ಬೈಂದೂರು: ನಮ್ಮ ಸಹಕಾರಿ ಸಂಘವು ಕಳೆದ 13 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸಮಾಜದ ಎಲ್ಲಾ ವರ್ಗದವರಿಗೂ ಆರ್ಥಿಕ ಸಹಕಾರ ನೀಡುವುದರ ಅವರ ಅರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೇ ಅದರೊಂದಿಗೆ ತಾನು ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ. ಈ ಸಾಲಿನಲ್ಲಿ ಗರಿಷ್ಠ 68.07 ಲಕ್ಷ ರೂ. ನಿವ್ವಳ ಲಾಭ ಹೊಂದುವ ಮೂಲಕ ಅಭೂತಪೂರ್ವ ಸಾಧನೆ ಮಾಡಿ, ತನ್ನ ಸದಸ್ಯರಿಗೆ ಶೇ. 13 ಡಿವಿಡೆಂಟ್ ಘೋಷಣೆ ಮಾಡಿದೆ ಎಂದು ಬೈಂದೂರು ಸಾಗರ್ ಕ್ರೆಡಿಟ್ ಕೋ ಆಪ್‌ರೇಟಿವ್ ಸೊಸೈಟಿಯ ಉಪಾಧ್ಯಕ್ಷ ರಾಜು ಪೂಜಾರಿ ಹೇಳಿದರು. ಇಲ್ಲಿನ ಸಂಘದ ಪ್ರಧಾನ ಕಛೇರಿ ಆವರಣದಲ್ಲಿ ನಡೆದ 13ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಂಘವು 46.69 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 42.25 ಕೋಟಿ ರೂ. ಮರುಪಾವತಿ ಮಾಡಿದೆ. ವರದಿ ವರ್ಷದ ಅಂತ್ಯಕ್ಕೆ 20.21 ಕೋಟಿ ರೂ. ಠೇವಣೆ ಹೊಂದಿದ್ದು, 19.67 ಕೋಟಿ ರೂ. ಸಾಲ ನೀಡಿದೆ, ಈ ಸಾಲಿನಲ್ಲಿ 193.42 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, 24.65 ಕೋಟಿ…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಇತ್ತೀಚೆಗೆ ಉಳ್ಳೂರು11 ಇಲ್ಲಿ ನಡೆದ 2015-16ನೇ ಸಾಲಿನ ಬೈಂದೂರು ವಲಯ ಮಟ್ಟದ ಪ್ರಾಥಮಿಕ ಶಾಲೆಗಳ ವಾಲಿಬಾಲ್ ಪಂದ್ಯಾಟದಲ್ಲಿ ಸ.ಹಿ.ಪ್ರಾ.ಶಾಲೆ ಇಡೂರು ಕುಂಜ್ಞಾಡಿ ಇಲ್ಲಿನ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಎಸ್.ಡಿ.ಎಂಸಿ ಅಧ್ಯಕ್ಷ ಸಂತೋಷ್ ಶೆಟ್ಟಿ, ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಗೀತಾ ಬಿ., ದೈಹಿಕ ಶಿಕ್ಷಣ ಶಿಕ್ಷಕಿ ಜಯಂತಿ ಉಪಸ್ಥಿತರಿದ್ದರು.
ಕುಂದಾಪುರ: ಈ ಬಾರಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಟ್ರಸ್ಟ್(ರಿ.) ಉಡುಪಿ, ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ.) ಕೋಟ ಸಾರಥ್ಯದಲ್ಲಿ ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಅಕ್ಟೋಬರ್ 1 ರಿಂದ 10ರ ವರೆಗೆ ಸಾಹಿತ್ಯಿಕ ಸಾಂಸ್ಕೃತಿಕ ದಿಬ್ಬಣ ಚಿತ್ತಾರ 2015 ಕಾರ್ಯಕ್ರಮಗಳು ನಡೆಯಲಿದೆ. ಅಕ್ಟೋಬರ್ 1ರಂದು ಮಹಿಳಾ ಸಾಹಿತ್ಯ ಸಾಮವೇಶ ಚೇತನ, 2ರಂದು ನೃತ್ಯ ಮತ್ತು ನಾಟಕ ಕಾರ್ಯಕ್ರಮ, 3ರಂದು ತಾಳಮದ್ದಳೆ, 4ರಂದು ಪುಟಾಣಿಗಳ ಸಮಾವೇಶ ಅಕ್ರೂಟ್, 5ರಂದು ಉಡುಪಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಮಾವೇಶ ಪ್ರೇರಣ, 6ರಂದು ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಮ್ಮಟ, 7ರಂದು ಪ್ರಗತಿಪರ ಸಮಾವೇಶ ಒತ್ತಾಸೆ, 8ರಂದು ಉರಗ ಪ್ರದರ್ಶನ- ಪ್ರಾತ್ಯಕ್ಷಿಕೆ ಹಾವು ನಾವು, 9ರಂದು ಪಂಚಾಯಿತಿ ಹಬ್ಬ ಮತ್ತು 10ರಂದು ಕಾರಂತರ ಹುಟ್ಟೂರ ಪ್ರಶಸ್ತಿ ಪ್ರಧಾನ , ಯಕ್ಷನಾಟ್ಯ ವೈಭವ ಸಂಗೀತ ಸುಧೆ ಚಿತ್ತ ಚಿತ್ತಾರ ನಡೆಯಲಿದೆ. ಅಲ್ಲದೇ ಅಂತರಾಷ್ಟ್ರೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ ಕುಂದಾಪುರ ಅವರಿಂದ ಕಾರ್ಟೂನ್ ಹಬ್ಬ ಮತ್ತು ಕಾರಂತ…
ಕುಂದಾಪುರ: ಮುಂಬೈನ ರಂಗನಟ, ನಿರ್ದೇಶಕ, ರಂಗ ಸಂಯೋಜಕ, ಟಿ.ವಿ, ಸೀರಿಯಲ್, ಸಾಕ್ಷ್ಯಚಿತ್ರ ಮತ್ತು ಚಲನಚಿತ್ರಗಳ ನಿರ್ಮಾಪಕ, ನಾಟಕ, ಕಥೆ, ಕಾದಂಬರಿಗಳ ಲೇಖಕ, ಪ್ರಕಾಶಕ, ಹಲವು ಪ್ರತಿಷ್ಠಾನಗಳಿಗೆ ಪ್ರಾಯೋಜಕ, ನಾಟಕರಂಗಕಲೆಯ ತರಬೇತಿಗಾರನಾಗಿ ಸೇವೆ ಸಲ್ಲಿಸುತ್ತಿರುವ ಸದಾನಂದ ಸುವರ್ಣ ಅವರಿಗೆ ಈ ಬಾರಿಯ ಕಾರಂತ ಹುಟ್ಟೂರ ಪ್ರಶಸ್ತಿಗೆ ಆಯ್ಕೆ ಸಮಿತಿ ಆಯ್ಕೆ ಮಾಡಿರುವುದಾಗಿ ಕೋಟತಟ್ಟು ಪಂಚಾಯಿತಿ ಅಧ್ಯಕ್ಷರು ಮತ್ತು ಕಾರಂತ ಪ್ರತಿಷ್ಠಾನದ ಅಧ್ಯಕ್ಷ ಎಚ್.ಪ್ರಮೋದ್ ಹಂದೆ ತಿಳಿಸಿದರು. ಅವರು ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಕಾರಂತರ ಸಮಕಾಲೀನರಾದ ಸದಾನಂದ ಸುವರ್ಣರ ಈ ಬಾರಿಯ ಕಾರಂತ ಹುಟ್ಟೂರ ಪ್ರಶಸ್ತಿಗೆ ಸೂಕ್ತ ವ್ಯಕ್ತಿ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಕನ್ನಡ, ತುಳು, ಬೆಂಗಾಲಿ ಭಾಷೆಗೆ ಸಂಬಂಧಪಟ್ಟ ಹಲವು ಸಾಕ್ಷ್ಯಚಿತ್ರಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ರೂಪ ದರ್ಶನ, ಗುಡ್ಡದ ಭೂತ, ಕಣ್ಣು ತೆರೆಯಿತು, ಕುರುಡನ ಸಂಗೀತ, ವಿಷಮ ಗಳಿಗೆ ಮೊದಲಾದ ಧಾರವಾಹಿಗಳಿಗೆ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಘಟಶ್ರಾದ್ಧ ಚಿತ್ರ ನಿರ್ಮಾಣಕ್ಕಾಗಿ ಸುವರ್ಣ ಅವರಿಗೆ…
ಕುಂದಾಪುರ: ವಿಶ್ವ ಹೃದಯ ದಿನದ ಅಂಗವಾಗಿ ಕುಂದಾಪುರದಲ್ಲಿ ಪ್ರಪ್ರಥಮ ಬಾರಿಗೆ ’ಆರೋಗ್ಯಕ್ಕಾಗಿ ಓಟ-2015’ ವಿಶಿಷ್ಟ ಕಾರ್ಯಕ್ರಮವನ್ನು ಸೆ.27ರಂದು ಆದಿತ್ಯವಾರ ಬೆಳಿಗ್ಗೆ 7ಕ್ಕೆ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ. ಹೃದಯದ ಬಗೆಗೆ ಅರಿವು ಹಾಗೂ ಉತ್ತಮ ಆರೋಗ್ಯವನ್ನು ಕಾಯುಕೊಳ್ಳಲು ರೋಟರಿ ಕ್ಲಬ್ ಕುಂದಾಪುರ ಮತ್ತು ಕುಂದಾಪುರದ ನ್ಯೂ ಮೆಡಿಕಲ್ ಸೆಂಟರ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ನ್ಯೂ ಮೆಡಿಕಲ್ ಸೆಂಟರ್ ನಿರ್ದೇಶಕ ಡಾ.ರಂಜನ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಕುಂದಾಪುರದ ಗಾಂಧಿ ಮೈದಾನದಿಂದ ಆರಂಭಗೊಳ್ಳುವ ಓಟ ಶಾಸ್ತ್ರೀವೃತ್ತ, ಯಡ್ತರೆ ಮಂಜಯ್ಯ ಶೆಟ್ಟಿ ರಸ್ತೆ(ಪಶ್ಚಿಮ) ಮೂಲಕ ಹೊಸ ಬಸ್ ನಿಲ್ದಾಣ ತಲುಪಿ, ಅಲ್ಲಿಂದ ಪುರಸಭೆ ರಸ್ತೆ ಮೂಲಕ ಶಾಸ್ತ್ರೀಸರ್ಕಲ್ ಹಾದು ಗಾಂಧಿ ಮೈದಾನ ತಲುಪಲಿದೆ. ಒಟ್ಟು 3.2 ಕಿ.ಮೀ ದೂರವನ್ನು ಓಟಗಾರ ಕ್ರಮಿಸಬೇಕಾಗುತ್ತದೆ ಎಂದರು. ಶೇ.೯೦ರಷ್ಟು ಹೃದಯ ಸಂಬಂಧಿ ತೊಂದರೆಗಳಿಗೆ ದೈಹಿಕ ವ್ಯಾಯಾಮದ ಕೊರತೆಯೂ ಕಾರಣ. ದಿನಕ್ಕೆ 20 ನಿಮಿಷ ನಡೆದರೆ ಹೃದಯ ತೊಂದರೆಗಳನ್ನು ತಡೆಗಟ್ಟಬಹುದು. ವಾರಕ್ಕೆ 5 ದಿನ 20 ನಿಮಿಷ…
ಕುಂದಾಪುರ: ಇಲ್ಲಿನ ಡಾ| ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಪೊಲೀಸ್ ಇಲಾಖೆಯ ಕಾನೂನು, ನೀತಿ-ನಿಯಮಗಳ ಬಗೆಗೆ ಅರಿವು ಮೂಡಿಸಲು ಕುಂದಾಪುರ ಪೊಲೀಸರ ಸಾರಥ್ಯದಲ್ಲಿ ಮಾಹಿತಿ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕುಂದಾಪುರ ವಲಯ ಉಪಅಧೀಕ್ಷಕ ಮಂಜುನಾಥ ಶೆಟ್ಟಿ ಮಾತನಾಡಿ, ಕುಂದಾಪುರ ನಗರದ ವಿವಿಧ ಶಾಲಾ ಕಾಲೇಜುಗಳಿಗೆ ಪ್ರತಿನಿತ್ಯ ಸುಮಾರು ಹತ್ತರಿಂದ ಹನ್ನೊಂದು ಸಾವಿರದ ತನಕ ವಿದ್ಯಾರ್ಥಿಗಳು ಬಂದು ಹೋಗುತ್ತಿದ್ದಾರೆ. ಈ ಸಮಯದಲ್ಲಿ ಟ್ರಾಫಿಕ್ ನಿಯಮಗಳನ್ನು ಅರಿತು ಅನುಸರಿಸಬೇಕಾದುದು ಪ್ರತಿಯೊಬ್ಬರ ಕರ್ತವ್ಯ ಎಂದರು. ವಿದ್ಯಾರ್ಥಿಗಳು ಮದ್ಯಪಾನ ಮುಂತಾದ ದುಷ್ಚಟಗಳಿಂದ ಸಾಧ್ಯವಾದಷ್ಟು ದೂರವಿದ್ದು ಕಲಿಕೆಯಲ್ಲಿ ಉತ್ತಮವಾದ ಪ್ರಗತಿಯನ್ನು ತೋರುವತ್ತ ಗಮನಹರಿಸಬೇಕಿದೆ ಎಂದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲೆ ಸೀಮಾ ಪಿ. ಶೆಟ್ಟಿ, ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್, ಸಂಚಾರಿ ಪೊಲೀಸ್ ಠಾಣೆಯ ಎಸ್.ಐ.ಗಳಾದ ದೇವೆಂದ್ರ ಹಾಗೂ ಜಯ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಯಿತು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ…
ಕುಂದಾಪುರ: ನಗರದ ಇಲ್ಲಿನ ಪಾರಿಜಾತ ವೃತ್ತದ ಬಳಿ ಇರುವ ಹೂವಿನ ಮಾರುಕಟ್ಟೆಯಲ್ಲಿ 6-7 ವರ್ಷದಿಂದ ಕರವನ್ನು ಕಟ್ಟದ ಹೂವಿನ ಟೇಬಲ್ ತೆರವು ಕಾರ್ಯಾಚರಣೆ ಕುಂದಾಪುರ ಪುರಸಭೆಯಿಂದ ನಡೆಯಿತು. ಪುರಸಭೆಯ ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ಕರವನ್ನು ಕಟ್ಟದ ನಾಲ್ಕು ಟೇಬಲ್‌ಗಳನ್ನು ತೆರವುಗೊಳಿಸಿದರು. ಏಳು ಟೇಬಲುಗಳ ಹೂವಿನ ವ್ಯಾಪಾರಿಗಳು ಕಳೆದ ಏಳು ವರ್ಷಗಳಿಂದ ಪುರಸಭೆಗೆ ಕರವನ್ನು ಕಟ್ಟುತ್ತಿರಲಿಲ್ಲ. ಈ ಬಗ್ಗೆ ಪುರಸಭೆ ಬಹಳ ಹಿಂದೆಯೇ ನೋಟಿಸು ನೀಡಿ ಎಚ್ಚರಿಸಿತ್ತು. ಆದಾಗ್ಯೂ ಕರವನ್ನು ಕಟ್ಟಿರಲಿಲ್ಲ. ಕೊನೆಯ ಕ್ರಮವಾಗಿ ಈ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಬೇಕಾಯಿತು. ಏಳು ಜನರ ಪೈಕಿ ಮೂವರು ಸ್ಥಳದಲ್ಲಿಯೇ ಹಣವನ್ನು ಕಟ್ಟಿದ್ದರಿಂದ ನಾಲ್ಕು ಟೇಬಲುಗಳನ್ನು ತೆರವುಗೊಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಕುಂದಾಪ್ರ ಡಾಟ್ ಕಾಂ ಗೆ ತಿಳಿಸಿದ್ದಾರೆ. ಹೂವಿನ ಟೇಬಲ್ ವಿಷಯವಾಗಿ ಪುರಸಭೆಯ ಸಾಮಾನ್ಯ ಸಭೆಯಲ್ಲಿಯೂ ಚರ್ಚೆಗಳಾಗಿ, ತೆರವುಗೊಳಿಸುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು.
ಕುಂದಾಪುರ: ಇಲ್ಲಿನ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಗಣೇಶೋತ್ಸವ ರಜತ ಮಹೋತ್ಸವು ಗಣೇಶನ ಜಲಸ್ಥಂಭನದ ಮೂಲಕ ತೆರೆಬಿದ್ದಿದೆ. 25ನೇ ವರ್ಷದ ಸಂಭ್ರಮದಲ್ಲಿರುವ ಗಣೇಶೋತ್ಸವ ಸಮಿತಿಯು ಖಾರ್ವಿಕೇರಿ ಶ್ರೀ ಮಹಾಕಾಳಿ ಕಲ್ಯಾಣ ಮಂಟಪದಲ್ಲಿ ಗಣೇಶೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಿತ್ತು. ಸೆ.18ರಂದು ಗಣೇಶನನ್ನು ಪೂಜಾ ಪೀಠದಲ್ಲಿ ಪ್ರತಿಷ್ಠಾಪಿಸುವುದರಿಂದ ಮೊದಲ್ಗೊಂಡು ಪ್ರತಿನಿತ್ಯ ಗಣಹೋಮ, ಮಹಾಪೂಜೆಗಳು ಪ್ರತಿನಿತ್ಯ ಜರುಗಿದರೇ, ಸೆ.೨೧ರಂದು ಸಾಮೂಹಿಕ ಸಹಸ್ರ ನಾಳಿಕೇರ ಗಣಯಾಗ ಹಾಗೂ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಪ್ರತಿದಿನ ಸಂಜೆ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು ಸೆ.19ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿ ಧಾರ್ಮಿಕ ಪ್ರವಚನ ನೀಡಿ ಆಶಿರ್ವದಿಸಿದರು. ಸೆ.21ರ ಸಂಜೆ ನಡೆದ ವೈಭವಪೂರಿತ ಪುರಮೆರವಣಿಗೆಯಲ್ಲಿ ಸಾರ್ವಜನಿಕರ ಗಮನ ಸೆಳೆಯಿತು. ಖಾರ್ವಿಕೇರಿ ದೇವಳದಿಂದ ಆರಂಭಗೊಂಡು ಶಾಸ್ತ್ರೀವೃತ್ತವನ್ನು ಸುತ್ತುವರಿದ ಪಂಚಗಂಗಾವಳಿ ನದಿಯತ್ತ ಸಾಗಿದ ಬಣ್ಣ ಬಣ್ಣದ ವಿದ್ಯುದಲಾಂಕಾರಗಳಿಂದ ಕೂಡಿದ ಟ್ಯಾಬ್ಲೊಗಳು, ವಿವಿಧ ಸಂದೇಶ ಸಾರುವ ಟ್ಯಾಬ್ಲೋಗಳು ಸೇರಿದಂತೆ ೨೦ಕ್ಕೂ ಹೆಚ್ಚು ಟ್ಯಬ್ಲೋಗಳು ಆಕರ್ಷಕವಾಗಿದ್ದವು. ವಿಸರ್ಜನಾ…
ಕುಂದಾಪುರ: ತಾಲೂಕಿನ ಹೆಮ್ಮಾಡಿಯ ಸಮೀಪ ರಾತ್ರಿ 8:30ರ ಸುಮಾರಿಗೆ ಬೈಕ್ ಹಾಗೂ ಕಂಟೆನರ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿದ್ದು, ಕಂಟೆನರ್ ಚಾಲಕ ವಾಹನ ಸಮೇತ ಅಲ್ಲಿಂದ ಪರಾರಿಯಾಗಿದೆ. ಘಟನೆಯ ವಿವರ: ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಬೈಕಿನಲ್ಲಿ ಸವಾರೀರ್ವರು ತೆರಳುತ್ತಿದ್ದಾಗ ಕುಂದಾಪುರದ ಕಡೆಗೆ ಸಾಗುತ್ತಿದ್ದ ಕಂಟೇನರ್ ಒಂದು ಹೆಮ್ಮಾಡಿಯ ಜುವೆಲ್ ಪಾರ್ಕ್ ಹೋಟೆಲ್ ಎದುರಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಢಿಕ್ಕಿ ಹೊಡೆದಿತ್ತು. ಢಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣ ಪುಡಿಯಾಗಿದ್ದು ಓರ್ವ ಸವಾರನ ಕಾಲು ತುಂಡಾಗಿ ಬಿದ್ದಿದೆ. ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಇತ್ತ ಢಿಕ್ಕಿ ಹೊಡೆದ ಕಂಟೆನರ್ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ. ಬೈಕ್ ಸವಾರರು ಎಲ್ಲಿಯವರು, ಎಲ್ಲಿಗೆ ತೆರಳುತ್ತಿದ್ದರು ಎಂಬ ಸ್ವಷ್ಟ ಮಾಹಿತಿ ಲಭ್ಯವಾಗಿಲ್ಲ. ಗಾಯಾಳುಗಳನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕುಂದಾಪುರ ಪೊಲೀಸರು ಸ್ಥಳಕ್ಕಾಗಮಿಸಿ ತನಿಕೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಕುಂದಾಪುರ: ಇಂದು ಕುಂದಾಪುರ ನಗರದಲ್ಲಿ ಭವ್ಯ ಪುರಮೆರವಣಿಗೆಯೊಂದಿಗೆ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಕುಂದಾಪುರ ಶ್ರೀ ಮಹಾಕಾಳಿ ದೇವಸ್ಥಾನ ಗಣೇಶೋತ್ಸವದ ಭವ್ಯ ಪುರಮೆರವಣಿಗೆ ನಡೆಯಲಿದೆ. ಪಂಚಗಂಗಾವಳಿ ನದಿಯಲ್ಲಿ ನಿರ್ಮಿಸಿದ ವೇದಿಕೆಯಲ್ಲಿ ಶ್ರೀ ಆಂಜನೇಯ ವ್ಯಾಯಾಮ ಶಾಲೆಯ ಸದಸ್ಯರಿಂದ ಮೈನವಿರೇಳಿಸುವ ಬೆಂಕಿ ಆಟ ಮುಂತಾದ ರಂಜನೆಯ ಬಳಿಕ ಪಂಚಗಂಗಾವಳಿ ನದಿಯಲ್ಲಿ ಗಣಪತಿಯ ವಿಗ್ರಹವನ್ನು ಜಲಸ್ಥಂಭನ ಮಾಡಲಾಗುವುದು.
