Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ಇಲ್ಲಿನ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ರಜತ ಮಹೋತ್ಸವು ಗಣೇಶನ ಜಲಸ್ಥಂಭನದ ಮೂಲಕ ತೆರೆಬಿದ್ದಿದೆ. 25ನೇ ವರ್ಷದ ಸಂಭ್ರಮದಲ್ಲಿರುವ ಗಣೇಶೋತ್ಸವ ಸಮಿತಿಯು ಖಾರ್ವಿಕೇರಿ ಶ್ರೀ ಮಹಾಕಾಳಿ ಕಲ್ಯಾಣ ಮಂಟಪದಲ್ಲಿ ಗಣೇಶೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಿತ್ತು. ಸೆ.18ರಂದು ಗಣೇಶನನ್ನು ಪೂಜಾ ಪೀಠದಲ್ಲಿ ಪ್ರತಿಷ್ಠಾಪಿಸುವುದರಿಂದ ಮೊದಲ್ಗೊಂಡು ಪ್ರತಿನಿತ್ಯ ಗಣಹೋಮ, ಮಹಾಪೂಜೆಗಳು ಪ್ರತಿನಿತ್ಯ ಜರುಗಿದರೇ, ಸೆ.೨೧ರಂದು ಸಾಮೂಹಿಕ ಸಹಸ್ರ ನಾಳಿಕೇರ ಗಣಯಾಗ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪ್ರತಿದಿನ ಸಂಜೆ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಸೆ.19ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಧಾರ್ಮಿಕ ಪ್ರವಚನ ನೀಡಿ ಆಶಿರ್ವದಿಸಿದರು. ಸೆ.21ರ ಸಂಜೆ ನಡೆದ ವೈಭವಪೂರಿತ ಪುರಮೆರವಣಿಗೆಯಲ್ಲಿ ಸಾರ್ವಜನಿಕರ ಗಮನ ಸೆಳೆಯಿತು. ಖಾರ್ವಿಕೇರಿ ದೇವಳದಿಂದ ಆರಂಭಗೊಂಡು ಶಾಸ್ತ್ರೀವೃತ್ತವನ್ನು ಸುತ್ತುವರಿದ ಪಂಚಗಂಗಾವಳಿ ನದಿಯತ್ತ ಸಾಗಿದ ಬಣ್ಣ ಬಣ್ಣದ ವಿದ್ಯುದಲಾಂಕಾರಗಳಿಂದ ಕೂಡಿದ ಟ್ಯಾಬ್ಲೊಗಳು, ವಿವಿಧ ಸಂದೇಶ ಸಾರುವ ಟ್ಯಾಬ್ಲೋಗಳು ಸೇರಿದಂತೆ ೨೦ಕ್ಕೂ ಹೆಚ್ಚು ಟ್ಯಬ್ಲೋಗಳು ಆಕರ್ಷಕವಾಗಿದ್ದವು. ವಿಸರ್ಜನಾ…

Read More

ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಸಮೀಪ ರಾತ್ರಿ 8:30ರ ಸುಮಾರಿಗೆ ಬೈಕ್ ಹಾಗೂ ಕಂಟೆನರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿದ್ದು, ಕಂಟೆನರ್ ಚಾಲಕ ವಾಹನ ಸಮೇತ ಅಲ್ಲಿಂದ ಪರಾರಿಯಾಗಿದೆ. ಘಟನೆಯ ವಿವರ: ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಬೈಕಿನಲ್ಲಿ ಸವಾರೀರ್ವರು ತೆರಳುತ್ತಿದ್ದಾಗ ಕುಂದಾಪುರದ ಕಡೆಗೆ ಸಾಗುತ್ತಿದ್ದ ಕಂಟೇನರ್ ಒಂದು ಹೆಮ್ಮಾಡಿಯ ಜುವೆಲ್ ಪಾರ್ಕ್ ಹೋಟೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಢಿಕ್ಕಿ ಹೊಡೆದಿತ್ತು. ಢಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣ ಪುಡಿಯಾಗಿದ್ದು ಓರ್ವ ಸವಾರನ ಕಾಲು ತುಂಡಾಗಿ ಬಿದ್ದಿದೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇತ್ತ ಢಿಕ್ಕಿ ಹೊಡೆದ ಕಂಟೆನರ್ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಬೈಕ್ ಸವಾರರು ಎಲ್ಲಿಯವರು, ಎಲ್ಲಿಗೆ ತೆರಳುತ್ತಿದ್ದರು ಎಂಬ ಸ್ವಷ್ಟ ಮಾಹಿತಿ ಲಭ್ಯವಾಗಿಲ್ಲ. ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ತನಿಕೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Read More

ಕುಂದಾಪುರ: ಇಂದು ಕುಂದಾಪುರ ನಗರದಲ್ಲಿ ಭವ್ಯ ಪುರಮೆರವಣಿಗೆಯೊಂದಿಗೆ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನ ಗಣೇಶೋತ್ಸವದ ಭವ್ಯ ಪುರಮೆರವಣಿಗೆ ನಡೆಯಲಿದೆ. ಪಂಚಗಂಗಾವಳಿ ನದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಶ್ರೀ ಆಂಜನೇಯ ವ್ಯಾಯಾಮ ಶಾಲೆಯ ಸದಸ್ಯರಿಂದ ಮೈನವಿರೇಳಿಸುವ ಬೆಂಕಿ ಆಟ ಮುಂತಾದ ರಂಜನೆಯ ಬಳಿಕ ಪಂಚಗಂಗಾವಳಿ ನದಿಯಲ್ಲಿ ಗಣಪತಿಯ ವಿಗ್ರಹವನ್ನು ಜಲಸ್ಥಂಭನ ಮಾಡಲಾಗುವುದು.

Read More

ಕುಂದಾಪುರ: ತಾಲೂಕಿನ ಕಂಡ್ಲೂರು ಚೆಕ್‌ಪೋಸ್ಟ್‌ ಬಳಿ ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ಗೋವುವನ್ನು ಸಾಗಿಸುತ್ತಿದ್ದ ವೇಳೆ, ಓಮ್ನಿಯನ್ನು ಬೆನ್ನಟ್ಟಿದ ಪೊಲೀಸರು ಗೋವು ಸಹಿತ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳು ವಾಹನ ನಿಲ್ಲಿಸಿ ಪರಾರಿಯಾಗಿದ್ದಾರೆ. ಸೌಕೂರು ಕಡೆಯಿಂದ ಕಂಡ್ಲೂರು ಕಡೆಗೆ ಗೋವುವನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಕುಂದಾಪುರ ಪೊಲೀಸರು ಓಮ್ನಿಯನ್ನು ಅಡ್ಡಗಟ್ಟಿದರೂ ನಿಲ್ಲಿಸದೇ ಮುಂದೆ ಹೋದಾಗ ಓಮ್ನಿಯನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಸ್ವಲ್ಪ ದೂರು ವಾಹನ ಚಲಾಯಿಸಿದ ಆರೋಪಿಗಳು ಬಳಿಕ ರಸ್ತೆಯ ಬದಿಯಲ್ಲಿಯೇ ನಿಲ್ಲಿಸಿ ಪರಾರಿಯಾಗಿದ್ದಾರೆ. ಓಮ್ನಿಯಲ್ಲಿ ದನವನ್ನು ಹಿಂಸಾತ್ಮಕವಾಗಿ ಹಗ್ಗದಿಂದ ಕಟ್ಟಿ ಕಸಾಯಿಖಾನೆಗೆ ಕೊಂಡೊಯ್ಯಲು ಕದ್ದು ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ವಶಪಡಿಸಿಕೊಂಡ ಜಾನುವಾರು ಹಾಗೂ ವಾಹನವನ್ನು ಠಾಣೆಗೆ ತರಲಾಗಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿ.ಕೆ. ಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಯ ಪುಸ್ತಕ ಹಸ್ತಾಂತರ ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಕುಂದಾಪುರದ ವಿ.ಕೆ. ಆರ್ ಆಚಾರ್ಯ ಆಂಗ್ಲ ಮಾಧ್ಯಮ ಶಾಲೆಯ ಗ್ರಂಥಾಲಯಕ್ಕೆ ಜ್ಞಾನ ದೀಪ ಯೋಜನೆಯಡಿ ಪುಸ್ತಕಗಳನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಶಾಲಾ ಮುಖ್ಯೋಪಧ್ಯಾಯ ಕೃಷ್ಣ ಅಡಿಗ ಅವರಿಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಕೋಡಿ ಉರ್ದು ಶಾಲೆಗೆ ಪುಸ್ತಕ ಹಸ್ತಾಂತರ ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ಕೋಡಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಜ್ಞಾನ ದೀಪ ಯೋಜನೆಯಡಿ ಗ್ರಂಥಾಲಯಕ್ಕೆ ಪುಸ್ತಕಗಳನ್ನು ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಶಾಲಾ ಮುಖ್ಯೋಪಧ್ಯಾಯಿನಿ ರೆಹನಾ ಬೇಗಂ ಅವರಿಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್ ಕುಂದಾಪುರದ ಕಾರ್ಯದರ್ಶಿ ಸಂತೋಷ ಕೋಣಿ, ಶಾಲಾ ಶಿಕ್ಷಕರಾದ ದುರ್ಗಿ ಪಟಗಾರ್, ನಜಿಯಾ ಬಾನು, ಜ್ಯೋತಿ ಆಚಾರ್, ಸಂಧ್ಯಾ ರಾಣಿ, ರಂಜನಿ ಉಪಸ್ಥಿತರಿದ್ದರು.

Read More

ಕುಂದಾಪುರ: ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಜೇಸಿ ಸಪ್ತಾಹದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರದ ಸಹಭಾಗಿತ್ವದಲ್ಲಿ ಕುಂದಾಪುರ ಭಂಡಾರ್‌ಕಾರ್ಸ್ ಪದವಿ ಕಾಲೇಜಿನಲ್ಲಿ ನಾಯಕತ್ವ ತರಬೇತಿ ಕಾರ್ಯಕ್ರಮ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು. ಈ ಸಂದರ್ಭದಲ್ಲಿ ಕುಂದಾಪುರ ಭಂಡಾರ್‌ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ| ನಾರಾಯಣ ಶೆಟ್ಟಿ, ಭಂಡಾರ್‌ಕಾರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ, ತರಬೇತುದಾರರಾದ ವೇಣುಗೋಪಾಲ ಪುತ್ತೂರು, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಜೇಸಿಐ ಕುಂದಾಪುರ ಸಿಟಿ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ವಲಯ ಉಪಾಧ್ಯಕ್ಷ ನಾಗೇಂದ್ರ ಪೈ ಉಪಸ್ಥಿತರಿದ್ದರು. ಗೌತಮ್ ನಾವಡ ವಂದಿಸಿದರು.

Read More

ಕುಂದಾಪುರ: ಕುಂದಾಪುರ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ಇಂಜೀನಿಯರ‍್ಸ್ ದಿನಾಚರಣೆ ಪ್ರಯುಕ್ತ ಕೋಟಾದ ನಿವಾಸಿ ನಿವೃತ್ತ ಎಕ್ಸಿಕ್ಯೂಟಿವ್ ಇಂಜೀನಿಯರ್ ಮಂಜುನಾಥ್ ನಾಯರಿ ಇವರನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಅಧ್ಯಕ್ಷ ಕೆ. ಅಶೋಕ್ ಬೆಟ್ಟಿನ್, ಖಜಾಂಚಿ ನಾಗರಾಜ್ ಶೇಟ್, ಹಿರಿಯ ಸದಸ್ಯ ನಾರಾಯಣ ಶೆಟ್ಟಿ, ರಮಾನಂದ, ಪ್ರಕಾಶ್ ಬೆಟ್ಟಿನ್, ರಾಜೀವ್ ಕೋಟ್ಯಾನ್, ನಿರಂತನ್, ಜಯರಾಮ್ ಪಿ. ಕಲ್ಪತರು ಚಂದ್ರಶೇಖರ್, ಜಯಪ್ರಕಾಶ್, ಸಚ್ಚಿದಾನಂದ ಶೆಟ್ಟಿ, ವೇಣುಗೋಪಾಲ್ ಶೆಟ್ಟಿ ಮತ್ತು ಲಯನೆಸ್ ಅಧ್ಯಕ್ಷ ಬಿಂದಿಯ ಬೆಟ್ಟಿನ್, ಖಜಾಂಚಿ ಸುನೀತಾ ಶೇಟ್ ಉಪಸ್ಥಿತರಿದ್ದರು.

Read More

ಕುಂದಾಪುರ ರಾಮಕ್ಷತ್ರಿಯ ಯುವಕ ಮಂಡಳಿಯ ಗಣೇಶೋತ್ಸವ ಸುವರ್ಣ ಮಹೋತ್ಸವ ಕುಂದಾಪುರ: ನಮ್ಮ ದೃಷ್ಟಿಕೋನ ಹಾಗೂ ಚಿಂತನೆ ವಿಶಾಲವಾದಂತೆ ನಮ್ಮೊಳಗಿನ ಸಂಕುಚಿತ ಮನೋಭಾವ ಕಡಿಮೆಯಾಗುತ್ತಾ ಹೋಗುತ್ತದೆ. ಈ ನಿಟ್ಟಿನಲ್ಲಿ ಸಂಘಟನೆ ಮುಖ್ಯ ಪಾತ್ರ ಬಹುದೊಡ್ಡದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಕುಂದಾಪುರ ರಾಮಕ್ಷತ್ರಿಯ ಯುವಕ ಮಂಡಳಿ ಯ ಗಣೇಶೋತ್ಸವ ಸುವರ್ಣ ಮಹೋತ್ಸವ ಸಮಾರಂಭದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ರಕ್ಷಣೆಗೆ ಅನ್ವರ್ಥರಾಗಿರುವ ರಾಮಕ್ಷತ್ರಿಯ ಸಮಾಜ ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಹಿಂದಿನಿಂದಲೂ ಮೈಗೂಡಿಸಿಕೊಂಡು ಬಂದಿದೆ, ರಾಮಕ್ಷತ್ರಿಯರು ಸ್ವ ಹಿತಾಸಕ್ತಿಗೆ ಹೆಚ್ಚು ಒತ್ತುಕೊಡದೆ, ವಿಶಾಲ ದೃಷ್ಟಿಯಿಂದ ನೋಡುತ್ತಿರುವುದರ ಪರಿಣಾಮ ಸಮಾಜದಲ್ಲಿ ಸುಧಾರಣೆ ಕಾಣುವಂತಾಗಿದೆ. ಅವರೆಲ್ಲೂರ ಸಂಘಟನೆ, ಒಗ್ಗಟ್ಟು ಇನ್ನಷ್ಟು ಬಹಳಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದ ಅವರು ಬದುಕಿನಲ್ಲಿ ಸಾಧನೆ ಮಾಡಬೇಕಾದರೆ ಸನ್ಮಾರ್ಗದಲ್ಲಿ ನಡೆಯಬೇಕು. ಇದರಿಂದ ದೇವರ ಅನುಗ್ರಹ ಪ್ರಾಪ್ತವಾಗಲು ಸಾಧ್ಯ ಎಂದರು. ಮಾಜಿ ಬೈಂದೂರು ಶಾಸಕ ವಿಶ್ವ ರಾಮಕ್ಷತ್ರಿಯರ ಸಂಘದ ಅಧ್ಯಕ್ಷ…

Read More

ಕುಂದಾಪುರ: ಸಮುದ್ರದಲ್ಲಿ ಉಪ್ಪು ಹೇಗೆ ಬೆರೆತಿದೆಯೋ ಹಾಗೇ ನಾವು ಭಗವಂತನೊಂದಿಗೆ ಭಕ್ತಿಯ ಮೂಲಕ ಬೆರೆಯಬೇಕು. ಭಗವಂತನಿಗೆ ಹತ್ತಿರವಾಗುವುದು ಎಂದರೆ ಆತನಲ್ಲಿ ಲೀನವಾಗುವುದು ಎಂದರ್ಥ. ಪರಿಶುದ್ಧ ಭಾವನೆಯಿಂದ ಭಗವಂತನನ್ನು ನೆನೆದು ನಮ್ಮಲ್ಲಿರುವ ಕೆಡುಕನ್ನು ದೂರ ಮಾಡುವ ಮೂಲಕ ಆತನ ಕೃಪೆಗೆ ಪಾತ್ರರಾಗಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನ ರಜತಮಹೋತ್ಸವದ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಕೃಪಾ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಸಹಬಾಳ್ವೆ, ಸಾಹಸ, ಕಠಿಣ ಕೆಲಸಕ್ಕೆ ಖಾರ್ವಿ ಸಮಾಜ ಹೆಸರಾಗಿದ್ದು ಒಗ್ಗಟ್ಟು, ಶ್ರಮ ಜೀವನ ಸಮಾಜಕ್ಕೆ ಮಾದರಿ. ಅತ್ಯಂತ ನಂಬಿಕೆ, ಪ್ರಾಮಾಣಿಕತೆ ಖಾರ್ವಿ ಸಮಾಜದ ಹೆಚ್ಚುಗಾರಿಕೆ. ಕಳೆದ ನಾಲ್ಕಾರು ದಶಕಗಳಲ್ಲಿ ಸಮಾಜ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ ಎಂದ ಅವರು ದುಡಿಮೆಗೆ ತಕ್ಕ ಪ್ರತಿಫಲ ಈಗ ಸಿಗುತ್ತಿದ್ದು ಹಿಂದಿನ ಕಷ್ಟದ ಬದುಕಿಗಿಂತ ಈಗಿನ ಜೀವನ ಸುಧಾರಣೆ ಕಾಣಲು ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಬಸ್ರೂರು…

Read More

ಕುಂದಾಪುರ: ಯುವಜನರಲ್ಲಿ ಸಂಘಟನೆ, ಸೇವಾ ಭಾವ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ. ಜೇಸಿ ಸಂಘಟನೆ ಸಪ್ತಾಹ ಆಯೋಜನೆಯ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುವ ಜೊತೆಗೆ ಸಾಂಸ್ಕೃತಿಕ ಲೋಕ ಕುಂದಾಪುರದಲ್ಲಿ ಮೇಳೈಸುವಂತೆ ಮಾಡಿದ್ದಾರೆ. ಇಂತಹ ಅಪೂರ್ವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿದ ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ್ ಅವರ ಕಾರ್ಯ ವೈಖರಿ ಪ್ರಶಂಸನೀಯ ಎಂದು ಬಸ್ರೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೆಸರರಾದ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಒಂದು ವಾರಗಳ ಕಾಲ ಅದ್ಧೂರಿಯಾಗಿ ನಡೆದ ಜೇಸಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಕುಂದಾಪುರದ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅವರಿಗೆ ವೃತ್ತಿ ಜೀವನದ ಸಾಧನೆಯನ್ನು ಗುರುತಿಸಿ ಜೇಸಿ ಸ್ವರ್ಣ ಪತ್ರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೇಸಿಐ ಕುಂದಾಪುರ ಸಿಟಿ ಪೂರ್ವಾಧ್ಯಕ್ಷ ನಿತಿನ್ ಅವಭೃತ ಅವರಿಗೆ ಕಮಲ ಪತ್ರ ಪ್ರದಾನ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ…

Read More