ಕುಂದಾಪುರ: ನಾಗರಿಕ ಸಮಾಜದ ನಿರ್ಮಾಣದಲ್ಲಿ ಯುವಜನರ ಪಾತ್ರ ಬಹುಮುಖ್ಯ. ಸುಸ್ಥಿರ ಸಮಾಜದ ನಿರ್ಮಾಣದ ಬಗ್ಗೆ ಯುವಜನರನ್ನು ಪ್ರೇರೇಪಿಸುವಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಭಂಡಾರ್ಕಾರ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಕೆ. ಸೋಮಶೇಖರ ಉಡುಪ ಅವರು ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ ಕಾಲೇಜಿನ ವಿಜ್ಞಾನ ವಿಭಾಗದ ಆಶ್ರಯ ದಲ್ಲಿ ಆಯೋಜಿಸಿದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಜ್ಞಾನ ಉತ್ಸವ ಸೈಂಟಿಫಿಕಾ-15ನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ವಿದ್ಯಾರ್ಥಿಗಳಲ್ಲಿ ಆಸಕ್ತಿಯ ಕೊರತೆ ಇದ್ದು ಮೆದುಳಿಗೆ ಮೇವು ನೀಡುವಂತಹ ಮತ್ತು ವ್ಯಕ್ತಿತ್ವ ವಿಕಸಿ ಸುವಂತಹ ಕಾರ್ಯಕ್ರಮಗಳ ಆವಶ್ಯಕತೆ ಇದೆ. ಇಂತಹ ಕಾಲೇಜು ಮಟ್ಟದ ಸ್ಪರ್ಧೆಗಳು ಮತ್ತು ಉತ್ಸವಗಳು ವಿದ್ಯಾರ್ಥಿ ಗಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಹುಟ್ಟು ಹಾಕುತ್ತವೆ. ವಿದ್ಯಾರ್ಥಿಗಳಲ್ಲಿರುವ ಸೃಜನ ಶೀಲತೆಯನ್ನು ಹೊರಹಾಕುವಲ್ಲಿ ನೆರವಾಗುತ್ತವೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಎನ್. ಪಿ. ನಾರಾಯಣ ಶೆಟ್ಟಿ ಮಾತನಾಡಿ ಯುವಕರು ಈ ನಾಡಿನ ಸಂಪತ್ತು. ಅವರ ಆಸಕ್ತಿ ಉತ್ಸಾಹಗಳನ್ನು ಪ್ರೇರೇಪಿಸುವ ಕಾರ್ಯಕ್ರಮಗಳ ಆವಶ್ಯಕತೆ ಇದೆ.…
Author: ಸುನಿಲ್ ಹೆಚ್. ಜಿ. ಬೈಂದೂರು
Transport felicities to kundapura. this info will avail in this page soon
ಕುಂದಗನ್ನಡದ ತವರು ಕುಂದಾಪುರ ಉಡುಪಿ ಜಿಲ್ಲೆಯ ಪ್ರಮುಖ ತಾಲೂಕುಗಳಲ್ಲೊಂದು. ಇದು ಜಿಲ್ಲೆಯ ಇತರೆಲ್ಲಾ ಭಾಗಗಳಿಗಿಂತ ವಿಭಿನ್ನವಾದ ಸಂಸ್ಕೃತಿಯನ್ನು ಹೊಂದಿರುವ ಪ್ರದೇಶ. ಅಚ್ಚಗನ್ನಡದ ಭಾಷೆ (ಕುಂದಾಪುರ ಕನ್ನಡ) ನಾಡಿನಲ್ಲಿಯೇ ವಿಶಿಷ್ಟವಾದದ್ದು. ಶಿಕ್ಷಣ, ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯ ರಂಗಕ್ಕೆ ಹಲವಾರು ಧೀಮಂತರನ್ನು ಪರಿಚಯಿಸಿದ ಕೀರ್ತಿ ಇಲ್ಲಿನದು. ಪಂಚಗಂಗಾವಳಿ, ಮರವಂತೆ, ಒತ್ತಿನಣೆ, ಕೊಡಚಾದ್ರಿ ಆನೆಝರಿ, ಮಲ್ಯಾಡಿ, ಸೋಮೆಶ್ವರ, ಅಬ್ಬಿಫಾಲ್ಸ್ ಮುಂತಾದ ಸ್ಥಳಗಳು ಇಲ್ಲಿನ ನಿಸರ್ಗ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದರೆ, ಇಲ್ಲಿನ ಧಾರ್ಮಿಕ ಕ್ಷೇತ್ರಗಳು ಅನನ್ಯತೆಯ ದ್ಯೋತಕಗಳಾಗಿ ಉಳಿದಿವೆ. ಪೋರ್ಚುಗೀಸರು ಕುಂದಾಪುರಕ್ಕೆ ಕಾಲಿಡುವ ಮೊದಲು ಕುಂದಾಪುರ ಕುಂದವರ್ಮನೆಂಬ ತುಂಡರಸನ ಆಧಿಪತ್ಯಕ್ಕೆ ಸೇರಿತ್ತು. ಶ್ರೀ ಕುಂದೇಶ್ವರ ಕುಂದವರ್ಮನ ಮನೆದೇವರು. ಇತ ನಿರ್ಮಿಸಿದ ಕುಂದೇಶ್ವರ ದೇವಾಲಯದಿಂದ ಈ ಊರಿಗೆ ‘ಕುಂದಾಪುರ’ ಎಂಬ ಹೆಸರು ಬಂದಿದೆ ಎಂದು ಹಲವಾರು ಗ್ರಂಥಗಳು ಉಲ್ಲೇಖಿಸಿವೆ. ಇನ್ನು ಕೆಲವರು ಊರಿನ ಸುತ್ತ ಮುತ್ತ ಯಥೇಛ್ಛವಾಗಿ ಬೆಳೆಯುವ ಮಲ್ಲಿಗೆ (ಕುಂದ) ಹೂವಿನಿಂದಾಗಿ ಈ ಹೆಸರು ಬಂದಿದೆಯೆಂದು ಹೇಳುತ್ತಾರೆ. ಉಳಿದಂತೆ ಮನೆ ಕಟ್ಟುವ ಸಾಮಗ್ರಿಗಳಲ್ಲಿ…
ಕುಂದಾಪುರ ನಗರ ಮತ್ತು ತಾಲೂಕಿನ ಆಸ್ಪತ್ರೆಗಳು Kundapura city and taluk hospitals Hold ‘Ctrl + F’ to find names +ಸರಕಾರಿ ಆಸ್ಪತ್ರೆ ಮುಖ್ಯರಸ್ತೆ, ಕುಂದಾಪುರ [divide icon=”square” icon_position=”left”] +ವಿನಯ್ ಹಾಸ್ಪಿಟಲ್ (Vinay Nursing Home) ಮುಖ್ಯರಸ್ತೆ, ಕುಂದಾಪುರ-576201 ಪೋನ್: 8254-230368 , 232202 [divide icon=”square” icon_position=”left”] +ಆದರ್ಶ ಆಸ್ಪತ್ರೆ (Adarsha Hospital) ಎನ್. ಹೆಚ್ 66, ಕುಂದಾಪುರ ಪೋನ್: 08254-230580/ 231910 [divide icon=”square” icon_position=”left”] +ಚಿನ್ಮಯ್ ಆಸ್ಪತ್ರೆ (Chinmai Hospital) ಚರ್ಚ್ ರೋಡ್, ಕುಂದಾಪುರ ಪೋನ್: 08254-232243/232263 [divide icon=”square” icon_position=”left”] +ವಿವೇಕ್ ಆಸ್ಪತ್ರೆ (Vivek Hospital) ಬಸ್ರೂರು ಕ್ರಾಸ್, ಕುಂದಾಪುರ ಪೋನ್: +91 9611134311/230211 [divide icon=”square” icon_position=”left”] +ಎನ್. ಆರ್ ಆಚಾರ್ಯ ಮೆಮೋರಿಯಲ್ ಹಾಸ್ಪಿಟಲ್ (N.R.Acharya Memorial Hospital) ಕೊಟೇಶ್ವರ, ಕುಂದಾಪುರ-576222. ಪೋನ್: 08254-261270/261550/262880 [divide icon=”square” icon_position=”left”] +ಸರ್ಜನ್ ಆಸ್ಪತ್ರೆ (Surjan Hospital) ಎನ್. ಹೆಚ್ 66, ಕೊಟೇಶ್ವರ-…
ಕುಂದಾಪುರ: ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಪರಿಶ್ರಮ ಪಟ್ಟರೆ ಖಂಡಿತ ಯಶಸ್ಸು ಸಾಧ್ಯ ಎಂದು ಕೋಟೇಶ್ವರದ ಸಹನಾ ಬಿಲ್ಡರ್ನ ವ್ಯವಸ್ಥಾಪಕ ನಿರ್ದೇಶಕ ಸುರೇಂದ್ರ ಶೆಟ್ಟಿ ಹೇಳಿದರು. ಅವರು ಭಂಡಾರ್ಕಾರ್ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ ವಿಭಾಗವು ಆಯೋಜಿಸಿದ್ದ ಅಂತರ್ ಕಾಲೇಜು ಮಟ್ಟದ ವ್ಯವಹಾರ ಉತ್ಸವ (ಮ್ಯಾನೇಜ್ಮೆಂಟ್ ಫೆಸ್ಟ್) “ಸ್ಪರ್ಧಾ’ ಉದ್ಘಾಟಿಸಿ ಮಾತನಾಡಿದರು. ಇಂದು ನಾವು ಸ್ಪರ್ಧಾ ಜಗತ್ತಿನಲ್ಲಿದ್ದೇವೆ. ಇದಕ್ಕೆ ಪೂರಕವಾಗಿ ನಮ್ಮ ಜ್ಞಾನ, ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಪರಿಶ್ರಮ ವಿದ್ದಲ್ಲಿ ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ್ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ ಮಾತನಾಡಿ ಈ ಕಾರ್ಯಕ್ರಮದಲ್ಲಿ ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕೇವಲ ಪಠ್ಯದ ಹುಳುವಾಗುವುದ ಅಧ್ಯಯನದ ಲಕ್ಷಣವಲ್ಲ. ಪಡೆದ ಜ್ಞಾನವನ್ನು ಬದುಕಿನ ಯಶಸ್ಸನ್ನು ಪಡೆ ಯುವಲ್ಲಿ ಬಳಸಿಕೊಳ್ಳಬೇಕು. ಸ್ಪರ್ಧೆ ಯಲ್ಲಿ ಭಾಗವಹಿಸುವುದಷ್ಟೇ ಮುಖ್ಯ ಹೊರತು ಗೆಲುವು ಅಥವಾ ಸೋಲು ಮುಖ್ಯವಲ್ಲ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ…
ಕುಂದಾಪುರ: ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಕುತೂಹಲ ಬೆಳೆಸಿಕೊಳ್ಳಬೇಕು. ಇವತ್ತು ವಿಜ್ಞಾನದ ಬಗ್ಗೆ ಕುತೂಹಲಗಳನ್ನು ಬಗೆಹರಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇರುವುದರಿಂದ ತಿಳಿದುಕೊಳ್ಳುವ ವೈಚಾರಿಕ ಮನೋಭಾವನ್ನು ರೂಢಿಸಿಕೊಳ್ಳಬೇಕು ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಎ.ಪಿ ಭಟ್ ಹೇಳಿದರು. ಕುಂದಾಪುರದ ಸಮುದಾಯ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ನ ಉಡುಪಿ ಜಿಲ್ಲಾ ಘಟಕದ ಸಹಯೋಗದೊಂದಿಗೆ ಕುಂದಾಪುರದ ಭಂಡಾರ್ಕಾಸ್ ಕಾಲೇಜಿನಲ್ಲಿ ಆಯೋಜಿಸಲಾದ ಚುಕ್ಕಿ ಚಂದ್ರಮ ಆಕಾಶ ವೀಕ್ಷಣೆ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕುಂದಾಪುರ ಸಮುದಾಯದ ಅಧ್ಯಕ್ಷ ಉದಯ ಗಾಂವ್ಕರ್ ಮಾತನಾಡಿ, ಅನುಮಾನ, ಪ್ರಶ್ನೆಗಳಿಂದ ವಿಜ್ಞಾನ ವಿಕಾಸಹೊಂದುತ್ತದೆ. ಜ್ಯೋತಿಷ್ಯದ ಮೂಲಕ ಹೆದರಿಸುವ ಪ್ರವೃತ್ತಿ ಇಂದು ಬೆಳೆಯುತ್ತಿದೆ. ಈ ಸಂದರ್ಭದಲ್ಲಿ ನಾವು ಪ್ರಗತಿಪರ ಆಲೋಚನೆಗಳನ್ನು ಮಾಡುವ ಮೂಲಕ ಕೌತುಕವನ್ನು ವಿಜ್ಞಾನದ ಮೂಲಕ ಪರಿಹರಿಸಿಕೊಳ್ಳಬೇಕು. ನಂಬಿಕೆಗಳಿಗೆ ಪುರಾವೆ ಬೇಡ ಆದರೆ ಜ್ಞಾನಕ್ಕೆ ಸೂಕ್ತ ಪುರಾವೆ ಬೇಕು. ಆ ನಿಟ್ಟಿನಲ್ಲಿ ಪ್ರಗತಿಪರ ಆಲೋಚನೆಗಳಿಗೆ ಅವಕಾಶ ಮಾಡಿಕೊಡುವುದು ಈ ಕಾರ್ಯಕ್ರಮ…
ಹಿರಿಯ ಸಾಹಿತಿ ನಾ. ಡಿಸೋಜ ಬೈಂದೂರು ಡೈರೆಕ್ಟರಿ ಬಿಡುಗಡೆಗೊಳಿಸಿ ಮಾತನಾಡಿದರು. ಬೈಂದೂರು: ಬೈಂದೂರಿಗೆ ಸಾಕಷ್ಟು ಪ್ರಾಚೀನತೆ ಇದೆ. ಇಲ್ಲಿ ಹಲವಾರು ಪುರಾತನ ಶ್ರದ್ಧಾಕೇಂದ್ರಗಳು, ಪ್ರೇಕ್ಷಣೀಯ ಸ್ಥಳಗಳಿದ್ದರೂ ಗುರುತಿಸುವಂತಹ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಬೈಂದೂರನ್ನು ಶೀಘ್ರದಲ್ಲಿಯೇ ತಾಲೂಕಾಗಿ ಘೋಷಣೆ ಮಾಡುವ ಮೂಲಕ ಬೈಂದೂರಿನ ಪ್ರಾಚಿನತೆಗೆ, ಐತಿಹಾಸಿಕ ಶ್ರೀಮಂತಿಕೆಗೆ ನ್ಯಾಯಸಮ್ಮತ ಸ್ಥಾನವನ್ನು ನೀಡಿದಂತಾಗಬಹುದೆಂದು ಪ್ರಸಿದ್ಧ ಸಾಹಿತಿ, ೮೦ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ನಾ. ಡಿಸೋಜ ಹೇಳಿದರು. ‘ಕುಂದಾಪ್ರ ಡಾಟ್ ಕಾಂ’ ನ ವಿನೂತನ ಪರಿಕಲ್ಪನೆಯಂತೆ ಮೂಡಿಬಂದ ಬೈಂದೂರಿನ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಪ್ರಕಟಿಸಿದ ’ಬೈಂದೂರು ಡೈರೆಕ್ಟರಿ’ ಪುಸ್ತಕವನ್ನು ಇಲ್ಲಿನ ಶಾರದಾ ವೇದಿಕೆಯಲ್ಲಿ ಸೆ.21 ರ ಸಂಜೆ ಜರುಗಿದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಒಂದು ದೇಶದ ಇತಿಹಾಸವನ್ನು ಎಲ್ಲಿಯ ವರೆಗೆ ನಮ್ಮದಾಗಿಸಿಕೊಳ್ಳುವುದಿಲ್ಲವೋ ಅಲ್ಲಿಯ ತನಕ ಒಂದು ಊರನ್ನು ಮುಂದಿನ ಪೀಳಿಗೆಗೆ ಕಟ್ಟಿಕೊಡಲು ಸಾಧ್ಯವಾಗದು. ಇತಿಹಾಸ, ಪರಂಪರೆಯ ಅರಿವು, ಪ್ರಜ್ಞೆ ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು ಇದರಿಂದ ಒಂದು ನಾಡನ್ನು, ಒಂದು ಊರನ್ನು ಮುಂದಿನ ದಿನಗಳಲ್ಲಿ…
ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ | ಮೇ. 2012. ಸಾಧನೆಯೆಂಬುದು ಯಾರೊಬ್ಬರ ಸೊತ್ತಲ್ಲ. ಏನನ್ನಾದರೂ ಸಾಧಿಸಬೇಕೆಂಬ ಹಂಬಲ, ಆತ್ಮಸ್ಥೈರ್ಯ ಜೊತೆಗೊಂದಿಷ್ಟು ಕಠಿಣ ಪರಿಶ್ರವ ಇವಿಷ್ಟಿದ್ದರೆ ಸಾಕು ವ್ಯಕ್ತಿ ತಾನಾಗಿಯೇ ಬೆಳೆಯುತ್ತಾನೆ. ಸಾಧಿಸಿಯೇ ತೀರುತ್ತಾನೆ. ಬಹುಶಃ ಆತನಿಗೆ ಇದಕ್ಕಿಂತ ಹೆಚ್ಚಿನ ಆತ್ಮತೃಪ್ತಿ ಬೇರಾವುದೂ ನೀಡದು. ಬದುಕಿನಲ್ಲಿ ಅಡ್ಡಲಾದ ಟೀಕೆಯನ್ನೇ ಮೆಟ್ಟಿಲಾಗಿಸಿಕೊಂಡು, ಪ್ರೋತ್ಸಾಹದ ಮಾತುಗಳಿಂದ ಮಾರ್ಗವೊಂದನ್ನು ಕಂಡುಕೊಂಡು, ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಕುಂದಾಪುರ ತಾಲೂಕು, ದೇವಲ್ಕುಂದ ಗ್ರಾಮದ ಬಾಳೆಕೆರೆಯ ಉದಯೋನ್ಮುಖ ಕ್ರೀಡಾಪಟು ವಿಶ್ವನಾಥ ಬಿ. ಪವರ್ ಲಿಫ್ಟಿಂಗ್, ವೇಯ್ಟ್ ಲಿಫ್ಟಿಂಗ್, ಡೆಡ್ ಲಿಫ್ಟಿಂಗ್, ಬಾಡಿ ಬಿಲ್ಡಿಂಗ್ ಕ್ಷೇತ್ರದಲ್ಲಿ ವಿಶೇಷ ಛಾಪು ಮೂಡಿಸಿರುವ ಇವರು ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದಲ್ಲೊಂದು ದಾಖಲೆಯನ್ನು ಬರೆದು, ರಾಜ್ಯ-ರಾಷ್ಟ್ರಮಟ್ಟದಲ್ಲೂ ಮಿಂಚಿ ಅಪಾರ ಮೆಚ್ಚುಗೆ ಗೆ ಪಾತ್ರರಾದವರು. ಕುಂದಾಪ್ರ ಡಾಟ್ ಕಾಂ ಲೇಖನ.ಕುಂದಾಪ್ರ ಡಾಟ್ ಕಾಂ ಲೇಖನ. ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ಇವರನ್ನು ಆಕರ್ಷಿಸಿದ್ದು ಪವರ್ ಲಿಫ್ಟಿಂಗ್, ವೇಯ್ಟ್ ಲಿಫ್ಟಿಂಗ್ ನಂತಹ ಗಟ್ಟಿಗರ ಕ್ಷೇತ್ರ. ಯಾವುದೂ…
