ಕುಂದಾಪುರ: ತಾಲೂಕಿನ ಕಾಳಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯದಂಗಡಿಗಳಿಗೆ ಪರವಾನಿಗೆ ನೀಡುವುದನ್ನು ವಿರೋಧಿಸಿ ಇಲ್ಲಿನ ಗ್ರಾಮಸ್ಥರು ಕಾಳವಾರ ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಧ್ಯದಂಗಡಿಯನ್ನು ಆರಂಭಿಸಲು ನಿಯೋಜಿಸಿದ ಸ್ಥಳಕ್ಕೆ ಸಮೀಪದಲ್ಲಿ ಅಂಗನವಾಡಿ ಹಾಗೂ ಶಾಲೆ ಇದೆ. ಬಸ್ ನಿಲ್ದಾಣವೂ ಸಮೀಪದಲ್ಲಿದ್ದು ಶಾಲೆಗೆ ತೆರಳುವ ಈ ಮಾರ್ಗದ ಮೂಲಕವೇ ಸಾಗುವುದರಿಂದ ಅವರ ಮೇಲೆಯೂ ದುಷ್ಪರಿಣಾಮ ಬೀರಲಿದೆ. ಮಧ್ಯದಂಗಡಿಯನ್ನು ಆರಂಭಿಸುವುದಕ್ಕೆ ನಮ್ಮ ನಂಪೂರ್ಣ ವಿರೋಧವಿದ್ದು ಒಂದು ವೇಳೆ ಮಧ್ಯದಂಗಡಿ ಆರಂಭಗೊಂಡರೇ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕಾಳಾವರ, ಆಸೋಡು, ವಕ್ವಾಡಿಯ ಗ್ರಾಮಸ್ಥರು, ಕಾಳಾವರದ ನೇತಾಜಿ ಯುವಕ ಮಂಡಲ ಹಾಗೂ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆಯ ಸದಸ್ಯರುಗಳು ಭಾಗವಹಿಸಿದ್ದರು.
ಬಳಿಕ ಕಾಳಾವರ ಗ್ರಾಮ ಪಂಚಾಯತ್ ಅಧ್ಯಕರು ಹಾಗೂ ಪಿಡಿಒಗೆ ಮನವಿ ಸಲ್ಲಿಸಲಾಯಿತು.