Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿಯನ್ನು ಹತ್ಯೆಗೈದಿರುವುದನ್ನು ಖಂಡಿಸಿ, ಉಭಯ ಕರಾವಳಿ ಜಿಲ್ಲೆಗಳಲ್ಲಿ ಗೋರಕ್ಷರ ಹೆಸರಿನಲ್ಲಿ ನೈತಿಕ ಪೊಲೀಸ್‌ಗಿರಿಗೆ ಮುಂದಾಗುವವರನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಡಿವೈಎಫ್‌ಐ ಕುಂದಾಪುರ ತಾಲೂಕು ಸಮಿತಿ ಇಲ್ಲಿನ ಶಾಸ್ತ್ರೀ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಡಿವೈಎಫ್ ಮಾಜಿ ಮುಖಂಡ ಎಚ್. ನರಸಿಂಹ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಡಿವೈಎಫ್‌ಐ ತಾಲೂಕು ಅಧ್ಯಕ್ಷ ಸಂತೋಷ ಹೆಮ್ಮಾಡಿ, ಉಪಾಧ್ಯಕ್ಷ ಸುರೇಶ್ ಕಲಾಗರ್, ರವಿ.ವಿ.ಎಂ, ರಾಜಾ ಬಿ.ಟಿ.ಆರ್, ಅಕ್ಷಯ ವಡೇರಹೋಬಳಿ, ಗಣೇಶ್ ಕಲ್ಲಾಗರ, ಅಶೋಕ ಹಟ್ಟಿಯಂಗಡಿ, ಸತೀಶ ತೆಕ್ಕಟ್ಟೆ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲೊಂದಾದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಎರಡು ಬಾರಿ ಕಳ್ಳತನ ನಡೆದು ಒಂದು ವರ್ಷವಾಗಿದ್ದರೂ ಕಳ್ಳರ ಪತ್ತೆಹಚ್ಚಲು ಪೊಲೀಸರು ವಿಫಲವಾಗಿದ್ದಾರೆ. ತನಿಖೆ ಚುರುಕುಗೊಳಿಸಿ ಆರೋಪಿಗಳ ತಕ್ಷಣ ಪತ್ತೆಹಚ್ಚಬೇಕು ಎಂದು ಸೌಕೂರು ದೇವಸ್ಥಾನ ಭಕ್ತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕುಂದಾಪುರದ ಡಿವೈಎಸ್ಪಿ ಕಛೇರಿಯಲ್ಲಿ ಡಿವೈಎಸ್ಪಿ ಪ್ರವೀಣ್ ನಾಯ್ಕ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿ ಮಾತನಾಡಿದ ಸೌಕೂರು ಶ್ರೀ ದುರ್ಗಾಪರಮೇಶ್ವರಿ ಮೇಳ ಮಾಲೀಕ ಕಿಶನ್ ಹೆಗ್ಡೆ ಮಾತನಾಡಿ ಒಂದೇ ದೇವಸ್ಥಾನದಲ್ಲಿ ಎರಡು ಭಾರಿ ಕಳ್ಳತನ ನಡೆದಿದ್ದು, ಒಂದು ಬಾರಿ ವ್ಯಕ್ತಿಯ ಚಹರೆ ಗುರುತು ಸಿಸಿ ಕ್ಯಾಮೆರಾದಲ್ಲಿ ಕಾಣಿಸಿದ್ದರೂ ಕೂಡ ಇಲಾಖೆ ಕಳ್ಳರನ್ನು ಹಿಡಿಯಲು ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ನಮ್ಮಲ್ಲಿದೆ. ಈ ಮೊದಲು ತನಿಖೆ ಕೈಗೆತ್ತಿಕೊಂಡ ಎಸ್ಪಿ ಡಿವೈಎಸ್ಪಿ ಹಾಗೂ ಡಿಸಿ ಬದಲಾವಣೆಗೊಂಡಿದ್ದಾರೆ. ಆದ್ದರಿಂದ ಮತ್ತೊಮ್ಮೆ ಪೊಲೀಸ್ ಇಲಾಖೆ ಎಚ್ಚರಿಸುವಗ ಸಲುವಾಗಿ ಡಿವೈಎಸ್ಪಿಗೆ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಸೌಕೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೋಣಿ ಹೆಚ್‌ಎಂಟಿ ಪ್ರೆಂಡ್ಸ್ ವತಿಯಿಂದ ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಸ್ವಾತಂತ್ರ್ಯೋತ್ಸವದ ಅಂಗವಾಗಿ ನೂತನ ಧ್ವಜಸ್ತಂಭ, ಕುಡಿಯುವ ನೀರಿನ ಟ್ಯಾಂಕ್, ಕುಕ್ಕರ್ ಹಾಗೂ ಅಗತ್ಯ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಯಿತು. ನಿವೃತ್ತ ಮುಖ್ಯೋಪಾಧ್ಯಾಯ ಎನ್.ಕೆ.ಹೆಬ್ಬಾರ್ ಕೋಣಿ, ಶಾಲಾ ಶಿಕ್ಷಕಿ ಗುಲಾಬಿ ಸಹಾಯಕಿ ಯರುನಿಕಾ ಡಿ.ಸೋಜ ಹಾಗೂ ಹೆಚ್‌ಎಂಟಿ ಫ್ರೆಂಡ್ಸ್ ತಂಡದ ಸದಸ್ಯರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಮನುಕುಲದ ಏಳಿಗೆಗೆ ಕೊಡುಗೆ ನೀಡುತ್ತಿರುವ ರೋಟರಿಯ ಸೇವಾಕಾರ್ಯ ಅನನ್ಯವಾಗಿದೆ. ಪ್ರತಿಯೊಂದು ಯುಗದಲ್ಲಿಯೂ ಅಸಮತೋಲನ ಸೃಷ್ಠಿಯಾದಾಗ ಭಗವಂತ ಅವತರಿಸಿ ಲೋಕದಲ್ಲಿ ಶಾಂತಿ ನೆಮ್ಮದಿ ಸಮೃದ್ಧಿಯನ್ನು ನೆಲೆಗೊಳಿಸಿದ್ದಾನೆ ಅದರಂತೆ ಈ ಕಾಲ ಮಾನದಲ್ಲಿ ರೋಟರಿ ಜಗದಗಲ ಹಬ್ಬಿ ಮಾನವೀಯ ಸೇವೆಯಲ್ಲಿ ತೊಡಗಿ ಶಾಂತಿಗಾಗಿ ಶ್ರಮಿಸುತ್ತಿದೆ ಎಂದು ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ ಎ. ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮನುಕುಲದ ಸೇವೆಯಲ್ಲಿ ರೋಟರಿ ಕುರಿತು ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ವಿಪ್ಲವ್ ರಾವ್ ಅವರನ್ನು ೧೦೦ನೇ ಸದಸ್ಯರನ್ನಾಗಿ ಸೇರ್ಪಡೆಗೊಳಿಸಲಾಯಿತು. ಕಾರ್ಯದರ್ಶಿ ಸಾಲಗದ್ದೆ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು. ಸದಸ್ಯರಾದ ಕೆ.ಸಿ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಯುವಜನ ಸೇವೆ ನಿರ್ದೇಶಕ ರವಿರಾಜ್ ಶೆಟ್ಟಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಲ್ಲಿ ಪ್ರಪ್ರಥಮ ಭಾರಿಗೆ ೪ಜಿ ನೆಟ್‌ವರ್ಕ್ ಸೇವೆ ಕಲ್ಪಿಸಿದ ಖ್ಯಾತಿ ಹೊಂದಿರುವ ಐಡಿಯಾ ನೆಟ್‌ವರ್ಕ್, ತಮ್ಮ ಸೇವೆಗಾಗಿ ಕುಂದಾಪುರದ ಮುಖ್ಯರಸ್ತೆಯ ಪಾರಿಜಾತ ಸರ್ಕಲ್ ಬಳಿ ಸಿಎಸ್‌ಐ ಕಾಂಪ್ಲೆಕ್ಸ್‌ನಲ್ಲಿ ಶುಬಾರಂಭಗೊಂಡಿದೆ. ಕುಂದಾಪುರ ಠಾಣಾಧಿಕಾರಿ ನಾಸಿರ್ ಹುಸೇನ್ ಐಡಿಯಾ ಪಾಯಿಂಟ್ ಉದ್ಘಾಟಿಸಿ ಮಾತನಾಡಿ ಸಂಸ್ಥೆಯ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವಂತಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿ ಸಮಾಜ ಸೇವಕ ಅಬು ಮಹಮ್ಮದ್ ಆಗಮಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಕೀಲ ರಾಮದಾಸ್, ಐಡಿಯಾ ಸಂಸ್ಥೆಯ ಎ.ಎಸ್.ಎಮ್ ವಿನಯ್ ಶ್ರಿರಂಗ್, ಸೇಲ್ಸ್ ಮೆನೆಜರ್ ರೊಯ್ಸನ್ ಡಿಸೋಜಾ, ಐಡಿಯಾ ಪಾಯಿಂಟ್ ಮಾಲಕ ಮುಸ್ತಾಫ್ ಹಾಗೂ ಮೊಬೈಲ್ ಎಕ್ಸ್, ಮೊಬೈಲ್ ಎಕ್ಸ್ ಪ್ಯಾಲೇಸ್ ಮತ್ತು ಪೂಟ್ ಎಕ್ಸ್‌ನ ಎಲ್ಲಾ ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು. ಐಡಿಯಾ ಸಂಸ್ಥೆಯ ಟ್ರೈನರ್ ಗಂಗಾಧರ್ ಕಾಂಚನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಎಸ್. ಮದನ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಶಾಸಕ ಕೆ. ಗೋಪಾಲ ಪೂಜಾರಿ ಶಿಫಾರಸಿನಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಸಚಿವ ಡಾ. ಜಿ. ಪರಮೇಶ್ವರ್ ಆದೇಶ ಪತ್ರವನ್ನು ನೀಡಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ಜಿಎಸ್‌ಬಿ ಸಮುದಾಯದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದ ವೇ.ಮೂ. ವೇದವ್ಯಾಸ ಆಚಾರ್ಯ ಹೇಳಿದರು. ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ನಡೆದ ಕೊಲ್ಲೂರು ವಲಯ ಜಿಎಸ್‌ಬಿ ಸೇವಾ ಸಮಿತಿಯ ಮೂರನೇ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು. ಮಕ್ಕಳಿಗೆ ದೇವರು, ಧರ್ಮ, ಗುರು-ಹಿರಿಯರ ಬಗ್ಗೆ ಮನವರಿಕೆ ಮಾಡಬೇಕೆಂದ ಅವರು ನಮ್ಮ ಮಕ್ಕಳು ಶಾಲೆಯ ಶಿಕ್ಷಣದ ಜತೆಗೆ ಆಧ್ಯಾತ್ಮಿಕ, ನೈತಿಕ ಹಾಗೂ ಭೌತಿಕ ಶಿಕ್ಷಣವನ್ನು ಪಡೆಯಬೇಕು. ಸಂಜೆ ಧಾರಾವಾಹಿಗಳನ್ನು ನೋಡುವುದರ ಬದಲು ನಮ್ಮ ಹಿರಿಯರು ನಡೆಸಿಕೊಂಡು ಬಂದಂತೆ ಪ್ರತೀ ಮನೆಗಳಲ್ಲಿಯೂ ಸಂಧ್ಯಾಕಾಲದ ಭಜನೆ ಮಾಡಬೇಕು. ಮಕ್ಕಳಿಗೆ ಟೀವಿ, ಮೊಬೈಲ್ ಸಹವಾಸದಿಂದ ದೂರವಿಟ್ಟು ವ್ಯವಹಾರಿಕಾ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಕುರಿತಾದ ಅರಿವು ಮೂಡಿಸಬೇಕು ಎಂದರು. ಕೊಲ್ಲೂರು ಜಿಎಸ್‌ಬಿ ವಲಯಾಧ್ಯಕ್ಷ ಜಿ. ವೆಂಕಟೇಶ್ ನಾಯಕ್ ಅಧ್ಯಕ್ಷತೆವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಧಕರನ್ನು ಗೌರವಿಸಲಾಯಿತು. ದೇವಳದ ಆಡಳಿತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸ.ಮಾ.ಹಿ.ಪ್ರಾ. ಶಾಲೆ ಕುಂದಾಪುರ(ಗರ್ಲ್ಸ್ ಶಾಲೆ)ಯಲ್ಲಿ ೧೬ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮುಖ್ಯ ಶಿಕ್ಷಕರಾದ ಡಿ. ಲಿಂಗಪ್ಪ ದಂಪತಿಗಳನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಹಳೆ ವಿದ್ಯಾರ್ತಿ ಸಂಘದ ವತಿಯಿಂದ ಸನ್ಮಾನಿಸಿ, ಬೀಳ್ಕೂಡುಗೆ ಸಲ್ಲಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಎಸ್. ಶೆಟ್ಟಿ ನಿವೃತ್ತರನ್ನು ಸನ್ಮಾನಿಸಿ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷೆ ಕುಸುಮ ಚರಣ ಶಾನುಭಾಗ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭಾ ಅಧ್ಯಕ್ಷೆ ವಸಂತಿ ಸಾರಂಗ್, ಸದಸ್ಯರಾದ ರವಿರಾಜ ಖಾರ್ವಿ, ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ರವಿ ಟಿ. ನಾಯ್ಕ್, ಹಾಗೂ ಕಾರ್ಯಕ್ರಮ ಸಂಘಟಕರಾಗಿ ಹಳೆ ವಿದ್ಯಾರ್ಥಿ ಸಮಿತಿ ಅಧ್ಯಕ್ಷ ದಿನಕರ ಪಟೇಲ್ ಉಪಸ್ಥಿತರಿದ್ದರು. ಪ್ರಭಾರ ಮುಖ್ಯ ಶಿಕ್ಷಕಿ ಸುಮನಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿ ಸಮಿತಿ ಸದಸ್ಯ ಕಿಶೋರ್ ಪ್ರಾಸ್ತಾವಿಕ ಮಾತುಗಳನ್ನಾಡಿದ್ದು, ಶಿಕ್ಷಕಿ ವಿನಯ ಸನ್ಮಾನಿತರ ಪರಿಚಯ ಮಾಡಿದರು. ದೈ.ಶಿ. ಶಿಕ್ಷಕ ಸುನಿಲ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಠೇವಣಿ ನೀಡಿದವರಿಗೆ ಆತಂಕ, ಠೇವಣಿ ಇಟ್ಟ ಏಜಂಟರಿಗೆ ಸಂಕಟ. ಮೂರಂಕಿಯಿಂದ ಹಿಡಿದು ಆರಂಕಿಯನ್ನು ಮೀರಿದ ಠೇವಣಿಗಳು ಕುಂದಾಪುರ ಶಾಖೆಯೊಂದರಲ್ಲಿಯೇ ಸಂಗ್ರಹವಾಗಿತ್ತು. ಸಾವಿರಾರು ಮಂದಿ ವ್ಯವಹಾರ ನಡೆಸುತ್ತಿದ್ದರು. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣತೊಡಗಿಸಿ ಅದರಿಂದ ಬರುವ ಲಾಭವನ್ನು ಹೆಚ್ಚಿನ ಬಡ್ಡಿಯೊಂದಿಗೆ ಠೇವಣಿದಾರರಿಗೆ ನೀಡುತ್ತೇವೆಂಬ ಕಂಪೆನಿಯ ಆಮಿಷಕ್ಕೆ ಕಟ್ಟುಬಿದ್ದ ಜನ ಇಂದು ಮುಚ್ಚಿದ ಕಂಪೆನಿಯ ಬಾಗಿಲಿನ ಎದುರು ನಿಂತು ಹಿಡಿಶಾಪ ಹಾಕುತ್ತಿದ್ದಾರೆ. ಇಂದು ಅಗ್ರಿಗೋಲ್ಡ್ ಎಂಬ ಸಂಸ್ಥೆಯಲ್ಲಿ ಠೇವಣಿ ಇಟ್ಟವರು ಹಾಗೂ ಏಜೆಂಟರುಗಳ ಅತಂತ್ರರಾಗಿ ಹೋಗಿದ್ದಾರೆ. ಎಂಟು ವರ್ಷಗಳ ಹಿಂದೆ ಹೆಚ್ಚಿನ ಕಮೀಷನ್ ಆಧಾರದ ಮೇಲೆ ಸ್ಥಳೀಯರೆ ಆದ ಹಲವಾರು ಏಜಂಟರುಗಳನ್ನು ನೇಮಿಸಿಕೊಂಡು ಕಛೇರಿಯ ವ್ಯವಸ್ಥಾಪಕ, ಸಿಂಬಂದಿ ಗಳನ್ನು ಹೊಂದಿದ್ದ ಅಗ್ರ್ರಿಗೋಲ್ಡ್ ಆ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿಗಳನ್ನು ದಿನಂಪ್ರತಿಯೆಂಬಂತೆ ಸಂಗ್ರಹಿಸುತ್ತಿತ್ತು. ಗೃಹ ಬಳಕೆಯ ಉತ್ಪನ್ನಗಳನ್ನು ಸಹಾ ತನ್ನ ಹೆಸರಿನ ಲೇಬಲ್ ನಲ್ಲಿ ಗ್ರಾಹಕರಿಗೆ ವಿತರಿಸುವ ಮೂಲಕವೂ ಸಾವಿರಾರು ರೂಪಾಯಿಗಳ ವ್ಯವಹಾರವನ್ನು ನಡೆಸುತಿತ್ತು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಅತ್ಯುನ್ನತ ಶಿಕ್ಷಣ ಇಂದಿನ ಜೀವನದ ಪ್ರಮುಖ ಘಟ್ಟವಾಗಿದೆ. ಉತ್ತಮ ಶಿಕ್ಷಣವು ಉತ್ತಮ ಉದ್ಯೋಗವನ್ನು ನೀಡುವುದಲ್ಲದೆ ಸಮಾಜದಲ್ಲಿ ಗೌರವವನ್ನು ತಂದು ಕೊಡುತ್ತದೆ. ಗೌಡ ಸಾರಸ್ವತ ಸಮಾಜಕ್ಕೆ ಸರಕಾರದಿಂದ ಯಾವುದೇ ಮೀಸಲಾತಿ, ಸರಕಾರಿ ಸೌಲಭ್ಯಗಳು ದೊರೆಯದಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಉತ್ತಮ ಅಂಕಗಳಿಸುವತ್ತ ಗಮನಹರಿಸಬೇಕು. ಇಂದು ನೀಡಿದ ಸಹಾಯವನ್ನು ಎಂದಿಗೂ ಮರೆಯದೆ, ಇದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಬೇಕು ಎಂದು ಗಂಗೊಳ್ಳಿಯ ಶ್ರೀ ಅಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಅನಂತಕೃಷ್ಣ ಭಟ್ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾನಿಧಿ ಸಂಸ್ಥೆಯಿಂದ ಸ.ವಿ. ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿದ ವಿದ್ಯಾರ್ಥಿವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಎಸ್‌ಬಿ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದ ದಾನಿಗಳಾದ ವೈ.ರತ್ನಾ ಉಮಾಕಾಂತ ಶೆಣೈ ಅವರು, ಸಮಾಜದ ಯಾವುದೇ ವಿದ್ಯಾರ್ಥಿ ಹಣದ ಅಡಚಣೆಯಿಂದ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಬಾರದು. ಗಂಗೊಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸಮಾಜಮುಖಿ ಚಟುವಟಿಕೆಗಳು…

Read More