ಉಪ್ಪುಂದದಲ್ಲಿ ಮಕ್ಕಳ ’ವಿಂದ್ರಾ ಪೀಲ’ ಕೊಂಕಣಿ ನಾಟಕ ಪ್ರದರ್ಶನ

Call us

Call us

Call us

ಬೈಂದೂರು: ಸಂಸ್ಕೃತಿಯೊಂದಿಗೆ ಮಾತೃ ಭಾಷೆಯ ಬಳಕೆ ಹಾಗೂ ಉಳಿಕೆಯ ಚಿಂತನಾ ಶೀಲತೆಯನ್ನು ಮಕ್ಕಳಲ್ಲಿ ಉದ್ದೀಪನ ಗೊಳಿಸಲು ರಂಗಪ್ರಯೋಗ ಹೆಚ್ಚು ಪರಿಣಾಮಕಾರಿ ಎಂಬ ಹಿನ್ನೆಲೆಯಿಂದ ಉಪ್ಪುಂದದಲ್ಲಿ ’ವಿಂದ್ರಾ ಪೀಲ’ ಎಂಬ ಮಕ್ಕಳ ಕೊಂಕಣಿ ನಾಟಕವನ್ನು ಇತ್ತಿಚಿಗೆ ಆಯೋಜಿಸಲಾಗಿದೆ.

Call us

Click Here

ಇಲ್ಲಿನ ಶ್ರೀಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಸಹಯೋಗದೊಂದಿಗೆ ದೇವಾಲಯದ ಸಭಾಭವನದಲ್ಲಿ ಜರಗುವ ಈ ಮಕ್ಕಳ ವಿಶೇಷ ರಂಗಕೃತಿಯನ್ನು ಮಂಗಳೂರಿನ ಸಾಧನಾ ಬಳಗ ಪ್ರಸ್ತುತ ಪಡಿಸಿತು. ಈ ಪ್ರಯೋಗದಲ್ಲಿ ಕರಾವಳಿ ಪರಿಸರದ ಸುಮಾರು 25 ಮಕ್ಕಳು ಅಭನಯಿಸಲಿದ್ದಾರೆ. ಸಂದೇಶ ಪೂರಿತ ವರ್ಣಮಯ ಹಾಸ್ಯ ನಾಟಕವನ್ನು ನಿನಾಸಂನ ಪಿ.ಬಿ. ಸತೀಶ್ ನಿರ್ದೇಶಿಸಿದ್ದು, ನಿರ್ಮಾಣ ನಿರ್ವಹಣೆ ಪ್ರಕಾಶ್ ಶೆಣೈ, ಸಂಗೀತ ಭಾವನಾ ಪಿ. ಶೆಣೈ ಹಾಗೂ ರಂಗ ಸಂಯೋಜನೆಯನ್ನು ಜಗನ್ ಪವಾರ್ ನಿರ್ವಹಿಸಿದರು.

– ಜನನಿ

Leave a Reply