Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕೋಟ: ಇಲ್ಲಿನ ಡಾ. ಶಿವರಾಂ ಕಾರಂತ ಅವರ ಹೆಸರಿನಲ್ಲಿ  ನಿರ್ಮಾಣಗೊಂಡ ಡಾ. ಕೋಟ ಶಿವರಾಂ ಕಾರಂತ ಥೀಂ ಪಾರ್ಕ್ ಅಭೂತಪೂರ್ವ ಕಲ್ಪನೆಯಾಗಿದ್ದು, ಇದರ ನಿರ್ವಹಣೆ ಮಾಡುತ್ತಿರುವ ಸ್ಥಳಿಯ ಪಂಚಾಯತ್ ಕಾರ್ಯ ಅಭಿನಂದನಾರ್ಹ. ಕಾರಂತರ ಆದರ್ಶಗಳು ಎಲ್ಲೆಡೆ ಪಾಲನೆಯಾಗಬೇಕಾಗಿದೆ. ಕೋಟದ ಕಾರಂತ ಥೀಂ ಪಾರ್ಕಿಗೆ ಈ ಸಾಲಿನ ಬಜೇಟಿನಲ್ಲಿ ಬಿಡುಗಡೆಯಾದ 1 ಕೋಟಿ ರೂ.ವನ್ನು ಶೀಘ್ರ ಬಿಡುಗಡೆಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಪ್ರವಾಸೋಧ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ. ಅವರು ಬುಧವಾರ ಕೋಟದ ಕಾರಂತ ಥೀಂ ಪಾರ್ಕಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು. ಕಾರಂತ ಥೀಂ ಪಾರ್ಕಿನ ಮುಂಭಾಗದಲ್ಲಿರುವ ಡಾ. ಶಿವರಾಮ ಕಾರಂತರ ಪ್ರತಿಮೆಗೆ ಹೂ ಮಾಲೆ ಅರ್ಪಿಸಿದ ಅವರು ಥೀಂ ಪಾರ್ಕಿನ ಒಳಭಾಗದಲ್ಲಿರುವ ಗ್ರಂಥಾಲಯ, ಸಭಾಂಗಣವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕೋಟ ಅಮ್ರಥೇಶ್ವರಿ ದೇವಳಕ್ಕೆ ಭೇಟಿ: ಹಲವು ಮಕ್ಕಳ ತಾಯಿ ಎಂದೇ ಕರೆಯಲ್ಪಡುವ ಕೋಟದ ಶ್ರೀ ಅಮ್ರಥೇಶ್ವರೀ ದೇವಳಕ್ಕೆ ಭೇಟಿ ನೀಡಿದ ಸಚಿವರು ದೇವಳದಲ್ಲಿ ವಿಶೇಷ…

Read More

ಕುಂದಾಪುರ: ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಒಂದು ಸೂಪರ್ ಪವರ್ ರಾಷ್ಟ್ರವಾಗುವುದು ಖಚಿತ. ದೇಶದ ಆಸ್ತಿಯಾಗಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸನ್ನು ಕಾಣಬೇಕಿದೆ. ಯೋಗ್ಯರಾದವರು ಮಾತ್ರ ಎಲ್ಲವನ್ನೂ ಎದುರಿಸಿ ಗೌರವಯುತವಾಗಿ ಬಾಳುತ್ತಾರೆ ಎಂದು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ಹೇಳಿದರು.     ಅವರು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಥಾಕರ ದಿನಾಚರಣೆಯಂದು ಕಾಲೇಜಿನ ಸಂಸ್ಥಾಪಕ ಐ.ಎಂ. ಜಯರಾಮ ಶೆಟ್ಟಿ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಇಂದು ವಿಶ್ವ ಸಣ್ಣ ಹಳ್ಳಿಯಂತಾಗಿದೆ. ಕ್ಷಣಮಾತ್ರದಲ್ಲಿ ಜಗತ್ತಿನ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಪುಸ್ತಕದ ಹುಳುವಾಗದೇ ಸಾಮಾನ್ಯ ಜ್ಞಾನವನ್ನೂ ಹೊಂದಿ ಭಾರತ ವಿಶ್ವ ಮಾರುಕಟ್ಟೆಯೊಂದಿಗೆ ನಡೆಯುತ್ತಿರುವ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಬೇಕಿದೆ. ಇದಕ್ಕೆ ಪೂರಕವಾಗಿ ನಾವು ಕೌಶಲಾಭಿವೃದ್ಧಿಗೆ ಅಗತ್ಯವಾದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಐ.ಎಂ.ಜೆ ಫೌಂಡೇಶನ್ ಲೋಕಾರ್ಪಣೆಗೊಳಿಸಿದರು.        ಮಾಜಿ ಶಾಸಕ ಬಿ…

Read More

ಕುಂದಾಪುರ: ಅಂತೂ ಇಂತೂ ವಾರಾಹಿ ನೀರಾವರಿ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಮೂಲಕ 36 ವರ್ಷಗಳಿಂದ ಆಮೆ ನಡಿಗೆಯಂತೆ ಸಾಗಿಬಂದ ಯೋಜನೆಗೆ ಹಸಿರು ನಿಶಾನೆ ತೋರಿಸುವ ಸೂಚನೆ ದೊರೆತಿದೆ. ಯೋಜನೆಯ ಆರಂಭದ ಪ್ರದೇಶವಾದ ಹೊಳೆ ಶಂಕರನಾರಾಯಣದಲ್ಲಿರುವ ಮುಖ್ಯ ಅಣೆಕಟ್ಟಿನಿಂದ 0.36ಕಿ.ಮೀ ದೂರದವರೆಗೆ ಪ್ರಾಯೋಗಿಕವಾಗಿ ಎರಡು ದಿನದ ಹಿಂದೆ ನೀರು ಹಾಯಿಸಲಾಗಿದ್ದು ವಾರಾಹಿ ಕಾಲುವೆಯ ಕನಸು ಕಾಣುತ್ತಿದ್ದ ರೈತರಲ್ಲಿ ಹೊಸ ಹುರುಪು ಮೂಡಿದೆ. ಸಾಕಷ್ಟು ಹೋರಾಟಗಳ ಬಳಿಕ ಸುಧೀರ್ಘ ಯೋಜನೆಗೊಂದು ಅಂತ್ಯ ಹಾಡಲು ಅಂತಿಮ ಹಂತದ ಸಿದ್ಧತೆಗಳು ನಡೆದಿದ್ದು ಎಪ್ರಿಲ್ ತಿಂಗಳಿನಲ್ಲಿಯೇ ಉದ್ಘಾಟನೆಗೊಳ್ಳುವ ಲಕ್ಷಣಗಳು ಗೋಚರಿಸಿವೆ. ವಾರಾಹಿ ಯೋಜನೆ: 36 ವರ್ಷಗಳ ಕನಸು 1979ರಲ್ಲಿ ಸುಮಾರು 15,702 ಹೆಕ್ಟೆರ್‌ ಪ್ರದೇಶಕ್ಕೆ ನೀರುಣಿಸುವ ಉದ್ದೇಶದಿಂದ ಮಹತ್ವಾಕಾಂಕ್ಷೆಯ ವಾರಾಹಿ ನೀರಾವರಿ ಯೋಜನೆಯನ್ನು ಕೈಗೆತ್ತಿಗೊಳ್ಳಲಾಗಿತ್ತು. ಹೊಸಂಗಡಿ ಗ್ರಾಮದ ಹೊಳೆಶಂಕರನಾರಾಯಣದ ಮೂಲಕ ಹರಿಯುವ ವಾರಾಹಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ರೈತರ ಜಮೀನಿಗೆ ವಾರಾಹಿ ನದಿಯ ಎರಡೂ ದಿಕ್ಕಿನಲ್ಲಿ 0.42 ಕಿಮೀ ಉದ್ದದ ಬಲದಂಡೆ ಹಾಗೂ 0.36 ಕಿಮೀ…

Read More

ಪ್ರವಾಹದ ಜೊತೆ ಕೊಚ್ಚಿ ಹೋಗುವ ಬದಲು, ಪ್ರವಾಹದೊಂದಿಗೆ ಹರಿದು ಬದುಕುವುದು ಜಾಣತನ: ದುಂಡಿರಾಜ್       ಹನಿಗವನವನ್ನು ಸಾಹಿತ್ಯದ ಒಂದು ಪ್ರಕಾರ ಎಂದು ಗುರುತಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ಹನಿಗವನದಲ್ಲೇ ತನ್ನ ಸಾಹಿತ್ಯ ಕೃಷಿಯನ್ನು ಮುಂದುವರಿಸಿ ಅದಕ್ಕೊಂದು ಮಾನ್ಯತೆ ತಂದುಕೊಟ್ಟವರು ಹನಿಗವಿ ದುಂಡಿರಾಜ್. ತನ್ನ ನಾಲ್ಕೈದು ಸಾಲಿನ ಕವಿತೆಯ ಮೂಲಕ ಕೋಟ್ಯಾಂತರ ಕನ್ನಡಿಗರ ಮನಸ್ಸನ್ನು ಗೆದ್ದ ದುಂಡಿರಾಜ್ ಕುಂದಾಪುರದ ಹಟ್ಟಿಕುದ್ರಿನವರು ಎಂಬುದು ನಮ್ಮೆಲ್ಲರ ಹೆಮ್ಮೆ. ದುಂಡಿರಾಜ್ ಅವರು ಹನಿಗವಿ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಅದರೆ ಅವರು ಹವಿಗವಿಯಾಗುವುದಕ್ಕೂ ಮೊದಲು ಉತ್ತಮ ಬರಹಗಾರರಾಗಿದ್ದರು, ನೀಳ್ಗವಿತೆಗಳನ್ನು ಬರೆಯುತ್ತಿದ್ದರು, ನಾಟಕಗಳನ್ನು ರಚಿಸಿದ್ದರು ಎಂಬುದು ಬಹಳಷ್ಟು ಮಂದಿಗೆ ತಿಳಿದಿರದ ವಿಚಾರ. ಅವರು ಇತ್ತಿಚಿಗೆ ಖ್ಯಾತ ಜಾದೂಗಾರ ಓಂಗಣೇಶ್ ಉಪ್ಪುಂದ ಅವರ ಮನೆಯಲ್ಲಿ ಕುಂದಾಪ್ರ ಡಾಟ್ ಕಾಂ ಗೆ ಮಾತಿಗೆ ಸಿಕ್ಕಾಗ ತಮ್ಮ ಬದುಕು, ನಾಡು, ನುಡಿ, ಸಾಹಿತ್ಯದ ಆಗುಹೋಗುಗಳ ಬಗೆಗೆ ಕೆಲಹೊತ್ತು ಮಾತನಾಡಿದರು. ಅದರ ಪೂರ್ಣಪಾಠ ಇಲ್ಲಿದೆ. * ಸಾಹಿತಿಯಾಗಿ ಕನ್ನಡ ನಾಡು, ನುಡಿ, ಸಾಹಿತ್ಯಲೋಕವನ್ನು…

Read More

ಗಂಗೊಳ್ಳಿ: ಗಂಗೊಳ್ಳಿಯ ಮೀನುಗಾರರ ಬಹುಕಾಲದ ಬೇಡಿಕೆ ಕೊನೆಗೂ ಈಡೇರುವ ದಿನ ಸನ್ನಿಹಿತವಾಗಿದೆ. ಅನೇಕ ಬಾರಿ ಅವಘಡಗಳು ಸಂಭವಿಸಿದ ಮೇಲೆ ಮೀನುಗಾರರ ಹೋರಾಟದ ನಿರಂತರ ಫಲವಾಗಿ ಎಚ್ಚೆತ್ತುಕೊಂಡ ಸರಕಾರಗಳು, ಗಂಗೊಳ್ಳಿ ಅಳಿವೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಅನುಮೋದನೆ ನೀಡಿದೆ. ಈಗಾಗಲೇ ಹೂಳೆತ್ತಲು ಬೃಹತ್  ಯಂತ್ರಗಳು ಗಂಗೊಳ್ಳಿ ಬಂದರುವಿನಲ್ಲಿ ಲಂಗರು ಹಾಕಿದ್ದು ಎಪ್ರಿಲ್ 5ರಿಂದ ಕೆಲಸ ಆರಂಭಿಸುವ ಲಕ್ಷಣಗಳು ಗೋಚರಿಸುತ್ತಿದೆ. 1972ರಲ್ಲಿ ಹೂಳೆತ್ತಿದ್ದರು:       ಗಂಗೊಳ್ಳಿ ಅಳಿವೆಯಲ್ಲಿ ಡ್ರೆಜ್ಜಿಂಗ್ ಸಮಸ್ಯೆ ಇಂದು ನಿನ್ನೆಯದಲ್ಲ. 1972ರಲ್ಲಿ ಮ್ಯಾಂಗನೀಸ್ ಅದಿರನ್ನು ಸಾಗುಸುವ ಸಂದರ್ಭದಲ್ಲಿ ಹೂಳು ತೆಗೆಯಲಾಗಿತ್ತು. ಆನಂತರದಲ್ಲಿ  ಹೂಳು ತೆಗೆಯಬೇಕೆಂಬ ಬೇಡಿಕೆಯನ್ನು  ಹಲವು ಬಾರಿ ಸರಕಾರದ ಮುಂದೆ ಇಟ್ಟಿದ್ದರಾದರೂ ಸ್ಪಂದನವಿರಲಿಲ್ಲ. ಮೂರು ವರ್ಷಗಳ ಹಿಂದೆ  ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನದಲ್ಲಿ ಬ್ರೇಕ್ ವಾಟರ್ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡಿದ್ದರಿಂದ ಹೂಳೆತ್ತುವ ವಿಚಾರ ಮರೆಮಾಚುವಂತಾಗಿತ್ತು. ಆದರೆ ಬಂದರು ಹಾಗೂ ಅಳಿವೆ ಭಾಗದಲ್ಲಿ ಹೂಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದ ಕಾರಣ ಬೋಟುಗಳು ಅಪಘಾತಕ್ಕೆ ತುತ್ತಾಗುತ್ತಿದ್ದವು. ಅದು ಕೆಲವು ಮೀನುಗಾರರು…

Read More

ಕುಂದಾಪುರ: ಈ ಗ್ರಾಮದ ಜನ ಅಬ್ಬಾಬ್ಬ ಎಂದರೆ ಒಂದು ಕಿ. ಮೀ ದೂರ ಸಾಗಿದ್ರೆ ಕುಂದಾಪುರ ನಗರವನ್ನು ಸುಲಭವಾಗಿ ತಲುಪಬಹುದು. ಆದ್ರೆ ಈ ಕಿರು ಸೇತುವೆಯ ಕಾರಣದಿಂದಾಗಿ ಕುಂದಾಪುರ ನಗರವನ್ನು ತಲುಪಲು 7 ಕಿ.ಮೀ ಸುತ್ತಿ ಸಾಗಬೇಕು. ಇದು ಸುಮಾರು 800ಕ್ಕೂ ಅಧಿಕ ಮನೆಗಳು, 2,000ಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಆನಗಳ್ಳಿ ಗ್ರಾಮದ ಜನರ ದುಸ್ಥಿತಿ. ಇಷ್ಟರ ನಡುವೆಯೂ ಹೊಸ ಸೇತುವೆಯ ಕನಸು ಹೋರಾಟದೊಂದಿಗೆ ನಿರಂತರವಾಗಿ ಮುಂದುವರಿದಿದೆ. ಆ ಕಾಲದಲ್ಲಿ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ಆನಗಳ್ಳಿಯಲ್ಲಿ ವಾರಾಹಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟಿನೊಂದಿಗೆ ನಿರ್ಮಾಣಗೊಂಡ ಈ ಕಿರು ಸೇತುವೆ 6 ಅಡಿ ಅಗಲವಿದೆ. ಸೇತುವೆಯ ಮೇಲೆ ಒಂದು ರಿಕ್ಷಾ ಅಥವಾ ಕಾರು ಚಲಿಸುತ್ತಿದ್ದರೇ ಎದುರಿನ ವಾಹನಗಳು ಇನ್ನೊಂದು ಬದಿಯಲ್ಲಿ ಕಾಯಲೇಬೇಕು. ತುರ್ತು ಸಂದರ್ಭದಲ್ಲಂತೂ ಜನರು ಪಾಡು ಹೇಳತೀರದು. ಕಿರಿದಾದ ಈ ಸೇತುವೆಯಾದ ಕಾರಣದಿಂದಾಗಿ ಬೆಳಿಗ್ಗೆ ಶಾಲೆ-ಕಾಲೇಜಿಗೆ, ಇನ್ನಿತರ ದಿನನಿತ್ಯದ ಅಗತ್ಯಗಳಿಗಾಗಿ ಗ್ರಾಮವನ್ನು ತಲುಪಬೇಕಾದ ವಾಹನಗಳ ಸಂಚರ ಸಾಧ್ಯವಿಲ್ಲವಾದುದರಿಂದ ಬಸ್ರೂರು-ಮೂಡ್ಲಕಟ್ಟೆ ಮಾರ್ಗವಾಗಿ ಸುತ್ತು…

Read More

ಕುಂದಾಪುರ: ಇಲ್ಲಿನ ರಕ್ತೇಶ್ವರಿ ದೇವಸ್ಥಾನದ ಸಭಾಂಗಣ ಒಂದು ವಿಶೇಷ ಮದುವೆಗೆ ಸಾಕ್ಷಿಯಾಯಿತು. ಎಂಟು ತಿಂಗಳ ಮಗಳು ಪಂಚಮಿಯ ಸಮಕ್ಷಮದಲ್ಲಿ ಅದರ ಜನ್ಮದಾತರು ನಮ್ಮ ಭೂಮಿ ಸಂಸ್ಥೆಯ ನೇತೃತ್ವದಲ್ಲಿ ನಡೆದ ಮದುವೆಯಲ್ಲಿ ಸತಿ-ಪತಿಗಳಾದರು. ಈ ಘಟನೆಗೆ ವಧು-ವರ ಪೋಷಕರು, ಕುಂದಾಪುರದ ಪೋಲಿಸರು, ಹಿತೈಶಿಗಳು ಮದುವೆಯಲ್ಲಿ ಪಾಲ್ಗೊಂಡು ದಂಪತಿಗಳನ್ನು ಹಾರೈಸಿದರು. ಏನಿದು ಘಟನೆ: ಮೂಲತಃ ತಲ್ಲೂರು ಗುಡ್ಡೆಯಂಗಡಿಯವಳಾದ ಸ್ವಾತಿಗೆ ಸಾಗರ ನಿವಾಸಿ ಶಶಿಕುಮಾರ್ ಅವರೊಂದಿಗೆ ಕೆಲವು ವರ್ಷಗಳ ಹಿಂದೆ ಪ್ರೇಮಾಂಕುರವಾಗಿತ್ತು. ಈ ಭಾಗದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಶಶಿಕುಮಾರ್ ಸ್ವಾತಿಯ ನಡುವೆ ಒಂದೆರಡು ವರ್ಷ ಪ್ರೇಮವೂ ಮುಂದುವರಿದಿತ್ತು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಶಶಿಕುಮಾರ್ ದೈಹಿಕ ಸಂಪರ್ಕವನ್ನೂ ಬೆಳೆಸಿ ಆಕೆ ಗರ್ಭವತಿಯಾಗಿದ್ದಳು. ಇದು ತಿಳಿಯುತ್ತಿದ್ದಂತೆ ಆತ ನಾಪತ್ತೆಯಾಗಿದ್ದ. ಇದರಿಂದ ಆಘಾತಕ್ಕೊಳಗಾದ ಸ್ವಾತಿ ತಿಂಗಳು ತುಂಬುತ್ತಿದ್ದಂತೆ (ಅಗಸ್ಟ್ 2014ರ ವೇಳೆ) ಸಾಗರಕ್ಕೆ ತೆರಳುವ ನೆಪಮಾಡಿಕೊಂಡು ತನ್ನ ತಾಯಿಯೊಂದಿಗೆ ಹೊರಟು ಜಡ್ಕಲ್ ಸಮಿಪ ಹಾಡಿಯೊಂದರ ಬಳಿ ನವಜಾತ ಶಿಶುವಿಗೆ ಜನ್ಮ ನೀಡಿ ಮಗುವನ್ನು ಅಲ್ಲಿಯೇ ಬಿಟ್ಟು ಮನೆಗೆ ಮರಳಿದ್ದಳು.…

Read More

ಕುಂದಾಪುರ: ಪ್ರತಿಯೊಂದು ವಿಚಾರದಲ್ಲಿಯೂ ಪ್ರಾಮಾಣಿಕರಾಗಿ, ಮಾಡುವ ಕೆಲಸದಲ್ಲಿ ನಿಷ್ಠರಾಗಿ ಸಮಾಜಕ್ಕೆ ಕೀರ್ತಿ ತರುವಂತಹ ಕೆಲಸ ಯುವ ಸಮುದಾಯದಿಂದ ಆಗಬೇಕಿದೆ. ಬದುಕಿನ ಹಾದಿಯಲ್ಲಿ ಪ್ರಾಮಾಣಿಕತೆಯಿಂದ ಮುನ್ನಡೆದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಅವರು ಬೆಳಿಗ್ಗೆ ಭಂಡಾರ್‌ಕಾರ್ಸ್ ಕಾಲೇಜು, ಹಳೆ ವಿದ್ಯಾರ್ಥಿ ಸಂಘ ಹಾಗೂ ಕುಂದಾಪುರ ತಾಲೂಕು ಯುವಜನ ಒಕ್ಕೂಟದ ಆಶ್ರಯದಲ್ಲಿ ಕುಂದಾಪುರ ಹೆಚ್.ಪಿಯ ಎಂಫಸಿಸ್ ಕ್ಯಾಂಪಸ್ ರಿಕ್ರ್ಯೂಟ್‌ಮೆಂಟ್ ಡ್ರೈವ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಂಫಸಿಸ್ ಸೀನಿಯರ್ ಮೆನೇಜರ್ ಚಂದ್ರಶೇಖರ್, ಪ್ಲೇಸ್‌ಮೆಂಟ್ ಆಫೀಸರ್‌ಗಳಾದ ರಮೇಶ್, ಸುನೀಲ್ ಜೋಷಿ, ರಘುವೀರ್ ಎನ್.ಎಸ್, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸನ್ಮತ್ ಹೆಗ್ಡೆ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷರಾದ ಕೆ.ಕಾರ್ತಿಕೇಯ ಮಧ್ಯಸ್ಥ ಸ್ವಾಗತಿಸಿದರು. ಕಾರ್ಯದರ್ಶಿ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ವಂದಿಸಿದರು.

Read More

ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕುಂದಾಪುರ: ಹುತಾತ್ಮ ಯೋಧರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ನೀಡುತ್ತಿರುವುದು ಸಮಾಜಕ್ಕೆ ಮಾದರಿಯಾದುದು ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ ಹೇಳಿದರು. ಅವರು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಭಂಡಾರ್ಕಾರ್ಸ್ ಕಾಲೇಜಿನ 2014-15ನೇ ಸಾಲಿನ ಎನ್‌ಸಿಸಿ ಕೆಡೆಟ್‌ಗಳಾದ ಭರತ್‌ರಾಜ್‌ ಶೆಟ್ಟಿ ಹಾಗೂ ವಿನಯ ಕಾಂಚನ್‌ ಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು. ಸುಭದ್ರ ಸಮಾಜ ನಿರ್ಮಾಣಗೊಂಡರೆ ಎಲ್ಲರೂ ನೆಮ್ಮದಿಯಿಂದ ಬದುಕಬಹುದು. ದೇಶಕ್ಕಾಗಿ ಮರಣವನ್ನಪ್ಪಿದವರ ಆದರ್ಶವನ್ನು ಪಾಲಿಸಿ ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಪ್ರತಿ ವಿದ್ಯಾರ್ಥಿಗಳೂ ಶ್ರಮಿಸಬೇಕು. ವೃತ್ತಿ ಯಾವುದೇ ಇರಲಿ ಅದು ಸಮಾಜಮುಖಿಯಾಗಿರಬೇಕು ಎಂದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಕಾಲೇಜಿನ ಮಾಜಿ ಪ್ರಾಂಶುಪಾಲರುಗಳಾದ ಪ್ರೊ. ದೋಮ…

Read More

ಕುಂದಾಪುರ: ಇಲ್ಲಿನ ಸಂಗಮ್ ಸೇತುವೆ ಬಳಿ 2010ರ ಮೇ 31ರಂದು ಬೈಂದೂರು ಪೊಲೀಸ್ ಪೇದೆ ಶ್ರೀಧರ್ ಅವರನ್ನು ಹತ್ಯೆಗೈದ ಪ್ರಕರಣದ ವಿಚಾರಣೆಯ ತೀರ್ಪು 5ವರ್ಷಗಳ ಬಳಿಕ ಗುರುವಾರ ಹೊರಬಿದ್ದಿದೆ. ಶ್ರೀಧರ್ ಅವರನ್ನು ಹತ್ಯೆಗೈದ ಆರೋಪಿ ರಘು(32) ಎಂಬುವವನಿಗೆ ಜೀವಾವಧಿ ಶಿಕ್ಷೆ ಹಾಗೂ ವೃತ್ತನಿರೀಕ್ಷಕ ಕಾಂತರಾಜ್ ಮೇಲೆ ಹಲ್ಲೆಗೆ ಮುಂದಾದ ಆರೋಪಿ ರಾಜೇಶ್ (35) ಎಂಬಾತನಿಗೆ 5 ವರ್ಷ ಕಠಿಣ ಸಜೆ ವಿಧಿಸಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ತೀರ್ಪು ಪ್ರಕಟಿಸಿದ್ದಾರೆ . ಪ್ರಕರಣದ ವಿವರ: ಮೇ 31ರ ರಾತ್ರಿ ನಡೆದ ಈ ಪ್ರಕರಣ ಇಡೀ ಕುಂದಾಪುರವನ್ನೇ ಬೆಚ್ಚಿ ಬಿಳಿಸಿತ್ತು. ಜಿಲ್ಲೆಯ ಇತಿಹಾಸದಲ್ಲೂ ಕರ್ತವ್ಯನಿರತ ಪೊಲೀಸ್ ಪೇದೆ ದರೋಡೆಕೋರರ ಅಟ್ಟಹಾಸಕ್ಕೆ ಬಲಿಯಾಗಿದ್ದೂ ಕೂಡ ಇದೇ ಮೊದಲಾಗಿತ್ತು. ರಕ್ತ ಹರಿಸಿದ ನರಹಂತಕರು: 2010 ರ ಮೇ.28 ರಂದು ಕೇರಳದ ಕೊಟ್ಟಾಯಂನಿಂದ ಬಂದಿದ್ದ ಈ ಇಬ್ಬರು ಆರೋಪಿಗಳು ಮೇ.29ರಂದು ಬೈಂದೂರಿಗೆ ಬಂದು 29ರ ರಾತ್ರಿ ಬೈಂದೂರಿನ ಪೆಟ್ರೋಲ್‌ ಬಂಕ್‌ನಲ್ಲಿ ದರೋಡೆ ನಡೆಸಿ,…

Read More