Author: ಸುನಿಲ್ ಹೆಚ್. ಜಿ. ಬೈಂದೂರು

ಸುನಿಲ್ ಬೈಂದೂರು ಅವರು 'ಕುಂದಾಪ್ರ ಡಾಟ್ ಕಾಂ' ಅಂತರ್ಜಾಲ ಸುದ್ದಿತಾಣದ ಮುಖ್ಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಂ.ಕಾಂ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. 2009ರಲ್ಲಿ ಪದವಿ ವಿದ್ಯಾರ್ಥಿಯಾಗಿದ್ದಾಗ ಸಾಹಿತ್ಯ ಕೃಷಿ ಗುರುತಿಸಿ '14ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ', 2014ರಲ್ಲಿ 'ಆದಿ ಗ್ರಾಮೋತ್ಸವ ಯುವ ಗೌರವ', ಪತ್ರಿಕೋದ್ಯಮ ಕ್ಷೇತ್ರದ ಸಾಧನೆಗಾಗಿ 2016ರಲ್ಲಿ 'ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ' ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. 2012ರಿಂದ ಕುಂದಾಪ್ರ ಡಾಟ್ ಕಾಂ ಸುದ್ದಿತಾಣವನ್ನು ಮುನ್ನಡೆಸುತ್ತಿದ್ದಾರೆ.

ಬೈಂದೂರು: ನಮ್ಮ ಗ್ರಾಮದ ಹೆಚ್ಚಿನ ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಇಲಾಖೆ ವಿಫಲವಾಗಿದೆ. ಯಾವೂದೇ ಅಂಗಡಿಯಲ್ಲಿ ಒಂದು ಮದ್ಯದ ಬಾಟಲಿ ಸಿಕ್ಕಿದರೂ ಮಾರುವಾತನನ್ನು ಬಂಧಿಸುವುದಾಗಿ ಹೇಳಿದ ಉಡುಪಿ ಅಬಕಾರಿ ಕಛೇರಿಯ ಅಧಿಕಾರಿಗಳು, ಬಾಕ್ಸ್‌ಗಟ್ಟಲೆ ಅಕ್ರಮ ಮದ್ಯ ಸಿಕ್ಕಿದರೂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಬೈಂದೂರು ಭಾಗದ ವೈನ್‌ಶಾಪ್ ಮಾಲೀಕರಿಗೆ ಹಣ ಮುಖ್ಯವಾಗಿದೆ. ಇವರು ಸಾಮಾಜಿಕ ಪಿಡುಗನ್ನು ಕಾನೂನು ರೀತಿಯಲ್ಲಿ ವಿಚಾರಿಸಬೇಕಾದ ಪೋಲೀಸ್ ಇಲಾಖೆಗೆ ಹಪ್ತಾ ನೀಡಿ ವ್ಯವಸ್ಥಿತವಾಗಿ ಬುಟ್ಟಿಗೆ ಹಾಕಿಕೊಂಡಿದ್ದಾರೆ. -ಇದು ಯಾವುದೇ ಸಿನೆಮಾ ಡೈಲಾಗ್ ಅಲ್ಲ. ಗೋಳಿಹೊಳೆ ಗ್ರಾಮಸಭೆಯಲ್ಲಿ ಸ್ಥಳೀಯ ಮಹಿಳೆಯರು ಪಂಚಾಯತ್ ವಿರುದ್ದ ಹರಿಹಾಯ್ದ ರೀತಿ. ಗ್ರಾಮಸಭೆಗೆ ಅಬಕಾರಿ ಇಲಾಖಾಧಿಕಾರಿ ಗೈರಾಗಿದ್ದೆ ಇಷ್ಟೆಲ್ಲ ರಾದ್ದಾಂತಕ್ಕೆ ಕಾರಣವಾಯಿತು. ಸಂಜೆ ಸಮಯದಲ್ಲಿ ಮಾಮೂಲಿ ವಸೂಲಿಗಾಗಿ ಗೂಡಂಗಡಿಗಳಿಗೆ ಬರುವ ಅಬಕಾರಿ ಇಲಾಖಾ ಸಿಬ್ಬಂದಿಗಳಿಗೆ ಗ್ರಾಮಸಭೆಗೆ ಬರಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರತಿಭಟಿಸಿದ ಮಹಿಳೆಯರ ಹಾಗೂ ಗ್ರಾಮಸ್ಥರ ಆಕ್ರೋಶ ತೀವೃ ಸ್ವರೂಪ ಪಡೆಯಿತು. ಈ ಬಗ್ಗೆ ಪಂಚಾಯತ್ ನಿರ್ಣಯ ಮಾಡಿ ಸಂಬಂಧಿಸಿದವರಿಗೆ…

Read More

ಕೊಲ್ಲೂರು: ಯುವಕರ ಸದ್ಭಳಕೆಯಿಂದ ಸಮಾಜದಲ್ಲಿ ಮಹತ್ತರವಾದ ಬದಲಾವಣೆ ಸಾಧ್ಯ. ಉತ್ತಮ ಚಿಂತನೆ ಸಮಾಜದಲ್ಲಿ ಹರಡಿದಾಗ ಪರಿವರ್ತನೆಯ ಪರ್ವ ಆರಂಭವಾಗುತ್ತದೆ. ಅಂತಹ ಸಾಧನೆಯ ಹಾದಿಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಾಗಬೇಕು ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕೊಡ್ಲಾಡಿಯ ಶ್ರೀ ಮೂಕಾಂಬಿಕಾ ಫ್ರೌಢ ಶಾಲೆಯಲ್ಲಿ ನೂತನ ಇಂಟರ‍್ಯಾಕ್ಟ್ ಕ್ಲಬ್‌ನ್ನು ಉದ್ಘಾಟಿಸಿ ಮಾತನಾಡಿದರು. ಇಂಟರ‍್ಯಾಕ್ಟ್ ಕ್ಲಬ್ ಕುರಿತು ಮಾಹಿತಿ ನೀಡಿದ ಖ್ಯಾತ ಉದ್ಯಮಿ ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಸೇವೆಯ ಬದುಕು ನಮ್ಮದಾದಾಗ ಜೀವನೋತ್ಸಾಹ ಪ್ರೀತಿ ನಮ್ಮೊಳಗೆ ಮೇಳೈಸಿ ಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜಕ್ಕೆ ವರವಾಗಿ ಮೂಡಿಬರಲು ಸಾದ್ಯ ಆದುದರಿಂದ ಸಣ್ಣ ಸಣ್ಣ ಸೇವಾ ಚಟುವಟಿಕೆಯ ಮೂಲಕ ಜಗತ್ತಿನ ಗಮನ ಸೆಳೆಯುವತ್ತ ಇಂಟರ‍್ಯಾಕ್ಟ್ ಸದಸ್ಯರು ಕಾರ್ಯನಿರ್ವಹಿಸುವಂತಾಗಲಿ ಎಂದು ಕಥೆಗಳ ಮೂಲಕ ವಿವಿರ ನೀಡಿ ಶುಭಹಾರೈಸಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಇಂಟರ‍್ಯಾಕ್ಟ್ ಕ್ಲಬ್ ನೂತನ ಅಧ್ಯಕ್ಷ ಪ್ರಜ್ವಲ್, ಕಾರ್ಯದರ್ಶಿ ಸ್ವಾತಿ ಅವರಿಗೆ…

Read More

ಕುಂದಾಪುರ: ಗುಲ್ವಾಡಿಯಲ್ಲಿ ಬ್ಯಾಂಕ್‌ಗಳು, ನ್ಯಾಯಬೆಲೆ ಅಂಗಡಿಗಳು ಒಂದೇ ಕಡೆ ಇರುವುದರಿಂದ ಜನರ ಅನುಕೂಲಕ್ಕೆ ಗ್ರಾಮಪಂಚಾಯತ್ ಕಛೇರಿ ಗುಲ್ವಾಡಿಯಲ್ಲಿ ಕಾರ್ಯನಿರ್ವಹಿಸಿದರೆ ಅನುಕೂಲವಾಗುತ್ತದೆ. ಆದ್ದರಿಂದ ಸರಕಾರ ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಕೂಡದು. ಮತ್ತು ಗುಲ್ವಾಡಿ ಗುಡಾರ್‌ಹಕ್ಲುಗೆ ಸಂಪರ್ಕ ಸೇತುವೆ ನಿರ್ಮಿಸಬೇಕು, ಗುಲ್ವಾಡಿಯಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು, ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿ ಸಿಪಿಎಂ ಗುಲ್ವಾಡಿ ಶಾಖೆ ಇಂದು ಗುಲ್ವಾಡಿ ಗ್ರಾಮಪಂಚಾಯತ್ ಎದುರು ಪ್ರತಿಭಟನೆ ನಡೆಸಿತು. ಬೈಂದೂರು ವಲಯ ಕಾರ್ಯದರ್ಶಿ ಸುರೇಶ್‌ಕಲ್ಲಾಗರ ಮಾತನಾಡಿ, ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತ ಕಾರ್ಮಿಕರು ತ್ಯಾಗ ಬಲಿದಾನ ಮಾಡಿದ ಪರಿಣಾಮ ದೇಶ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಗಿದೆ. ಅದರಂತೆ ಇಂದು ಜನಸಾಮಾನ್ಯರು ತಮ್ಮ ಬದುಕಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೋರಾಟಗಳನ್ನು ನಡೆಸುವುದು ಅನಿವಾರ್ಯವಾಗಿದೆ. ಸಿಪಿಎಂ ಪಕ್ಷವು ತನ್ನ ಜನಾಂದೋಲನವನ್ನು ಆಗಸ್ಟ್-೧೪ ಮಧ್ಯರಾತ್ರಿವರೆಗೆ ನಡೆಸಲು ನಿರ್ಧರಿಸಿ ಜನತೆಯ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸುತ್ತಿದೆ ಎಂದು ಅವರು ಹೇಳಿದರು. ಸಿಪಿಎಂ ಕುಂದಾಪುರ ವಲಯ ಕಾರ್ಯದಶಿ ಹೆಚ್. ನರಸಿಂಹ…

Read More

ಗಂಗೊಳ್ಳಿ: ಗುಜ್ಜಾಡಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ನಿರ್ವಹಿಸಿದ ಬಹಳಷ್ಟು ಕೂಲಿಕಾರರಿಗೆ ಪಂಚಾಯತ್ ಕೂಲಿ ಹಣ ಪಾವತಿ ಮಾಡಿಲ್ಲ, ಕೂಡಲೇ ಕೆಲಸ ಮಾಡಿದ ಬಡಕೂಲಿಕಾರರಿಗೆ ವೇತನ ಪಾವತಿ ಮಾಡಬೇಕು, ಅಲ್ಲದೇ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಸಿಪಿಎಂ ಮುಖಂಡ ವೆಂಕಟೇಶಕೋಣಿ ಹೇಳಿದರು. ಅವರು ಸಿಪಿಎಂ ಪಕ್ಷದ ಜನಾಂದೋಲನದ ಪ್ರತಿಭಟನೆಯ ಅಂಗವಾಗಿ ಗುಜ್ಜಾಡಿ ಗ್ರಾಮಪಂಚಾಯತ್ ಎದುರು ಪ್ರತಿಭಟನಾಕಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಿಪಿಎಂ ಪಕ್ಷದ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್‌ ಕಲ್ಲಾಗರ್ ಮಾತನಾಡಿ; ಗುಜ್ಜಾಡಿಯ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನೂರಾರು ಜನರು ನಿವೇಶನ ರಹಿತರು ಅರ್ಜಿ ಸಲ್ಲಿಸಿದ್ದಾರೆ. ಪಂಚಾಯತ್‌ನವರು ಸರಕಾರಿ ಜಾಗ ಗುರುತಿಸಿ ಅರ್ಹ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು. ಇಲ್ಲಿನ ಜನಸಾಮಾನ್ಯರಿಗೆ ಕುಡಿಯುವ ನೀರು ಸಮರ್ಪಕ ದಾರಿ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ರಾಜೀವ ಪಡುಕೋಣೆ, ಶೀನಪ್ಪ, ಶ್ರೀನಿವಾಸ ಪೂಜಾರಿ, ದಿನೇಶ್, ಗಂಗಾಧರ ಜಿ. ಸಂಜೀವ, ಶ್ಯಾಮಲ, ಮುತ್ತು ಉಪಸ್ಥಿತರಿದ್ದರು. ಅನಂತರ ಪಂಚಾಯತ್…

Read More

ಕೋಟ: ವಂಶ ಪಾರಂಪರ್ಯದಿಂದ ಬಂದ ಕುಲಕಸುಬು, ಕೃಷಿ, ಆಹಾರ ಪದ್ದತಿ, ಹಬ್ಬ, ಉತ್ಸವ ನಂಬಿಕೆಗಳು, ಸರ್ವ ಧರ್ಮೀಯ ಭಾವನೆಗಳು ಜನ ಸಮುದಾಯದಲ್ಲಿ ಜೀವಂತವಾಗಿದ್ದವು, ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಂದು ನಮ್ಮ ವಿದ್ಯಾರ್ಥಿಗಳು ಅಂಕಗಳಿಸುವ ಯಂತ್ರಗಳಾಗಿ ಉದ್ಯೋಗಕ್ಕಾಗಿ ಶಿಕ್ಷಣ ಗಳಿಸುವಂತಾಗಿ ಗತವೈಭವ ಅವರಿಂದ ದೂರವಾಗಿದೆ ಎಂದು ಕುಂದಾಪುರದ ಉದ್ಯಮಿ ಕೆ.ಆರ್ ನಾಯಕ್ ವಿಷಾದ ವ್ಯಕ್ತಪಡಿಸಿದರು. ಸಾಸ್ತಾನದ ಶಿವಕೃಪ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ಬಾಳ್ಕುದ್ರು ಹಂಗಾರಕಟ್ಟೆ ಅಭಿವೃದ್ಧಿ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾರಾಡಿಯ ಡಾ.ಎ.ವಿ.ಬಾಳಿಗಾ ಕಾಲೇಜು ಮತ್ತು ಕೋಟ ಪಡುಕೆರೆಯ ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಬಾರ್ಕೂರು ಸ್ನಾತ ಕೋತ್ತರ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಒಂದು ದಿನದ ಪರಂಪರೆ (ಸಾಂಸ್ಕೃತಿಕ) ಶಿಕ್ಷಣ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಉಪನ್ಯಾಸಕ ಗುಂಡ್ಮಿ ಶಂಕರನಾರಾಯಣ ಅಡಿಗ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಾಶ್ಚಾತ್ಯ ಜೀವನ ಶೈಲಿಯಿಂದ ನಮ್ಮ ಯುವ ಜನತೆ ದಾರಿ ತಪ್ಪುವ ಅಪಾಯಗಳು…

Read More

ಕುಂದಾಪುರ: ತಾಲೂಕಿನ ನಾಡ ಗ್ರಾ.ಪಂ. ಎದುರು ವಿವಿಧ ಮೂಲ ಸೌಕರ್ಯಗಳ ಈಡೇರಿಕೆಗೆ ಒತ್ತಾಯಿಸಿ ಸಿಪಿಎಂ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿ ದಿನೇ ದಿನೇ ಜನರ ಸಂಕಷ್ಟಗಳನ್ನು ತೀವ್ರಗೊಳಿಸುತ್ತಿರುವ ಕೇಂದ್ರ ಸರಕಾರ ಜನರ ನಿರೀಕ್ಷೆಗಳನ್ನು ಹುಸಿಗೊಳಿಸುತ್ತಿರುವ ರಾಜ್ಯ ಸರಕಾರಗಳ ವಿರುದ್ಧ ಹರಿಹಾಯ್ದರು. ಸಿಪಿಎಂ ಮುಖಂಡ ವೆಂಕಟೇಶ ಕೋಣಿ ಮಾತನಾಡಿ, ಸರಕಾರಿ ಜಮೀನಿನಲ್ಲಿ ವಾಸವಾಗಿದ್ದು, 94 ಸಿ ಕಲಂ ಅನ್ವಯ ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಬಡರೈತರಿಗೆ ಈ ಕೂಡಲೇ ಭೂಮಿ ಮಂಜೂರು ಮಾಡಬೇಕು. ಅಲ್ಲದೇ ಶುಲ್ಕ ವಿಧಿಧಿಸದೆ ಉಚಿತವಾಗಿ ಹಕ್ಕು ಪತ್ರ ನೀಡಬೇಕು. ಮನೆ ನಿವೇಶನ ರಹಿತರಿಗೆ ನಿವೇಶನ ಹಕ್ಕು ಪತ್ರ ಮಂಜೂರು ಮಾಡಲು ಸರಕಾರಿ ಸ್ಥಳ ಗುರುತಿಸುವುದಕ್ಕೆ ಗ್ರಾ.ಪಂ.ತತ್‌ಕ್ಷಣ ಕ್ರಮವಹಿಸಬೇಕು. ಉದ್ಯೋಗ ಖಾತ್ರಿ   ಕೂಲಿಕಾರರಿಗೆ ಬಾಕಿ ಇರುವ ವೇತನ ಕೂಡಲೇ ಬಿಡುಗಡೆ ಮಾಡಬೇಕೆಂದು ಹೇಳಿದರು. ಪಂಚಾಯತ್‌ ಅಧ್ಯಕ್ಷ  ಜಯನ್‌ಮೇರಿ ಒಲಿಯವೇರ  ಅವರಿಗೆ ಮನವಿ ಸಲ್ಲಿಸಲಾಯಿತು.  ಬೈಂದೂರು ವಲಯ ಕಾರ್ಯದರ್ಶಿ ಸುರೇಶ್‌ ಕಲ್ಲಾಗರ್‌, ರಾಜೀವ ಪಡುಕೋಣೆ ಸುಬ್ರಹ್ಮಣ್ಯ ಆಚಾರ್‌, ನಾಗರತ್ನಾ ನಾಡ, ರಾಜೇಶ್‌,…

Read More

ಕುಂದಾಪುರ: ಕಾಶೀ ಮಠಾಧೀಶ ಶ್ರೀ ಸುಧೀಂದ್ರ ತೀರ್ಥ ಸ್ವಾಮಿಜಿಯವರ ಪಟ್ಟದ ಶಿಷ್ಯ ಶ್ರೀ ಸಂಯಮೀಂದ್ರ ಸ್ವಾಮೀಜಿಯವರ ಚಾತುರ್ಮಾಸ ವ್ರತ ಸ್ವೀಕಾರ ಕಾರ್ಯಕ್ರಮ ಕೋಟೇಶ್ವರದ ಶ್ರೀ ಪಟ್ಟಾಬಿ ರಾಮಚಂದ್ರ ದೇವಸ್ಥಾನದಲ್ಲಿ ಸಂಭ್ರಮದಿಂದ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಜಿಎಸ್‌ಬಿ ಸಮಾಜಬಾಂಧವರಿಗೆ ಆಶೀರ್ವಚನ ನೀಡಿದರು. ಈ ಸಂದರ್ಭ ಊರ ಪರಊರ ದೇವಸ್ಥಾನಗಳ ಆಡಳಿತ ಮೊಕ್ತೇಸರರು ಹಾಗೂ ಗಣ್ಯರು ಸ್ವಾಮೀಜಿ ಅವರಿಗೆ ಹಾರಾರ್ಪಣೆ ಮಾಡಿದರು. ಕೋಟೇಶ್ವರ ಶ್ರೀ ಪಟ್ಟಾಬಿ ರಾಮಚಂದ್ರ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀಧರ ವಿ. ಕಾಮತ್‌ ಸ್ವಾಗತಿಸಿದರು. ಚಾತುರ್ಮಾಸ ಸಮಿತಿ ಕೋಶಾಧಿಕಾರಿ ಕೆ. ದಿನೇಶ್‌ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು.

Read More

[dinetmedia_youtube_advanced url=”https://youtu.be/Z0LWQRyNsdk” width=”560″ height=”320″ controls=”alt”]

Read More

ಕುಂದಾಪುರ: ಕಲಿಕೆಯೊಂದಿಗೆ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ವಿವಿಧ ಕಾರ‍್ಯಕ್ರಮಗಳನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಚ್ಚಟ್ಟಿನಲ್ಲಿ ಹಮ್ಮಿಕೊಳ್ಳಲಾಯಿತು. ’ವಸುಂಧರಾ’ ಇಕೋ ಕ್ಲಬ್‌ನ್ನು ಶ್ರೀ ಶಾರಾದಾ ಗ್ರಾ.ಪಂ. ಸದಸ್ಯರು ಗಿಡನೆಡುವ ಮೂಲಕ ಚಾಲನೆಗೊಳಿಸಿದರು. ಎಸ್.ಡಿ.ಎಂ. ಸಿ ಅಧ್ಯಕ್ಷರಾದ ಶ್ರೀ ಅಶೊಕ್ ಕಾಮತ್ ಗಿಡಗಳಿಗೆ ನೀರು ಹಾಕಿ, ಮಣ್ಣು ಗೊಬ್ಬರ ನೀಡಿದರು. ಪರಿಸರ ಜಾಗೃತಿ ಎಳೆವೆಯಲ್ಲೇ ಮೂಡಿಸಬೇಕು, ಪರಿಸರ ಜಾಗೃತಿ ಇಂದಿನ ಅಗತ್ಯವೆಂದು ಶ್ರೀಧರ್ ಎಸ್. ಸಿದ್ದಾಪುರ ಮಕ್ಕಳಿಗೆ ವಿವರಿಸಿದರು. ಇದೇ ಸಂದರ್ಭದಲ್ಲಿ ಅಂಜೂರ, ಮ್ಯಾಂಗೋಸ್ಟಿಯನ್ , ಹಲಸು ವಿವಿಧ ಹಣ್ಣಿನ ಗಿಡ ನೆಡಲಾಯಿತು. ಮಕ್ಕಳನ್ನು ತರಗತಿವಾರು ಗುಂಪು ಮಾಡಿ ಈರುಳ್ಳಿ, ಮೂಲಂಗಿ, ಬೀನ್ಸ್ ಬಿಟ್ರೂಟ್ ಮುಂತಾದ ತರಕಾರಿ ಕೃಷಿ ಮಾಡಲು ಬೇಕಾದ ಸಿದ್ದತೆ ಮಾಡಿಕೊಂಡು ಬೀಜಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಶಾಲಾ ವಠಾರ ಸ್ವಚ್ಛಗೊಳಿಸುವ ಕಾರ‍್ಯ ನೆರವೇರಿಸಿದರು. ಜೊತೆಗೆ ಗೊಬ್ಬರ ತಯಾರಿಸುವ ಪ್ರಾತ್ಯಕ್ಷಿಕೆಯನ್ನು ಪೋಷಕರು ಮಕ್ಕಳಿಗೆ ವಿವರಿಸಿದರು. ಮಕ್ಕಳು ತಿಪ್ಪೆ ಗುಂಡಿಯಲ್ಲಿ ಗೊಬ್ಬರವನ್ನು ತಯಾರಿಸಲು ಸೊಪ್ಪು ಸಂಗ್ರಹಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಪೋಷಕರು…

Read More

ರತ್ನಾ ಕೊಠಾರಿ ಕುಟುಂಬಕ್ಕೆ ನ್ಯಾಯ ಒದಗಿಸಲು ಸರಕಾರ ವಿಫಲ: ಮುನೀರ್ ಕಾಟಿಪಳ್ಳ ಬೈಂದೂರು: ನಿಗೂಢವಾಗಿ ಸಾವನ್ನಪ್ಪಿದ್ದ ಶಿರೂರು ಕಾಲೇಜು ವಿದ್ಯಾರ್ಥಿನಿ ರತ್ನಾ ಕೊಠಾರಿ ಪ್ರಕರಣಕ್ಕೆ ಒಂದು ವರ್ಷ ಸಂದರೂ ಈವರೆಗೆ ಆಕೆಯ ಸಾವಿನ ಕಾರಣವನ್ನು ಬಹಿರಂಗಪಡಿಸಲು ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿರುವುದಲ್ಲದೇ, ಮೃತಳ ಕುಟುಂಬಕ್ಕೆ ಸರಕಾರ ಘೋಷಿಸಿದ್ದ 3ಲಕ್ಷ ರೂಪಾಯಿಗಳನ್ನು ದೊರಕಿಸಿಕೊಡುವುದನ್ನು ಮರೆತಿರುವ ಬೈಂದೂರು ಕ್ಷೇತ್ರದ ಶಾಸಕರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ ಎಂದು ಡಿವೈಎಫ್‌ಐ ರಾಜ್ಯಾಧ್ಯಾಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದರು. ಅವರು ರತ್ನಾ ಕೊಠಾರಿ ಕಳೆದ ವರ್ಷ ನಿಗೂಢವಾಗಿ ಸಾವನ್ನಪ್ಪಿದ ಸಾವಂತಗುಡ್ಡೆಯಿಂದ ಆರಂಭಗೊಂಡ ಪ್ರತಿಭಟನಾ ಪಾದಯಾತ್ರೆಯಲ್ಲಿ ಭಾಗವಹಿಸಿ ಬೈಂದೂರಿನ ಶಾಸಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದರು. ಕಳೆದ ಒಂದು ವರ್ಷದಿಂದ ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ಸಂಘಟನೆಗಳು ನಿರಂತರವಾಗಿ ವಿದ್ಯಾರ್ಥಿನಿರ ಸಾವಿನ ವಿರುದ್ಧ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಜನರ ಆಕ್ರೋಶದ ದಿಕ್ಕು ತಪ್ಪಿಸಲು ಬೈಂದೂರಿನ ಶಾಸಕರು 3 ಲಕ್ಷ ಪರಿಹಾರ ಘೋಷಣೆ ಮಾಡಿ ಸುಮ್ಮನಾಗಿದ್ದಾರೆ. ಪೊಲೀಸ್ ಇಲಾಖೆಯೂ ಚಾರ್ಜ್ ಶೀಟ್ ಸಲ್ಲಿಸದೇ ವಿಳಂಬ…

Read More