Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಗ೦ಗೊಳ್ಳಿ: ಗ೦ಗೊಳ್ಳಿ ಬೀಚು ನೋಡಿರಣ್ಣ. ವಾಸನೆ ತಡೆಯಲಾರೆನಣ್ಣ… ಹಾಗ೦ತ ಗ೦ಗೊಳ್ಳಿಯ ಬೀಚಿಗೆ ಹೋದ ಜನರು ಮೂಗು ಮುಚ್ಚಿಕೊ೦ಡು ಮಾತನಾಡುತ್ತಿದ್ದರೆ ಇಡೀ ಊರಿಗೆ ಊರೇ ತಲೆತಗ್ಗಿಸುವ೦ತಾಗುತ್ತದೆ. ಅದು ಮಾತನಾಡುತ್ತಿರುವವರ ತಪ್ಪಲ್ಲ. ಅಲ್ಲಿಯ ಪರಿಸ್ಥಿತಿಯೇ ಹಾಗಿರುವುದು ನಿಜ. ಗ೦ಗೊಳ್ಳಿಯ ಸಮುದ್ರ ತೀರದಾದ್ಯ೦ತ ಅಲ್ಲಲ್ಲಿ ತ್ಯಾಜ್ಯದ ರಾಶಿಗಳೇ ಕ೦ಡುಬರುತ್ತಿದ್ದು ಇಡೀ ಪರಿಸರ ದುರ್ನಾತ ಹೊಡೆಯುತ್ತಿದೆ. ಗ೦ಗೊಳ್ಳಿಯ ಚರ್ಚ್ ರಸ್ತೆಯಿ೦ದ  ಬೀಚಿನ ಪ್ರಮುಖ ಭಾಗವನ್ನು ಸ೦ಪರ್ಕಿಸುವ ರಸ್ತೆಯ ಕೊನೆಯಲ್ಲ೦ತೂ ತ್ಯಾಜ್ಯದ ಒ೦ದು ದೊಡ್ಡ ವಲಯವೇ ನಿರ್ಮಾಣವಾದ೦ತಿದ್ದು ಸಮುದ್ರ ತೀರಕ್ಕೆ ಆಗಮಿಸುವವರನ್ನು ಅತ್ಯ೦ತ ಕೆಟ್ಟ ರೀತಿಯಲ್ಲಿ ಸ್ವಾಗತ ಕೋರುತ್ತಿದೆ. ಅಪರೂಪಕ್ಕೊಮ್ಮೆ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕೂಡ ಈ ತ್ಯಾಜ್ಯವನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿರುವುದು ಯಾವ ಊರಿಗೂ ಶೋಭೆ ತರುವ೦ತದ್ದಲ್ಲ. ಇಲ್ಲಿ ತುಂಬಿಕೊಂಡಿರುವ ತ್ಯಾಜ್ಯ ಮಳೆಯ ನೀರಿನೊ೦ದಿಗೆ ಸೇರಿಕೊ೦ಡು ಕೊಳೆತು ನಾರುತ್ತಾ ಊರಿನಲ್ಲಿ ಸಾ೦ಕ್ರಾಮಿಕ ರೋಗದ ಭೀತಿಯನ್ನು ಹುಟ್ಟುಹಾಕಿದೆ. ದೊಡ್ಡ ಮಳೆಗೆ ಈ ತ್ಯಾಜ್ಯ ರಸ್ತೆಯ ಮೇಲೆ ಹರಿದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ.ಪಕ್ಕದಲ್ಲೇ ಪ್ರಾಥಮಿಕ ಮತ್ತು ಫ್ರೌಢಶಾಲೆಯ ಆಟದ ಬಯಲುಗಳಿದ್ದು ಈ…

Read More

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ತಾಂತ್ರಿಕ ವಿಭಾಗದಿಂದ  ಭಾರತ  ರತ್ನ ಸರ್ ಎಂ.ವಿ.  ವಿಶ್ವೇಶ್ವರಯ್ಯ ಇವರ 155 ನೇ ಜನ್ಮದಿನದಂದು  ಇಂಜಿನಿಯರ್ಸ್  ಡೇ ಆಚರಿಸಲಾಯಿತು.   ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹೆಚ್. ಕೃಷ್ಣಮೂರ್ತಿ  ಹಾಗೂ ಅಧೀಕ್ಷಕ  ಕೆ. ರಾಮಕೃಷ್ಣ ಅಡಿಗ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದೇವಳದ ಅಭಿಯಂತರರಾದ  ಪ್ರದೀಪ್ ಡಿ.ಕೆ.  ಮಾತನಾಡಿ    ಸರ್ ಎಂ.ವಿ.  ವಿಶ್ವೇಶ್ವರಯ್ಯನವರು ನಡೆದು ಬಂದ ದಾರಿ ಅವರ ದೂರ ದೃಷ್ಟಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು, ಜೀವನದಲ್ಲಿ ಅಳವಡಿಸಿಕೊಂಡ ಪ್ರಾಮಾಣಿಕತೆ, ಸರಳತೆ ಶಿಸ್ತು, ದ್ಯೇಯ, ಉದ್ಧೇಶಹಾಗೂ ಸಮರ್ಪಣಾ ಮನೋಬಾವದ ಬಗ್ಗೆ ತಿಳಿಸುತ್ತಾ ಸರ್ ಎಂ.ವಿ. ಅವರ ಜೀವನ ಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸುವುದು  ಅಗತ್ಯವಾಗಿರುತ್ತದೆ ಎಂದರು. ಕಾರ್ಯಕ್ರಮವನ್ನು ದೇವಳದ ಕಿರಿಯ ಅಭಿಯಂತರರಾದ ಮುರಳಿಧರ ಹೆಗಡೆ ಇವರು ನಿರೂಪಿಸಿ ವಂದಿಸಿದರು. ಎ. ಗಂಗಾಧರ ಹೆಗ್ಡೆ ಇವರು ಪ್ರಾರ್ಥಿಸಿದರು.

Read More

ಕುಂದಾಪುರ: ಕರ್ನಾಟಕ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿಕೇಂದ್ರೀಕರಣ ವಿರೋಧಿ ಅಂಶಗಳು ಮೇಲ್ಗೈ ಸಾಧಿಸಿದ ಕಾರಣ ಅದು ಅರ್ಥ ಕಳೆದುಕೊಂಡಿದೆ. ಇಲ್ಲಿ ಜನತಂತ್ರ ಪದ್ಧತಿಯ ಬದಲಿಗೆ ಅಧಿಕಾರಶಾಹಿ ವಿಜೃಂಭಿಸುತ್ತಿದೆ. ಅದರಿಂದಾಗಿ ಪಂಚಾಯತ್ ರಾಜ್ ವ್ಯವಸ್ಥೆಯ ನೈಜ ಉದ್ದೇಶವಾದ ಗ್ರಾಮೀಣಾಭಿವೃದ್ಧಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನ, ಪಂಚಾಯತ್ ರಾಜ್ ಒಕ್ಕೂಟ ಮತ್ತು ಜನಪ್ರತಿನಿಧಿಗಳು ಮುಂದಿಟ್ಟ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರಕಾರ ರಾಜ್ಯ ಪಂಚಾಯತ್ ರಾಜ್ ಕಾಯಿದೆಗೆ ಸಮಗ್ರ ತಿದ್ದುಪಡಿ ಸೂಚಿಸಲು ಶಾಸಕ, ಮಾಜಿ ಸ್ಪೀಕರ್ ರಮೇಶಕುಮಾರ್ ಅಧ್ಯಕ್ಷತೆಯ ಸಮಿತಿ ರಚಿಸಿತ್ತು. ಸಮಿತಿ ಇದೀಗ ಕಾಯಿದೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಒತ್ತುನೀಡುವ ಶಿಫಾರಸುಗಳನ್ನು ಮಾಡಿದೆ. ಅವುಗಳನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಕುಂದಾಪುರ ತಾಲೂಕು ಪಂಚಾಯತ್ ರಾಜ್ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ. ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಕುರಿತು ಸರ್ವಾನುಮತದ ನಿರ್ಣಯ ಸ್ವೀಕರಿಸಲಾಯಿತು. ಈ ನಿಟ್ಟಿನಲ್ಲಿ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ತಾಲೂಕಿನ ಎಲ್ಲ ಗ್ರಾಮ ಪಂಚಾಯತ್…

Read More

ಕುಂದಾಪುರ: ಇಲ್ಲಿನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ  ಕಟ್ಟಡ ಗೊಂಬೆಮನೆಯಲ್ಲಿ  ಸೆಪ್ಟೆಂಬರ್ ತಿಂಗಳ ಕಾರ್ಯಕ್ರಮ ಜರುಗಿತು. ಈ ತಿಂಗಳ ಗೊಂಬೆ ಮನೆ ಅತಿಥಿಯಾಗಿ ಸದಾನಂದ ಸೇರುಗಾರ್ , ಉಪ್ಪಿನಕುದ್ರು ಭಾಗವಹಿಸಿದ್ದರು. ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ  ಭಾಸ್ಕರ್ ಕೊಗ್ಗ ಕಾಮತ್ ಅವರು ಕಾರ್ಯಕ್ರಮದ ಪ್ರಾಯೋಜಕ ಕರುಣಾಕರ ಪೈ, ಹೆಮ್ಮಾಡಿ, ನಿವೃತ್ತ ಹಿರಿಯ ಶಿಕ್ಷಕಿ ಸೆವರಿನ್ ಮೆಂಡೋನ್ಸಾ ಇವರನ್ನು ಶಿಕ್ಷಕ ದಿನಾಚರಣೆ  ಪ್ರಯುಕ್ತ ಸನ್ಮಾಸಿದರು. ಯು.ವಾಮನ್ಸೆಪ್ಟೆಂಬರ್: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಾರ್ಯಕ್ರಮ ಪೈ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯಲ್ಲಿ  ಶ್ರೀ ದುರ್ಗಾಪರಮೇಶ್ವರಿ ಬಾಲಕಿಯರ ಯಕ್ಷಗಾನ ತಂಡ, ಹೆಮ್ಮಾಡಿ ಇವರಿಂದ ಮಧುರ ಮಹೇಂದ್ರ ಯಕ್ಷಗಾನ ಬಯಲಾಟ ಕಿಕ್ಕಿರಿದು ಸೇರಿದ ಪ್ರೇಕ್ಷಕರನ್ನು  ರಂಜಿಸಿತು. ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿದ್ದರು.

Read More

ಹೋಲಿ ರೊಜಾರಿ ಚರ್ಚನ ಮೈದಾನದಲ್ಲಿ ಜಿಲ್ಲಾ ಮಟ್ಟದ ಥ್ರೋಬಾಲ್ ಟೂರ್ನಿ ಕುಂದಾಪುರ:  ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ವತಿಯಿಂದ, ಕುಂದಾಪುರ ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ, ಕುಂದಾಪುರ ಹೋಲಿ ರೊಜಾರಿ ಚರ್ಚನ ಮೈದಾನದಲ್ಲಿ ಜಿಲ್ಲಾ ಮಟ್ಟದ ಹುಡುಗರ ಮತ್ತು ಹುಡುಗಿಯರ ಥ್ರೋಬಾಲ್ ಟೂರ್ನಿಯನ್ನು ಆರ್. ಬಿ ನಾಯಕ್ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲಾರಾದ ಧರ್ಮಗುರು ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಸ್ವಾಗತಿಸಿದರು. ದೈಹಿಕ ಉಪ ನಿರ್ದೇಶಕರಾದ ಶ್ರೀಧರ್ ಶೆಟ್ಟಿ ಪ್ರಸ್ತಾವಿಕ ಭಾಷಣ ಮಾಡಿಗರು. ಉದ್ಘಾಟಕರಾದ ಆರ್,ಬಿ. ನಾಯಕ್ ಇಂತಹ  ಟೂರ್ನಿಯನ್ನು ಕೆಳಹಂತದಿಂದ ಹಿಡಿದು ಮೇಲ್ಪಟ್ಟದ ವರೆಗೆ ಅನೇಕ ಕಡೆ ಆಯೋಜಿಸ ಬೇಕಾಗುತ್ತದೆ, ಸೈಂಟ್ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಇಂತಹ ಒಂದು ಟೂರ್ನಿ ಆಯೋಜಿಸಿದೆ, ಈ ಕಾಲೇಜು ಆಟದಲ್ಲದೆ ಶಿಕ್ಷಣದಲ್ಲಿ ಮುಂದೆ ಇದ್ದು, ಈ ಸಾಲಿನಲ್ಲಿ…

Read More

ಗ೦ಗೊಳ್ಳಿ: ಇತ್ತೀಚೆಗೆ ನಾವು೦ದದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ವಾಲಿಬಾಲ್ ಪ೦ದ್ಯಾಟದಲ್ಲಿ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಬಾಲಕಿಯರ ತ೦ಡವು ದ್ವಿತೀಯ ಸ್ಥಾನಗಳಿಸಿತು. ಆಟಗಾರ್ತಿಯರಾದ ಸ೦ಪ್ರೀತಾ,ರಶ್ಮಿತಾ,ಅನುಷಾ,ದೀಕ್ಷಿತಾ,ಪ್ರಮಿತಾ,ನಿಶಾ,ದಶಮಿ,ರೋಹಿಣಿ ಅವರೊ೦ದಿಗೆ ದೈಹಿಕ ಶಿಕ್ಷಕ ನಿರ್ದೇಶಕ ನಾಗರಾಜ ಶೆಟ್ಟಿ ಮತ್ತು ಪ್ರಾ೦ಶುಪಾಲ ಆರ್ ಎನ್ ರೇವಣ್‌ಕರ್ ಉಪಸ್ಥಿತರಿದ್ದಾರೆ. ಚಿತ್ರ ವರದಿ : ನರೇ೦ದ್ರ ಎಸ್ ಗ೦ಗೊಳ್ಳಿ.

Read More

ಎಲ್ಲರೊಂದಿಗೆ ಬೆರತು ಬದುಕುವಂತೆ ಮಾಡುವುದೇ ನಮ್ಮ ದೊಡ್ಡ ಜವಾಬ್ದಾರಿ: ಡಾ. ನಾಗತಿಹಳ್ಳಿ ಕುಂದಾಪುರ: ಇಂದು ಪರಸ್ಪರ ಒಬ್ಬರಿಗೊಬ್ಬರು ಆತುಕೊಳ್ಳುತ್ತಾ, ಮೆಚ್ಚಿಕೊಳ್ಳುತ್ತಾ, ಪ್ರಾಮಾಣಿಕವಾಗಿ ವಿಮರ್ಷಿಸುತ್ತಾ ಮುಂದುವರಿಯಬೇಕಾದ ತುರ್ತು ಎದುರಾಗಿದೆ. ಎಲ್ಲರೂ ಬೆರೆತು ಬದುಕುವಂತೆ ಮಾಡುವುದೇ ನಮಗೂ ನಿಮಗೂ ಇರುವ ದೊಡ್ಡ ಜವಾಬ್ದಾರಿಯಾಗಿದೆ. ಅದರ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಖ್ಯಾತ ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ ಹೇಳಿದರು. ಅವರು ಗುಲ್ವಾಡಿಯ ತೋಟದಮನೆಯಲ್ಲಿ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನವು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಪತ್ರಕರ್ತ ಸಂತೋಷಕುಮಾರ್ ಗುಲ್ವಾಡಿ ಸ್ಮಾಕರ ಕೊಡಮಾಡುವ ಗುಲ್ವಾಡಿ ಗೌರವ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದರು. ಪತ್ರಿಕೋದ್ಯಮದಲ್ಲಿ ಹೊಸತನವನ್ನು ತಂದ ಸಂತೋಷಕುಮಾರ್ ಗುಲ್ವಾಡಿ ಅವರ ಹೆಸರಿನ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ಖುಷಿ ನೀಡಿದೆ. ಎಷ್ಟೇ ದೇಶ ಸುತ್ತಿ ಬಂದರೂ ನಾವಿರುವ ಜಾಗವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ರೂಪಿಸುವುದು ಬಹಳ ಮುಖ್ಯವಾದುದು. ಆ ನಿಟ್ಟಿನಲ್ಲಿ ಯಾಕುಬ್ ಖಾದರ್ ಗುಲ್ವಾಡಿಯವರ ಪ್ರಯತ್ನ ಶ್ಲಾಘನೀಯ ಎಂದರು. ಗುಲ್ವಾಡಿ…

Read More

ಕುಂದಾಪುರ: ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಮಾಡುವಾಗ ಸಂಭ್ರಮದಿಂದಲೇ ಮಾಡಿ, ಸಂತೋಷವನ್ನು ಹಂಚಿಕೊಳ್ಳಿ ಅದಕ್ಕೆ ಯಾರ ವಿರೋಧವೂ ಇಲ್ಲ ಆದರೆ ಅದು ಇತರರಿಗೆ ತೊಂದರೆಯನ್ನು ಕೊಡುವ ಮಟ್ಟಕ್ಕೆ ಹೋಗುವಂತಿರಬಾರದು ಎಂದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಣ್ಣಾಮಲೈ ಹೇಳಿದರು. ಅವರು ಇಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಕುಂದಾಪುರ ಶಾಂತಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾನೂನು ಪ್ರಕಾರ ಧ್ವನಿವರ್ಧಕಗಳು 50ಡೆಸಿಮಲ್‌ಕಿಂತ ಹೆಚ್ಚು ಸದ್ದು ಮಾಡಲು ಅವಕಾಶವಿಲ್ಲ. 10ಗಂಟೆಯ ನಂತರ ಉಪಯೋಗಿಸುವಂತೆಯೂ ಆದರೆ ಅದು ಸಾಧ್ಯವಿಲ್ಲವೆಂಬುದು ನಮಗೂ ತಿಳಿಯುತ್ತೆ. ಈ ವಿಚಾರದಲ್ಲಿ ಕಾನೂನನ್ನು ಸಡಿಸಿದ್ದೇವೆ. ರಾತ್ರಿ 10ಗಂಟೆಯ ಬಳಿಕ ಸಣ್ಣ ಧ್ವನಿಯನ್ನು ಬಳಸಿಕೊಳ್ಳಬಹುದು. ಉಡುಪಿ ಜಿಲ್ಲೆಯಲ್ಲಿ 406 ಗಣೇಶ ಉತ್ಸವಗಳು ನಡೆಯುತ್ತವೆ. ಪೊಲೀಸರ ಕಡೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನಾವು ನೀಡಲು ಸಿದ್ಧರಿದ್ದೇವೆ. ಅದೇ ರೀತಿ ಗಣೇಶೋತ್ಸವ ಸಮಿತಿಗಳು ಕೂಡ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದ ಅವರು, ಸಾರ್ವಜನಿಕರು ಅನವಶ್ಯಕವಾಗಿ ಶಾಂತಿ ಕದಡಿದರೇ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು…

Read More

ಕುಂದಾಪುರ: ಪ್ರತಿಯೊಬ್ಬ ವ್ಯಕ್ತಿಯೊಳಗೊಬ್ಬ ಕಲಾವಿದನಿದ್ದಾನೆ. ಆದರೆ ಎಲ್ಲರಿಗೂ ಅವರಲ್ಲಿನ ಕಲೆಯನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಕಲೆಗೊಂದು ಸೂಕ್ತ ಅವಕಾಶ ಸಿಕ್ಕಾಗ ಅದು ಅರಳುತ್ತದೆ ಎಂದು ಮಣಿಪಾಲದ ಉದ್ಯಮಿ  ಬಾಲಕೃಷ್ಣ ಶೆಣೈ ಹೇಳಿದರು. ಕುಂದಾಪುರದ ಸಾಧನ ಸಂಗಮ ಟ್ರಸ್ಟ್‌ನ ಮೋಹನ ಮುರಳಿ ಕಲಾ ಗ್ಯಾಲರಿ ಹಾಗೂ ಸಿದ್ಧಾರ್ಥ ಮಯ್ಯ ಉಪ್ಪುಂದ ಇವರ ಏಕವ್ಯಕ್ತಿ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಚಿತ್ರಕಲಾ ಶಿಕ್ಷಕ ಉಪಾಧ್ಯಾಯ ಮೂಡುಬೆಳ್ಳೆ ಮಾತನಾಡಿ ಅಂಗವಿಕಲತೆ ಇದ್ದರೂ ಸಹ ಅದನ್ನು ಮೀರಿ ಮಾಡುವ ಸಾಧನೆ ಆ ವ್ಯಕ್ತಯ ಎಲ್ಲಾ ವೈಕಲ್ಯಗಳನ್ನು ತೊಡೆದು ಹಾಕುತ್ತದೆ. ಸಿದ್ಧಾರ್ಥ ಮಯ್ಯ ಅವರ ಆಧನೆ ನಿಜಕ್ಕೂ ಶ್ಲಾಘನಾರ್ಹ ಎಂದವರು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕುಂದಾಪುರ ಎಮ್. ಎಮ್ ಶಾಲೆಯ ಪ್ರಾಂಶುಪಾಲೆ ಚಿಂತನ ರಾಜೇಶ್, ಅಂಕಣಕಾರ್ತಿ ಶೋಭಾ ಅರಸ್ ಉಪಸ್ಥಿತರಿರುತ್ತಾರೆ. ಮಂಜುನಾಥ ಮಯ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಧನ ಸಂಗಮದ ಅಧ್ಯಕ್ಷ ನಾರಾಯಣ ಐತಾಳ ವಂದಿಸಿದರು. ಶಮಂತ್ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಚತುರ್ಥಿಯ ಅಂಗವಾಗಿ…

Read More

ಗ್ರಾ.ಪಂ. ಪ್ರಜಾಪ್ರಭುತ್ವದ ಯಶಸ್ಸಿಗೆ ಬುನಾದಿ: ಮೊಯ್ಲಿ  ಕುಂದಾಪುರ:  ಗ್ರಾ.ಪಂ. ವ್ಯವಸ್ಥೆ ಯಶಸ್ವಿಯಾದರೆ ದೇಶದ ಪ್ರಜಾಪ್ರಭುತ್ವ ಯಶಸ್ವಿಯಾದಂತೆ, ಇಂದು ಗ್ರಾ.ಪಂ.ಗೆ  ಎಲ್ಲಾ ರೀತಿಯ ಹಕ್ಕು ಜವಾಬ್ದಾರಿಗಳನ್ನು  ಪ್ರಾಮಾಣಿಕವಾಗಿ  ಜಾತಿ, ಪಕ್ಷ ಬೇಧ ಮೆರೆತು ನಿರ್ವಹಿಸಿಸುವ  ಕರ್ತವ್ಯ ಗ್ರಾ.ಪಂ. ಸದಸ್ಯರದ್ದಾಗಿದೆ.  ಪ್ರಬಲ ರಾಜಕೀಯ  ಇಚ್ಚಾಶಕ್ತಿ  ಬಳೆಸಿಕೊಂಡಲ್ಲಿ  ಎಲ್ಲಾ ಸಮಸ್ಯೆಗಳನ್ನು ಮೀರಿ ಮುನ್ನಡೆಯ ಬಹುದು ಎಂದು  ಮಾಜಿ ಮುಖ್ಯಮಂತ್ರಿ, ಸಂಸದ  ಎಂ.ವೀರಪ್ಪ ಮೊಯಿಲಿ ಹೇಳಿದರು. ಅವರು ಕುಂದಾಪುರ ರೋಟರಿ ಲಕ್ಷ್ಮಿನರಸಿಂಹ ಕಲಾಮಂದಿರದಲ್ಲಿ ನಡೆದ  ದೇವಾಡಿಗ ಸಮಾಜ ಸೇವಾ ಸಂಘ (ರಿ) ಕುಂದಾಪುರ ಕುಂದಾಪುರ ತಾಲೂಕು ಗ್ರಾ.ಪಂ. ದೇವಾಡಿಗ ಸಮಾಜದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ  ಸದಸ್ಯರುಗಳನ್ನು ಅಭಿನಂದಿಸಿ ಮಾತನಾಡಿದರು. ರಾಜೀವಗಾಂಧಿ  ಪ್ರಧಾನಿಯಾಗಿದ್ದಾಗ ನಾನು ಮುಖ್ಯಮಂತ್ರಿಯಾಗಿದ್ದೆ ಈ ಸಂದರ್ಭದಲ್ಲಿ ಗ್ರಾ.ಪಂ. ವ್ಯವಸ್ಥೆ ಬಲಪಡಿಸುವ ಹಾಗೂ ಪಂಚಾಯತ್‌ಗಳಿಗೆ ಹೆಚ್ಚಿನ ಹಕ್ಕು ಜವಾಬ್ದಾರಿ ನೀಡುವ  ವ್ಯವಸ್ಥೆ ರೂಪುಗೊಂಡಿತು. ಅಲ್ಲದೇ ಸಿಇಟಿ  ವ್ಯವಸ್ಥೆ ತಂದ ನಂತರ ಎಲ್ಲಾ ವರ್ಗದವರೂ, ಆರ್ಥಿಕವಾಗಿ ಹಿಂದುಳಿದವರೂ ಇಂಜಿನಿಯರ್ ಹಾಗೂ ಮೆಡಿಕಲ್ ಗೆ ಹೋಗಲು ಸಾಧ್ಯವಾಯಿತು ಎಂದರು. ಮುಂಬಯಿಯ…

Read More