ಕುಂದಾಪುರ: ತಾಲೂಕಿನ ನಾಡ ಗ್ರಾ.ಪಂ. ಎದುರು ವಿವಿಧ ಮೂಲ ಸೌಕರ್ಯಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಎಂ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿ ದಿನೇ ದಿನೇ ಜನರ ಸಂಕಷ್ಟಗಳನ್ನು ತೀವ್ರಗೊಳಿಸುತ್ತಿರುವ ಕೇಂದ್ರ ಸರಕಾರ ಜನರ ನಿರೀಕ್ಷೆಗಳನ್ನು ಹುಸಿಗೊಳಿಸುತ್ತಿರುವ ರಾಜ್ಯ ಸರಕಾರಗಳ ವಿರುದ್ಧ ಹರಿಹಾಯ್ದರು. ಸಿಪಿಎಂ ಮುಖಂಡ ವೆಂಕಟೇಶ ಕೋಣಿ ಮಾತನಾಡಿ, ಸರಕಾರಿ ಜಮೀನಿನಲ್ಲಿ ವಾಸವಾಗಿದ್ದು, 94 ಸಿ ಕಲಂ ಅನ್ವಯ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಬಡರೈತರಿಗೆ ಈ ಕೂಡಲೇ ಭೂಮಿ ಮಂಜೂರು ಮಾಡಬೇಕು. ಅಲ್ಲದೇ ಶುಲ್ಕ ವಿಧಿಧಿಸದೆ ಉಚಿತವಾಗಿ ಹಕ್ಕು ಪತ್ರ ನೀಡಬೇಕು. ಮನೆ ನಿವೇಶನ ರಹಿತರಿಗೆ ನಿವೇಶನ ಹಕ್ಕು ಪತ್ರ ಮಂಜೂರು ಮಾಡಲು ಸರಕಾರಿ ಸ್ಥಳ ಗುರುತಿಸುವುದಕ್ಕೆ ಗ್ರಾ.ಪಂ.ತತ್ಕ್ಷಣ ಕ್ರಮವಹಿಸಬೇಕು. ಉದ್ಯೋಗ ಖಾತ್ರಿ ಕೂಲಿಕಾರರಿಗೆ ಬಾಕಿ ಇರುವ ವೇತನ ಕೂಡಲೇ ಬಿಡುಗಡೆ ಮಾಡಬೇಕೆಂದು ಹೇಳಿದರು. ಪಂಚಾಯತ್ ಅಧ್ಯಕ್ಷ ಜಯನ್ಮೇರಿ ಒಲಿಯವೇರ ಅವರಿಗೆ ಮನವಿ ಸಲ್ಲಿಸಲಾಯಿತು. ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ರಾಜೀವ ಪಡುಕೋಣೆ ಸುಬ್ರಹ್ಮಣ್ಯ ಆಚಾರ್, ನಾಗರತ್ನಾ ನಾಡ, ರಾಜೇಶ್,…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮಿಜಿಯವರ ಪಟ್ಟದ ಶಿಷ್ಯ ಶ್ರೀ ಸಂಯಮೀಂದ್ರ ಸ್ವಾಮೀಜಿಯವರ ಚಾತುರ್ಮಾಸ ವ್ರತ ಸ್ವೀಕಾರ ಕಾರ್ಯಕ್ರಮ ಕೋಟೇಶ್ವರದ ಶ್ರೀ ಪಟ್ಟಾಬಿ ರಾಮಚಂದ್ರ ದೇವಸ್ಥಾನದಲ್ಲಿ ಸಂಭ್ರಮದಿಂದ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಜಿಎಸ್ಬಿ ಸಮಾಜಬಾಂಧವರಿಗೆ ಆಶೀರ್ವಚನ ನೀಡಿದರು. ಈ ಸಂದರ್ಭ ಊರ ಪರಊರ ದೇವಸ್ಥಾನಗಳ ಆಡಳಿತ ಮೊಕ್ತೇಸರರು ಹಾಗೂ ಗಣ್ಯರು ಸ್ವಾಮೀಜಿ ಅವರಿಗೆ ಹಾರಾರ್ಪಣೆ ಮಾಡಿದರು. ಕೋಟೇಶ್ವರ ಶ್ರೀ ಪಟ್ಟಾಬಿ ರಾಮಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀಧರ ವಿ. ಕಾಮತ್ ಸ್ವಾಗತಿಸಿದರು. ಚಾತುರ್ಮಾಸ ಸಮಿತಿ ಕೋಶಾಧಿಕಾರಿ ಕೆ. ದಿನೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
[dinetmedia_youtube_advanced url=”https://youtu.be/Z0LWQRyNsdk” width=”560″ height=”320″ controls=”alt”]
ಕುಂದಾಪುರ: ಕಲಿಕೆಯೊಂದಿಗೆ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಟ್ಟಿನಲ್ಲಿ ಹಮ್ಮಿಕೊಳ್ಳಲಾಯಿತು. ’ವಸುಂಧರಾ’ ಇಕೋ ಕ್ಲಬ್ನ್ನು ಶ್ರೀ ಶಾರಾದಾ ಗ್ರಾ.ಪಂ. ಸದಸ್ಯರು ಗಿಡನೆಡುವ ಮೂಲಕ ಚಾಲನೆಗೊಳಿಸಿದರು. ಎಸ್.ಡಿ.ಎಂ. ಸಿ ಅಧ್ಯಕ್ಷರಾದ ಶ್ರೀ ಅಶೊಕ್ ಕಾಮತ್ ಗಿಡಗಳಿಗೆ ನೀರು ಹಾಕಿ, ಮಣ್ಣು ಗೊಬ್ಬರ ನೀಡಿದರು. ಪರಿಸರ ಜಾಗೃತಿ ಎಳೆವೆಯಲ್ಲೇ ಮೂಡಿಸಬೇಕು, ಪರಿಸರ ಜಾಗೃತಿ ಇಂದಿನ ಅಗತ್ಯವೆಂದು ಶ್ರೀಧರ್ ಎಸ್. ಸಿದ್ದಾಪುರ ಮಕ್ಕಳಿಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಅಂಜೂರ, ಮ್ಯಾಂಗೋಸ್ಟಿಯನ್ , ಹಲಸು ವಿವಿಧ ಹಣ್ಣಿನ ಗಿಡ ನೆಡಲಾಯಿತು. ಮಕ್ಕಳನ್ನು ತರಗತಿವಾರು ಗುಂಪು ಮಾಡಿ ಈರುಳ್ಳಿ, ಮೂಲಂಗಿ, ಬೀನ್ಸ್ ಬಿಟ್ರೂಟ್ ಮುಂತಾದ ತರಕಾರಿ ಕೃಷಿ ಮಾಡಲು ಬೇಕಾದ ಸಿದ್ದತೆ ಮಾಡಿಕೊಂಡು ಬೀಜಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಶಾಲಾ ವಠಾರ ಸ್ವಚ್ಛಗೊಳಿಸುವ ಕಾರ್ಯ ನೆರವೇರಿಸಿದರು. ಜೊತೆಗೆ ಗೊಬ್ಬರ ತಯಾರಿಸುವ ಪ್ರಾತ್ಯಕ್ಷಿಕೆಯನ್ನು ಪೋಷಕರು ಮಕ್ಕಳಿಗೆ ವಿವರಿಸಿದರು. ಮಕ್ಕಳು ತಿಪ್ಪೆ ಗುಂಡಿಯಲ್ಲಿ ಗೊಬ್ಬರವನ್ನು ತಯಾರಿಸಲು ಸೊಪ್ಪು ಸಂಗ್ರಹಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪೋಷಕರು…
ರತ್ನಾ ಕೊಠಾರಿ ಕುಟುಂಬಕ್ಕೆ ನ್ಯಾಯ ಒದಗಿಸಲು ಸರಕಾರ ವಿಫಲ: ಮುನೀರ್ ಕಾಟಿಪಳ್ಳ ಬೈಂದೂರು: ನಿಗೂಢವಾಗಿ ಸಾವನ್ನಪ್ಪಿದ್ದ ಶಿರೂರು ಕಾಲೇಜು ವಿದ್ಯಾರ್ಥಿನಿ ರತ್ನಾ ಕೊಠಾರಿ ಪ್ರಕರಣಕ್ಕೆ ಒಂದು ವರ್ಷ ಸಂದರೂ ಈವರೆಗೆ ಆಕೆಯ ಸಾವಿನ ಕಾರಣವನ್ನು ಬಹಿರಂಗಪಡಿಸಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದಲ್ಲದೇ, ಮೃತಳ ಕುಟುಂಬಕ್ಕೆ ಸರಕಾರ ಘೋಷಿಸಿದ್ದ 3ಲಕ್ಷ ರೂಪಾಯಿಗಳನ್ನು ದೊರಕಿಸಿಕೊಡುವುದನ್ನು ಮರೆತಿರುವ ಬೈಂದೂರು ಕ್ಷೇತ್ರದ ಶಾಸಕರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ ಎಂದು ಡಿವೈಎಫ್ಐ ರಾಜ್ಯಾಧ್ಯಾಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು. ಅವರು ರತ್ನಾ ಕೊಠಾರಿ ಕಳೆದ ವರ್ಷ ನಿಗೂಢವಾಗಿ ಸಾವನ್ನಪ್ಪಿದ ಸಾವಂತಗುಡ್ಡೆಯಿಂದ ಆರಂಭಗೊಂಡ ಪ್ರತಿಭಟನಾ ಪಾದಯಾತ್ರೆಯಲ್ಲಿ ಭಾಗವಹಿಸಿ ಬೈಂದೂರಿನ ಶಾಸಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದರು. ಕಳೆದ ಒಂದು ವರ್ಷದಿಂದ ಡಿವೈಎಫ್ಐ ಹಾಗೂ ಎಸ್ಎಫ್ಐ ಸಂಘಟನೆಗಳು ನಿರಂತರವಾಗಿ ವಿದ್ಯಾರ್ಥಿನಿರ ಸಾವಿನ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಜನರ ಆಕ್ರೋಶದ ದಿಕ್ಕು ತಪ್ಪಿಸಲು ಬೈಂದೂರಿನ ಶಾಸಕರು 3 ಲಕ್ಷ ಪರಿಹಾರ ಘೋಷಣೆ ಮಾಡಿ ಸುಮ್ಮನಾಗಿದ್ದಾರೆ. ಪೊಲೀಸ್ ಇಲಾಖೆಯೂ ಚಾರ್ಜ್ ಶೀಟ್ ಸಲ್ಲಿಸದೇ ವಿಳಂಬ…
ಕುಂದಾಪುರ: ಇಂಗ್ಲೀಷ್ ಭಾಷೆ ಬಹುಭಾಷಾ ಸಾಹಿತ್ಯಕ್ಕಿರುವ ದೊಡ್ಡ ಸವಾಲು. ಇಂಗ್ಲಿಷಿನ ವ್ಯಾಮೋಹಕ್ಕೆ ಸಿಕ್ಕಿ ಮಾತೃ ಭಾಷೆಯನ್ನು ಮರೆಯುತ್ತಿದ್ದೇವೆ. ನಮ್ಮ ಸರಕಾರಗಳ ಭಾಷಾ ನಿಲುವು ಹಾಗೂ ಪೋಷಕರಲ್ಲಿನ ಭ್ರಮೆ ಇದಕ್ಕೆ ಮುಖ್ಯ ಕಾರಣ ಎಂದು ಬೆಂಗಳೂರಿನ ಖ್ಯಾತ ಲೇಖಕ ಡಾ| ಓ. ಎಲ್. ನಾಗಭೂಷಣಸ್ವಾಮಿ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಕೊಯಾಕುಟ್ಟಿ ಸಭಾಂಗಣದಲ್ಲಿ ಆಯೋಸಿದ ಎರಡು ದಿನಗಳ ಯುಜಿಸಿ ಪ್ರಾಯೋಜಿತ ’ಭಾರತೀಯ ಬಹುಭಾಷಾ ಸಾಹಿತ್ಯ’ ರಾಷ್ಟ್ರೀಯ ವಿಚಾರ ಸಂಕೀರಣವನ್ನು ಉದ್ಘಾಟಿಸಿ ಮಾತನಾಡಿದರು. ಒಂದು ಭಾಷೆಗೆ ಮತ್ತೊಂದು ಭಾಷೆ ಶತ್ರುವಲ್ಲ. ಆದರೆ ಒಂದು ಭಾಷೆಯನ್ನಾಡುವ ಜನ ಮತ್ತೊಂದು ಭಾಷೆಗೆ ಶತ್ರುಗಳಾಗಿರುತ್ತಾರೆ ಭಾರತದಂತಹ ದೇಶದಲ್ಲಿ ಬಂಡವಾಳ ಶಾಹಿತ್ವ, ಬಲಪಂಥೀಯ ರಾಜಕೀಯ ಹಾಗೂ ಇಂಗ್ಲಿಷ್ನ ವ್ಯಾಮೋಹವು ಭಾಷಾ ವೈವಿಧ್ಯತೆಯನ್ನು ನಾಶ ಮಾಡಿ ಎಲ್ಲವನ್ನೂ ಏಕತೆಯಿಂದ ನೋಡುವಂತೆ ಮಾಡಿರುವುದು ಬಹುಭಾಷಾ ಸಾಹಿತ್ಯದ ನಾಶಕ್ಕೆ ಕಾರಣವಾಗಿದೆ ಯುವಜನತೆ ಮಾತೃಭಾಷೆಯಿಂದ ದೂರ ಸರಿಯುತ್ತಿರುವುದು ಹಾಗೂ ಜ್ಞಾನದ ವ್ಯಾಖ್ಯಾನವು ಬದಲಾಗುತ್ತಿರುವುದು ಬಹುಭಾಷಾ ಸಾಹಿತ್ಯಕ್ಕೆ ಎದುರಾಗಿರುವ ದೊಡ್ಡ ವಿಪತ್ತು ಎಂದವರು…
ಕುಂದಾಪುರ: ಕಾರವಾರ-ಬೆಂಗಳೂರು ರೈಲಿನ ವೇಗ ಹೆಚ್ಚಿಸುವಂತೆ ಹಾಗೂ ರಾತ್ರಿ ಪ್ರಯಾಣದ ರೈಲು ಸಂಖ್ಯೆ ಹೆಚ್ಚಿಸುವಂತೆ ಆಗ್ರಹಿಸಿ ಸಿಪಿಎಂ (ಐ) ಉಡುಪಿ ಜಿಲ್ಲಾ ಸಮಿತಿ ಆಶ್ರಯದಲ್ಲಿ ಕುಂದಾಪುರದಲ್ಲಿ ನಡೆದ ಸಹಿ ಸಂಗ್ರಹ ಅಭಿಯಾನವನ್ನು ಮಾಜಿ ಶಾಸಕ ಹಾಗೂ ಸಿಪಿಎಂ (ಐ) ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಉದ್ಘಾಟಿಸಿದರು. ಮಾರ್ಚ್ 15ರಿಂದ ಬೆಂಗಳೂರು-ಹಾಸನ ರೈಲುದಾರಿಯ 110 ಕಿ.ಮೀ.ನಲ್ಲಿ ಜೋಡಿ ರೈಲು ಹಾಕುವ ಮೂಲಕ ಕನಿಷ್ಠ ಎರಡು ಗಂಟೆ ಪ್ರಯಾಣ ಉಳಿತಾಯವಾಗುತ್ತದೆ ಎಂದು ವಿಭಾಗೀಯ ರೈಲ್ವೆ ಅಧಿಕಾರಿಗಳು ಹೇಳಿಕೆ ನೀಡಿದ್ದರೂ ಈವರೆಗೆ ಯಾಕೆ ಜಾರಿಯಾಗಿಲ್ಲ ಎಂದು ಪ್ರಶ್ನಿಸಿದ ಅವರು, ಉಡುಪಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ರೈಲು 15 ಗಂಟೆ ಯಾಕೆ ಸುತ್ತಬೇಕು. ಕಳೆದ ಬಜೆಟ್ನಲ್ಲಿ ಅಂದು ರೈಲ್ವೇ ಮಂತ್ರಿಯಾಗಿದ್ದ ಸದಾನಂದ ಗೌಡರು ಮಂಗಳೂರು-ಬೆಂಗಳೂರು ನಡುವೆ ಹೊಸ ರೈಲಿನ ಓಡಾಟ ಪ್ರಕಟಿಸಿದ್ದರೂ ಅದು ಹಗಲು ಸಂಚರಿಸುವುದರಿಂದ ಜಿಲ್ಲೆಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ಆದ್ದರಿಂದ ಈಗ ಚಲಿಸುತ್ತಿರುವ ರೈಲಿನ ವೇಗವನ್ನು ಹೆಚ್ಚಿಸಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಹಾಗೂ…
ಬೈಂದೂರು: ಇಂದು ಸನ್ನಿವೇಶದ ಒಂದು ಸಂಭಾಷಣೆಯೇ ಒಂದು ನಾಟಕವಾಗುತ್ತಿದೆ. ಇದು ಸಾಧ್ಯವಾದದ್ದು ನಮ್ಮೊಳಗಿನ ಹುಡುಕಾಟದಿಂದ. ಹುಡುಕಾಟದೊಂದಿಗೆ ನಾವು ವಿಕಾಸಗೊಳ್ಳುತ್ತಿದ್ದೇವೆ ಎಂಬುದು ಇದರಿಂದಲೇ ತಿಳಿಯುತ್ತದೆ. ಇಂತಹ ಸಾಂಸ್ಕೃತಿಕ ಪ್ರಕಾರಗಳು ಮನುಷ್ಯನ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದು ಜಾದೂಗಾರ ಓಂ ಗಣೇಶ ಉಪ್ಪುಂದ ಹೇಳಿದರು. ಸಂಚಲನ ರಿ. ಹೊಸೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಹೊಸೂರು-ತೂದಳ್ಳಿಯ ಹೊಂಗಿರಣ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ‘ಶರತ್ ರಂಗ ಸಂಚಲನ -2015′ನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾವು ಚಿಕ್ಕವರಿದ್ದಾಗ ಸಂಪೂರ್ಣ ರಾಮಾಯಣದ ನಾಟಕಗಳನ್ನು ನೋಡುತ್ತಿದ್ದೇವು. ವರ್ಷಗಳು ಕಳೆದಂತೆ ರಾಮಾಯಣ ಒಂದು ದೃಶ್ಯ ನಾಟಕವಾಯಿತು. ಬಳಿಕ ದೃಶ್ಯದ ಒಂದು ಸನ್ನಿವೇಶಗಳೇ ನಾಟಕವಾಯಿತು ಎಂದು ಉದಾಹರಿಸಿದರು. ರಾಜ್ಯದಲ್ಲಿ ಸರಕಾರ ನೂರಾರು ಸಾಂಸ್ಕೃತಿಕ ಕಲಾಪ್ರಾಕಾರಗಳ ಕಾರ್ಯಕ್ರಮಗಳಿಗೆ ಆರ್ಥಿಕವಾದ ಧನಸಹಾಯ ಮಾಡುತ್ತದೆ. ಆದರೆ ಸಂಚಲನದಂತಹ ಸಂಸ್ಥೆಗಳು ಮಾತ್ರ ಇಂತಹ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುತ್ತವೆ ಎಂದ ಸಂಚಲನದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಕುಂದಾಪುರ ಕೊರಗರ ಶ್ರೇಯಾಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್ ಕೊರಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.…
ಬೈಂದೂರು: “ನಾನು ಸುವರ್ಣ ಸುದ್ದಿ ವಾಹಿನಿಯ ವರದಿಗಾರ ಮಾತನಾಡುತ್ತಿರುವುದು. ನಿಮ್ಮ ಅಸಲಿ ಬಂಡವಾಳದ ವೀಡಿಯೋ ನನ್ನ ಬಳಿಯಿದ್ದು ಅದನ್ನು ಸುವರ್ಣ ವಾಹಿನಿಯಲ್ಲಿ ಬಿತ್ತರಿಸಿ ಮಾನ ಮರ್ಯಾದೆಯನ್ನು ಹರಾಜು ಮಾಡುತ್ತೇನೆ. 2 ಲಕ್ಷ ರೂಪಾಯಿಯನ್ನು ಸೋಮವಾರ ಕುಂದಾಪುರದ ಮಣಿಪಾಲ ಬೇಕರಿ ಬಳಿ ತೆಗೆದುಕೊಂಡು ಬಾ ಇಲ್ಲದಿದ್ದರೆ ನಿನ್ನ ಮಗನನ್ನು ಕೊಲೆ ಮಾಡುತ್ತೇನೆ” ಹೀಗೆ ತನ್ನ ಸ್ವಂತ ಮಾವನಿಗೆ ಬೆದರಿಗೆ ಹಾಕಿ ಹಣ ಎಗರಿಸಲು ಹೊರಟಿದ್ದ ಅಳಿಯ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಉಪ್ಪುಂದದ ಪ್ರದೀಪ ಖಾರ್ವಿ (23) ಸಿಸಿಬಿ ಪೊಲೀಸರು ಬಂಧಿಸಿದ ಬಿದ್ದ ನಕಲಿ ವರದಿಗಾರ. . ಘಟನೆಯ ವಿವರ: ತ್ರಾಸಿಯಲ್ಲಿ ಬೋಟ್ಗಳಿಗೆ ಜಿಪಿಎಸ್ ಅಳವಡಿಸುವ ಅಂಗಡಿ ಹೊಂದಿದ್ದ ಪ್ರದೀಪ ಖಾರ್ವಿ ಶನಿವಾರ ಬೆಳಗ್ಗೆ 12ಗಂಟೆ ಸುಮಾರಿಗೆ ತನ್ನ ಸ್ವಂತ ಮಾವನಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯ, ಉಪ್ಪುಂದ ಕರ್ಕಿಕಳಿ ನಿವಾಸಿ ಅಣ್ಣಪ್ಪ ಖಾರ್ವಿ ಎಂಬುವವರಿಗೆ ದೂರವಾಣಿ ಕರೆ ಮಾಡಿ ತಾನು ಸುವರ್ಣ ನ್ಯೂಸ್ ವರದಿಗಾರನಾಗಿದ್ದು ತಮ್ಮ ಬಗ್ಗೆ ಇರುವ…
ಬೈಂದೂರು: ಮಡಗಾವ್ – ಮಂಗಳೂರು ಇಂಟರ್ ಸಿಟಿ ರೈಲು ಗಾಡಿಯಲ್ಲಿ ಜನರಲ್ ಬೋಗಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಂಗಳೂರಿನ ದಂಪತಿಗಳ ಬ್ಯಾಗ್ನಲ್ಲಿರಿಸಲಾಗಿದ್ದ ಲಕ್ಷಾಂತರ ರೂ. ಚಿನ್ನಾಭರಣಗಳು, ಮೊಬೈಲ್ ನಗದನ್ನು ಕಳವುಗೈದಿರುವ ಬಗ್ಗೆ ಬೈಂದೂರು ಠಾಣಯಲ್ಲಿ ತಡವಾಗಿ ದೂರು ದಾಖಲಾಗಿದೆ. ಮಂಗಳೂರು ಬಾಲಕೃಷ್ಣ ಶ್ರೀಧರ ಪೈ ಅವರು ಮೇ 21ರಂದು ಮಡಗಾಂವ್ – ಮಂಗಳೂರು ಇಂಟರ್ ಸಿಟಿ ರೈಲು ಜನರಲ್ ಬೋಗಿಯಲ್ಲಿ ಕುಳಿತು ಕಾರವಾರದಿಂದ ಮಂಗಳೂರಿಗೆ ಪತ್ನಿಯೊಂದಿಗೆ ಪ್ರಯಾಣಿಸುತ್ತಿರುವಾಗ ಈ ಪ್ರಕರಣ ನಡೆದಿದೆ. ಎಲ್ಲ ಲಗೇಜುಗಳನ್ನು ಪತ್ನಿ ಕುಳಿತಿದ್ದ ಸೀಟಿನ ಕೆಳಗೆ ಇಟ್ಟಿದ್ದು. ಬಾಲಕೃಷ್ಣ ಪೈ ಅವರ ಪತ್ನಿ ಕುಮಟಾ ರೈಲು ನಿಲ್ದಾಣ ಬಿಟ್ಟ ನಂತರ ಮಲಗಿದ್ದರು. ರೈಲು ಬೈಂದೂರು ನಿಲ್ದಾಣ ಬಿಟ್ಟ ಅನಂತರ ನಿದ್ರೆಯಿಂದ ಎದ್ದು ನೋಡಿದಾಗ ಅವರ ವ್ಯಾನಿಟಿ ಬ್ಯಾಗ್ ಕಾಣೆಯಾಗಿತ್ತು. ಈ ಬ್ಯಾಗ್ನಲ್ಲಿ 30 ಗ್ರಾಂ ತೂಕದ ಚಿನ್ನದ ಸರ, 10 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸೂತ್ರ, ಚಿನ್ನದ ಕಿವಿಯ ಜುಮ್ಕಿ, ಚಿನ್ನದ ಕಿವಿಯ ರಿಂಗ್, ಪತ್ನಿಯ ಚಾಲನ…
