ಬೈಂದೂರು: ನಮ್ಮ ಸಹಕಾರಿ ಸಂಘವು ಕಳೆದ 13 ವರ್ಷಗಳಿಂದ ಗ್ರಾಮೀಣ ಭಾಗದಲ್ಲಿ ಸಮಾಜದ ಎಲ್ಲಾ ವರ್ಗದವರಿಗೂ ಆರ್ಥಿಕ ಸಹಕಾರ ನೀಡುವುದರ ಅವರ ಅರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೇ ಅದರೊಂದಿಗೆ ತಾನು ಅಭಿವೃದ್ಧಿಯತ್ತ ದಾಪುಗಾಲಿಟ್ಟಿದೆ. ಈ ಸಾಲಿನಲ್ಲಿ ಗರಿಷ್ಠ 68.07 ಲಕ್ಷ ರೂ. ನಿವ್ವಳ ಲಾಭ ಹೊಂದುವ ಮೂಲಕ ಅಭೂತಪೂರ್ವ ಸಾಧನೆ ಮಾಡಿ, ತನ್ನ ಸದಸ್ಯರಿಗೆ ಶೇ. 13 ಡಿವಿಡೆಂಟ್ ಘೋಷಣೆ ಮಾಡಿದೆ ಎಂದು ಬೈಂದೂರು ಸಾಗರ್ ಕ್ರೆಡಿಟ್ ಕೋ ಆಪ್‌ರೇಟಿವ್ ಸೊಸೈಟಿಯ ಉಪಾಧ್ಯಕ್ಷ ರಾಜು ಪೂಜಾರಿ ಹೇಳಿದರು.
ಇಲ್ಲಿನ ಸಂಘದ ಪ್ರಧಾನ ಕಛೇರಿ ಆವರಣದಲ್ಲಿ ನಡೆದ 13ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ಸಂಘವು 46.69 ಕೋಟಿ ರೂ. ಠೇವಣಿ ಸಂಗ್ರಹಿಸಿದ್ದು, 42.25 ಕೋಟಿ ರೂ. ಮರುಪಾವತಿ ಮಾಡಿದೆ. ವರದಿ ವರ್ಷದ ಅಂತ್ಯಕ್ಕೆ 20.21 ಕೋಟಿ ರೂ. ಠೇವಣೆ ಹೊಂದಿದ್ದು, 19.67 ಕೋಟಿ ರೂ. ಸಾಲ ನೀಡಿದೆ, ಈ ಸಾಲಿನಲ್ಲಿ 193.42 ಕೋಟಿ ವಾರ್ಷಿಕ ವ್ಯವಹಾರ ನಡೆಸಿ, 24.65 ಕೋಟಿ ದುಡಿಯುವ ಬಂಡವಾಳವನ್ನು ತನ್ನದಾಗಿಸಿಕೊಂಡಿದೆ ಎಂದರು.
ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಷ್ಠ ಬಿಲ್ಲವ ವಾರ್ಷಿಕ ವರದಿ ಮಂಡಿಸಿ, 2014-15ನೇ ಸಾಲಿನಲ್ಲಿ ಸಂಘವು 5 ಕೋಟಿ ರೂ. ಹೆಚ್ಚಿಗೆ ಠೇವಣೆ ಸಂಗ್ರಹಿಸಿ, 5 ಕೋಟಿ ಹೆಚ್ಚು ಸಾಲ ನೀಡುವ ಗುರಿಯನ್ನು ಹೊಂದಲಾಗಿದೆ ಎಂದರು.
ನಿರ್ದೇಶಕರಾದ ಕೆ. ಶ್ರೀನಿವಾಸ ಪೂಜಾರಿ, ಚಿಕ್ಕು ಪೂಜಾರಿ, ಎನ್. ಅಣ್ಣಪ್ಪ ಬಿಲ್ಲವ, ಜಯಸೂರ್ಯ ಪೂಜಾರಿ, ಕಲ್ಪನಾ ಬಿ. ಪೂಜಾರಿ ಹಾಗೂ ಸಂಘದ ಎಲ್ಲಾ ಸಿಬ್ಬಂಧಿಗಳು ಉಪಸ್ಥಿತರಿದ್ದರು.