Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಕುಂದಾಪುರ: ಅನಿಯಮಿತ ವಿದ್ಯುತ್ ನಿಲುಗಡೆ ವಿರೋಧಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಕುಂದಾಪುರ ವಿಧಾನಸಭಾ ಕ್ಷೇತ್ರದ ವತಿಯಿಂದ ಕುಂದಾಪುರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಯಿತು. ಈ ಸಂದರ್ಭದಲ್ಲಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಕುಂದಾಪುರ ವಿಧಾನಸಭಾ ಅಧ್ಯಕ್ಷ ಇಲಿಯಾಸ್ ಸಾಸ್ತಾನ ಮಾತನಾಡಿ ಲೋಡ್ ಶೆಡ್ಡಿಂಗ್ ನೆಪದಲ್ಲಿ ಬೇರೆಡೆಗಿಂತ ಕುಂದಾಪುರ ಭಾಗದಲ್ಲಿ ಹೆಚ್ಚು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ಹೀಗೆ ಮನಬಂದಂತೆ ವಿದ್ಯುತ್ ನಿಲುಗಡೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಬೇಕು ಹಾಗೂ ವಿದ್ಯುತ್ ಕಡಿತಗೋಳಿಸುಲು ನಿರ್ದಿಷ್ಟ ಸಮಯವನ್ನು ನಿಗದಿಗೊಳಿಸಬೇಕು ಎಂದವರು ಆಗ್ರಹಿಸಿದರು. ಕುಂದಾಪುರದ ಶಾಸ್ತ್ರೀವೃತ್ತದಿಂದ ಹೊರಟ ಪ್ರತಿಭಟನಾಕಾರರು ಮೆಸ್ಕಾಂ ಮುಖ್ಯ ಕಛೇರಿಗೆ ತೆರಳಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್‌ಡಿಎಫ್‌ಐ ಉಡುಪಿ ಜಿಲ್ಲಾಧ್ಯಕ್ಷ ಆಸಿಫ್ ಕೋಟೇಶ್ವರ, ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿ ಸಿರಾಜ್ ಕೋಟೇಶ್ವರ, ನವಾಜ್ ಕುಂದಾಪುರ, ಪಿಎಫ್‌ಐ ತಾಲೂಕು ಅಧ್ಯಕ್ಷ ಮೌಸಮ್ ಮೌಲಾನ ಮುಂತಾದವರು ಭಾಗವಹಿಸಿದ್ದರು.

Read More

ಬೈಂದೂರು: ನಾಯ್ಕನಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವೆಂಕಟರಮಣ ಸೇವಾ ಸಮಿತಿಯಿಂದ ವರಮಹಾಲಕ್ಷ್ಮೀ ಪೂಜೆಯ ದಿನದಂದು ಸುತ್ತಮತ್ತಲಿನ ಪರಿಸರದ ಎಲ್ಲಾ ಕಾರ್ಯಕ್ರಮಗಳಲ್ಲಿ ನೀರಾವರಿ ಮಂತ್ರಿ ಎಂದು ಮನೆಮಾತಾಗಿರುವ ಸುಮಾರು 40ವರ್ಷಗಳಿಂದ ಅವಿರತವಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸ್ವಯಂ ಸೇವಕರಾಗಿ ಸಾಮಾಜಿಕ ಸೇವೆ ಸಲ್ಲಿಸುವುದರೊಂದಿಗೆ ಜನಪ್ರೀಯರಾಗಿರುವ ಉಪ್ಪುಂದದ ಪದ್ಮನಾಭ ನಾಯಕ್ ಇವರಿಗೆ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ಸೇವಾಸಮಿತಿಯ ವತಿಯಿಂದ ಗುರುತಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಅಧ್ಯಕ್ಷರಾದ ದಾಮೋದರ ಪ್ರಭು, ಉಪಾಧ್ಯಕ್ಷ ಪುಂಡಲೀಕ ನಾಯಕ್, ಕಾರ್ಯದರ್ಶಿ ರಮೇಶ ಪೈ, ಪ್ರಕಾಶ ಭಟ್, ನಾರಾಯಣ ಶ್ಯಾನುಭಾಗ್ ಉಪ್ರಳ್ಳಿ ಹಾಗೂ ಸಮಿತಿಯ ಸದಸ್ಯರು ಮತ್ತು ವರಮಹಾಲಕ್ಷ್ಮೀ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಓಂಗಣೇಶ ಉಪ್ಪುಂದ ಇವರು ಸನ್ಮಾನಿತರ ಪರಿಚಯವನ್ನು ವಿಸ್ತಾರವಾಗಿ ವಿವರಿಸಿದರು. ಪ್ರಮೋದ ಪೈ ಸ್ವಾಗತಿಸಿ, ವಂದಿಸಿದರು.

Read More

ಕುಂದಾಪುರ: ನಾಯ್ಕನಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಸೇವಾ ಸಮಿತಿಯಿಂದ ವರಮಹಾಲಕ್ಷ್ಮೀ ಪೂಜೆಯು ದೇವಸ್ಥಾನ ಅರ್ಚಕರಾದ ಶ್ರೀ ಬಾಲಕೃಷ್ಣ ಭಟ್ ಹಾಗೂ ವೇದ ಮೂರ್ತಿ ಗಣೇಶ ಭಟ್ ಇವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಜರಗಿತು. ರಾತ್ರಿ ಅಲಂಕಾರ ಪೂಜೆ ಮತ್ತು ದಾನಿಗಳಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವರಮಹಾಲಕ್ಷ್ಮೀ ಸೇವಾ ಸಮಿತಿಯ ಸರ್ವ ಸದಸ್ಯರು ವೆಂಕಟರಮಣ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು. ನಾಯ್ಕನಕಟ್ಟೆ ಜಿ.ಎಸ್.ಬಿ ಮಹಿಳೆಯರಿಂದ ಸಾಮೂಹಿಕ ಚೂಡಿ ಪೂಜೆ ನಾಯ್ಕನಕಟ್ಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಸೇವಾ ಸಮಿತಿಯಿಂದ ಜಿ.ಎಸ್.ಬಿ ಮಹಿಳೆಯರಿಂದ ಸಾಮೂಹಿಕ ಚೂಡಿ ಪೂಜೆ ಕಾರ್ಯಕ್ರಮವು ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

Read More

ಕುಂದಾಪುರ: ಸಂಘಟನೆಗಳು ಸಮಾಜದ ಸ್ಯಾಸ್ಥ್ಯ ಕಾಪಾಡಬೇಕೇ ಹೊರತು ಗೊಂದಲ ಸೃಷ್ಟಿಸುವಂತಾಗಬಾರದು. ಈ ನಿಟ್ಟಿನಲ್ಲಿ ಸಂವಿಧಾನ ಹಕ್ಕನ್ನು ಪಡೆದು ಸರ್ವಾಂಗೀಣ ಅಬಿವೃದ್ದಿಯತ್ತ ಸಾಗಲು ದಲಿತರಿಗೆ ಸಂಘಟನೆ ಅತ್ಯವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಉಡುಪಿ ಜಿಲ್ಲಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಹೇಳಿದರು. ಅವರು ಕೆರಾಡಿ ಗ್ರಾಮದ ದೀಟಿ ಸಬಾಭವನದಲ್ಲಿ ನೂತನ ದಸಂಸದ ನೂತನ ಗ್ರಾಮ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚೆಗೆ ದಲಿತರ ಒಗ್ಗಟ್ಟನ್ನು ಮುರಿದು ದಲಿತ ಚಳುವಳಿಯನ್ನು ಬಲಿತರು ಹತ್ತಿಕ್ಕುವಂತಾಗಿದೆ. ದಲಿತ ಸಮುದಾಯದವರು ಒಗ್ಗಟ್ಟಿನಿಂದ ಸಂಘಟನೆಯನ್ನು ಬಲಪಡಿಸಿ ಶೋಷಿತರಿಗೆ ಜನಜಾಗ್ರತಿಯನ್ನು ಮೂಡಿಸಬೇಕಾಗಿದೆ ದಲಿತ ಸಂಘಟನೆ ಎಂದರೆ ದಲಿತರ ಸ್ವಾಬಿಮಾನ ಜಾಗೃತಿಯೇ ವಿನಾ: ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಗೊಂದಲವನ್ನು ಸೃಷ್ಟಿಸುವುದಲ್ಲ ಎಂದವರು ದಲಿತ ಸಮುದಾಯಕ್ಕೆ ಕಿವಿಮಾತು ಹೇಳಿದರು. ತಾಲೂಕು ಸಂಚಾಲಕ ಕೆ. ಸಿ. ರಾಜು ಬೆಟ್ಟಿನಮನೆ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿ ಕೊಲ್ಲೂರು ಆರಕ್ಷಕ ಠಾಣಾಧಿಕಾರಿ ಜಯಂತ್ ಅವರು  ಡಾ. ಬಿ .ಆರ್. ಅಂಬೇಡ್ಕರ್ ಅವರ ಬಾವ ಚಿತ್ರಕ್ಕೆ ಮಾಲಾರ್ಪಣೆ…

Read More

ಕುಂದಾಪುರ: ಜೇಸಿ ಸಂಘಟನೆಯಿಂದ ವ್ಯಕ್ತಿತ್ವದ ನವ ನಿರ್ಮಾಣವಾಗುವ ಜೊತೆಗೆ ಸೇವಾ ಮನೋಭಾವವನ್ನು ವೃದ್ಧಿಸಿ ಸಮಾಜದ ಬೆಳಕಾಗಿ ಕಾರ್ಯನಿರ್ವಹಿಸುತ್ತವೆ ಎಂದು ನಾಗೂರಿನ ಕುಸುಮ ಹೋಮ್ಸ್ ಪ್ರೈ. ಲಿ., ವ್ಯವಸ್ಥಾಪಕ ನಿರ್ದೇಶಕ ನಳಿನ್ ಕುಮಾರ್ ಶೆಟ್ಟಿ ಹೇಳಿದರು. ಅವರು ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಒಂದು ವಾರಗಳ ಕಾಲ ನಡೆಯುವ ಜೇಸಿ ಸಪ್ತಾಹದ ೨ನೇ ದಿನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು. ಕುಂದಾಪುರದ ಪ್ರೀತಮ್ ಹೇರ್ ಡ್ರೆಸ್ಸಸ್‌ನ ಮಾಲಕ ಅಣ್ಣಯ್ಯ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಜೇಸಿಐ ಕುಂದಾಪುರ ಸಿಟಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಕಾರ್ತೀಕೇಯ ಮಧ್ಯಸ್ಥ ಅವರು ಸರೋಜಿನಿ ಮಧುಸೂಧನ ಡಿ. ಕುಶೆ ಸರಕಾರಿ ಪ್ರೌಢ ಶಾಲೆ ವಡೇರಹೋಬಳಿಯ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ ವಿತರಿಸಿದರು. ಮಡಿಕೆ ಓಡೆಯುವ ಸ್ಪರ್ಧೆಯ ವಿಜೇತ ಪ್ರಜ್ವಲ್ ಅವರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮೊಳಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ…

Read More

ಕುಂದಾಪುರ: ಪ್ರತಿಷ್ಠಿತ ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನವು ಪತ್ರಕರ್ತ ಸಂತೋಷ ಕುಮಾರ ಗುಲ್ವಾಡಿ ಅವರ ಸ್ಮಾರಕ ನೀಡಲಾಗುತ್ತಿರವು ಗುಲ್ವಾಡಿ ಗೌರವ ಪುರಸ್ಕಾರಕ್ಕೆ ಖ್ಯಾತ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ್ ಆಯ್ಕೆಯಾಗಿದ್ದರೆ. ಸೆ. 13ರಂದು ಅಪರಾಹ್ನ 2:30ಕ್ಕೆ ಗುಲ್ವಾಡಿಯ ತೋಟದ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಗೌರವ ಪುರಸ್ಕಾರ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳನ್ನು ಸಾಧನೆಗೈದವರಿಗೆ ಪ್ರತಿಷ್ಠಾನದ ಗೌರವ ಪ್ರಧಾನ ಮಾಡಲಾಗುವುತ್ತಿದೆ. ಈ ಸಮಾರಂಭದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮೊಹಮ್ಮದ್‌ ಹನೀಫ್‌, ಬೈಂದೂರು ಶಾಸಕ ಗೋಪಾಲ ಪೂಜಾರಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ. ಮೊಹಿದಿನ್‌ ಬಾವಾ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ಕಾರ್ಯನಿರ್ವಹಕ ಯಾಕೂಬ್‌ ಖಾದರ್‌ ಗುಲ್ವಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ (ರಿ) ಕುಂದಾಪುರ, ಅಭಿಯೋಗ ಇಲಾಖೆ, ಆರೋಗ್ಯ ಇಲಾಖೆ, ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ತಾ.ಪಂ. ಸಭಾಂಗಣದಲ್ಲಿ ಆತ್ಮಹತ್ಯಾ ವಿರೋಧಿ ದಿನಾಚರಣೆ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಂದಾಪುರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರಾಜಶೇಖರ ವಿ.ಪಾಟೀಲ್ ಮಾತನಾಡಿ‌, ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡುವುದು ಅಪರಾಧ ಆದರೆ ಆತ್ಮಹತ್ಯೆ ಮಾಡಿ ಕೊಳ್ಳುವುದು ಅಪರಾಧವಲ್ಲ. ಆರ್ಥಿಕ, ಮಾನಸಿಕ ಹಾಗೂ ಸಾಮಾಜಿಕ ಒತ್ತಡವೇ ಆತ್ಮಹತ್ಯೆಗೆ ಮುಖ್ಯ ಕಾರಣವಾಗಿದೆ. ಇದಕ್ಕೆ ಪರಿಹಾರಕಂಡುಕೊಳ್ಳಲು ಶೇ.100 ರಷ್ಟು ಸಾಧ್ಯವಿಲ್ಲವಾದರೂ ಇಂಥ ದಿನಾಚರಣೆಗಳ ಮೂಲಕ ಒಂದಷ್ಟು ಜನಜಾಗೃತಿ ಮೂಡಲು ಸಾಧ್ಯ ಎಂದು ಹೇಳಿದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಎ.ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್‌ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಗೌರವ ಉಪಸ್ಥಿತರಿದ್ದರು. ಮುಖ ಅತಿಥಿಗಳಾಗಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿರಿಯಾರ ಮುರಳೀಧರ ಶೆಟ್ಟಿ, ಸಹಾಯಜ ಸರಕಾರಿ ಅಭಿಯೋಜಕ ಸಂದೇಶ ಭಂಡಾರಿ, ತಾಲೂಕು ಆರೋಗ್ಯ…

Read More

ಕುಂದಾಪುರ: ಕುಂದಾಪುರ ತಾಲೂಕು ಮಟ್ಟದ ಎಸ್‌ಡಿಎಂಸಿ ಸಮಾವೇಶ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ  ಜರುಗಿತು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯ ಭಾಗವಹಿಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಎಸ್‌ಡಿಎಂಸಿಯನ್ನು ರಚಿಸಲಾಗಿದ್ದು, ಎಸ್‌ಡಿಎಂಸಿ ಶಾಲಾ ಅಭಿವೃದ್ಧಿಯ ನಿಟ್ಟಿನಲ್ಲಿ  ಗಮನಾರ್ಹ ಪಾತ್ರ ವಹಿಸಿದೆ. ಗ್ರಾ.ಪಂ.ಗಳ ಅಡಿಯಲ್ಲಿ ಈ ಸಮಿತಿ ಬರುವುದರಿಂದ ಅಭಿವೃದ್ಧಿ ಕಾರ್ಯಗಳನ್ನು ಅವರ ಮೂಲಕ ಮಾಡಲು ಸಾಧ್ಯ ಎಂದರು. ಕುಂದಾಪುರ ತಾಲೂಕು ಎಸ್‌ಡಿಎಂಸಿ ಸಂಚಲನಾ ಸಮಿತಿಯ ಅಧ್ಯಕ್ಷ ಎಸ್‌.ವಿ. ನಾಗರಾಜ್‌ ಸಟ್ವಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಭಿನಂದನ್‌ ಶೆಟ್ಟಿ, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಡಿ. ವಾಸುದೇವ ಕಾರಂತ್‌, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ. ಸದಸ್ಯ ಗಣಪತಿ ಟಿ.ಶ್ರೀಯಾನ್‌, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ರಾಜ್ಯ ಎಸ್‌ಡಿಎಂಸಿ ಸಮನ್ವಯ ಸಮಿತಿಯ ಕಾರ್ಯದರ್ಶಿ ಶೋಭಾ ಬಾಸ್ಕರ್‌,…

Read More

ಕುಂದಾಪುರ: ಕರ್ನಾಟಕ ರಾಜ್ಯದಲ್ಲಿ ಸಮಸ್ಯೆಗಳನ್ನು ಬಗೆಹರಿಸುವುದನ್ನು ಬಿಟ್ಟು ಬಿಬಿಎಂಪಿ ಅಧಿಕಾರ ಹಿಡಿಯಲು ರೆಸಾರ್ಟ್ ರಾಜಕಾರಣ ಮಾಡುತ್ತಿರುವ ಸರಕಾರವನ್ನು ಮುಂದಿನ ಚುನಾವಣೆಯಲ್ಲಿ ಕಿತ್ತೆಸೆಯಲು ಬಿಜೆಪಿಯ ಕಾರ್ಯಕರ್ತರು ಪಣತೊಡಬೇಕು ಎಂದು  ಉಡುಪಿಯ ಮಾಜಿ ಶಾಸಕ  ರಘುಪತಿ ಭಟ್‌ ಆರೋಪಿಸಿದರು. ಅವರು  ಉಡುಪಿಯಲ್ಲಿ ನಡೆಯಲಿರುವ ರೈತ ಚೆ„ತನ್ಯ ಯಾತ್ರೆಯ ಸಮಾವೇಶಕ್ಕೆ ಕುಂದಾಪುರ ನಗರದ ಕಾರ್ಯಕರ್ತರನ್ನು ಒಗ್ಗೂಡಿಸಲು ಕುಂದಾಪುರ ಬಿಜೆಪಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರಿಂದ ರಾಜ್ಯದಲ್ಲಿ ಮುನ್ನೂರಕ್ಕೂ  ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯುತ್ ಕೊರತೆಯನ್ನು ಎದುರಿಸುತ್ತಿದ್ದು ರೈತರು, ಉದ್ಯಮಿಗಳನ್ನು ಸಂಕಷ್ಟಕ್ಕೆ ನೂಕಿದೆ. ಇದಕ್ಕಾಗಿ  ಬಿಜೆಪಿ  ಸೆ. 11ರಂದು  ಉಡುಪಿಯಲ್ಲಿ ನಡೆಯಲಿರುವ ರೈತ ಚೈತನ್ಯ ಯಾತ್ರೆಯಲ್ಲಿ ಕುಂದಾಪುರ ನಗರದ ಕಾರ್ಯಕರ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಿ ಕೊಡಬೇಕೆಂದು ಮನವಿ ಮಾಡಿದರು. ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತ ನಾರಾಯಣ ಖಾರ್ವಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪುಂಡಲೀಕ ನಾಯಕ್‌, ರಾಜ್ಯ ಮೀನುಗಾರರ…

Read More