮತ್ತು ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನ ಬೇಕು, ಇಂದು ಆ ಅಭಿಮಾನಿದ ಕೊರತೆ ಕಾಣುತ್ತಿದೆ. ಇದನ್ನು ನಿಗಿಸುವ ನಿಟ್ಟಿನಲ್ಲಿ ಸಂಘಟಕ ಆಯೋಜಿಸಿರುವ ಸಮ್ಮೇಳನ ಯಶಸ್ವಿಯಾಗಲಿ…

Read More

ಕುಂದಾಪ್ರ ಡಾಟ್ ಕಾಮ ಸುದ್ದಿ. ಗಂಗೊಳ್ಳಿ: ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕಿದೆ. ಇಂದಿನ ದಿನಗಳಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಮಾಹಿತಿ ಅವಶ್ಯವಿದ್ದು, ವಿವಿಧ ಸಂಘ ಸಂಸ್ಥೆಗಳು ಆರೋಗ್ಯ ಮಾಹಿತಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕಿದೆ. ಮನೆಯ ವಠಾರದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದರ ಮೂಲಕ ಮತ್ತು ಆರೋಗ್ಯ ತಪಾಸಣೆ ನಡೆಸಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಿದೆ ಎಂದರು ಜನಜಾಗೃತಿ ವೇದಿಕೆಯ ತ್ರಾಸಿ ವಲಯದ ನಿಕಟಪೂರ್ವ ಅಧ್ಯಕ್ಷ ಬಿ.ರಾಘವೇಂದ್ರ ಪೈ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ವೀರೇಶ್ವರ ಮಾಂಗಲ್ಯ ಮಂದಿರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಗಂಗೊಳ್ಳಿಯ ಪಂಚಗಂಗಾವಳಿ ಒಕ್ಕೂಟದ ಆಶ್ರಯದಲ್ಲಿ ಜರುಗಿದ ಸಾಮಾನ್ಯ ಆರೋಗ್ಯ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪಂಚಗಂಗಾವಳಿ ಒಕ್ಕೂಟದ ಅಧ್ಯಕ್ಷ ಎಚ್.ಎಂ. ಕೃಷ್ಣ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಲಾಶ್ರೀ ಜಿ.ಪಿ. ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರತಿಮಾ…

Read More