ಬೈಂದೂರಿನಿಂದ 10 ಕಿ.ಮೀ ದೂರದಲ್ಲಿರುವ ಎಳಜಿತಕ್ಕೆ ತೆರಳಿ ಅಲ್ಲಿಂದ ಕಿರಿದಾದ ಅಡ್ಡ ರಸ್ತೆಗಳಲ್ಲಿ ಒಂದು ಕಿ.ಮೀ ಕ್ರಮಿಸಿದರೆ ಗುಳ್ಳಾಡಿ ಹಾಗೂ ಎರಡು ಕಿ,ಮಿ ಕ್ರಮಿಸಿದರೆ ಮಂದಣಕಲ್ಲು ಜಲಪಾದ ಎದುರುಗೊಳ್ಳುತ್ತದೆ. ಅದ್ಬುತವಾದ ಸೌಂದರ್ಯದಿಂದ ಕಂಗೋಳಿಸುವ ಈ ಕಿರು ಜಲಪಾತಗಳು ಮಳೆಗಾಲದಲ್ಲಿ ಮಾತ್ರ ಕಾಣಸಿಗುತ್ತದೆ. ಇಲ್ಲಿನ ಕೊರತಿಕಲ್ಲು ಗುಡ್ಡ ಚಾರಣಪ್ರೀಯರಿಗೆ ಹೇಳಿ ಮಾಡಿಸಿದಂತಿದೆ. ಎಳಜಿತ ಪೇಟೆಯಿಂದ ಸುಮಾರು ನಾಲ್ಲು ಗಂಟೆ ಹಾದಿ ಕ್ರಮಿಸಿದರೆ ಈ ಬೆಟ್ಟವನ್ನು ಏರಬಹುದಾಗಿದೆ. ಇಲ್ಲಿನ ಜಲಪಾತ ಹಾಗೂ ಬೆಟ್ಟಕ್ಕೆ ತೆರಳುವ ಮೊದಲು ಸ್ಥಳಿಯರಲ್ಲಿ ಸೂಕ್ತ ಮಾಹಿತಿ ಪಡೆದು ಹೋಗುವುದು ಉತ್ತಮ. ಬೈಂದೂರು ಭಾಗದಲ್ಲಿ ಹತ್ತಾರು ಸಣ್ಣಪುಟ್ಟ ತೊರೆಗಳು, ಜಲಪಾತಗಳು, ಬೆಟ್ಟಗುಡ್ಡಗಳು ಕಾಣಸಿಗುತ್ತವೆ.
Author: ಸುನಿಲ್ ಹೆಚ್. ಜಿ. ಬೈಂದೂರು
ಬೈಂದೂರು ರಾಷ್ಟ್ರೀಯ ಹೆದ್ದಾರಿಯಿಂದ 4 ಕಿ.ಮೀ ದೂರದಲ್ಲಿರುವ ಸೋಮೇಶ್ವರ ಕಡಲತೀರ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಿ ಗುರುತಿಸಿಕೊಂಡಿದ್ದು ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದೆ. 2 ಕಿ.ಮೀ ಉದ್ದದ ಸೋಮೇಶ್ವರ ಕಡಲತೀರದ ನೋಟ ಮನಮೋಹಕವಾದುದು. ತೆರೆಗಳು ಬಂಡೆಗಪ್ಪಳಿಸುವ ದೃಶ್ಯ, ಸಮುದ್ರ ಹಾಗೂ ನದಿಯ ಸಂಗಮ ಸ್ಥಾನದ (ಅಳಿವೆ) ಇವೆಲ್ಲದರ ಸೌಂದರ್ಯವನ್ನು ವರ್ಣಿಸಲಸಾಧ್ಯ. ಶ್ರೀ ಸೋಮೇಶ್ವರ ದೇವಾಲಯದಿಂದಾಗಿ ಈ ತೀರಕ್ಕೆ ಸೋಮೇಶ್ವರ ಕಡಲತೀರ ಎಂಬ ಹೆಸರು ಬಂದಿದ್ದು ಈ ತೀರದ ಮೂಲಕವೇ ಬ್ರಿಟಿಷರು ವ್ಯಾಪಾರ ವಹಿವಾಟು ನಡೆಸುತ್ತಿದ್ದರು ಎಂಬುದನ್ನು ಇತಿಹಾಸದ ಪುಟಗಳು ತಿಳಿಸುತ್ತದೆ. ದೇವಳದ ಪಕ್ಕದಲ್ಲೇ ಎಂದಿಗೂ ಬತ್ತದ ನಾಗತೀರ್ಥವಿದ್ದು ವರ್ಷದ ಎಲ್ಲಾ ಕಾಲದಲ್ಲೂ ಇಲ್ಲಿ ಸಿಹಿನೀರು ಶೇಖರಣೆಯಾಗುತ್ತದೆ. ಪಕ್ಕದಲ್ಲೇ ಉಪ್ಪು ನೀರಿನ ಸಮುದ್ರವಿದ್ದರೂ ಇಲ್ಲಿನ ನಾಗತೀರ್ಥ ಮಾತ್ರ ಸಿಹಿಯಾಗಿರುವುದು ಇಲ್ಲಿನ ನೈಸರ್ಗಿಕ ವೈಶಿಷ್ಟ್ಯವೇ ಸರಿ. ಒಂದೆಡೆ ದೇವಸ್ಥಾನ, ಮತ್ತೊಂದೆಡೆ ಪ್ರವಾಸಿತಾಣ ಇರುವ ಈ ಅಪರೂಪದ ಕ್ಷೇತ್ರವನ್ನು ಸಂದರ್ಶಿಸಲು ದಿನಪ್ರತಿ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೂ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಈ ಸ್ಥಳದ ಬಗೆಗೆ…
ಕುಂದಾಪುರ: ಪ್ರತಿಯೋರ್ವ ವ್ಯಕ್ತಿಗೂ ಕೆಲವು ಸಾಮರ್ಥ್ಯಗಳು ಹಾಗೂ ಕೆಲವು ನ್ಯೂನತೆಗಳಿರುತ್ತವೆ. ನಾವು ಅವುಗಳನ್ನು ಅರಿತು ನಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ನಾವು ಮಾಡುತ್ತಿರುವ ಕೆಲಸದಲ್ಲಿ ಜಯವನ್ನು ಸಾಧಿಸಲು ಸಾಧ್ಯ ಎಂದು ಭಂಡಾರ್‌ಕಾರ್ಸ್ ಕಾಲೇಜಿನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಮ್.ಗೊಂಡ ಹೇಳಿದರು. ಅವರು ಇಂದು (ಸೆ. 09) ಜೇಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ನಡೆಯುತ್ತಿರುವ ಜೇಸಿ ಸಪ್ತಾಹದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರದ ಸಹಭಾಗಿತ್ವದಲ್ಲಿ ಭಂಡಾರ್‌ಕಾರ್ಸ್ಸ ಕಾಲೇಜಿನಲ್ಲಿ ನಾಯಕತ್ವ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜೇಸಿಐ ಕುಂದಾಪುರ ಸಿಟಿ ಅಧ್ಯಕ್ಷ ಚಂದ್ರಕಾಂತ ವಹಿಸಿದ್ದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಸಿಟಿ ಜೇಸಿಸ್ ಸ್ಥಾಪಕಾಧ್ಯಕ್ಷ ಹುಸೇನ್ ಹೈಕಾಡಿ, ಪೂರ್ವಧ್ಯಕ್ಷರುಗಳಾದ ಕೆ. ಕಾರ್ತೀಕೇಯ ಮಧ್ಯಸ್ಥ, ರಾಘವೇಂದ್ರಚರಣ ನಾವುಡ, ತರಬೇತುದಾರರಾದ ಅವಿನಾಶ ಕಾಮತ್ ಉಪಸ್ಥಿತರಿದ್ದರು. ಚರಣ ಸುವರ್ಣ ಹಾಗೂ ಯುವ ಜೇಸಿ ಅಧ್ಯಕ್ಷ ಸನತ್ ಶೇಟ್ ಕಾರ್ಯಕ್ರಮ ನಿರೂಪಿಸಿ, ಗೌತಮ್ ನಾವಡ ವಂದಿಸಿದರು.
ಕುಂದಾಪುರ: ರಸ್ತೆ ಬದಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ಕಾರಿನಲ್ಲಿ ಬಂದ ಯುವಕ ಅವಾಚ್ಯವಾಗಿ ಬೈದು ನಿಂದಿಸಿ ಕೊಲೆ ಬೆದರಿಕೆ ಹಾಕಿ ಹೊಡೆದಾಟ ನಡೆದ ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಗೆ ದಾಖಲಾದರೆ ಆರೋಪಿ ಯುವಕನ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಶುಕ್ರವಾರ ಸಂಜೆ ಎಂ.ಕೋಡಿಯಲ್ಲಿ ನಡೆದಿದೆ. ಎಂ. ಕೋಡಿ ನಿವಾಸಿ ಮಹಮ್ಮದ್ ಷರೀಫ್(50) ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ. ಮಹಮ್ಮದ್ ಷರೀಪ್ ಎಂ.ಕೋಡಿ ನಿವಾಸಿ ಜಬ್ಬಾರ್ ಎಂಬುವರ ಮನೆ ರಿಪೇರಿಗೆಂದು ತಂದು ರಸ್ತೆ ಬದಿಗೆ ಹಾಕಲಾಗಿದ್ದ ಹೋಲೋ ಬ್ಲಾಕ್‌ಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ರಂಜಿತ್ ಎಂಬಾತ ಕಾರಿನಲ್ಲಿ ಬಂದು ಅವಾಚ್ಯವಾಗಿ ಬೈದಾಗ ಆಕ್ಷೇಪಿಸಿದ್ದಕ್ಕೆ ಕಾರಿನಿಂದಿಳಿದು ಬಂದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂಬುದಾಗಿ ಹಲ್ಲೆಗೊಳಗಾದ ಮಹಮ್ಮದ್ ಷರೀಪ್ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಹಲ್ಲೆ ಪರಿಣಾಮ ತಲೆಗೆ ಗಾಯಗಳಾಗಿದ್ದ ಷರೀಪ್ ಕುಂದಾಪುರ ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಬಳಸಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೋಮು ಸೂಕ್ಷ್ಮ…
ಸುಸಜ್ಜಿತ, ಐಷಾರಾಮಿ ಹೋಟೇಲ್ ಯುವ ಮೆರಿಡಿಯನ್ ಬೇ ರಿಸಾರ್ಟ್ ಇದು ದೇಶದ ಕೆಲವೇ ಕೆಲವು ಸುಸಜ್ಜಿತ, ಐಷಾರಾಮಿ ಹೋಟೆಲ್‌ಗಳ ಪೈಕಿ ಒಂದಾಗಿದೆ. ಸುಸಜ್ಜಿತ ಮತ್ತು ಆಧುನಿಕ ವಿಸ್ತಾರವಾದ ಹಸಿರು ರಾಶಿಗಳ ನಡುವೆ ಉತ್ತಮ ಸೌಲಭ್ಯಗಳನ್ನು ಹಾಗೂ ಸರ್ವಶ್ರೇಷ್ಠ ಸೇವೆಗಳನ್ನು, ಅತ್ಯಂತ ವಿಶೇಷ ಮತ್ತು ವೈಯಕ್ತಿಕಗೊಳಿಸಿದ ಅನುಭವವನ್ನು ನೀಡುವ ಆದರ್ಶ ಮನೆಯಾಗಲಿದೆ. ವಿಶೇಷವೆಂದರೆ ಯುವ ಮೆರಿಡಿಯನ್ ಬೇ ರೆಸಾರ್ಟ್‌ನಲ್ಲಿ ಅತಿಥಿಗಳಿಗಾಗಿ ತಮ್ಮ ಸೇವೆ ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ಸುಪೀರಿಯರ್ ರೂಂ, ಕ್ಲಬ್ ರೂಂ, ಡಿಲಕ್ಸ್ ರೂಂ ಹಾಗೂ ಸೂಟ್ ರೂಂ. ಎಂದು ನಾಲ್ಕು ವಿಧದ ವಿಶ್ರಾಂತಿ ಕೊಠಡಿಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸುಪೀರಿಯರ್ ರೂಂ: ವಿಶೇಷ ಅತಿಥಿಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯಗಳಿದ್ದು, ಪ್ರತೀ ಕೋಣೆಯೂ ೨೭೫ ಚದರ ಅಡಿಗಳನ್ನು ಹೊಂದಿದೆ. ದೂಮಪಾನ ನಿಷೇಧಿತ ಹವಾನಿಯಂತ್ರಿತ ಕೊಠಡಿಗಳಾಗಿದ್ದು, ವಾರ್ತಾ ಪತ್ರಿಕೆಗಳ ಸೌಲಭ್ಯ, ಫಿಟ್‌ನೆಸ್ ಸೆಂಟರ್, ಈಜು ಕೊಳ ಸೌಕರ್ಯ, ಉನ್ನತ ಹಾಸಿಗೆಗಳು, ವಿಶೇಷ ಸ್ನಾನಗೃಹ, ಸೌಂದರ್ಯ ಸಾಧನಗಳು, ಸುರಕ್ಷಿತ ಲಾಕರ್ ವ್ಯವಸ್ಥೆ, ಅಂತರ್ಜಾಲ ಸೌಕರ್ಯ, ಓದು…
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಫಕೀರ ಮುಹಮ್ಮದ್ ಕಟ್ಪಾಡಿ ಅವರ ಕಡವು ಮನೆ ಕೃತಿಗೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಯನ್ನು ಪ್ರದಾನ ಮಾಡಿದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ. ಹೆಚ್. ಶಾಂತಾರಾಮ್ ಮಾತನಾಡಿ ಕಡವು ಮನೆ ಕಥಾ ಸಂಕಲನ ಸದಭಿರುಚಿಯ ಓದುಗನನ್ನು ಓದಿಸಿಕೊಂಡು ಹೋಗುತ್ತದೆ. ಕೃತಿಯಲ್ಲಿನ ಮೊದಲ ಕಥೆ ಉಡುಪಿ ಮತ್ತು ಸುತ್ತಮುತ್ತಲಿನ ಪರಿಸರದ ಅಂದಿನ ಸ್ಥಿತಿಗತಿಯನ್ನು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಹೇಳುತ್ತಾ ಹೋಗುತ್ತದೆ. ಇದನ್ನು ಓದಿದಾಗ ಲೇಖಕ ಫಕೀರ ಮುಹಮ್ಮದ್ ಕಟ್ಪಾಡಿ ಅವರ ಕುರಿತು ಆತ್ಮಾಭಿಮಾನ ಬರುತ್ತದೆ. ಇನ್ನೊಂದು ಕಥೆ ಬ್ಯಾರಿ ಸಮುದಾಯದ ವಿವಿಧ ದೃಷ್ಟಿಕೋನಗಳನ್ನು ಪ್ರಚುರಪಡಿಸುತ್ತಾ, ಸಮಾಜದ ಹಲವು ವೈರುಧ್ಯಗಳನ್ನು ತೋರ್ಪಡಿಸುತ್ತದೆ. ಈ ಕಥಾ ಸಂಕಲನವನ್ನು ಎಲ್ಲರು ಓದಲೇಬೇಕು. ಯಾಕೆಂದರೆ ಇದರಲ್ಲಿನ ಹಲವು ಮಾನವೀಯ ನೆಲೆಗಳು ಸುಸ್ಥಿರ ಸಮಾಜದ ಅಗತ್ಯವಾಗಿದೆ. ಅಲ್ಲದೇ ಲೇಖಕರು ನಮ್ಮ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಎನ್ನುವುದು ಇನ್ನು ಹೆಚ್ಚಿನ ಹೆಮ್ಮೆಯನ್ನು ತಂದುಕೊಟ್ಟಿದೆ. ನಮ್ಮ ವಿದ್ಯಾರ್ಥಿಗಳ ಸಾಹಿತ್ಯಾಭಿರುಚಿಯನ್ನ ಮತ್ತು ಅವರು…
ಕುಂದಾಪುರ: ಸಮೀಪದ ಕೋಣಿ ಮಾತಾ ಮಾಂಟೆಸ್ಸೋರಿ ಮಕ್ಕಳ ಶಾಲೆಯ ಚಿಣ್ಣರು ೬೯ನೇ ಸ್ವಾತಂತ್ರ್ಯೋತ್ಸವವನ್ನು ವಿಭಿನ್ನವಾಗಿ ಸಂಭ್ರಮ ಸಡಗರದೊಂದಿಗೆ ಆಚರಿಸಿದರು. ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಅಗ್ನಿ ಶಾಮಕ ಠಾಣೆ, ಕುಂದಾಪುರದ ಗ್ರಂಥಾಲಯಕ್ಕೆ ಭೇಟಿ ನೀಡಿದ ಚಿಣ್ಣರು ಅಲ್ಲಿನ ಸಿಬ್ಬಂದಿ ಹಾಗೂ ನಾಗರಿಕರಿಗೆ ಶುಭಹಾರೈಸಿ ಸಿಹಿತಿಂಡಿ ವಿತರಿಸಿದರು. ಈ ಸಂದರ್ಭದಲ್ಲಿ ಮಕ್ಕಳಿಗೆ ಅಗ್ನಿ ಶಾಮಕ ಠಾಣಾಧಿಕಾರಿ ಭರತ್‌ಕುಮಾರ್ ಅವರ ಮಾರ್ಗದರ್ಶನದಲ್ಲಿ ಪ್ರಾತ್ಯಕ್ಷಿಕೆ ನಡೆಸಿದರು. ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಪುತ್ಥಳಿಗೆ ಲೆಕ್ಕ ಪರಿಶೋಧಕ ರಾಜೇಶ್ ಶೆಟ್ಟಿ ಹಾರಾರ್ಪಣೆ ಮಾಡಿದರು. ಹಾಗೂ ಡಾ. ಅಬ್ದುಲ್ ಕಲಾಂ ಅವರ ಭಾವಚಿತ್ರಕ್ಕೆ ಕೋಣಿ ಮಾತಾ ಮಾಂಟೆಸ್ಸೋರಿ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಹಾರಾರ್ಪಣೆ ಮಾಡಿದರು. ಪ್ರಾಂಶುಪಾಲೆ ಭಾರತಿ ಪ್ರಕಾಶ್ ಶೆಟ್ಟಿ, ಶಿಕ್ಷಕಿಯರಾದ ಸುಮಿತ್ರಾ, ಗೀತಾ ಶೆಟ್ಟಿ, ಪೋಷಕರಾದ ಭರತ್ ಶೆಟ್ಟಿ, ಸತೀಶ್ ಪೈ, ಕೃಷ್ಣ ಪೂಜಾರಿ, ಗೋಪಾಲ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪುರ: ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ಸಿನಲ್ಲಿ 69ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಿಸಲಾಯಿತು. ಧ್ವಜಾರೋಹಣಗೈದ ಶ್ರೀನಿವಾಸ ಶೆಣೈ ಮಾತನಾಡಿ ಜಾತಿ, ಮತ, ಪಂಥ ಬೇಧ ತೊಲಗದೆ ದೇಶದ ಅಭಿವೃದ್ದಿ ಸಾಧ್ಯವಿಲ್ಲ. ಒಗ್ಗಟಿನ ರಾಷ್ಟ್ರಪ್ರೇಮದಿಂದ ಅಭಿವೃದ್ದಿ ಸಾಧ್ಯವೆಂದರು. ಹಾಜಿ.ಕೆ ಮೊಹಿದ್ದಿನ್ ಬ್ಯಾರಿ ಅನುದಾನಿತ ಪ್ರೌಢ ಶಾಲೆಯ ಅಭಿವೃದ್ಧಿ ಸಮಿತಿ ಸದಸ್ಯರಾದ ಮಾಧವ ಎಂ ಪೂಜಾರಿ ಮಾತನಾಡಿ ಸಾಮರಸ್ಯ ಸೌಹಾರ್ದತೆಯಿಂದ ನವ ಭಾರತದ ನಿರ್ಮಾಣವಾಗಬೇಕು ಎಂದರು. ಬ್ಯಾರೀಸ್ ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ಟರ್ ಮೆಹಮೂದ್ ರವರು ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಕೋರಿರದು. ಹಾಜಿ ಕೆ. ಮೊಯಿದ್ದೀನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್ ಸದಸ್ಯರುಗಳಾದ ಅಬ್ದುಲ್ ರೆಹಮಾನ್ ಬ್ಯಾರಿ, ಅಶ್ರಫ್ ಬ್ಯಾರಿ, ಪುರಸಭಾ ಸದಸ್ಯರುಗಳಾದ ಪ್ರಭಾಕರ್, ಶ್ರೀಮತಿ ಜ್ಯೋತಿ, ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರೊ| ಚಂದ್ರಶೇಖರ್ ದೋಮರವರು ಹಾಗೂ ಸಮೂಹ ಸಂಸ್ಥೆಗಳ ಅಭಿವೃದ್ದಿ ಸಮಿತಿಯ ಸದ್ಯಸರುಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಸುರೇಂದ್ರ ಶೆಟ್ಟಿಯವರು ಕಾರ‍್ಯಕ್ರಮ ನಿರ್ವಹಿಸಿದ್ದು, ಜಯಶೀಲ ಶೆಟ್ಟಿಯವರು ಸ್ವಾಗತಿಸಿ, ಬ್ಯಾರೀಸ್ ಸೀ-ಸೈಡ್ ಪಬ್ಲಿಕ್ ಸ್ಕೂಲ್‌ನ ಮುಖ್ಯೋಪಧ್ಯಾಯರಾದ ಶ್ರೀ…
ಕುಂದಾಪುರ: ಸಮುದಾಯ ಸಾಂಸ್ಕೃತಿಕ ಸಂಘಟನೆ ಮತ್ತು ಬಸ್ರೂರಿನ ಶ್ರೀ ಶಾರದಾ ಕಾಲೇಜಿನ ಸಹಯೋಗದೊಂದಿಗೆ ಪದವಿ ವಿದ್ಯಾರ್ಥಿಗಳಿಗಾಗಿ ಚಲನಚಿತ್ರ ರಸಗ್ರಹಣ ತರಗತಿಯನ್ನು ಹಮ್ಮಿಕೊಂಡಿತ್ತು. ಪಿ. ಶೇಷಾದ್ರಿ ನಿರ್ದೇಶಿಸಿರುವ ‘ಡಿಸೆಂಬರ್ 1’ ಚಲನಚಿತ್ರವನ್ನು ಪ್ರದರ್ಶಿಸಲಾಯಿತು. ಪ್ರದರ್ಶನದ ನಂತರ ಪ್ರದೀಪಕುಮಾರ ಶೆಟ್ಟಿ ಕೆಂಚನೂರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಿನೇಮಾ ಪ್ರದರ್ಶನದ ಮೊದಲು ನಡೆದ ಮಾತುಕತೆಯಲ್ಲಿ ಕಾಲೇಜಿನ ಪ್ರಾಂಶುಪಾಲ ರಾಧಾಕೃಷ್ಣ ಶೆಟ್ಟಿ, ಡಾ. ದಿನೇಶ ಹೆಗ್ಡೆ, ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವಕಾರ, ಜಿ.ವಿ.ಕಾರಂತ, ಸದಾನಂದ ಬೈಂದೂರು, ರಾಘವೇಂದ್ರ ಕಾಲ್ತೋಡು, ಪ್ರದೀಪ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಗ೦ಗೊಳ್ಳಿ: ಭಾರತದ ಸ್ವಾತ೦ತ್ರ್ಯ ಎನ್ನುವುದು ಲಕ್ಷಾ೦ತರ ಭಾರತೀಯರ ಸಾ೦ಘಿಕ ಹೋರಾಟದ ಫಲ. ಈ ಸ್ವಾತ೦ತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರವೂ ಅತ್ಯ೦ತ ಮಹತ್ವದ್ದಾಗಿತ್ತು. ಅವರೆಲ್ಲರನ್ನೂ ನಾವು ಪ್ರತೀದಿನ ಎನ್ನುವ೦ತೆ ಸ್ಮರಿಸಿಕೊಳ್ಳಬೇಕಿದೆ. ಎ೦ದು ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇ೦ದ್ರ ಎಸ್ ಗ೦ಗೊಳ್ಳಿ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯದ ಸಭಾ೦ಗಣದಲ್ಲಿ ನಡೆದ ರೋಟರಿ ಕ್ಲಬ್ ಗ೦ಗೊಳ್ಳಿಯ ಸಮಾನ್ಯ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ‘ಸ್ವಾತ೦ತ್ರ್ಯದ ಅರಿವು’ಎನ್ನುವ ವಿಚಾರದ ಕುರಿತು ಮಾತನಾಡಿದರು. ಸ್ವಾತ೦ತ್ರ್ಯದ ಹಿನ್ನೆಲೆ ಚರಿತ್ರೆ ಅದರ ಆಶಯಗಳನ್ನು ನಾವು ಸರಿಯಾದ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಿದೆ.ಯಾರೋ ಹೇಳಿದ್ದನ್ನು ಕೇಳಿ ನಮ್ಮದೇ ಆದ ಅಭಿಪ್ರಾಯಗಳನ್ನು ರೂಢಿಸಿಕೊಳ್ಳುವ ಬದಲು ನಾವು ಮುಕ್ತವಾದ ಅಧ್ಯಯನಶೀಲ ಮನಸ್ಸನ್ನು ಬೆಳೆಸಿಕೊಳ್ಳಬೇಕಿದೆ ಮತ್ತು ಆ ಮೂಲಕ ಸ್ವಾತ೦ತ್ರ್ಯದ ನಿಜವಾದ ಅರಿವನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ಕಾರ‍್ಯಪ್ರವೃತ್ತರಾದರೆ ಸಧೃಡವಾದ ಸು೦ದರ ಭಾರತದ ನಿರ್ಮಾಣ ಸಾಧ್ಯ ಎ೦ದು ಅವರು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ರೊಟೇರಿಯನ್ ಪ್ರದೀಪ ಡಿ ಕೆ…
