Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಬೈಂದೂರು: ದೇಹದ ಮೇಲೆ ಯವುದೇ ಅಡ್ಡ ಪರಿಣಾಮ ಆಗದಂತಹ ಪ್ರಾಚೀನ ಪರಂಪರಾಗತವಾದ ಆಯುರ್ವೇದ ವೈದ್ಯಪದ್ದತಿಯಿಂದ ರೋಗಗಳಿಗೆ ಚಿಕಿತ್ಸೆ ಪಡೆದರೆ ಈ ಔಷಧಿಗಳು ದೇಹದ ಮೇಲೆ ನಿಧಾನವಾಗಿ ಪರಿಣಾಮ ಬೀರುವುದರ ಮೂಲಕ ಕಾಯಿಲೆ ಗುಣವಾಗಿ ಪುನಃ ಮರುಕಳಿಸದಂತೆ ತಡೆಯಬಲ್ಲದು. ರೋಗ ಬಂದಮೇಲೆ ಚಿಕಿತ್ಸೆ ಪಡೆಯುದಕ್ಕಿಂತ ಅದು ಬಾರದಂತೆ ಮುಂಜಾಗೃತೆವಹಿಸುವುದು ಉತ್ತಮ ಎಂದು ಬೈಂದೂರು ಠಾಣಾಧಿಕಾರಿ ಸಂತೋಷ್ ಎ. ಕಾಯ್ಕಿಣಿ ಹೇಳಿದರು. ಕಾಲ್ತೋಡು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿ, ಆಯುಷ್ ಇಲಾಖೆ ಬೆಂಗಳೂರು, ಜಿಪಂ ಉಡುಪಿ ಹಾಗೂ ಜಿಲ್ಲಾ ಆಯುಷ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಆಯುಷ್ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ್ ಕುಲಾಲ್ ಅಧ್ಯಕ್ಷತೆವಹಿಸಿದ್ದರು. ಪ್ರಕೃತಿಯಲ್ಲಿರುವ ಎಲ್ಲಾ ವಿಧದ ಸಸ್ಯಸಂಕುಲಗಳು ಕೂಡಾ ಒಂದಲ್ಲಾಒಂದು ಔಷಧಯುಕ್ತ ಗುಣಗಳನ್ನು ಹೊಂದಿದೆ. ನಮ್ಮ ಹಿಂದಿನವರು ಇವುಗಳಿಂದಲೇ ಮನೆಮದ್ದು ತಯಾರಿಸುತ್ತಿದ್ದರು. ಅವರಿಗೆ ಈ ಔಷಧಿಗಳನ್ನು ತಯಾರಿಸುವ ಬಗ್ಗೆ ಜ್ಞಾನವಿತ್ತು ಆದರೆ ಪ್ರಚಾರಕ್ಕೆ ಸಾಧ್ಯವಾಗಿಲ್ಲ. ಇಂದಿನ ತಾಂತ್ರಿಕ ಬದುಕಿನಲ್ಲಿ ಆಯುರ್ವೇದದ ಬಗ್ಗೆ ನಂಬಿಕೆ…

Read More

ಕುಂದಾಪುರ: ಲಯನ್ಸ್ ಕ್ಲಬ್ ಹಂಗಳೂರಿಗೆ ಲಯನ್ಸ್ ಜಿಲ್ಲಾ 317 ಇದರ ಗವರ್ನರ್ ಡಿ. ಶ್ರೀಧರ ಶೇಣವ ಅವರ ಅಧಿಕೃತ ಭೇಟಿಯ ಹಿನ್ನಲೆಯಲ್ಲಿ ಕುಂದಾಪುರದ ಆಶೀರ್ವಾದ ಹಾಲ್‌ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಲಯನ್ಸ್ ಕ್ಲಬ್ ಹಂಗಳೂರಿನ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಅವರ ಕಾರ್ಯ ಚಟುವಟಿಕೆ, ಸೇವೆಯನ್ನು ಪ್ರಶಂಸಿದ ಜಿಲ್ಲಾ ಗವರ್ನರ್ ಡಿ.ಶ್ರೀಧರ ಶೇಣವ ಅವರು ಸಮಾಜಕ್ಕೆ ಮಾದರಿಯಾಗಿ ಲಯನ್ಸ್ ಕ್ಲಬ್ ಹಂಗಳೂರು ಕಾರ್ಯ ನಿರ್ವಹಿಸಿದೆ ಎಂದು ಅಭಿನಂದಿಸಿದರು. ಲಯನ್ಸ್ ಕ್ಲಬ್ ಹಂಗಳೂರಿನ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ಗವರ್ನರ್ ಜಯಕರ ಶೆಟ್ಟಿ, ಜಿಲ್ಲಾ ಸಂಯೋಜಕ ತಲ್ಲೂರು ಶಿವರಾಮ ಶೆಟ್ಟಿ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಎಚ್. ಬಾಲಕೃಷ್ಣ ಶೆಟ್ಟಿ, ಖಜಾಂಚಿ ಸ್ಟ್ಯಾನಿ ಡಿ ಮೆಲ್ಲೋ ಉಪಸ್ಥಿತರಿದ್ದರು. ಕೊಲ್ಲೂರು ಭೇಟಿ : ಲಯನ್ಸ್ ಕ್ಲಬ್ ಹಂಗಳೂರಿಗೆ ಅಧಿಕೃತ ಭೇಟಿ ನೀಡಿದ ಸಂದರ್ಭ ಜಿಲ್ಲಾ ಗವರ್ನರ್ ಡಿ ಶ್ರೀಧರ ಶೇಣವ ಅವರು ಕೊಲ್ಲೂರಿಗೆ ತೆರಳಿ ಶ್ರೀ ಮೂಕಾಂಬಿಕೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.…

Read More

ಕುಂದಾಪುರ: ರಾಜ್ಯದ ಮಾಜಿ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಇಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಗಂಗೊಳ್ಳಿಯಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಅವರು ದೇವಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಉಪಸ್ಥಿತರಿದ್ದರು.

Read More

ಬೈಂದೂರು: ಶಿರೂರು ಗ್ರಾಮದ ಮಹತ್ವಕಾಂಕ್ಷೆ ಯೋಜನೆಯಾದ ಸಮುದ್ರದ ಉಪ್ಪು ನೀರನ್ನು ಶುದ್ದೀಕರಿಸಿ ಸಿಹಿ ನೀರಾಗಿ ಮಾರ್ಪಡಿಸುವ ಶುದ್ದ ಕುಡಿಯುವ ನೀರಿನ ಘಟಕವನ್ನು ಎಪ್ರಿಲ್ ಅಥವಾ ಮೇ ಅಂತ್ಯದೊಳಗೆ ಸ್ಥಾಪಿಸಲಾಗುವುದು. ಶುದ್ದ ನೀರಿನ ಕುಡಿಯುವ ಘಟಕ ಜಿಲ್ಲೆಯಲ್ಲಿಯೇ ಪ್ರಥಮ ಎಂದು ತಜ್ನರಾದ ಹರಿಪ್ರಸಾದ ಹಾಗೂ ಅವಿನಾಶ್ ಸ್ಪಷ್ಠಪಡಿಸಿದ್ದಾರೆ. ಅವರು ಶಿರೂರಿನ ವಿವಿಧ ಕಡೆ ಸ್ಥಳ ಪರಿಶೀಲನೆ ಹಾಗೂ ಸಾರ್ವಜನಿಕರ ಜೊತೆ ಚರ್ಚೆ ನಡೆಸಿ ಮಾಹಿತಿ ನೀಡಿದರು. ಶಿರೂರು ಉತ್ಸವದಲ್ಲಿ ನೀಡಿದ ಭರವಸೆ: ಕಳೆದ ಎಪ್ರಿಲ್‌ನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ನಡೆದ ಶಿರೂರು ಉತ್ಸವದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಎಚ್.ಕೆ.ಪಾಟೀಲ್ ಶಿರೂರಿನಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ಪಶು ಆಸ್ಪತ್ರೆ ಸ್ಥಾಪಿಸುವ ಭರವಸೆ ನೀಡಿದ್ದರು. ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿದ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದರು. ಶಿರೂರು ವೆಲ್‌ಫೇರ್ ಟ್ರಸ್ಟ್ ಸಂಸ್ಥಾಪಕ ಸೈಯದ್ ಅಬ್ದುಲ್ ಖಾದರ್ ಬಾಶುರವರ ಪ್ರಯತ್ನದ ಬಳಿಕ ಸ್ಥಳ ಪರಿಶೀಲನೆಗೆ ಇಸ್ರೇಲ್ ಮೂಲದ ತಾಹನ್ ಕಂಪೆನಿಯ…

Read More

ಗಂಗೊಳ್ಳಿ : ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ, ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘ ಗಂಗೊಳ್ಳಿ ಹಾಗೂ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಭಾನುವಾರ ಉಚಿತ ಆರೋಗ್ಯ (ಆಯುರ್ವೇದ) ತಪಾಸಣಾ ಶಿಬಿರವು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ನಡೆಯಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಆಯುರ್ವೇದ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಕಾಮತ್, ಆಯುರ್ವೇದ ಅತ್ಯಂತ ಪ್ರಾಚೀನವಾದ ಔಷಧ ಪದ್ಧತಿಯಾಗಿದ್ದು, ಜನರಿಗೆ ಆಯುರ್ವೇದದ ಬಗ್ಗೆ ಸರಿಯಾದ ತಿಳುವಳಿ ಮಾಹಿತಿ ಇಲ್ಲ. ಹೀಗಾಗಿ ಜನರು ಆಯುರ್ವೇದ ಔಷಧ ಪದ್ಧತಿಯತ್ತ ಗಮನ ಹರಿಸುತ್ತಿಲ್ಲ. ದೇಹದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರದೆ ಉತ್ತಮ ಆರೋಗ್ಯಕ್ಕೆ ಆಯುರ್ವೇದ ಸಹಕಾರಿಯಾಗುತ್ತದೆ ಎಂದರು. ಗಂಗೊಳ್ಳಿ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ರಮೇಶ ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರ ಭುವನೇಂದ್ರ ಟ್ರಸ್ಟ್‌ನ ಕಾರ್ಯದರ್ಶಿ ಕೆ.ದಿನೇಶ ಕಾಮತ್, ಗಂಗೊಳ್ಳಿಯ ಜಿಎಸ್‌ವಿಎಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎಚ್.ಗಣೇಶ ಕಾಮತ್, ಸಂಸ್ಥೆಯ ಹಿರಿಯ ಸದಸ್ಯ…

Read More

ಬೈಂದೂರು: ಅಧ್ಯಕ್ಷ, ಪದಾಧಿಕಾರಿಗಳಿಲ್ಲದೇ ಎಲ್ಲರೂ ಸಮಾನರು ಎಂಬ ನೆಲೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಳದ ರಥಬೀದಿ ಪರಿಸರದ ೫೦ ಜನರ ಯುವಪಡೆ ಶ್ರೀದುರ್ಗಾ ಫ್ರೆಂಡ್ಸ್ ತಂಡವನ್ನು ಕಟ್ಟಿಕೊಂಡು ಎಲ್ಲರೂ ಕಾರ್ಯಕರ್ತರಂತೆ ಎಲೆ ಮರೆಯ ಕಾಯಿಯ ಹಾಗೆ ಯಾವುದೇ ಪ್ರಚಾರ ಬಯಸದೇ ಸಾಮಾಜಿಕ ಕಾರ್ಯ ಚಟುವಟಿಕೆ ಮಾಡುತ್ತಿರುವುದು ಶ್ಲಾಘನೀಯ ಎಂದು ಕೊಲ್ಲೂರು ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು. ಉಪ್ಪುಂದ ರಥಬೀದಿಯ ಶ್ರೀದುರ್ಗಾ ಫ್ರೆಂಡ್ಸ್‌ನ ನಾಲ್ಕನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಸಮಾಜಮುಖಿ ಹಾಗೂ ಜನಹಿತ ಕೆಲಸ ಮಾಡುವವರಿಗೆ ದೇವರ ವಿಶೇಷ ಕೃಪೆ ಇರುತ್ತದೆ. ವೈಜ್ಞಾನಿಕ ಯುಗದಲ್ಲಿಯೂ ಕೂಡಾ ವರ್ಷದಿಂದ ವರ್ಷಕ್ಕೆ ದೇವತಾಕಾರ್ಯ ಮತ್ತು ಜಾತ್ರೆಗೆ ಹೆಚ್ಚು ಜನ ಸೇರುತ್ತಿರುವುದರಿಂದ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡುವುದರ ಮೂಲಕ ಸಮಾಜವನ್ನು ದೈವತ್ವದ ಕಡೆಗೆ ಅಕರ್ಷಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ನಂತರ ಜಿಪಂ ಮಾಜಿ ಸದಸ್ಯ ಮದನ್‌ಕುಮಾರ್ ಮಾತನಾಡಿ, ನಾಡುಕಟ್ಟುವ ಕೆಲಸ ಕೇವಲ ಸರಕಾರ, ಮಂತ್ರಿ, ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ದೇಶದ ಪ್ರತಿಯೊಬ್ಬ ನಾಗರಿಕ ಹಾಗೂ…

Read More

ಕುಂದಾಪುರ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೆಕ್ಕಟ್ಟೆ ಸೇವಾ ಸಂಗಮ ವಿದ್ಯಾಕೇಂದ್ರದ ವಿದ್ಯಾರ್ಥಿಯಾಗಿ ಕನ್ನಡ ಮಾಧ್ಯಮದಲ್ಲಿ ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹಿನ್ನಲೆಯಲ್ಲಿ ರೋಷನ್ ಭಾಸ್ಕರ್ ಪೂಜಾರಿಯವರು 2015-16ನೇ ಸಾಲಿನಲ್ಲಿ ಬೆಂಗಳೂರಿನ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡುವ ಕನ್ನಡ ಮಾಧ್ಯಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನ.29ರಂದು ಮೈಸೂರಿನ ಕರ್ನಾಟಕ ಕಲಾ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈತ ಉದ್ಯಮಿ ಭಾಸ್ಕರ ಗುಲ್ವಾಡಿ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯೆ ಕಲ್ಪನಾ ಭಾಸ್ಕರ್ ಅವರ ಪುತ್ರ.

Read More

ಕೊಲ್ಲೂರು: ಪೂರ್ವ ಪ್ರಾಥಮಿಕ ಮಕ್ಕಳ ಭವಿಷ್ಯವನ್ನು ಮತ್ತು ಅವರ ಬಾಲ್ಯಜೀವನವನ್ನು ಹಸನಾಗಿ ಮಾಡುವಲ್ಲಿ ಕೊಲ್ಲೂರು ಅಂತಮ್ಮ ಪ್ರತಿಷ್ಟಾನ ಅತ್ಯಂತ ಪ್ರಾಮುಖ್ಯವಾದ ಹೆಜ್ಜೆಯನ್ನಿಟ್ಟಿದೆ. ಒಂದು ಸದೃಢ ಸಮಾಜದ ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬದುಕಲು ಹಾಗೂ ಪ್ರಾರಂಭದಿಂದಲೇ ವಿದ್ಯಾಭ್ಯಾಸ ಮಾಡಲು ಈ ಅಂಗನವಾಡಿ ಕೇಂದ್ರ ಸಹಕಾರಿಯಾಗಲಿದೆ ಎಂದು ಶಾಸಕ ಕೆ. ಗೋಪಾಲ ಪೂಜಾರಿ ಅಭಿಪ್ರಾಯಪಟ್ಟರು. ಕೊಲ್ಲೂರಿನಿಂದ ಸುಮಾರು ಏಳು ಕಿ.ಮಿ. ದೂರದ ನಕ್ಸಲ್ ಪೀಡಿತ ಪ್ರದೇಶ ವ್ಯಾಪ್ತಿಯ ಗುಡ್ಡಗಾಡು ಪ್ರದೇಶವಾಗಿರುವ ಹಳ್ಳಿಬೇರಿನಲ್ಲಿ ಕೊಲ್ಲೂರು ಅಂತಮ್ಮ ಪ್ರತಿಷ್ಟಾನದಿಂದ ರೂ.2.30ಲಕ್ಷ ಹಾಗೂ ತಾಪಂನಿಂದ 95 ಸಾವಿರ ರೂ.ಗಳ ಅನುದಾನದಿಂದ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕೇಂದ್ರವನ್ನು ಲೋಕಾರ್ಪಣೆ ಮಾಡಿ, ಬಳಿಕ ಮಾತನಾಡಿದರು. ಕಷ್ಟದಲ್ಲಿರುವವರಿಗೆ ನೆರವಿನ ಸಹಾಯದ ಮೂಲಕ ಸ್ಪಂದಿಸುವ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿತ್ವ ಹಾಗೂ ಉತ್ತಮ ಚಿಂತನೆ ಹೊಂದಿದ ತಾಪಂ ಸದಸ್ಯ ಕೊಲ್ಲೂರು ರಮೆಶ ಗಾಣಿಗ, ತಮ್ಮ ಹೊಣೆಯರಿತು ತಾಯಿ ಅಂತಮ್ಮ ಗಾಣಿಗ ಹೆಸರಿನ ಪ್ರತಿಷ್ಟಾನ ಸ್ಥಾಪಿಸಿ ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜಸೇವೆ ಮಾಡುತ್ತಿರುವುದು ಅವರ ಹೃದಯವೈಶಾಲ್ಯತೆಗೆ…

Read More

ಬೈಂದೂರು: ಸಂಸ್ಕೃತಿಯೊಂದಿಗೆ ಮಾತೃ ಭಾಷೆಯ ಬಳಕೆ ಹಾಗೂ ಉಳಿಕೆಯ ಚಿಂತನಾ ಶೀಲತೆಯನ್ನು ಮಕ್ಕಳಲ್ಲಿ ಉದ್ದೀಪನ ಗೊಳಿಸಲು ರಂಗಪ್ರಯೋಗ ಹೆಚ್ಚು ಪರಿಣಾಮಕಾರಿ ಎಂಬ ಹಿನ್ನೆಲೆಯಿಂದ ಉಪ್ಪುಂದದಲ್ಲಿ ’ವಿಂದ್ರಾ ಪೀಲ’ ಎಂಬ ಮಕ್ಕಳ ಕೊಂಕಣಿ ನಾಟಕವನ್ನು ಇತ್ತಿಚಿಗೆ ಆಯೋಜಿಸಲಾಗಿದೆ. ಇಲ್ಲಿನ ಶ್ರೀಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ದೇವಾಲಯದ ಸಭಾಭವನದಲ್ಲಿ ಜರಗುವ ಈ ಮಕ್ಕಳ ವಿಶೇಷ ರಂಗಕೃತಿಯನ್ನು ಮಂಗಳೂರಿನ ಸಾಧನಾ ಬಳಗ ಪ್ರಸ್ತುತ ಪಡಿಸಿತು. ಈ ಪ್ರಯೋಗದಲ್ಲಿ ಕರಾವಳಿ ಪರಿಸರದ ಸುಮಾರು 25 ಮಕ್ಕಳು ಅಭನಯಿಸಲಿದ್ದಾರೆ. ಸಂದೇಶ ಪೂರಿತ ವರ್ಣಮಯ ಹಾಸ್ಯ ನಾಟಕವನ್ನು ನಿನಾಸಂನ ಪಿ.ಬಿ. ಸತೀಶ್ ನಿರ್ದೇಶಿಸಿದ್ದು, ನಿರ್ಮಾಣ ನಿರ್ವಹಣೆ ಪ್ರಕಾಶ್ ಶೆಣೈ, ಸಂಗೀತ ಭಾವನಾ ಪಿ. ಶೆಣೈ ಹಾಗೂ ರಂಗ ಸಂಯೋಜನೆಯನ್ನು ಜಗನ್ ಪವಾರ್ ನಿರ್ವಹಿಸಿದರು. – ಜನನಿ

Read More

ಕುಂದಾಪುರ: ಆರ್ಥಿಕ ಸಾರ್ಥಕತೆ ಅಭಿಯಾನದಲ್ಲಿ ೧೮ ವರ್ಷದಿಂದ ೪೦ ವರ್ಷದವರೆಗಿನವರು ಅಟಲ್ ಪಿಂಚಣಿ ಯೋಜನೆಯಲ್ಲಿ ಸೌಲಭ್ಯ ಪಡೆಯುವಂತಾಗಬೇಕು. ಈ ಯೋಜನೆಯು ನಮ್ಮ ಜೀವನದಲ್ಲಿ ಆರ್ಥಿಕ ಸದೃಢತೆಗೆ ಬುನಾದಿಗೆ ಸಹಕಾರಿಯಾಗಲಿದೆ ಎಂದು ನೇರಳಕಟ್ಟೆ ಕೆನರಾ ಬ್ಯಾಂಕ್ ಶಾಖೆಯ ಮುಖ್ಯ ಪ್ರಬಂಧಕ ಸತೀಶ ಬೀಡು ಅಭಿಪ್ರಾಯಪಟ್ಟರು. ಅವರು ಇತ್ತೀಚಿಗೆ ಜರಗಿದ ಬಾಂಡ್ಯ ಹಾಲು ಉತ್ಪಾದಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಯೋಜನೆ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು. ಕೆನರಾ ಬ್ಯಾಂಕಿನ ಕೃಷಿ ವಿಸ್ತರಣಾಧಿಕಾರಿ ಪ್ರವೀಣಕುಮಾರ್ ಅವರು ಬ್ಯಾಂಕಿನ ಕೃಷಿ ಸಾಲ ಸೌಲಭ್ಯಗಳು ಹಾಗೂ ಕೃಷಿ ಸಾಲದ ಬಗ್ಗೆ ಮಾಹಿತಿ ನೀಡಿದರು. ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಸ್ವಾಗತಿಸಿದರು. ವಿಸ್ತರಣಾಧಿಕಾರಿ ಜಯರಾಮ್ ವಂದಿಸಿದರು.

Read More