ತಾಲೂಕು ಮಟ್ಟದ ಎಸ್‌ಡಿಎಂಸಿ ಸಮಾವೇಶ

Call us

Call us

Call us

ಕುಂದಾಪುರ: ಕುಂದಾಪುರ ತಾಲೂಕು ಮಟ್ಟದ ಎಸ್‌ಡಿಎಂಸಿ ಸಮಾವೇಶ ತಾಲೂಕು ಪಂಚಾಯತ್‌ ಸಭಾಂಗಣದಲ್ಲಿ  ಜರುಗಿತು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ ಮಾತನಾಡಿ ಶಿಕ್ಷಣ ಕ್ಷೇತ್ರದಲ್ಲಿ ಸಮುದಾಯ ಭಾಗವಹಿಸಿದಾಗ ಮಾತ್ರ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಸಾಧ್ಯ ಎನ್ನುವ ನಿಟ್ಟಿನಲ್ಲಿ ಎಸ್‌ಡಿಎಂಸಿಯನ್ನು ರಚಿಸಲಾಗಿದ್ದು, ಎಸ್‌ಡಿಎಂಸಿ ಶಾಲಾ ಅಭಿವೃದ್ಧಿಯ ನಿಟ್ಟಿನಲ್ಲಿ  ಗಮನಾರ್ಹ ಪಾತ್ರ ವಹಿಸಿದೆ. ಗ್ರಾ.ಪಂ.ಗಳ ಅಡಿಯಲ್ಲಿ ಈ ಸಮಿತಿ ಬರುವುದರಿಂದ ಅಭಿವೃದ್ಧಿ ಕಾರ್ಯಗಳನ್ನು ಅವರ ಮೂಲಕ ಮಾಡಲು ಸಾಧ್ಯ ಎಂದರು.

Call us

Click Here

ಕುಂದಾಪುರ ತಾಲೂಕು ಎಸ್‌ಡಿಎಂಸಿ ಸಂಚಲನಾ ಸಮಿತಿಯ ಅಧ್ಯಕ್ಷ ಎಸ್‌.ವಿ. ನಾಗರಾಜ್‌ ಸಟ್ವಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಭಿನಂದನ್‌ ಶೆಟ್ಟಿ, ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಡಿ. ವಾಸುದೇವ ಕಾರಂತ್‌, ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ಜಿ.ಪಂ. ಸದಸ್ಯ ಗಣಪತಿ ಟಿ.ಶ್ರೀಯಾನ್‌, ತಾ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ರಾಜ್ಯ ಎಸ್‌ಡಿಎಂಸಿ ಸಮನ್ವಯ ಸಮಿತಿಯ ಕಾರ್ಯದರ್ಶಿ ಶೋಭಾ ಬಾಸ್ಕರ್‌, ಮಂಗಳೂರಿನ ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿ’ಸೋಜಾ, ಕುಂದಾಪುರ ತಾಲೂಕು ಶಿಕ್ಷಣ ಸಂಪನ್ಮೂಲ  ಕೇಂದ್ರದ ಅಧ್ಯಕ್ಷ ಬಾಬು ಪೈ, ಸಂಪನ್ಮೂಲ ವ್ಯಕ್ತಿ ಗೋವಿಂದರಾಜ್‌ ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರ ಕುಂದಾಪುರ, ತಾಲೂಕು ಎಸ್‌ಡಿಎಂಸಿ ಸಂಚಲನಾ ಸಮಿತಿ ಕುಂದಾಪುರ, ತಾ.ಪಂ. ಕುಂದಾಪುರ, ಸಾರ್ವಜನಿಕ ಶಿಕ್ಷಣ ಇಲಾಖೆ ಕುಂದಾಪುರ, ಬೈಂದೂರು ಮತ್ತು ರೋಟರಿ ಕುಂದಾಪುರ ದಕ್ಷಿಣ ಇವರ ಸಂಯುಕ್ತ ಆಶ್ರಯದಲ್ಲಿ  ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕುಂದಾಪುರ ತಾಲೂಕು ಶಿಕ್ಷಣ ಸಂಪನ್ಮೂಲ  ಕೇಂದ್ರದ ಕಾರ್ಯದರ್ಶಿ ಹುಸೇನ್‌ ಹೈಕಾಡಿ ಸ್ವಾಗತಿಸಿದರು. ರವೀಂದ್ರ ಎಚ್‌. ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣ್‌ ವಂದಿಸಿದರು.

Leave a Reply