Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಮೊಬೈಲ್‌ ಗ್ರಾಹಕರ ಬಹುದಿನದ ಬೇಡಿಕೆಯಾಗಿದ್ದ ದೇಶವ್ಯಾಪಿ ಮೊಬೈಲ್‌ ನಂಬರ್‌ ಪೋರ್ಟಬಲಿಟಿ ಯೋಜನೆ ಜುಲೈ 3ರ ಶುಕ್ರವಾರದಿಂದ ಜಾರಿಗೆ ಬರಲಿದೆ. ಹೀಗಾಗಿ ಇನ್ನು ಮೊಬೈಲ್‌ ಬಳಕೆದಾರರು, ತಾವು ದೇಶದ ಯಾವುದೇ ಭಾಗಕ್ಕೆ ತೆರಳಿದರೂ ಹಳೆಯ ಮೊಬೈಲ್‌ ನಂಬರ್‌ ಅನ್ನೇ ಉಳಿಸಿಕೊಳ್ಳಬಹುದಾಗಿದೆ. ಹೀಗಾಗಿ ಪದೇ ಪದೇ ವಾಸ ಸ್ಥಳ ಇಲ್ಲವೇ ಕರ್ತವ್ಯದ ಸ್ಥಳ ಬದಲಾಯಿಸುವವರು, ಪದೇ ಪದೇ ಮೊಬೈಲ್‌ ನಂಬರ್‌ ಬದಲಾಯಿಸುವ ಕಿರಿಕಿರಿಯಿಂದ ಪಾರಾಗಲಿದ್ದಾರೆ. ಇದುವರೆಗೆ ಒಂದೇ ಟೆಲಿಕಾಂ ವಲಯದ ವ್ಯಾಪ್ತಿಯೊಳಗೆ ಮಾತ್ರ ಮೊಬೈಲ್‌ ನಂಬರ್‌ ಪೋರ್ಟಬಲಿಟಿ ಲಭ್ಯವಿತ್ತು. ಅಂದರೆ ಒಂದು ಕಂಪನಿಯ ಸೇವೆ ಗ್ರಾಹಕನಿಗೆ ಬೇಡವೆಂದಾದಲ್ಲಿ ಆತ ಬೇರೆ ಕಂಪನಿಗೆ ವರ್ಗಾವಣೆಗೊಳ್ಳಬಹುದಾಗಿತ್ತು. ಹೀಗೆ ಕಂಪನಿ ಬದಲಾಯಿಸಿದರೂ, ಹಳೆಯ ನಂಬರ್‌ ಅನ್ನೇ ಉಳಿಸಿಕೊಳ್ಳಬಹುದಿತ್ತು. ಆದರೆ ಒಂದು ಟೆಲಿಕಾಂ ವಲಯದಿಂದ ಮತ್ತೂಂದು ಟೆಲಿಕಾಂ ವಲಯ ಗ್ರಾಹಕ ತೆರಳಿದಾಗ ಈ ಸೇವೆ ಲಭ್ಯವಿರಲಿಲ್ಲ. ಹೀಗಾಗಿ ಇಂಥದ್ದೊಂದು ಸೇವೆಯ ಬೇಡಿಕೆ ಬಹುದಿನಗಳಿಂದ ಇತ್ತು. ಇಂಥ ಸೇವೆ ನೀಡುವಂತೆ ಈ ಹಿಂದೆಯೇ ಟ್ರಾಯ್‌, ಮೊಬೈಲ್‌ ಸೇವಾದಾರ ಕಂಪನಿಗಳಿಗೆ ಸೂಚಿಸಿತ್ತು. ಅದರನ್ವಯ…

Read More

ಬೈಂದೂರು: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬೈಂದೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ಹಾಗೂ ಜಿಲ್ಲಾ ಮತ್ತು ತಾಲೂಕು ಸರಕಾರಿ ಆಸ್ಪತ್ರೆ, ಸ್ಕಂದ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಈ ಸಾಲಿನ ವಿಶೇಷ ಅಗತ್ಯವುಳ್ಳ ಮಕ್ಕಳ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಜು. 7ರಂದು ಬೆಳಗ್ಗೆ ಗಂಟೆ 9 ರಿಂದ 1 ರವರೆಗೆ ನಾವುಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

Read More

ಬೈಂದೂರು: ಇಲ್ಲಿನ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ಶ್ರೀ ಗುರುವಿವೇಕ ಯೋಗಸಂಘದಿಂದ ರಾಷ್ಟ್ರೀಯ ವೈದ್ಯ ದಿನಾಚರಣೆ ಜರುಗಿತು. ಬೈಂದೂರು ಹೋಬಳಿ ಕಸಾಪ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ವೈದ್ಯೋನಾರಾಯಣೋ ಹರಿಃ ಎನ್ನುವ ನುಡಿಯಂತೆ ರೋಗಿಗಳ ಪಾಲಿಗೆ ವೈದ್ಯರು ಸಾಕ್ಷಾತ್ ದೇವರಿದ್ದಂತೆ. ಹಿಂದಿನಿಂದಲೂ ಸಮಾಜದಲ್ಲಿ ವೈದ್ಯರಿಗೆ ವಿಶೇಷವಾದ ಸ್ಥಾನಮಾನ. ವೈದ್ಯರೂ ಕೂಡಾ ರೋಗಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಪ್ರೀತಿ, ಕಾಳಜಿಯಿಂದ ನೋಡಿಕೊಳ್ಳುತ್ತಿದ್ದರು ಎಂದು  ಹೇಳಿದರು. ಸೇವೆಯ ಧ್ಯೇಯ ಹೊಂದಿದ ಆರೋಗ್ಯ ಕ್ಷೇತ್ರ ಇಂದು ವ್ಯಾವಹಾರಿಕ ಕ್ಷೇತ್ರವಾಗಿದೆ. ಆಸ್ಪತ್ರೆಗಳು ಹೂಡಿಕೆಗೆ ಅತಿಯೋಗ್ಯ ಸ್ಥಳಗಳೆನಿಸಿವೆ. ವೈದ್ಯಕೀಯ ವೃತ್ತಿಯಲ್ಲಿಲ್ಲದವರು ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ನಡೆಸುತ್ತಿದ್ದಾರೆ. ಅಲ್ಲೆಲ್ಲಾ ವೈದ್ಯರು ಸಂಬಳಕ್ಕೆ ದುಡಿಯುವ ನೌಕರರಂತಾಗಿದೆ. ಇದರ ಕೆಟ್ಟ ಪರಿಣಾಮ ರೋಗಿಗಳ ಮೇಲಾಗುತ್ತಿದೆ. ಆಸ್ಪತ್ರೆಗಳ ನಡುವೆ ಪೈಪೋಟಿ ಹೆಚ್ಚಾಗುತ್ತಿದೆ. ಎಳಜಿತ್ ಶ್ರೀ ಸಿದ್ದಿವಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ವೈ. ಮಂಗೇಶ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ಡಾ. ಯು. ವಿ. ಮಯ್ಯ, ಪತ್ರಕರ್ತ ನರಸಿಂಹ ಬಿ. ನಾಯಕ್  ಉಪಸ್ಥಿತರಿದ್ದರು. ಯೋಗಗುರು ಮಂಜುನಾಥ ಎಸ್. ಬಿಜೂರು…

Read More

ಗಂಗೊಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಗಂಗೊಳ್ಳಿ ಇವರ ಆಶ್ರಯದಲ್ಲಿ ವಿಶೇಷ ದಾಖಲಾತಿ ಆಂದೋಲನ ಕಾರ್ಯಕ್ರಮ ಗಂಗೊಳ್ಳಿಯ ಸ.ವಿ.ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಗಂಗೊಳ್ಳಿ ಜಿ‌ಎಸ್‌ವಿ‌ಎಸ್ ಅಸೋಸಿಯೇಶನ್ ಕಾರ್ಯದರ್ಶಿ ಎಚ್.ಗಣೇಶ ಕಾಮತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್, ಸಿ‌ಆರ್‌ಪಿ ತಿಲೋತ್ತಮ, ಎಸ್.ವಿ.ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಉಪಪ್ರಾಂಶುಪಾಲ ವಾಮನದಾಸ ಭಟ್, ಎಸ್.ವಿ.ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ರಾಘವೇಂದ್ರ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಮಹಾಲೆ, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕರು ಉಪಸ್ಥಿತರಿದ್ದರು.

Read More

ಕುಂದಾಪುರ: ತಾಲೂಕಿನ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ವತಿಯಿಂದ ಮರವಂತೆಯ ಶ್ರೀ ವರಾಹಸ್ವಾಮಿ ದೇವರ ಸನ್ನಿಧಿಯಲ್ಲಿ ಮೀನುಗಾರರು ಸಾಮೂಹಿಕವಾಗಿ ಸಮುದ್ರ ಪೂಜೆ ನೆರವೇರಿಸಿದರು. ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಕೆ.ಮಂಜು ಬಿಲ್ಲವ ಮತ್ತು ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಬಿ.ಕುಮಾರ್ ನೇತೃತ್ವದಲ್ಲಿ ಮರವಂತೆಯ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ, ಅರಮ ದೇವಸ್ಥಾನ (ಬೊಬ್ಬರ್ಯ) ಮತ್ತು ಶ್ರೀ ವರಾಹ, ಶ್ರೀ ವಿಷ್ಣು ಮತ್ತು ಶ್ರೀ ನರಸಿಂಹ ದೇವಸ್ಥಾನ ಹಾಗೂ ಕ್ಷೇತ್ರಪಾಲ ದೇವಸ್ಥಾನದಲ್ಲಿ ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದರು. ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘದ ಕಾರ್ಯದರ್ಶಿ ಚೌಕಿ ವಿಠೋಬ ಖಾರ್ವಿ, ಮಾಜಿ ಕಾರ್ಯದರ್ಶಿ ಬಿ.ಸುರೇಶ ಬಂಗೇರ ಕೋಡಿ, ಕಾರ್ಯದರ್ಶಿ ನಾಗಪ್ಪಯ್ಯ ಪಟೇಲ್, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಉಪಾಧ್ಯಕ್ಷ ಬಿ.ಮಹೇಶ ಖಾರ್ವಿ, ಕೆ.ಎಂ.ಸೋಮಶೇಖರ, ಕಾರ್ಯದರ್ಶಿ ಶೇಖರ ಖಾರ್ವಿ, ಕೋಶಾಧಿಕಾರಿ ಅಣ್ಣಯ್ಯ ಖಾರ್ವಿ, ಶ್ರೀ ರಾಮ ಮಂದಿರ ಸೇವಾಸಮಿತಿ ಅಧ್ಯಕ್ಷ ಬಿ.ವೆಂಕಟರಮಣ ಖಾರ್ವಿ ಮರವಂತೆ, ಹಕ್ರೆಮಠ ಶ್ರೀ ರಾಮ…

Read More

ಕುಂದಾಪುರ: ತಾಲೂಕಿನ ಕಂದಾವರದಲ್ಲಿ ವಿಜಯನಗರ ಸಾಮ್ರಾಜ್ಯದ ಖ್ಯಾತ ಚಕ್ರವರ್ತಿ ಕೃಷ್ಣದೇವರಾಯನ ಶಾಸನ ಪತ್ತೆಯಾಗಿದೆ. ಈ ಬಗ್ಗೆ ಮಾಧ್ಯಮಕ್ಕೆ ಶಿರ್ವದ ಮೂಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜಿನ ಸಹ ಪ್ರಾಧ್ಯಾಪಕ, ಪ್ರೊ| ಟಿ. ಮುರುಗೇಶಿ ಮಾಹಿತಿ ನೀಡಿದ್ದಾರೆ. ಶಾಸನವನ್ನು ಆಯತಾಕಾರದ ಕಲ್ಲಿನ ಮೇಲೆ ಬರೆಯಲಾಗಿದ್ದು, ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಬರೆಯಲಾಗಿದೆ. ಶಾಸನದ ಪ್ರತೀ ಸಾಲನ್ನು ಸೊನ್ನೆಯೊಂದಿಗೆ ಆರಂಭಿಸಲಾಗಿದೆ. ಸಾಮಾನ್ಯವಾಗಿ ವಿಜಯ ನಗರದ ಶಾಸನಗಳು ದೇವತಾ ಶ್ಲೋಕದೊಂದಿಗೆ ಆರಂಭವಾಗುವುದು ವಾಡಿಕೆ. ಆದರೆ ಈ ಶಾಸನ ಕೇವಲ ಸ್ವಸ್ತಿಶ್ರೀ ಎಂಬ ಮಂಗಳ ಪದದೊಂದಿಗೆ ಆರಂಭವಾಗಿದ್ದು, ಶಾಸನವನ್ನು 30 ಸಾಲುಗಳಲ್ಲಿ ಬರೆಯಲಾಗಿದೆ. ಶಾಸನ ಜಯಾಭ್ಯುದಯ ಶಾಲಿವಾಹನ ಶಕ ವರುಷ ಎಂದು ಕಾಲಮಾನದ ಉಲ್ಲೇಖದೊಂದಿಗೆ ಆರಂಭವಾಗಿದ್ದರೂ ಕಾಲವನ್ನು ಉಲ್ಲೇಖೀಸಿದ ಭಾಗ ಸಂಪೂರ್ಣ ಅಳಿಸಿ ಹೋಗಿದೆ. ಶಾಸನದಲ್ಲಿ ಶುಕ್ಲ ಸಂವತ್ಸರ ಮಾಘ ಮಾಸ ಎಂಬ ಉಲ್ಲೇಖವಿರುವುದರಿಂದ, ಶಾಸನದ ಕಾಲ ಕ್ರಿ.ಶ. 1509ಕ್ಕೆ ಸರಿಹೊಂದುತ್ತದೆ. “ಕೃಷ್ಣರಾಯ ಮಹಾರಾಯರು ಸಕಲ ವಂರ್ನಶ್ರಮಗಳನು ಪ್ರತಿಪಾಲಿಸುತಿಹ ಕಾಲದಲು’ ಎಂಬ ಉಲ್ಲೇಖವಿರುವುದರಿಂದ ಈ ಶಾಸನ ಕೃಷ್ಣದೇವರಾಯನ…

Read More

ಕುಂದಾಪುರ : ರಾತ್ರಿ ಕೊಟೇಶ್ವರ ಹೆದ್ದಾರಿ ಸಮೀಪ ಮೊಬೈಲ್ ಮಾರಾಟದ ಅಂಗಡಿಯ ಶಟರ್ ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 5ಲಕ್ಷ ಮೌಲ್ಯದ ಮೊಬೈಲುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಹೆದ್ದಾರಿ ಪಕ್ಕದಲ್ಲಿರುವ ಕೋಟಿಲಿಂಗೇಶ್ವರ ಟವರ್ಸ್ ನ ಮೊದಲ ಅಂತಸ್ಥಿನಲ್ಲಿ ಸುರೇಶ್ ಪೂಜಾರಿ ಎಂಬವರಿಗೆ ಸೇರಿದ ಸನ್ನಿದಿ ಮೊಬೈಲ್ಸ್ ಕೇರ್ ಹೆಸರಿನ ಮೊಬೈಲ್ ಮಾರಾಟದ ಅಂಗಡಿಯಿದ್ದು ಎಂದಿನಂತೆ ವ್ಯವಹಾರ ಮುಗಿಸಿ ನಿನ್ನೆ ಮನೆಗೆ ತೆರಳಿದ ಅವರು ಮರುದಿನ ಬೆಳಿಗ್ಗೆ ಅಂಗಡಿ ತೆರೆಯಲು ಬಂದಾಗ ಕಳ್ಳತನ ವಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಮುಂಭಾಗದ ಶಟರಿನ ಬೀಗವನ್ನು ಒಡೆದು ಒಳ ಪ್ರವೇಶಿಸಿದ ಕಳ್ಳರು ಅಂಗಡಿಯೆಲ್ಲ ಜಾಲಾಡಿ ಬೆಲಬಾಳುವ ಸುಮಾರು 25 ಮೊಬ್ಯಲ್ ಸೆಟ್ ಗಳನ್ನು ಕಳ್ಳತನ ಮಾಡಿದ್ದಾರೆ. ಯಾವಾಗಲೂ ಮೊಬೈಲ್ ಗಳನ್ನು ಮನೆಗೆ ಕೊಂಡೊಯ್ಯುವ ಪರಿಪಾಠ ವಿಟ್ಟುಕೊಂಡಿದ್ದ ಸುರೇಶ್ ಮಳೆಯ ಕಾರಣ ಕೆಲವು ದಿನಗಳಿಂದ ಮೊಬೈಲ್ ಗಳನ್ನು ಅಂಗಡಿಯಲ್ಲಿಯೇ ಇರಿಸುತ್ತರಿದ್ದರೆನ್ನಲಾಗಿದೆ. ಸ್ಥಳಕ್ಕೆ ಪೊಲೀಸ್ ಶ್ವಾನ ದಳವು ಆಗಮಿಸಿತ್ತು ಕಳೆದ ಮಳೆಗಾಲದಲ್ಲಿಯೂ ಸಹಾ ಈ ಭಾಗದ…

Read More

ಉತ್ತರಪ್ರದೇಶ: ಮೊಬೈಲ್‌ ಫೋನ್‌ ಹೊಟ್ಟೆಯ ಮೇಲಿರಿಸಿಕೊಂಡು ಆರಾಮದಲ್ಲಿ ಅದರಿಂದ ಹಾಡುಗಳನ್ನು ಕೇಳುತ್ತಿದ್ದ ನಾನ್‌ಪಾರಾ ಪೊಲೀಸ್‌ ಠಾಣೆ ವ್ಯಾಪ್ತಿಗೆ ಸೇರಿದ ಬಹರೇಚ್‌ನ ನಿವಾಸಿಯಾಗಿರುವ ಮೂಬಿನ್‌ ಎಂದಿನಂತೆ ತನ್ನ ಹೊಟ್ಟೆಯ ಮೇಲೆ ಮೊಬೈಲ್‌ ಫೋನ್‌ ಇರಿಸಿಕೊಂಡು ಆರಾಮದಿಂದ ಹಾಡು ಕೇಳುತ್ತಿದ್ದ. ಇದ್ದಕ್ಕಿದ್ದಂತೆಯೇ ಆತನ ಮೊಬೈಲ್‌ ಸ್ಫೋಟಗೊಂಡಿತು. ಕ್ಷಣ ಮಾತ್ರದಲ್ಲಿ ನಡೆದು ಹೋದ ಈ ಸ್ಫೋಟದಿಂದ ಕಂಗಾಲಾದ ಮೂಬಿನ್‌ಗೆ ತನಗೆ ಏನಾಗುತ್ತಿದೆ ಎಂದು ಅರಿಯುವುದಕ್ಕೇ ಸಾಧ್ಯವಾಗಲಿಲ್ಲ. ಅಷ್ಟರೊಳಗಾಗಿ ಆತನ ಹೊಟ್ಟೆಯಲ್ಲಿ ಗಂಭೀರ ಸ್ವರೂಪದ ಸುಟ್ಟಗಾಯಗಳಾಗಿದ್ದವು. ಒಡನೆಯೇ ಮೂಬಿನ್‌ ನನ್ನು ನಾನ್‌ಪಾರಾ ಸಮುದಾಯ ಕೇಂದ್ರದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಲ್ಲಿ ಆತನ ಗಂಭೀರ ಪರಿಸ್ಥಿತಿಯನ್ನು ಗಮನಿಸಿ ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ಒಯ್ಯಲಾಯಿತು. ಆದರೆ ಅಲ್ಲಿಗೆ ತಲುಪುತ್ತಲೇ ಆತ ಕೊನೆಯುಸಿರೆಳೆದ.

Read More

ಉತ್ತರಪ್ರದೇಶದ ಅಲಹಾಬಾದ್ ಪೊಲೀಸರಿಂದ ಬಂಧನ. ಆರೋಪಿಗಳು ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಕುಂದಾಪುರ: ಹೂಡಿಕೆ ಮಾಡುವ ಹಣವನ್ನು ದುಪ್ಪಟ್ಟು ಮಾಡಿ ಹಿಂತಿರುಗಿಸುವುದಾಗಿ ಆನ್ಲೈನ್ ನಲ್ಲಿ ಜಾಹೀರಾತು ನೀಡಿ ಗ್ರಾಹಕರಿಗೆ ಲಕ್ಷಾಂತರ ರೂ. ವಂಚಿಸುತ್ತಿದ್ದ ಉತ್ತರಪ್ರದೇಶದ ಅಲಹಾಬಾದಿನ ಮೋಸದ ಜಾಲವೊಂದನ್ನು ಜಂಟಿ ಕಾರ್ಯಾಚರಣೆ ನಡೆಸಿದ ಕುಂದಾಪುರ ಹಾಗೂ ಅಲಹಾಬಾದಿನ ಪೊಲೀಸರು ಭೇದಿಸಿದ್ದು, ವಿಚಾರಣೆಗಾಗಿ ಆರೋಪಿಗಳನ್ನು ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಫಟನೆಯ ವಿವರ: ವಿದೇಶದ ಸಂತಾಂ ಮತ್ತು ಇಂಡೆಕ್ಸ್ ಟ್ರೇಡರ್ಸ್ ಎಂಬ ವಿದೇಶಿ ಹಣಕಾಸು ಸಂಸ್ಥೆಯು ನಮ್ಮ ಕಂಪೆನಿಯಲ್ಲಿ ನೀವು ಹೂಡಿಕೆ ಮಾಡುವ ಹಣದ ದುಪ್ಪಟ್ಟು ಮೊತ್ತವನ್ನು ಹಿಂಪಡೆಯಬಹುದು (‘ಒನ್ ಟೂ ಡಬ್ಬಲ್ ಸ್ಕೀಮ್) ಎಂಬ ಜಾಹೀರಾತನ್ನು ಅಂತರ್ಜಾಲದಲ್ಲಿ ಪ್ರದರ್ಶನಪಡಿಸಿತ್ತು. ಇದನ್ನು ನೋಡಿದ ವಂಡಾರಿನ ನವೀನ್ ಅಡಿಗ ಎನ್ನುವವರು ರಾಷ್ಟ್ರೀಕೃತ ಬ್ಯಾಂಕೊಂದರ ಮೂಲಕ ಹಣ ಹೂಡಿಕೆ ಮಾಡಿದ್ದರು. ಅವರನ್ನು ನಂಬಿಸಲು ‘ಒನ್ ಟೂ ಡಬ್ಬಲ್ ಸ್ಕೀಮ್’ನಲ್ಲಿ ಪ್ರತಿಭಾರಿಯೂ ಹೂಡಿಕೆ ಮಾಡಿದ ಹಣದ ಎರಡರಷ್ಟು ಮೊತ್ತವನ್ನು ನಮೂದಿಸಿದ ಚೆಕ್ ಹಾಗೂ ಆನ್ಲೈನ್ ಸ್ಟೇಟ್ಮೆಂಟ್ ಗಳನ್ನು ಇಮೇಲ್ ಮೂಲಕ…

Read More

ಮುಂಬಯಿ : ಡೊಂಬಿ ವಲಿಯ ಯಕ್ಷಗಾನ ಪ್ರಿಯರ ವತಿಯಿಂದ ಸಮಾಲೋಚನ ಸಭೆ ಜು. 5ರಂದು ಸಂಜೆ 6.30ರಿಂದ ಡೊಂಬಿವಲಿ (ಪೂ.) ತಿಲಕ್‌ ನಗರದ ಡಾ| ಆರ್‌. ಪಿ. ಮಾರ್ಗದ ಫ್ರೆಂಡ್ಸ್‌ ಬುಕ್‌ ಸ್ಟೋರ್ನ ಸ್ವಾವಲಂಬನಾ ಕೇಂದ್ರದಲ್ಲಿ ಜರಗಲಿದೆ. ಯಕ್ಷಗಾನ ಕರಾವಳಿಯ ಜನಪ್ರಿಯ ಕಲೆಯಾಗಿದ್ದು, ಮಳೆ ಗಾಲದ ಸಮಯದಲ್ಲಿ ಹಲವಾರು ಪ್ರಸಿದ್ಧ ಯಕ್ಷಗಾನ ವೃತ್ತಿ ಮೇಳಗಳು ಊರಿನಿಂದ ಮುಂಬಯಿಗೆ ಪ್ರವಾಸ ಮಾಡುತ್ತಿದ್ದು, ಡೊಂಬಿ ವಲಿಯಲ್ಲಿರುವ ಕನ್ನಡಿಗರಿಗೆ ಯಕ್ಷಗಾನ, ತಾಳಮದ್ದಳೆಯನ್ನು ಆಯೋಜಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು. ಹೆಚ್ಚಿನ ಮಾಹಿತಿಗೆ ಶಾಂತಿ ಜಿ. ಶೆಟ್ಟಿ ನೀರೆ (9967599491), ಪ್ರಾ| ವೆಂಕಟೇಶ್‌ ಪೈ (92241020053) ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Read More