ಕುಂದಾಪುರ: ತೆಂಗು ಬೆಳೆಗಾರರ ಫೆಡರೇಶನ್ ಕಟ್‌ಬೇಲ್ತೂರು, ರೋಟರಿ ಕ್ಲಬ್ ಕುಂದಾಪುರ, ಮಹಾವಿಷ್ಣು ಯುವಕ ಮಂಡಲ ಹರೆಗೋಡು ಕಟ್‌ಬೇಲ್ತೂರು ಹಾಗೂ ಶ್ರೀ ಜನನಿ ಸ್ವಸಹಾಯ ಸಂಘ ಹರೆಗೋಡು ಇವರ ಸಂಯುಕ್ತ ಆಶ್ರಯದಲ್ಲಿ ರೈತರ ದಿನಾಚರಣೆ ಕಾರ್ಯಕ್ರಮ ಕಟ್‌ಬೇಲ್ತೂರಿನ ಮಹಾವಿಷ್ಣು ಯುವಕ ಮಂಡಲದ ವಠಾರದಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಕೆ.ಆರ್.ನಾಯ್ಕ್, ಇತ್ತೀಚಿನ ದಿನಗಳಲ್ಲಿ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಜನರ ಅಭಾವ ಸೃಷ್ಟಿಯಾಗುತ್ತಿದೆ. ಯುವ ಜನರು ಪಟ್ಟಣ ಪ್ರದೇಶಗಳತ್ತ ವಲಸೆ ಹೋಗುತ್ತಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಳು ಕ್ಷೀಣಿಸುತ್ತಿದೆ. ಇದು ಮುಂದಿನ ದಿನಗಳಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದರು. ಕಟ್‌ಬೇಲ್ತೂರು ತೆಂಗು ಬೆಳೆಗಾರರ ಫೆಡರೇಶನ್‌ನ ಅಧ್ಯಕ್ಷ ಚಂದ್ರ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ತೆಂಗು ಬೆಳೆಗಾರರರ ಫೆಡರೇಶನ್‌ನ ಕಾರ್ಯದರ್ಶಿ ನರಸಿಂಹ ಗಾಣಿಗ ಶುಭ ಹಾರೈಸಿದರು. ಕೃಷಿಕರಾದ ಸೇಸು ಗಾಣಿಗ,…
Author: ಸುನಿಲ್ ಹೆಚ್. ಜಿ. ಬೈಂದೂರು
ಸುನಿಲ್ ಹೆಚ್. ಜಿ. ಬೈಂದೂರು. ವಿಧಾನ ಪರಿಷತ್ ಚುನಾವಣೆ. ಇಲ್ಲಿ ಉಳಿದ ಚುನಾವಣೆಗಳಂತೆ ಹೇಳಿಕೊಳ್ಳುವಂತಹ ಅಬ್ಬರ ಇಲ್ಲದಿದ್ದರೂ ರಾಜಕೀಯ ಕಸರತ್ತು ಇಲ್ಲದಿಲ್ಲ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಈ ಭಾರಿ ನಾಯಕರುಗಳ ಪ್ರತಿಷ್ಠೆಯ ಪ್ರಶ್ನೆ, ಬಂಡಾಯ ಅಭ್ಯರ್ಥಿಗಳ ಅಳಿವು ಉಳಿವಿನ ಪ್ರಶ್ನೆ ಎದುರುಗೊಂಡು ಗೆಲುವಿಗಾಗಿ ತೆರೆ ಮರೆಯ ಕಸರತ್ತು ನಡೆಯುತ್ತಿದೆ. ಮೇಲ್ನೋಟಕ್ಕೆ ಪಕ್ಷಗಳ ನಡುವಿನ ಸಮರ ಎಂದೆನಿಸಿದರೂ ವ್ಯಕ್ತಿಗಳ ನಡುವೆ ಸ್ವರ್ಧೆ ಏರ್ಪಟ್ಟಿರುವುದನ್ನು ಅಲ್ಲಗಳೆಯಲಾಗದು. ಕಳೆದ ಭಾರಿ ಅವಿರೋಧ ಆಯ್ಕೆ ಕಂಡ ಈ ಕ್ಷೇತ್ರದಲ್ಲಿ ಸ್ವರ್ಧೆಯ ಕಾವು ಏರುತ್ತಿದೆ. ರಾಜ್ಯದ ದ್ವಿಸದಸ್ಯ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡ ಕ್ಷೇತ್ರವು ದ.ಕ ಜಿಲ್ಲೆಯ ಮಂಗಳೂರು, ಪುತ್ತೂರು, ಸುಳ್ಯ, ಬಂಟ್ವಾಳ ಬೆಳ್ತಂಗಡಿ ತಾಲೂಕು ಹಾಗೂ ಉಡುಪಿ ಜಿಲ್ಲೆಯ ಉಡುಪಿ ಕುಂದಾಪುರ ಹಾಗೂ ಕಾರ್ಕಳ ತಾಲೂಕು ಸೇರಿ ಒಟ್ಟು 13 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅವಿಭಜಿತ ಜಿಲ್ಲೆಯ ಸ್ಥಳೀಯ ಪಾಧಿಕಾರದ 6631 ಮತದಾರರ ಪೈಕಿ ಗ್ರಾಮ ಪಂಚಾಯತ್ ಸದಸ್ಯರದ್ದು ಇಲ್ಲಿ ಬಹುಮುಖ್ಯ ಪಾತ್ರ. ಉಳಿದಂತೆ ಸಂಸದರಾದ ಬಿ.ಎಸ್.…
ಹಾಸ್ಯದ ಹೈವೇಲಿ ನಗೋಕೆ ನೂರಾರು ನೆಪಗಳು! ಕುಂದಾಪ್ರ ಡಾಟ್ ಕಾಂ ವರದಿ. ದೇಶಕ್ಕೆ ಹಲವು ವ್ಯಂಗ್ಯಚಿತ್ರಕಾರರನ್ನು ಕೊಟ್ಟ ಕುಂದಾಪುರ ಮತ್ತೆ ಕಾರ್ಟೂನಿಂದಲೇ ಸದ್ದು ಮಾಡಹೊರಟಿದೆ. ಮಣ್ಣಿನ ಗುಣವೂ, ಪ್ರತಿಭೆಗೆ ಸಾಣೆ ಹಿಡಿದ ಫಲವೂ ಕುಂದಾಪುರದ ವ್ಯಂಗ್ಯಚಿತ್ರಕಾರರು ಪ್ರಪಂಚವನ್ನೇ ಅಣಕಿಸಿ, ನಗಿಸಿ ಯಶಕಂಡಿದ್ದಾರೆ. ಕುಂದಾಪುರದಲ್ಲಿದ್ದುಕೊಂಡೇ ಕಾರ್ಟೂನ್ ಪ್ರಪಂಚಕ್ಕೆ ತೆರೆದುಕೊಳ್ಳುವುದರ ಜೊತೆಗೆ ಕಾರ್ಟೂನ್ ಲೋಕದ ಹೊಸ ಸಾಧ್ಯತೆಗಳನ್ನು ಅರಿತು, ಬೆರೆತು, ಕಾರ್ಟೂನಿಷ್ಟ್ ಹಾಗೂ ಕಾರ್ಟೂನ್ ಪ್ರೀಯರಿಗೆ ಮುಖಾಮುಖಿಯಾಗುತ್ತಾ, ನಿಮ್ಮಲ್ಲಿನ ಕಾರ್ಟೂನ್ ಪ್ರೀತಿಯನ್ನು ಗುರುತಿಸುವ ಪ್ರಯತ್ನಕ್ಕೆ ಮುನ್ನುಡಿ ಬರೆದ ಖ್ಯಾತ ಕಾರ್ಟೂನಿಷ್ಠ್ ಸತೀಶ್ ಆಚಾರ್ಯ ಅವರ ಮುಂದಾಳತ್ವದಲ್ಲಿಯೇ ಈ ಭಾರಿಯ ಕಾರ್ಟೂನು ಹಬ್ಬ ಕಳೆಗಟ್ಟುತ್ತಿದೆ. ಡಿಸೆಂಬರ್ 10ರಿಂದ ಕುಂದಾಪುರದ ಕಲಾಮಂದಿರದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಟೂನ್ ಹಬ್ಬದಲ್ಲಿ ಕುಂದಾಪುರದ ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರ ಪ್ರದರ್ಶನ, ಕಾರ್ಟೂನ್ ಕಾರ್ಯಾಗಾರ, ಪ್ರಸಿದ್ಧ ಕಾರ್ಟೂನಿಷ್ಠರೊಂದಿಗೆ ಸಂವಾದ, ಕ್ಯಾರಿಕೇಚರ್, ವಿದ್ಯಾರ್ಥಿನಿರಿಗೆ ಮಾಯಾ ಕಾಮತ್ ಸ್ವರ್ಧೆ ಸೇರಿದಂತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಹಲವಾರು ಸ್ವರ್ಧೆ, ವಿಶಿಷ್ಠ ಸೆಲ್ಫಿ ಕಾರ್ನರ್, ಕಾರ್ಟೂನ್ ಪುಸ್ತಕ…
ಕುಂದಾಪುರ: ಡಿ.10 ರಿಂದ 13 ವರೆಗೆ ಕುಂದಾಪುರದ ಕಲಾಮಂದಿರದಲ್ಲಿ ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಇಲ್ಲಿನ ಕಾರ್ಟೂನ್ ಹಬ್ಬ ಜರುಗಲಿದ್ದು ಕೊನೆಯ ದಿನ ವಿದ್ಯಾರ್ಥಿನಿಯರಿಗಾಗಿ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ ಜರುಗಲಿದೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರಲ್ಲಿ ಕಾರ್ಟೂನ್ ಕಲೆಯತ್ತ ಒಲವು ಬೆಳೆಸುವ ಹಾಗೂ ಉತ್ತೇಜಿಸುವ ಸಲುವಾಗಿ ಖ್ಯಾತ ಕಾರ್ಟೂನಿಷ್ಠ್ ದಿ. ಮಾಯಾ ಕಾಮತ್ ಅವರ ಸ್ಮರಣಾರ್ಥ, ಮಾಯಾ ಕಾಮತ್ ಕುಟುಂಬದ ಸಹಭಾಗಿತ್ವದಲ್ಲಿ ’ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ’ ಜರುಗಲಿದೆ. ಡಿ.13ರ ಭಾನುವಾರ ಮಧ್ಯಾಹ್ನ 2:30ಕ್ಕೆ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆಗಳು ನಡೆಯಲಿದೆ. ಬೆಲೆಯೇರಿಕೆ, ಡಿಜಿಟಲ್ ಇಂಡಿಯಾ ಹಾಗೂ ಶಿಕ್ಷಣ ಈ ಮೂರು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ಕಾರ್ಟೂನ್ ರಚಿಸಬಹುದಾಗಿದ್ದು ಸ್ವರ್ಧಾಳುಗಳು ಡ್ರಾಯಿಂಗ್ ಹಾಳೆಗಳನ್ನು ಹೊರತುಪಡಿಸಿ ಉಳಿದ ಪರಿಕರಗಳನ್ನು ತಾವೇ ತರಬೇಕು. ವಿಜೇತರಿಗೆ ಅದೇ ದಿನ ಸಂಜೆ ಪ್ರಮಾಣಪತ್ರದೊಂದಿಗೆ ನಗದು ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9482736873 ಅಥವಾ cartoonuhabba@gmail.com ಗೆ ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ: ಡಿ.10ರಿಂದ 13 ವರೆಗೆ ಕುಂದಾಪುರದ ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಜರುಗುವ ಕಾರ್ಟೂನ್ ಹಬ್ಬ ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಕಾರ್ಟೂನ್ ಬಿಡಿಸೋ ಸ್ವರ್ಧೆ – ಕಾರ್ಟೂನ್ ಮೊಗ್ಗು ಜರುಗಲಿದ್ದು ಹೋಟೆಲ್ ಪಾರಿಜಾತದ ಗಣೇಶ್ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಡಿ.12ರ ಶನಿವಾರ ಮಧ್ಯಾಹ್ನ 3ಗಂಟೆಗೆ ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಸ್ವರ್ಧೆಗಳು ನಡೆಯಲಿದೆ. ಭ್ರಷ್ಟಾಚಾರ, ರಾಜಕೀಯ, ವಿದ್ಯಾರ್ಥಿ ಜೀವನ ಈ ಮೂರು ವಿಷಯಗಳಲ್ಲಿ ಒಂದನ್ನು ಆಯ್ದುಕೊಂಡು ಕಾರ್ಟೂನ್ ರಚಿಸಬಹುದಾಗಿದ್ದು ಡ್ರಾಯಿಂಗ್ ಹಾಳೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪರಿಕರಗಳನ್ನು ಸ್ವರ್ಧಾಳುಗಳೇ ತರಬೇಕೆಂದು ಕೋರಲಾಗಿದೆ. ವಿಜೇತರಿಗೆ ಮರುದಿನ ಸಂಜೆ ಪ್ರಮಾಣಪತ್ರದೊಂದಿಗೆ ನಗದು ಬಹುಮಾನ ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9482736873 ಅಥವಾ cartoonuhabba@gmail.com ಗೆ ಸಂಪರ್ಕಿಸಬಹುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ: ಡಿ.10 ರಿಂದ 13ವರೆಗೆ ಕುಂದಾಪುರದ ಕಲಾಮಂದಿರದಲ್ಲಿ ಜರುಗುವ ಕಾರ್ಟೂನ್ ಹಬ್ಬದಲ್ಲಿ ನಾಡಿನ ಖ್ಯಾತ ವೃತ್ತಿಪರ ವ್ಯಂಗ್ಯಚಿತ್ರಕಾರರೊಂಗಿದೆ ಸಂವಾದಿಸುವ ಅವಕಾಶ ಕಲ್ಪಿಸಲಾಗಿದೆ. ರಂಗಕರ್ಮಿ ಸುರೇಶ್ ಆನಗಳ್ಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಡಿ.12ರ ಶನಿವಾರ ಬೆಳಿಗ್ಗೆ 11ಗಂಟೆಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಖ್ಯಾತ ವ್ಯಂಗ್ಯಚಿತ್ರಕಾರರಾದ ಪಿ. ಮಹಮ್ಮದ್, ಪ್ರಕಾಶ್ ಶೆಟ್ಟಿ, ಸತೀಶ್ ಆಚಾರ್ಯ ಹಾಗೂ ಇತರ ಖ್ಯಾತನಾಮರೊಂದಿಗೆ ಮಾಸ್ಟರ್ ಸ್ಟ್ರೋಕ್ ನಡೆಯಲಿದೆ. ಲೈವ್ ರಾಜಕೀಯ ಕಾರ್ಟೂನ್ ರಚನೆ ಹಾಗೂ ಕಾರ್ಟೂನ್ ಪ್ರೀಯರೊಂದಿಗೆ ನೇರ ಸಂವಾದವನ್ನು ಏರ್ಪಡಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕುಂದಾಪುರ: ಡಿ.10 ರಿಂದ 13ವರೆಗೆ ಕುಂದಾಪುರದ ಕಲಾಮಂದಿರದಲ್ಲಿ ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಜರುಗುವ ಕಾರ್ಟೂನ್ ಹಬ್ಬದಲ್ಲಿ ಡಿ.11ರಂದ ರೋಟರಿ ಕ್ಲಬ್ ಕುಂದಾಪುರ ಸಹಭಾಗಿತ್ವದಲ್ಲಿ ಚಿತ್ರನಿಧಿ-ಕ್ಯಾರಿಕೇಚರ್ ಬಿಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಲೈವ್ ಕ್ಯಾರಿಕೇಚರ್‌ನಿಂದ ಬರುವ ಹಣವನ್ನು ವಂಡ್ಸೆ ಸರಕಾರಿ ಶಾಲೆಗೆ ದೇಣಿಗೆಯಾಗಿ ನೀಡಲು ನಿರ್ಧರಿಸಲಾಗಿದೆ. ಡಿ.11ರ ಶುಕ್ರವಾರ ಮಧ್ಯಾಹ್ನ 3ಗಂಟೆಯ ಡಾ. ರಂಜನ್ ಶೆಟ್ಟಿ ಚಿತ್ರನಿಧಿಯನ್ನು ಉದ್ಘಾಟಿಸಲಿದ್ದು, ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರಿಂದಲೇ ಕ್ಯಾರಿಕೇಚರ್ ಬಿಡಿಸಿಕೊಳ್ಳುವ ಸುವರ್ಣಾವಕಾಶವಿದೆ. ಕಾರ್ಟೂನ್ ಪ್ರೀಯರು ಕೂಪನ್‌ಗಳಿಗಾಗಿ ರೋಟರಿ ಅಧ್ಯಕ್ಷ ಪ್ರಶಾಶ್ಚಂದ್ರ ಶೆಟ್ಟಿ (9845766055)ಅವರನ್ನು ಸಂಪರ್ಕಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
ಕುಂದಾಪುರ: ಕುಂದಾಪುರದ ಖ್ಯಾತ ವ್ಯಂಗ್ಯಚಿತ್ರಚಾರ ಸತೀಶ್ ಆಚಾರ್ಯ ಅವರ ನೇತೃತ್ವದಲ್ಲಿ ಇಲ್ಲಿನ ಕಲಾಮಂದಿರದಲ್ಲಿ ಡಿ.10-13ವರೆಗೆ ಕಾರ್ಟೂನ್ ಹಬ್ಬ ಜರುಗಲಿದ್ದು ಉದ್ಯಮಿ ಆನಂದ ಸಿ. ಕುಂದರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಟೂನ್ ಹಬ್ಬ ಹಾಸ್ಯದ ಹೈವೇ ಎಂಬ ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಕಾರ್ಟೂನ್ ಪ್ರದರ್ಶನ, ಖ್ಯಾತ ವ್ಯಂಗ್ಯಚಿತ್ರಕಾರರೊಂದಿಗೆ ಸಂವಾದ, ವಿದ್ಯಾರ್ಥಿನಿಯರಿಗೆ ಮಾಯಾ ಕಾಮತ್ ಕಾರ್ಟೂನ್ ಸ್ವರ್ಧೆ, ವೈದ್ಯರುಗಳಿಗಾಗಿ ಡೂಡ್ಲಿಂಗ್ ವಿತ್ ಡಾಕ್ಟರ್, ವಿದ್ಯಾರ್ಥಿಗಳಿಗೆ ವ್ಯಂಗ್ಯಚಿತ್ರ ಸ್ವರ್ಧೆ, ಸಾರ್ವಜನಿಕರಿಗೆ ಕಾರ್ಟೂನ್ ಡೈಲಾಗ್ ಬರೆಯೋ ಸ್ವರ್ಧೆ, ಸೆಲ್ಫಿ ಕಾರ್ನ್‌ರ್, ಲೈವ್ ಕ್ಯಾರಿಕೇಚರ್ ಬರೆಯುವುದು ವಿವಿಧ ಸ್ವರ್ಧೆ, ಕಾರ್ಯಾಗಾರ, ಕಾರ್ಟೂನ್ ಸಂಬಂಧಿತ ಮಾತುಕತೆ, ಪ್ರದರ್ಶನ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ: ತಾಲೂಕಿನ ಬೆಳ್ವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಮ್ಮೊಲ – ಹಳ್ನೀರು ಎಂಬಲ್ಲಿನ ಸೀತಾನದಿಯ ದಡದಲ್ಲಿ ಸೋಮವಾರ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಕಂದಾವರ ಗ್ರಾಮದ ನೆಚ್ಚೂರು ನಿವಾಸಿ ಉಷಾ ಶೆಟ್ಟಿ ಕೊಲೆ ಮಾಡಲಾಗಿತ್ತು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ. ಅಣ್ಣಾಮಲೈ ಹೇಳಿದ್ದಾರೆ. ಈ ಬಗ್ಗೆ ಕುಂದಾಪುರದಲ್ಲಿ ಕರೆಯಲಾದ ಸುದ್ಧಿಗೋಷ್ಟಿಯಲ್ಲಿ ಅವರು ಮಾಧ್ಯಮದ ಜೊತೆ ಮಾತನಾಡಿದರು. ಮರಣೋತ್ತರ ಶವ ಪರೀಕ್ಷೆಯ ನಂತರ ಬಂದ ವರದಿಯ ಪ್ರಕಾರ ಶವ ಪತ್ತೆಯಾಗುವ ಏಳು ದಿನಗಳ ಹಿಂದೆ ಕೊಲೆಯಾಗಿದ್ದು, ಮುಖ ಹಾಗೂ ತಲೆಗೆ ಗಾಯಗಳಾಗಿರುವುದು ಪತ್ತೆಯಾಗಿತ್ತು. ಅಲ್ಲದೇ ಸ್ಥಳೀಯವಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭ ಉಷಾಳ ಸಂಪರ್ಕದಲ್ಲಿದ್ದ ಏಳು ಜನ ವ್ಯಕ್ತಿಗಳನ್ನು ತನಿಖೆಗೊಳಪಡಿಸಲಾಗಿತ್ತು. ಇವರುಗಳ ಪೈಕಿ ಗುಮ್ಮೊಲದ ನಿವಾಸಿ ವಿಶ್ವನಾಥ ನಾಯ್ಕ್ ಎಂಬಾತನ್ನು ಕೊನೆಯ ಭಾರಿ ಸಂಪರ್ಕಿಸಿದ್ದು ಪೊಲೀಸರು ಈತನ ಬಗೆಗೆ ಸಂಶಯ ಬಲಗೊಂಡಿತ್ತು. ತನಿಕೆಯನ್ನು ಮುಂದುವರಿಸಿದಾಗ ಕೊಲೆಯ ಹಿಂದಿನ ಸತ್ಯ ಹೊರಬಿದ್ದಿದೆ. ಸುಮಾರು ಎಂಟು ವರ್ಷಗಳಿಂದ ಉಷಾಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ವಿಶ್ವನಾಥ ನಾಯ್ಕ…
