Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನಲ್ಲಿ ನ.೨೮ ರಂದು ಕನಕದಾಸ ಜಯಂತಿ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಕನಕದಾಸರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಅವರು ಮಾತನಾಡಿ, ಕನಕದಾಸರು ತಮ್ಮ ಕೀರ್ತನೆ ಮತ್ತು ಸಾಹಿತ್ಯದ ಮೂಲಕ ಜಾತಿ.ಮತ, ಮೇಲು- ಕೀಳು ಎಂಬ ತಾರತಮ್ಯವನ್ನು ಹೋಗಲಾಡಿಸಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು. ಉಪನ್ಯಾಸಕರುಗಳಾದ ಮಂಜುನಾಥ.ಕೆ.ಎಸ್, ಗೀತಾ ಜೋಷಿ, ಹರೀಶ್ ಕಾಂಚನ್, ಗಿರಿಜಾ ಕೊಡೇರಿ, ಜೆಸ್ಸಿ ಡಿಸಿಲ್ವ, ಶ್ರೀಲತಾ.ಕೆ ಉಪಸ್ಥಿತರಿದ್ದರು.

Read More

ಕುಂದಾಪುರ: ಸಮೀಪದ ಮಾವಿನ ಕಟ್ಟೆ ಗ್ರಾಮದಲ್ಲಿ ಬೆಳ್ಳಂಬೆಳ್ಳಗೆ ಚಿರತೆಯೊಂದು ಗೋಚರಿಸಿ ಗ್ರಾಮಸ್ಥರು ಆತಂಕ್ಕೀಡಾಗಿರುವ ಘಟನೆ ಜರಗಿದೆ. ಕಳೆದ ಕೆಲವು ದಿನಗಳಿಂದಲೂ ಪರಿಸರ ಬೀದಿ ನಾಯಿಗಳು ವಿಕರವಾಗಿ ಅರಚುತ್ತಾ ಅತ್ತಿತ್ತ ಒಡಾಡುತ್ತಿದ್ದರೂ ಅದರ ಬಗ್ಗೆ ಹಚ್ಚೇನು ಗಮನ ಹರಿಸದಿದ್ದ ಗ್ರಾಮಸ್ಥರು ಇಂದು ಮಾತ್ರ ಚಿರತೆ ದರ್ಶನದಿಂದ ಬೆಚ್ಚಿ ಬಿದ್ದಿದ್ದಾರೆ. ಸ್ಥಳಿಯ ಮಸೀದಿಯ ಧರ್ಮಗುರುಗಳು ಇಂದು ಬೆಳಿಗ್ಗೆ ನಮಾಝ್ ನಿರ್ವಹಿಸಲು ಮಸೀದಿಯತ್ತ ತೆರಳುತ್ತಿದ್ದಾಗ, ರಸ್ತೆಯ ಪಕ್ಕದಲ್ಲಿ ನಾಯಿಗಳು ಗುಂಪಾಗಿ ಬೊಗಳುತ್ತಿರುವುದನ್ನು ಗಮನಿಸಿ ಅತ್ತ ಟಾರ್ಚಿನ ಬೆಳಕನ್ನು ಹಾಯಿಸಿದ್ದರು. ಟಾರ್ಚಿನ ಬೆಳಕಿನಲ್ಲಿ ಪೊದೆಯೊಂದರಲ್ಲಿ ಅವಿತು ಕುಳಿತು ಗುರುಗುಡುತ್ತಿದ್ದ ಆಳೆತ್ತರದ ಚಿರತೆಯ ದರ್ಶನ ವಾಗುತ್ತಲೇ ಬೆದರಿ ಹೋದ ಧರ್ಮಗುರುಗಳು ಅಲ್ಲಿಂದ ಲಗುಬಗೆಯಿಂದ ಮಸೀದಿಗೆ ತೆರಳಿ ಚಿರತೆ ಅವಿತು ಕೊಂಡಿರುವ ವಿಚಾರವನ್ನು ಹೇಳಿದ್ದರು. ಅದಾಗಲೇ ಹಲವರು ಒಟ್ಟು ಕೂಡಿ ಬಂದು ನೋಡಿದಾಗ ಚಿರತೆಯು ಪಕ್ಕದ ಹಾಡಿಯೊಳಗೆ ಒಡಿ ಹೋಗಿದ್ದು ಹಿಂಬಾಲಿಸಿದ ನಾಯಿಗಳು ಅಲ್ಲಿಯೂ ಆರ್ಭಟಿಸುತ್ತಿರುವ ದೃಶ್ಯ ಕಂಡು ಬಂದಿತ್ತೆನ್ನಲಾಗಿದೆ. ಚಿರತೆ ಗೋಚರವಾಗಿರುವ ವಿಚಾರ ಇದೀಗ ಗ್ರಾಮದೆಲ್ಲಡೆ ವ್ಯಾಪಿಸಿದ್ದು ಮಕ್ಕಳ…

Read More

ಮೂಡುಬಿದಿರೆ: ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡುವುದಕ್ಕೂ ಮುನ್ನ ನಾಡಗೀತೆ, ರೈತಗೀತೆ, ಭಾವೈಕ್ಯ ಗೀತೆಗಳನ್ನು ಹಾಡುವಾಗ ನೆರೆದಿದ್ದ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಸಾವಿರಾರು ಪ್ರೇಕ್ಷಕರು ಕನ್ನಡ ನಾಡಿನ ಭಾವುಟ, ರೈತ ಧ್ವಜ ಹಾಗೂ ರಾಷ್ಟ್ರ ಧ್ವಜವನ್ನು ಬೀಸಿ ಗೌರವ ಸಲ್ಲಿಸಿದರು. ಪುತ್ತಿಗೆ ನುಡಿಸಿರಿ ಮೈದಾನದಲ್ಲಿ ತುಂಬಿದ್ದ ಪ್ರೇಕ್ಷಕರು ಕೈಯಲ್ಲಿದ್ದ ಧ್ವಜದ ವಿಹಂಗಮ ನೋಟ ವಿಶೇಷ ರಂಗು ನೀಡಿತ್ತು.

Read More

ಮೂಡಬಿದಿರೆ: ಆಳ್ವಾಸ್ ನುಡಿಸಿರಿ 2015ರ ವಿದ್ಯಾರ್ಥಿ ಸಿರಿ ಸಮ್ಮೇಳನದ ಸರ್ವಾಧ್ಯಕ್ಷೆ ಕುಮಾರಿ ಶಾಲಿಕಾ ಎಕ್ಕಾರು ಇವರನ್ನು ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸನ್ಮಾನಿಸಿದರು. ಈ ಸಂದರ್ಭ ವಿದ್ಯಾರ್ಥಿ ಸಿರಿಯ ಉದ್ಘಾಟಕರಾದ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ಹಿರಿಯ ವಿದ್ವಾಂಸರಾದ ಪ್ರೊ. ಹಂಪನಾ ಮತ್ತು ಕಮಲಾ ಹಂಪನಾ ಹಾಗೂ ‘ಆಳ್ವಾಸ್ ವಿದ್ಯಾರ್ಥಿ ಸಿರಿ’ ಪ್ರಶಸ್ತಿ ಪುರಸ್ಕøತ ಸಾಗರದ ಕಿನ್ನರ ಮೇಳದ ನಿರ್ದೇಶಕ ಕೆ.ಜಿ. ಕೃಷ್ಣಮೂರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕøತ ಟಿ. ಎಸ್. ನಾಗರಾಜ ಶೆಟ್ಟಿ ತಿಪಟೂರು, ವಿದ್ಯಾರ್ಥಿ ಪ್ರತಿಭೆ ಗಗನ್ ಜಿ. ಗಾಂವ್ಕರ್ ಮೊದಲಾದವರು ಉಪಸ್ಥಿತರಿದ್ದರು.

Read More

ಮೂಡಬಿದಿರೆ: ಯಾವ ಭಾಷೆಯೂ ಮೇಲಲ್ಲ, ಯಾವ ಭಾಷೆಯೂ ಕೀಳಲ್ಲ ಆದರೆ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ನಮ್ಮ ಮಾತೃಭಾಷೆಯೇ ಮೂಲ. ಯಾವುದೇ ವಿಚಾರವು ನಮ್ಮ ಹೃದಯವನ್ನು ತಟ್ಟಿ, ಮನಸ್ಸನ್ನು ಸೇರಿ, ಬುದ್ಧಿಯ ಮೂಲಕ ಚೈತನ್ಯಶೀಲಗೊಳಿಸುವ ಶಕ್ತಿ ನಮ್ಮ ಮಾತೃಭಾಷೆಗಿದೆ. ಕನ್ನಡ ಭಾಷೆಯನ್ನು ಆಸ್ವಾದಿಸಲು ಕಲಿಸುವ ಮೂಲಕ ಮಾತೃಭಾಷೆಯನ್ನು ಪ್ರೀತಿಸುವಂತೆ ಮಾಡಿ ಅದರ ಕಡೆಗೆ ಒಲವು ತೋರಿಸಲು ಸಾಧ್ಯ ಎಂದು ಸಂತ ಸಿಸಿಲಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕು. ಶಾಲಿನಿ ಎಕ್ಕಾರು ಹೇಳಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ವಿದ್ಯಾರ್ಥಿ ಸಿರಿ -2015 ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡವು ತನ್ನ ಕಂಪು ಹಾಗೂ ಇಂಪಿನಿಂದ ಹಲವಾರು ಕವಿಗಳನ್ನು, ಸಾಹಿತಿಗಳನ್ನು ತನ್ನೆಡೆಗೆ ಆಕರ್ಷಿಸಿದೆ. ಕನ್ನಡದ ಈ ಸೊಬಗಿನಿಂದ ಅದು ಕರುನಾಡ ಜನರ ಅತ್ಯಮೂಲ್ಯ ಸಂಪತ್ತಾಗಿದೆ. ಆದ್ದರಿಂದಲೇ ಅದನ್ನು ಸಿರಿಗನ್ನಡ, ಸಿರಿನುಡಿ ಎಂದು ಹಲವಾರು ಕವಿಗಳು ಕರೆದಿರುವರು. ಕನ್ನಡದಲ್ಲೊಂದು ಅಪೂರ್ವ ಶಕ್ತಿಯಿದೆ. ತನ್ನೆಡೆಗೆ ಆಕರ್ಷಿಸುವ, ಜನರ ಮನದ ಬಾಗಿಲ ತಟ್ಟುವ,…

Read More

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2015ರ ಆರಂಭ ದಿನ ರ್ಭ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸ್ಭೆರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Read More

ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ನಡೆಸಿಕೊಂಡು ಬರುತ್ತಿರುವ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವು ನವಂಬರ್ ತಿಂಗಳ 26, 27, 28 ಮತ್ತು 29ರ ದಿನಾಂಕಗಳಂದು 4 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ. ಆಳ್ವಾಸ್ ನುಡಿಸಿರಿಯ ಉದ್ಘಾಟನಾ ಸಮಾರಂಭವು ’ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್’ ವೇದಿಕೆಯಲ್ಲಿ ನವಂಬರ್ 26ರಂದು ಮುಸ್ಸಂಜೆ 6.00 ಗಂಟೆಗೆ ನೆರವೇರಲಿದೆ. ಉಳಿದಂತೆ 3 ದಿನಗಳ ಸಮ್ಮೇಳನವು ಪ್ರತಿವರ್ಷದಂತೆ ರತ್ನಾಕರವರ್ಣಿ ವೇದಿಕೆಯಲ್ಲಿ, ನಾಡೋಜ ಕಯ್ಯಾರ ಕಿಂಞಣ್ಣ ರೈ ಸಭಾಂಗಣದಲ್ಲಿ ಜರುಗಲಿದೆ. [quote font_size=”14″ bgcolor=”#ffffff” arrow=”yes” align=”right”]ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ಸರ್ವಾಧ್ಯಕ್ಷರು: ಈ ಶತಮಾನದ ಹಿರಿಯ ವಿದ್ವಾಂಸರು ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀಯವರು. 40 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಹಿರಿಯ ಪ್ರಾಧ್ಯಾಪಕರು ಇವರು. ಹಳೆಗನ್ನಡ ಸಾಹಿತ್ಯ, ವ್ಯಾಕರಣ, ಛಂದಸ್ಸು, ಅಲಂಕಾರಶಾಸ್ತ್ರ, ಸಾಹಿತ್ಯ ಚರಿತ್ರೆ, ಗ್ರಂಥಸಂಪಾದನೆ, ನಿಘಂಟುಶಾಸ್ತ್ರ, ಹಸ್ತಪ್ರತಿ ಶಾಸ್ತ್ರಗಳಲ್ಲಿ ಮೇರುಪಂಡಿತರಿವರು. ಕನ್ನಡ ಸಂಶೋಧನಾ ಕ್ಷೇತ್ರದ ಗಣ್ಯ ಹಾಗೂ ಚಿರಸ್ಮರಣೀಯರಲ್ಲಿ ಇವರೂ ಒಬ್ಬರು.[/quote] ಉದ್ಘಾಟನೆಗೆ ಬೃಹತ್ ವೇದಿಕೆ: ಆಳ್ವಾಸ್ ನುಡಿಸಿರಿಯ ಉದ್ಘಾಟನಾ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟೇಶ್ವರ: ಕರ್ನಾಟಕ ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೋಟೇಶ್ವರದಲ್ಲಿ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಮನ್ಮಹಾರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು. ಧನುರ್ ಲಗ್ನ ಸುಮೂಹರ್ತದಲ್ಲಿ ಬೆಳಗ್ಗೆ 10.45ರಿಂದ ಶ್ರೀದೇವರ ರಥಾರೋಹಣ ಪೂರ್ವ ವಿಧಿಗಳು ಆರಂಭಗೊಂಡವು. ತಂತ್ರಿ ಪ್ರಸನ್ನ ಕುಮಾರ ಐತಾಳ್ ಧಾರ್ಮಿಕ ವಿಧಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಶ್ರೀದೇವರಿಗೆ ಶತರುದ್ರಾಭಿಷೇಕ ಇನ್ನಿತರ ಧಾರ್ಮಿಕ ವಿಧಿ ನಡೆದ ಬಳಿಕ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭವ್ಯ ರಥೋತ್ಸವ ನಡೆಯಿತು. ಸಂಜೆ 5.15ಗಂಟೆಗೆ ಬಸವನಗುಡಿ ಸನ್ನಿಧಿಯಿಂದ ಶ್ರೀದೇವರಿಗೆ ಅಭಿಮುಖವಾಗಿ ರಥ ಏಳೆದ ಬಳಿಕ ರಥಾಅವರೋಹಣದ ವಿಧಿ ಸಮಾಪನಗೊಳ್ಳುತ್ತದೆ. ಅಲೆವೂರು ಶ್ರೀ ವಿಷ್ಟುಪೂರ್ತಿ ಸೇವಾ ಬಳಗದವರ ಚಂಡೆ ವಾದನ, ಹಾಗೂ ಕೆರಳ ಚಂಡೆ ವಾದನ, ಉಡುಪಿಯ ಮಂಜುಷಾ ಮಹಿಳಾ ಚಂಡೆ ಬಳಗ ರಥೋತ್ಸವದ ಮೆರಗು ಹೆಚ್ಚಿಸಿದ್ದವು. ಅಪಾರ ಸಂಖ್ಯೆಯ ಜನಸ್ತೋಮ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀಕೋಟಿಲಿಂಗೇಶ್ವರ ದೇವರ ದರ್ಶನ ಪಡೆದು ಪುನೀತರಾದರು. ದಾವಣಗರೆಯ ಕೆ.ವಿ. ಆನಂದರಾವ್ ಮತ್ತು ಮಕ್ಕಳಿಂದ ಉಚಿತ ಪಾನಕ…

Read More

ಕುಂದಾಪುರ: ಕಳೆದ ಸರಿ ಸುಮಾರು ಐದು ತಿಂಗಳ ಹಿಂದೆ ಮನೆಯಿಂದ ನಿಗೂಢವಾಗಿ ನಾಪತ್ತೆಯಾದ ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಮಾಲತಿ ಬಿ. ಶೆಟ್ಟಿ (65) ಅವರ ಪತ್ತೆಗೆ ಸಂಬಂಧಿಸಿದಂತೆ ಸಾಕಷ್ಟು ಹುಡುಕಾಟದ ನಂತರವೂ ಯಾವುದೇ ಪ್ರಯೋಜನ ಇಲ್ಲದಿರುವುದರಿಂದ ಅವರ ಪುತ್ರ ಅಮೇರಿಕಾದ ಕಂಪೆನಿಯೊಂದರಲ್ಲಿ ಸಿ.ಇ.ಓ. ಆಗಿರುವ ಸತೀಶ್ ಶೆಟ್ಟಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವ ಮೂಲಕ ತಾಯಿಯನ್ನು ಹುಡುಕಿಕೊಡುವಂತೆ ತಮ್ಮ ಬಾವ ರಾಮಮನೋಹರ ಶೆಟ್ಟಿ ಮೂಲಕವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆನ್ನಲಾಗಿದೆ. ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ತನ್ನ ಮನೆಯಲ್ಲಿ ನೆಲೆಸಿದ್ದ ಮಾಲತಿ ಬಿ.ಶೆಟ್ಟಿ ಅವರು 2015ರ ಜೂನ್ 24 ರಂದು ಮಧ್ಯಾಹ್ನ ಊಟದ ಬಳಿಕ ಮನೆಯಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಒಂದೆರಡು ದಿನ ಸುತ್ತಮುತ್ತಲು ಹುಡುಕಾಟ ನಡೆಸಿದ ಕುಟುಂಬಿಕರು ಕೊನೆಗೆ ಜೂನ್ 26ರಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತಾಯಿ ನಾಪತ್ತೆಯಾಗುವ ಒಂದೆರಡು ದಿನಗಳ ಹಿಂದಷ್ಟೇ ಅಮೇರಿಕಾಗೆ ತೆರಳಿದ್ದ ಸತೀಶ್ ಶೆಟ್ಟಿ ತಾಯಿ ನಾಪತ್ತೆಯಾದ ಸುದ್ದಿ ಕೇಳಿ ಊರಿಗೆ ಬಂದವರು ಆಕಾಶ ಭೂಮಿ…

Read More

ಕುಂದಾಪುರ: ಇಲ್ಲಿನ ಅಂಕದಕಟ್ಟೆಯಲ್ಲಿ ಸರ್ಜನ್ ಆಸ್ಪತ್ರೆಯ ಸಮೀಪ ರಿಕ್ಷಾವೊಂದು ಸೈಕಲ್ ಸವಾರನಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸೈಕಲ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಇಂದು ಸಂಜೆ ವರದಿಯಾಗಿದೆ. ಅಂಕದಕಟ್ಟೆಯ ನಿವಾಸಿ ರಮಾನಂದ ಹೆಬ್ಬಾರ್ (55) ಅಪಘಾತದಲ್ಲಿ ಮೃತ ದುರ್ದೈವಿ. ಅಂಕದಕಟ್ಟೆಯಲ್ಲಿ ದಿನಸಿ ಅಂಗಡಿ ಹೊಂದಿದ್ದ ರಮಾನಂದ ಹೆಬ್ಬಾರ್ ಹತ್ತಿರದ ಅಂಗಡಿಯೊಂದರಿಂದ ಹಾಲಿನ ಪ್ಯಾಕೇಟ್ ಖರೀದಿಸಿ ಸೈಕಲಿನಲ್ಲಿ ಸರ್ಜನ್ ಆಸ್ಪತ್ರೆ ಬಳಿಯ ಡಿವೈಡರ್ ದಾಟುತ್ತಿದ್ದ ವೇಳೆ ಕೋಟೇಶ್ವರ ಕಡೆಯಿಂದ ಬಂದ ರಿಕ್ಷಾ ಡಿಕ್ಕಿ ಹೊಡೆದಿತ್ತು. ಡಿಕ್ಕಿಯ ರಭಸಕ್ಕೆ ತಲೆಗೆ ಗಂಭೀರ ಏಟು ತಗಲಿದ್ದ ಅವರನ್ನುಕೂಡಲೇ ಆಸ್ಪತ್ರೆಗೆ ಸಾಗಿಸಿದರಾದರೂ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಸ್ಥಳಕ್ಕೆ ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More