ಕುಂದಾಪುರ: ಇಲ್ಲಿನ ಮಹಿಳಾ ಪೊಲೀಸ್ ರಾಣೆಯನ್ನು ಜಿಲ್ಲಾ ಕೇಂದ್ರಕ್ಕೆ ಸ್ಥಳಾಂತರಿಸುವುದನ್ನು ವಿರೋಧಿಸಿ ತಾಲೂಕಿನ ಮಹಿಳಾ ಮಿತ್ರ ಹಾಗೂ ಮಕ್ಕಳ ಮಿತ್ರದ ಪ್ರತಿನಿಧಿಗಳು ಹಾಗೂ ಶ್ರೀ ಮೂಕಾಂಬಿಕಾ ಮಹಿಳಾ ಮಂಡಲಗಳ ತಾಲೂಕು ಒಕ್ಕೂಟದ ಸದಸ್ಯರು ಕುಂದಾಪುರ ವಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳಾ ಮತ್ತು ಮಕ್ಕಳ ಮಿತ್ರ ಕಾರ್ಯಕರ್ತ ಹಾಗೂ ಬೀಜಾಡಿ ಗ್ರಾ.ಪಂ ಸದಸ್ಯ ರವೀಂದ್ರ ದೊಡ್ಮನೆ ಮಾತನಾಡಿ ಕುಂದಾಪುರದಲ್ಲಿ ಮಹಿಳಾ ಠಾಣೆ ಇರುವುದರಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಸಾಕಷ್ಟು ಅನುಕೂಲಗಳಾಗಿದೆ. ತಾಲೂಕು ಕೇಂದ್ರದಲ್ಲಿಯೇ ಠಾಣೆ ಇರುವಾಗ ಮಹಿಳೆಯರು ದೂರನ್ನು ನೀಡಲು ಹಿಂಜರಿಯುತ್ತಾರೆ. ಹೀಗಿರುವಾಗ ಜಿಲ್ಲಾ ಕೇಂದ್ರಕ್ಕೆ ಠಾಣೆಯನ್ನು ಸ್ಥಳಾಂತರಿಸುವುದು ಸರಿಯಲ್ಲ. ವರ್ಗವಣೆಯ ಹುನ್ನಾರ ಮುಂದುವರಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು. ಗೊಳಿಹೊಳೆ ಗ್ರಾಮದ ಮಕ್ಕಳ ಮತ್ತು ಮಹಿಳಾ ಮಿತ್ರ ದೇವಿ ಮಾತನಾಡಿ ಇತ್ತಿಚಿನ ದಿನಗಳಲ್ಲಿ ಮಹಿಳೆ ಹಾಗೂ ಮಕ್ಕಳ ಮೇಲೆ ಶೋಷಣೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಠಾಣೆಯನ್ನು ವರ್ಗಾಯಿಸುವುದು ಸಮಂಜಸವಲ್ಲ. ಬದಲಿಗೆ ಗಾಮಾಂತರ ಪ್ರದೇಶದಲ್ಲಿ ಮಹಿಳಾ ಠಾಣೆಯನ್ನು…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯದಂಗಡಿಗಳಿಗೆ ಪರವಾನಿಗೆ ನೀಡುವುದನ್ನು ವಿರೋಧಿಸಿ ಇಲ್ಲಿನ ಗ್ರಾಮಸ್ಥರು ಕಾಳವಾರ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯದಂಗಡಿಯನ್ನು ಆರಂಭಿಸಲು ನಿಯೋಜಿಸಿದ ಸ್ಥಳಕ್ಕೆ ಸಮೀಪದಲ್ಲಿ ಅಂಗನವಾಡಿ ಹಾಗೂ ಶಾಲೆ ಇದೆ. ಬಸ್ ನಿಲ್ದಾಣವೂ ಸಮೀಪದಲ್ಲಿದ್ದು ಶಾಲೆಗೆ ತೆರಳುವ ಈ ಮಾರ್ಗದ ಮೂಲಕವೇ ಸಾಗುವುದರಿಂದ ಅವರ ಮೇಲೆಯೂ ದುಷ್ಪರಿಣಾಮ ಬೀರಲಿದೆ. ಮಧ್ಯದಂಗಡಿಯನ್ನು ಆರಂಭಿಸುವುದಕ್ಕೆ ನಮ್ಮ ನಂಪೂರ್ಣ ವಿರೋಧವಿದ್ದು ಒಂದು ವೇಳೆ ಮಧ್ಯದಂಗಡಿ ಆರಂಭಗೊಂಡರೇ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಕಾಳಾವರ, ಆಸೋಡು, ವಕ್ವಾಡಿಯ ಗ್ರಾಮಸ್ಥರು, ಕಾಳಾವರದ ನೇತಾಜಿ ಯುವಕ ಮಂಡಲ ಹಾಗೂ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಸದಸ್ಯರುಗಳು ಭಾಗವಹಿಸಿದ್ದರು. ಬಳಿಕ ಕಾಳಾವರ ಗ್ರಾಮ ಪಂಚಾಯತ್ ಅಧ್ಯಕರು ಹಾಗೂ ಪಿಡಿಒಗೆ ಮನವಿ ಸಲ್ಲಿಸಲಾಯಿತು.
ಕುಂದಾಪುರ: ಇಂದಿಗೆ ಬರೋಬ್ಬರೀ 33 ವರ್ಷಗಳ ಕೆಳಗೆ ಅಮಾಯಕ ವಿದ್ಯಾರ್ಥಿಯಾಗಿ, ಕುಂದಾಪುರದಲ್ಲಿಯೇ ಶಾಲೆಗೆ ಹೋಗಿ ಹೊತ್ತಲ್ಲದ ಹೊತ್ತಿನಲ್ಲಿ ಕುಂದಾಪುರದ ಅಂಗಳವನ್ನು ದಾಟಿದ ಬಾಲಕನೋರ್ವ ಕಾಲನ ಬರ್ಬರ ಹಿತ್ತಲಿನಲ್ಲಿ ಹಜ್ಜೆಯಿಕ್ಕಿ ರಕ್ತ ರಂಜಿತ ಭೂಗತ ಲೋಕದ ಅನಭಿಷಿಕ್ತ ರಾಜನಾಗಿ ಎರಡೂ ಕೈಗಳಿಗೆ ಪಾತಕ ಪ್ರಪಂಚದ ನೆತ್ತರನ್ನು ಅಂಟಿಸಿ ಕೊಂಡು ಇದೀಗ ಪೋಲಿಸರ ಬಂಧಿಯಾಗಿ ಗುರುತು ಸಿಗದಂತೇ ಬದಲಾಗಿ ಹೋಗಿದ್ದಾನೆ. ಒಂದು ಕಾಲದ ಅಮಾಯಕ ಬಾಲಕ, ನಂತರದ ಸುಂದರ ಸುರದ್ರೂಪಿ ಯುವಕ ಇವನೇನಾ ಅಂತಾ ಕುಂದಾಪುರ ಮಾತನಾಡಿಕೊಳ್ಳುತ್ತಿದೆ. ಬನ್ನಂಜೆ ರಾಜ ಗುರತೇ ಸಿಗದಂತೆ ಬದಲಾಗಿದ್ದಾನೆ. ಮೊರಕ್ಕೋದಲ್ಲಿ ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಶುಕ್ರವಾರ ಬೆಳಗಾವಿಗೆ ಕರೆತರಲಾದ ಬನ್ನಂಜೆ ರಾಜ(47)ನನ್ನು ಶನಿವಾರ ಉಡುಪಿಗೆ ಕರೆತಂದು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕುಂದಾಪುರದ ನಂಟು: ಕಂದಾಯ ಇಲಾಖೆಯಲ್ಲಿ ನೌಕರರಾಗಿದ್ದ ಸುಂದರ ಶೆಟ್ಟಿಗಾರ್ ಹಾಗೂ ಶಿಕ್ಷಕಿಯಾಗಿದ್ದ ವಿಲಾಸಿನಿ ದಂಪತಿಗಳ ಮೂವರು ಗಂಡು ಮಕ್ಕಳಲ್ಲಿ ಕೊನೆಯವನು ರಾಜೇಂದ್ರ ಕುಮಾರ್ ಯಾನೆ ಬನ್ನಂಜೆ ರಾಜ. ಅವರದ್ದು ಸಭ್ಯ ಕುಟುಂಬ. ತಾಯಿಯ ವರ್ಗವಣೆಯಾದಂತೆಲ್ಲಾ ಮಕ್ಕಳೂ…
ಕುಂದಾಪುರ: ಸಂಘ-ಸಂಸ್ಥೆಯನ್ನು ಬೆಳೆಸುವುದಷ್ಟೇ ಅಲ್ಲದೇ, ಸಮಾಜದ ಬಡವರ ಕುರಿತು ಕಳಕಳಿಯನ್ನು ಹೊಂದಿ ಅವರನ್ನು ಪ್ರೋತ್ಸಾಹಿಸುವುದು ಕೂಡ ಮುಖ್ಯವಾಗುತ್ತದೆ ಎಂದು ಸಹಕಾರಿ ಯೂನಿಯನ್ ನ ಅಧ್ಯಕ್ಷ ಕಿಶನ್ಕುಮಾರ್ ಹೆಗ್ಡೆ ಕೊಳ್ಕೆಬೈಲು ಹೇಳಿದರು. ಅವರು ಕೋಟೇಶ್ವರದ ಅಂಬಿಕಾ ಬಿಲ್ಡಿಂಗ್ನಲ್ಲಿ ನೂತನವಾಗಿ ಆರಂಭಗೊಂಡ ದೇವಬಂಧು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಭಾ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ದೇಶಕ್ಕೆ ಕಾನೂನು ಸಚಿವರು, ರಾಜ್ಯಕ್ಕೆ ಮುಖ್ಯಮಂತ್ರಿಯನ್ನು ಕೊಟ್ಟದ್ದು ದೇವಾಡಿಗ ಸಮಾಜ ಎಂದ ಅವರು, ದೇವಬಂಧು ಸಹಕಾರಿ ಸಂಘ ಆರಂಭದಲ್ಲಿಯೇ ಅತೀ ಹೆಚ್ಚು ಸದಸ್ಯರನ್ನೊಳಗೊಂಡು ಆರಂಭಗೊಳ್ಳುತ್ತಿರುವುದು ದಾಖಲೆಯೇ ಸರಿ ಎಂದರು. ವಿಧಾನ ಪರಿಷತ್ ಸದಸ್ಯ ದೇವಬಂಧು ಸಹಕಾರಿ ಸಂಘದ ಕಟ್ಟಡವನ್ನು ಲೋಪಾರ್ಪಣೆಗೊಳಿಸಿದರು. ಪಂಚಗಂಗಾವಳಿ ಸಹಕಾರಿ ಸಂಘದ ಅಧ್ಯಕ್ಷರಾದ ರಾಜು ದೇವಾಡಿಗ ಠೇವಣಿ ಪ್ರಮಾಣಪತ್ರವನ್ನು ವಿತರಿಸಿದರು. ಜಿಲ್ಲಾ ಪಂಚಯತ್ ಸದಸ್ಯ ಗಣಪತಿ ಶ್ರೀಯಾನ್ ಗಣಕಯಂತ್ರ ಉದ್ಘಾಟಿಸಿದರು. ಕೊಳ್ಕೆಬೈಲು ಕಿಶನ್ಕುಮಾರ್ ಹೆಗ್ಡೆ ಭದ್ರತಾಕೋಶವನ್ನು ಉದ್ಘಾಟಿಸಿದರು. ಅರಣ್ಯ ಇಲಾಖೆಯ ನೌಕರರ ಮಹಾಮಂಡಲದ ಅಧ್ಯಕ್ಷ ಆಲೂರು ರಘುರಾಮ ದೇವಾಡಿಗ ಸ್ವಸಹಾಯ ಗುಂಪುಗಳನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಕುಂದಾಪುರ ಶಾಸಕ…
ಕುಂದಾಪುರ: ತಾಲೂಕಿನ ದೇವಲ್ಕುಂದ ಆರೋಗ್ಯ ಉಪ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಕಿರಣ (28) ನಿನ್ನೆ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಕಿಗೆ ಬಂದಿದೆ. ಮೂಲತಃ ಚಿತ್ರದುರ್ಗದ ಎ.ಎಸ್.ಐ ಕೆಂಚರಪ್ಪ ಅವರ ಮಗನಾದ ಕಿರಣ, ತಾನು ಪ್ರೀತಿಸುತ್ತಿದ್ದ ಹುಡುಗಿ ತನನ್ನು ತಿರಸ್ಕರಿಸಿದ್ದಾಳೆಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಶಂಕಿಸಲಾಗಿದೆ. 2009ರಲ್ಲಿ ಆರೋಗ್ಯ ಇಲಾಖೆಯ ನೌಕರನಾಗಿ ಗಂಗೊಳ್ಳಿಗೆ ನೇಮಕಗೊಂಡಿದ್ದ ಕಿರಣ್, ಕಳೆದ ಒಂದು ವರ್ಷದ ಹಿಂದಷ್ಟೇ ದೇವಲ್ಕುಂದದ ಉಪ ಆರೋಗ್ಯ ಕೇಂದ್ರದಲ್ಲಿ ಕಿರಿಯ ಆರೋಗ್ಯ ಸಹಾಯಕನಾಗಿ ವರ್ಗವಣೆಗೊಂಡಿದ್ದರು. ಆರೋಗ್ಯ ಕೇಂದ್ರದ ಬಳಿಯೇ ಇದ್ದ ವಸತಿಗೃಹದಲ್ಲಿ ಅವರು ವಾಸವಾಗಿದ್ದರು. ನಿನ್ನೆ ಬೆಳಿಗ್ಗೆ ಗಂಗೊಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಿರಣ್, ಮಧ್ಯಾಹ್ನದವರೆಗೆ ಸಹೋದ್ಯೊಗಿಗಳೊಂದಿಗೆ ಕಾಲ ಕಳೆದು ಬಳಿಕ ದೇವಲ್ಕುಂದದ ವಸತಿ ಗೃಹಕ್ಕೆ ತೆರಳಿದ್ದರು. ರಾತ್ರಿಯ ವರೆಗೆ ವಸತಿಗೃಹದಲ್ಲಿಯೇ ತಂಗಿದ್ದ ಕಿರಣ್ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವತ್ತು ಬೆಳಿಗ್ಗೆ ಆಶಾ ಕಾರ್ತಕರ್ತೆಯೊಬ್ಬರು…
ಕುಂದಾಪುರ: ತಾಲೂಕಿನ ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕನ್ನ ಹಾಕಿದ ಖದೀಮರು ದೇವಳದ ಕಾಣಿಕೆಹುಂಡಿಯನ್ನು ಒಡೆದು ಎರಡು ಕೆ.ಜಿ. ಚಿನ್ನದ ಸೊತ್ತುಗಳನ್ನು ಕಳವುಗೈದಿದ್ದಾರೆ. ರಾತ್ರಿ ಎಂಟೂ ವರೆಗೆ ದೇವಸ್ಥಾನದ ಅರ್ಚಕರು ಬಾಗಿಲು ಹಾಕಿ ಮನೆಗೆ ಹೋದ ನಂತರ ಈ ಪ್ರಕರಣ ನಡೆದಿದ್ದು, ಬೆಳಿಗ್ಗೆ ಎಂದಿನಂತೆ ದೇವಸ್ಥಾನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಶೂಕ್ರವಾರ ಸಂಜೆ ದೇವಿಗೆ ಮಹಾಪೂಜೆ, ಕರ್ಕಾಟಕ ಅಮಾವಾಸ್ಯೆಯ ವಿಶೇಷ ದಿನವನ್ನು ಗಮನದಲ್ಲಿಟ್ಟುಕೊಂಡೇ ಕಳವು ನಡೆಸಿರಬಹುದಾಗಿದೆ ಎಂದು ಅಂದಾಜಿಸಲಾಗಿದೆ. ದೇವಿಗೆ ಹಾಕಲಾದ ಬೆಳ್ಳಿಯ ದೊಡ್ಡ ಮುಖವಾಡ, ಒಂದು ಚಿನ್ನದ ಮುಖ, ಅರ್ಧ ಕೆ.ಜಿ. ತೂಕದ ೧೫ ನಕ್ಷತ್ರ ಮಾಳ, ಒಂದೂವರೆ ಕೆಜಿ ತೂಕದ ಬಂಗಾರದ ಉತ್ಸವ ಮೂರ್ತಿ, ಒಂದು ಕೆ.ಜಿ. ತೂಕದ ಬೆಳ್ಳಿಯ ಉತ್ಸವ ಮೂರ್ತಿ, ವೀರಭದ್ರ ದೇವರಿಗೆ ಹಾಕಲಾಗಿದ್ದ ಬೆಳ್ಳಿಯ ಮುಖವಾಡ, ತಲೆಯ ಛತ್ರಿ, ಅಮ್ಮನವರ ದೇವಸ್ಥಾನದ ತಲೆಯ ಛತ್ರಿ, ಎರಡು ಕಾಣಿಕೆಯ ಹುಂಡಿ, ಒಂದು ಬೆಳ್ಳಿಯ ಗಂಟೆ, ಎರಡು ಕರಿಮಣಿ ಸರ, ಮೂಗುತಿ, ನೂರು ಗ್ರಾಂ ತೂಕದ…
ಕುಂದಾಪುರ: ಸರಕಾರದ ಎಲ್ಲಾ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ಪ್ರಜೆಯೂ ದೊರಕಬೇಕೆಂಬುದು ಸ್ವಾತಂತ್ರ್ಯದ ಪರಮ ಗುರಿಯಾಗಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್ ಹೇಳಿದರು. ಅವರು ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಇಲ್ಲಿನ ಗಾಂಧಿ ಮೈದಾನದಲ್ಲಿ ಜರುಗಿದ 69ನೇ ಸ್ವಾಂತಂತ್ರೋತ್ಸವದಲ್ಲಿ ಧ್ವಜಾರೋಹಣಗೈದು ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮ ಪೂರ್ವಿಕರು ಮಾಡಿದ ತ್ಯಾಗ-ಬಲಿದಾನಗಳನ್ನು ನೆನೆದು ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದರೊಂದಿಗೆ ರಾಷ್ಟ್ರವನ್ನು ಅಭಿವೃದ್ಧಿಯ ಪಥದೆಡೆಗೆ ಕೊಂಡೊಯ್ಯಬೇಕಾಗಿದೆ ಎಂದರು. ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಭಾಸ್ಕರ ಬಿಲ್ಲವ, ಕುಂದಾಪುರ ತಹಶೀಲ್ದಾರರಾದ ಗಾಯತ್ರಿ ನಾಯಕ್, ಪುರಸಭಾ ಅಧ್ಯಕ್ಷೆ ಕಲಾವತಿ ಯು.ಎಸ್, ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಂ. ಮಂಜುನಾಥ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಗಣಪತಿ ಶ್ರೀಯಾನ್, ತಾಲೂಕು ಪಂಚಾಯತ್, ಪುರಸಭಾ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕುಂದಾಪುರದ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಗೃಹರಕ್ಷಕ ದಳ ಹಾಗೂ ವಿವಿಧ ಕಾಲೇಜುಗಳ ಎಸಿಸಿ, ಸೌಟ್ಕ-ಗೈಡ್, ಸೇವಾದಲದಿಂದ ಆಕರ್ಪಕ ಪಥಸಂಚಲನ ನಡೆಯಿತು.
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಅಂಗಳದಲ್ಲಿ 69ನೇ ಸ್ವಾತಂತ್ರ್ಯೋತ್ಸವ ಅದ್ದೂರಿಯಾಗಿ ಜರುಗಿತು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಆನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಭಾರತಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಸುನೇತ್ರಾ ಎಸ್. ಕೋಟ್ಯಾನ್, ರೋಟರ್ಯಾಕ್ಟ್ ಕ್ಲಬ್ ಕುಂದಾಪುರದ ಅಧ್ಯಕ್ಷ ರಾಘವೇಂದ್ರ ಕೆ.ಸಿ, ರೋಟರಿ ಮಾಜಿ ಜಿಲ್ಲಾ ಗವರ್ನರ್ ಎ.ಎಸ್.ಎನ್. ಹೆಬ್ಬಾರ್, ಡಾ. ಎಚ್. ಎಸ್. ಮಲ್ಲಿ, ಕಿಶೋರ್ಕುಮಾರ್ ಬಿ, ಡಾ. ರಾಜಾರಾಮ ಶೆಟ್ಟಿ, ಶಶಿಧರ ಹೆಗ್ಡೆ, ಮನೋಜ್ ನಾಯರ್, ವೆಂಕಟಾಚಲ ಕನ್ನಂತ, ಆವರ್ಸೆ ಮುತ್ತಯ್ಯ ಶೆಟ್ಟಿ, ಸುರೇಶ್ ಆಚಾರ್, ಡಾ. ಬಿ. ಅರ್. ಶೆಟ್ಟಿ, ಸತೀಶ್ ಕೋಟ್ಯಾನ್, ಗೀತಾ ಟಿ.ಬಿ. ಶೆಟ್ಟಿ, ಬಿಂದು ನಾಯರ್, ವಿ. ಆರ್. ಕೆ. ಹೊಳ್ಳ, ರತ್ನಾ ಹೊಳ್ಳ, ಡಾ. ಎಂ. ಎನ್. ಅಡಿಗ, ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ, ರವಿರಾಜ ಶೆಟ್ಟಿ, ಅನಸೂಯ ಶೆಟ್ಟಿ, ರೇಖಾ ಶೆಟ್ಟಿ ಇಂಟರ್ಯಾಕ್ಟ್ ಛೇರ್ಮೆನ್ ವೆಂಕಟೇಶ ಪ್ರಭು, ರೋಟರಿ ಕಾರ್ಯದರ್ಶಿ…
ಕುಂದಾಪುರ: ನೆಹರು ಮೈದಾನದಲ್ಲಿರುವ ಆಶ್ರಮ ಶಾಲೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಹಾಗೂ ಆನ್ಸ್ ಕ್ಲಬ್ ಮತ್ತು ರೋಟರ್ಯಾಕ್ಟ್ ಕ್ಲಬ್ ಕುಂದಾಪುರದ ಆಶ್ರಯದಲ್ಲಿ 69ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಆನ್ಸ್ ಕ್ಲಬ್ ಪೂರ್ವಾಧ್ಯಕ್ಷೆ ರತ್ನಾ ವಿ. ಆರ್. ಕೆ. ಹೊಳ್ಳ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಆನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಭಾರತಿ ಪ್ರಕಾಶ್ ಶೆಟ್ಟಿ, ಕಾರ್ಯದರ್ಶಿ ಸುನೇತ್ರಾ ಎಸ್. ಕೊಟ್ಯಾನ್, ರೋಟರ್ಯಾಕ್ಟ್ ಕ್ಲಬ್ ಕುಂದಾಪುರದ ಅಧ್ಯಕ್ಷ ರಾಘವೇಂದ್ರ ಕೆ.ಸಿ, ಆಶ್ರಮ ಶಾಲೆಯ ಮುಖ್ಯ ಮೇಲ್ವಿಚಾರಕ ರಮೇಶ್, ಇಂಟರ್ಯಾಕ್ಟ್ ಛೇರ್ಮೆನ್ ವೆಂಕಟೇಶ ಪ್ರಭು, ರೋಟರಿ ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.
ನಾವಿ೦ದು 68ನೇ ಸ್ವಾತ೦ತ್ರ್ಯೋತ್ಸವದ ಹೊಸ್ತಿಲಿನಲ್ಲಿದ್ದೇವೆ. ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಡಿದವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ, ಗಡಿಯಲ್ಲಿ ನಿ೦ತು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ನಮ್ಮ ಪೊರೆಯುವ ಭಾರತದ ಹೆಮ್ಮೆಯ ಸೈನಿಕರನ್ನು ಎಷ್ಟು ಸ್ಮರಿಸಿಕೊಂಡರೂ ಕಡಿಮೆಯೆ. ದೇಶಕ್ಕಾಗಿಯೇ ಬದುಕಿದ ಮತ್ತು ಬದುಕುತ್ತಿರುವ ಇವರುಗಳನ್ನು ನಾವು ನಿತ್ಯವೂ ಎನ್ನುವ೦ತೆ ಸ್ಮರಿಸಿಕೊಳ್ಳಬೇಕು. ಆದರೆ ನಮ್ಮಲ್ಲಿ ಬಹುತೇಕರು ಈ ಹೊತ್ತಿಗೂ ಸ್ವಾತ೦ತ್ರ್ಯದ ನಿಜವಾದ ಮೌಲ್ಯ ಅದರ ಚರಿತ್ರೆಯಲ್ಲಡಗಿದ ಆಶಯ ಇತ್ಯಾದಿಗಳ ಬಗೆಗೆ ತಿಳಿದುಕೊಳ್ಳುವ ಕನಿಷ್ಠ ಪ್ರಯತ್ನವನ್ನೂ ಮಾಡಿರುವುದಿಲ್ಲವೆನ್ನುವುದು ಈ ದೇಶದ ದೊಡ್ಡ ದುರ೦ತ. ಸ್ವಾತ೦ತ್ರ್ಯ ಅನ್ನುವ೦ತಾದ್ದು ಲಕ್ಷಾ೦ತರ ಭಾರತೀಯರ ಒಟ್ಟು ಹೋರಾಟ, ತ್ಯಾಗ-ಬಲಿದಾನಗಳ ಫಲ. ಅಲ್ಲಿ ಹಿರಿಯರು-ಕಿರಿಯರು, ಧರ್ಮ, ಜಾತಿ, ಲಿ೦ಗ… ಊಹು೦ ಯಾವೊ೦ದರ ಭೇದವೂ ಇರಲಿಲ್ಲ. ಸ೦ದೇಹವೇ ಬೇಡ. ನಾವು ಈ ಹೊತ್ತು ಜ್ಞಾಪಿಸಿಕೊಳ್ಳುವ ಅಷ್ಟೂ ಸ್ವಾತ೦ತ್ರ್ಯ ಹೋರಾಟಗಾರರು ಮಾಡಿದ ಮಹಾನ್ ತ್ಯಾಗ ಇದೆಯಲ್ಲಾ ಅದಕ್ಕೆ ನಾವು ಚಿರಋಣಿಗಳಾಗಿರಬೇಕು. ಭೋರ್ಗರೆಯುತ್ತಿರುವ ಸಾಗರದಲ್ಲಿ ದೋಣಿಯೊ೦ದರಲ್ಲಿ ಒಟ್ಟಿಗೆ ಕುಳಿತು ತೀರವನ್ನು ತಲುಪುವ ಸಾಹಸ ಮಾಡುವುದು ಎಷ್ಟು ಮುಖ್ಯವೋ ದೋಣಿಯನ್ನು ಹುಟ್ಟುಹಾಕಿ ಮುನ್ನಡೆಸುವ…
