ಕುಂದಾಪುರ: ಈ ಗ್ರಾಮದ ಜನ ಅಬ್ಬಾಬ್ಬ ಎಂದರೆ ಒಂದು ಕಿ. ಮೀ ದೂರ ಸಾಗಿದ್ರೆ ಕುಂದಾಪುರ ನಗರವನ್ನು ಸುಲಭವಾಗಿ ತಲುಪಬಹುದು. ಆದ್ರೆ ಈ ಕಿರು ಸೇತುವೆಯ ಕಾರಣದಿಂದಾಗಿ ಕುಂದಾಪುರ ನಗರವನ್ನು ತಲುಪಲು 7 ಕಿ.ಮೀ ಸುತ್ತಿ ಸಾಗಬೇಕು. ಇದು ಸುಮಾರು 800ಕ್ಕೂ ಅಧಿಕ ಮನೆಗಳು, 2,000ಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಆನಗಳ್ಳಿ ಗ್ರಾಮದ ಜನರ ದುಸ್ಥಿತಿ. ಇಷ್ಟರ ನಡುವೆಯೂ ಹೊಸ ಸೇತುವೆಯ ಕನಸು ಹೋರಾಟದೊಂದಿಗೆ ನಿರಂತರವಾಗಿ ಮುಂದುವರಿದಿದೆ. ಆ ಕಾಲದಲ್ಲಿ ನಡೆದುಕೊಂಡು ಹೋಗಲು ಅನುಕೂಲವಾಗುವಂತೆ ಆನಗಳ್ಳಿಯಲ್ಲಿ ವಾರಾಹಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟಿನೊಂದಿಗೆ ನಿರ್ಮಾಣಗೊಂಡ ಈ ಕಿರು ಸೇತುವೆ 6 ಅಡಿ ಅಗಲವಿದೆ. ಸೇತುವೆಯ ಮೇಲೆ ಒಂದು ರಿಕ್ಷಾ ಅಥವಾ ಕಾರು ಚಲಿಸುತ್ತಿದ್ದರೇ ಎದುರಿನ ವಾಹನಗಳು ಇನ್ನೊಂದು ಬದಿಯಲ್ಲಿ ಕಾಯಲೇಬೇಕು. ತುರ್ತು ಸಂದರ್ಭದಲ್ಲಂತೂ ಜನರು ಪಾಡು ಹೇಳತೀರದು. ಕಿರಿದಾದ ಈ ಸೇತುವೆಯಾದ ಕಾರಣದಿಂದಾಗಿ ಬೆಳಿಗ್ಗೆ ಶಾಲೆ-ಕಾಲೇಜಿಗೆ, ಇನ್ನಿತರ ದಿನನಿತ್ಯದ ಅಗತ್ಯಗಳಿಗಾಗಿ ಗ್ರಾಮವನ್ನು ತಲುಪಬೇಕಾದ ವಾಹನಗಳ ಸಂಚರ ಸಾಧ್ಯವಿಲ್ಲವಾದುದರಿಂದ ಬಸ್ರೂರು-ಮೂಡ್ಲಕಟ್ಟೆ ಮಾರ್ಗವಾಗಿ ಸುತ್ತು…
Author: ಸುನಿಲ್ ಹೆಚ್. ಜಿ. ಬೈಂದೂರು
ಕುಂದಾಪುರ: ಇಲ್ಲಿನ ರಕ್ತೇಶ್ವರಿ ದೇವಸ್ಥಾನದ ಸಭಾಂಗಣ ಒಂದು ವಿಶೇಷ ಮದುವೆಗೆ ಸಾಕ್ಷಿಯಾಯಿತು. ಎಂಟು ತಿಂಗಳ ಮಗಳು ಪಂಚಮಿಯ ಸಮಕ್ಷಮದಲ್ಲಿ ಅದರ ಜನ್ಮದಾತರು ನಮ್ಮ ಭೂಮಿ ಸಂಸ್ಥೆಯ ನೇತೃತ್ವದಲ್ಲಿ ನಡೆದ ಮದುವೆಯಲ್ಲಿ ಸತಿ-ಪತಿಗಳಾದರು. ಈ ಘಟನೆಗೆ ವಧು-ವರ ಪೋಷಕರು, ಕುಂದಾಪುರದ ಪೋಲಿಸರು, ಹಿತೈಶಿಗಳು ಮದುವೆಯಲ್ಲಿ ಪಾಲ್ಗೊಂಡು ದಂಪತಿಗಳನ್ನು ಹಾರೈಸಿದರು. ಏನಿದು ಘಟನೆ: ಮೂಲತಃ ತಲ್ಲೂರು ಗುಡ್ಡೆಯಂಗಡಿಯವಳಾದ ಸ್ವಾತಿಗೆ ಸಾಗರ ನಿವಾಸಿ ಶಶಿಕುಮಾರ್ ಅವರೊಂದಿಗೆ ಕೆಲವು ವರ್ಷಗಳ ಹಿಂದೆ ಪ್ರೇಮಾಂಕುರವಾಗಿತ್ತು. ಈ ಭಾಗದಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಶಶಿಕುಮಾರ್ ಸ್ವಾತಿಯ ನಡುವೆ ಒಂದೆರಡು ವರ್ಷ ಪ್ರೇಮವೂ ಮುಂದುವರಿದಿತ್ತು. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಶಶಿಕುಮಾರ್ ದೈಹಿಕ ಸಂಪರ್ಕವನ್ನೂ ಬೆಳೆಸಿ ಆಕೆ ಗರ್ಭವತಿಯಾಗಿದ್ದಳು. ಇದು ತಿಳಿಯುತ್ತಿದ್ದಂತೆ ಆತ ನಾಪತ್ತೆಯಾಗಿದ್ದ. ಇದರಿಂದ ಆಘಾತಕ್ಕೊಳಗಾದ ಸ್ವಾತಿ ತಿಂಗಳು ತುಂಬುತ್ತಿದ್ದಂತೆ (ಅಗಸ್ಟ್ 2014ರ ವೇಳೆ) ಸಾಗರಕ್ಕೆ ತೆರಳುವ ನೆಪಮಾಡಿಕೊಂಡು ತನ್ನ ತಾಯಿಯೊಂದಿಗೆ ಹೊರಟು ಜಡ್ಕಲ್ ಸಮಿಪ ಹಾಡಿಯೊಂದರ ಬಳಿ ನವಜಾತ ಶಿಶುವಿಗೆ ಜನ್ಮ ನೀಡಿ ಮಗುವನ್ನು ಅಲ್ಲಿಯೇ ಬಿಟ್ಟು ಮನೆಗೆ ಮರಳಿದ್ದಳು.…
ಕುಂದಾಪುರ: ಪ್ರತಿಯೊಂದು ವಿಚಾರದಲ್ಲಿಯೂ ಪ್ರಾಮಾಣಿಕರಾಗಿ, ಮಾಡುವ ಕೆಲಸದಲ್ಲಿ ನಿಷ್ಠರಾಗಿ ಸಮಾಜಕ್ಕೆ ಕೀರ್ತಿ ತರುವಂತಹ ಕೆಲಸ ಯುವ ಸಮುದಾಯದಿಂದ ಆಗಬೇಕಿದೆ. ಬದುಕಿನ ಹಾದಿಯಲ್ಲಿ ಪ್ರಾಮಾಣಿಕತೆಯಿಂದ ಮುನ್ನಡೆದಾಗ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಹೇಳಿದರು. ಅವರು ಬೆಳಿಗ್ಗೆ ಭಂಡಾರ್‌ಕಾರ್ಸ್ ಕಾಲೇಜು, ಹಳೆ ವಿದ್ಯಾರ್ಥಿ ಸಂಘ ಹಾಗೂ ಕುಂದಾಪುರ ತಾಲೂಕು ಯುವಜನ ಒಕ್ಕೂಟದ ಆಶ್ರಯದಲ್ಲಿ ಕುಂದಾಪುರ ಹೆಚ್.ಪಿಯ ಎಂಫಸಿಸ್ ಕ್ಯಾಂಪಸ್ ರಿಕ್ರ್ಯೂಟ್‌ಮೆಂಟ್ ಡ್ರೈವ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಂಫಸಿಸ್ ಸೀನಿಯರ್ ಮೆನೇಜರ್ ಚಂದ್ರಶೇಖರ್, ಪ್ಲೇಸ್‌ಮೆಂಟ್ ಆಫೀಸರ್‌ಗಳಾದ ರಮೇಶ್, ಸುನೀಲ್ ಜೋಷಿ, ರಘುವೀರ್ ಎನ್.ಎಸ್, ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸನ್ಮತ್ ಹೆಗ್ಡೆ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷರಾದ ಕೆ.ಕಾರ್ತಿಕೇಯ ಮಧ್ಯಸ್ಥ ಸ್ವಾಗತಿಸಿದರು. ಕಾರ್ಯದರ್ಶಿ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ವಂದಿಸಿದರು.
ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕುಂದಾಪುರ: ಹುತಾತ್ಮ ಯೋಧರ ಹೆಸರಿನಲ್ಲಿ ನೀಡುತ್ತಿರುವ ಪ್ರಶಸ್ತಿ ನೀಡುತ್ತಿರುವುದು ಸಮಾಜಕ್ಕೆ ಮಾದರಿಯಾದುದು ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ ಹೇಳಿದರು. ಅವರು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಭಂಡಾರ್ಕಾರ್ಸ್ ಕಾಲೇಜಿನ 2014-15ನೇ ಸಾಲಿನ ಎನ್‌ಸಿಸಿ ಕೆಡೆಟ್‌ಗಳಾದ ಭರತ್‌ರಾಜ್ ಶೆಟ್ಟಿ ಹಾಗೂ ವಿನಯ ಕಾಂಚನ್ ಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡುತ್ತಿದ್ದರು. ಸುಭದ್ರ ಸಮಾಜ ನಿರ್ಮಾಣಗೊಂಡರೆ ಎಲ್ಲರೂ ನೆಮ್ಮದಿಯಿಂದ ಬದುಕಬಹುದು. ದೇಶಕ್ಕಾಗಿ ಮರಣವನ್ನಪ್ಪಿದವರ ಆದರ್ಶವನ್ನು ಪಾಲಿಸಿ ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ಪ್ರತಿ ವಿದ್ಯಾರ್ಥಿಗಳೂ ಶ್ರಮಿಸಬೇಕು. ವೃತ್ತಿ ಯಾವುದೇ ಇರಲಿ ಅದು ಸಮಾಜಮುಖಿಯಾಗಿರಬೇಕು ಎಂದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಕಾಲೇಜಿನ ಮಾಜಿ ಪ್ರಾಂಶುಪಾಲರುಗಳಾದ ಪ್ರೊ. ದೋಮ…
ಕುಂದಾಪುರ: ಇಲ್ಲಿನ ಸಂಗಮ್ ಸೇತುವೆ ಬಳಿ 2010ರ ಮೇ 31ರಂದು ಬೈಂದೂರು ಪೊಲೀಸ್ ಪೇದೆ ಶ್ರೀಧರ್ ಅವರನ್ನು ಹತ್ಯೆಗೈದ ಪ್ರಕರಣದ ವಿಚಾರಣೆಯ ತೀರ್ಪು 5ವರ್ಷಗಳ ಬಳಿಕ ಗುರುವಾರ ಹೊರಬಿದ್ದಿದೆ. ಶ್ರೀಧರ್ ಅವರನ್ನು ಹತ್ಯೆಗೈದ ಆರೋಪಿ ರಘು(32) ಎಂಬುವವನಿಗೆ ಜೀವಾವಧಿ ಶಿಕ್ಷೆ ಹಾಗೂ ವೃತ್ತನಿರೀಕ್ಷಕ ಕಾಂತರಾಜ್ ಮೇಲೆ ಹಲ್ಲೆಗೆ ಮುಂದಾದ ಆರೋಪಿ ರಾಜೇಶ್ (35) ಎಂಬಾತನಿಗೆ 5 ವರ್ಷ ಕಠಿಣ ಸಜೆ ವಿಧಿಸಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಸತ್ರನ್ಯಾಯಾಧೀಶ ರಾಜಶೇಖರ ವಿ. ಪಾಟೀಲ್ ತೀರ್ಪು ಪ್ರಕಟಿಸಿದ್ದಾರೆ . ಪ್ರಕರಣದ ವಿವರ: ಮೇ 31ರ ರಾತ್ರಿ ನಡೆದ ಈ ಪ್ರಕರಣ ಇಡೀ ಕುಂದಾಪುರವನ್ನೇ ಬೆಚ್ಚಿ ಬಿಳಿಸಿತ್ತು. ಜಿಲ್ಲೆಯ ಇತಿಹಾಸದಲ್ಲೂ ಕರ್ತವ್ಯನಿರತ ಪೊಲೀಸ್ ಪೇದೆ ದರೋಡೆಕೋರರ ಅಟ್ಟಹಾಸಕ್ಕೆ ಬಲಿಯಾಗಿದ್ದೂ ಕೂಡ ಇದೇ ಮೊದಲಾಗಿತ್ತು. ರಕ್ತ ಹರಿಸಿದ ನರಹಂತಕರು: 2010 ರ ಮೇ.28 ರಂದು ಕೇರಳದ ಕೊಟ್ಟಾಯಂನಿಂದ ಬಂದಿದ್ದ ಈ ಇಬ್ಬರು ಆರೋಪಿಗಳು ಮೇ.29ರಂದು ಬೈಂದೂರಿಗೆ ಬಂದು 29ರ ರಾತ್ರಿ ಬೈಂದೂರಿನ ಪೆಟ್ರೋಲ್ ಬಂಕ್‌ನಲ್ಲಿ ದರೋಡೆ ನಡೆಸಿ,…
ಕುಂದಾಪುರ: ಭಂಡಾರ್‌ಕಾರ್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಆಯೋಜಿಸಿದ ನಾಲ್ಕು ದಿನಗಳ ಬಯಲು ರಂಗೋತ್ಸವ ಸಂಜೆ ಡಾ| ಎಚ್. ಶಾಂತಾರಾಮ್ ಬಯಲು ರಂಗಮಂಟಪದಲ್ಲಿ ಉದ್ಘಾಟನೆಗೊಂಡಿತು. ಮಂಗಳೂರಿನ ಭೂಮಿಕ ರಂಗತಂಡದ ಕಲಾವಿದ ಲಕ್ಷ್ಮಣ ಮಲ್ಲೂರು ಉದ್ಘಾಟಿಸಿ ಮಾತನಾಡಿ, ರಂಗ ಅಧ್ಯಯನ ಕೇಂದ್ರದ ಮೂಲಕ ನಾಟಕಾಸಕ್ತರನ್ನು ರಂಗದತ್ತ ಸೆಳೆಯುವ ಮಹತ್ತರವಾದ ಪ್ರಯತ್ನವನ್ನು ಮಾಡಿದ್ದಾರೆ. ಇಲ್ಲಿನ ರಂಗ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರಲಿ ಎಂದರು. ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಮಾತನಾತ್ತಾ ರಂಗ ಚಟುವಟಿಕೆಗಳನ್ನು ಉತ್ತೇಜಿಸಲು ಕಳೆದ ವರ್ಷ ರಾಷ್ಟ್ರೀಯ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಈ ಭಾರಿ ಯಕ್ಷಗಾನ ಉತ್ಸವ ಹಮ್ಮಿಕೊಂಡಿದ್ದು, ಮೂರು ದಿನಗಳ ಕಾಲ ಬಡಗು, ತೆಂಕು ಹಾಗೂ ಬಡಾಬಡಗು ತಿಟ್ಟುಗಳ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಮೂಲಕ ಕುಂದಾಪುರದ ಸಾಂಸ್ಕೃತಿಕ ರಂಗ ಬೆಳಗಲಿದೆ ಎಂದರು. ರಂಗ ಅಧ್ಯಯನ ಕೇಂದ್ರದ ಸಂಚಾಲಕ ವಸಂತ ಬನ್ನಾಡಿ ಉಪಸ್ಥಿತರಿದ್ದರು. ರಂಗ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ|ಎನ್.ಪಿ. ನಾರಾಯಣ ಶೆಟ್ಟಿ…
ಕೋಟ: ಕೃಪಿ ಎಂದರೆ ಸಾಕು ನಮ್ಮ ಯುವಕರು ಮಾರುದ್ದ ದೂರದಲ್ಲಿ ನಿಲ್ಲುತ್ತಾರೆ. ಅಲ್ಪ ಸಲ್ಪ ಓದಿಕೊಂಡವರಂತೂ ಲಾಭವಿಲ್ಲದೆ ಮೈಮುರಿದು ಕೆಲಸ ಮಾಡುವವರ್ಯಾರು ಎಂದು ಪ್ರಶ್ನಿಸುತ್ತಾರೆ. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಕೃಷಿ ಚಟುವಟಿಕೆಗಳೂ ಕ್ಷೀಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕೋಟದ ಗಿಳಿಯಾರು ಹಾಗೂ ಬನ್ನಾಡಿ ಪರಿಸರದ ಈ ಮೂವರು ಯುವಕರ ಕೃಷಿ ಬಗೆಗಿನ ಆಸಕ್ತಿ ಈ ಕ್ಷೇತ್ರದಲ್ಲಿ ಒಂದಿಷ್ಟು ಹೊಸ ಹೊಳವುಗಳನ್ನು ಮೂಡಿಸಿದೆ. ಮೊದಲ ಪ್ರಯತ್ನದಲ್ಲಿಯೇ ಇವರು ಕೈಗೊಂಡ ವಾಣಿಜ್ಯ ಕೃಷಿಯು, ಇಲ್ಲಿ ನಷ್ಟವಾಗುವುದು ಸಾಮಾನ್ಯ ಎಂಬುದಕ್ಕೆ ಅಪವಾದವಾಗಿ ನಿಂತಿದೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಗಳಿಕೆಯನ್ನು ಕಂಡುಕೊಂಡಿರುವ ಈ ತ್ರಿಮೂರ್ತಿಗಳು ನಿಜಕ್ಕೂ ಯುವಸಮುದಾಯಕ್ಕೆ ಮಾದರಿಯಾಗಿ ನಿಂತಿದ್ದಾರೆ. ತ್ರಿಮೂರ್ತಿಗಳು ಮಾಡಿದ್ದೇನು? ಕಳೆದ ಎರಡು ತಿಂಗಳ ಹಿಂದೆ ಬನ್ನಾಡಿಯ ಕಮ್ಮಟಕುದ್ರುವಿನ ವಾರ್ಷಿಕವಾಗಿ ಭತ್ತ ಬೆಳೆಯುತ್ತಿದ್ದ ಒಂದು ಎಕರೆ ಗದ್ದೆಯಲ್ಲಿ ಕಲ್ಲಂಗಡಿ ಬೆಳೆಯುವ ಸಾಹಸಕ್ಕೆ ಮುಂದಾದರು. ಕೇವಲ 15 ಸಾವಿರ ರೂಪಾಯಿ ಬಂಡವಾಳ ವಿನಿಯೋಗಿಸಿ, ಬಿಡುವಿನ ವೇಳೆಯಲ್ಲಿ ಗೊಬ್ಬರ, ನೀರು ಹರಿಸಿ ಗೀಡಗಳನ್ನು ಪೋಷಿಸಿ 70-80 ದಿನಗಳಲ್ಲಿ ಲಕ್ಷ…
ಕುಂದಾಪುರ: ಕುಂದಾಪುರ ಮಣ್ಣಿನ ಮಕ್ಕಳಲ್ಲಿ ಕ್ರೀಯಾಶೀಲ ವ್ಯಕ್ತಿತ್ವವಿದೆ. ನಮ್ಮ ಜನಪದೀಯ, ಸಾಂಪ್ರದಾಯಿಕ ಕಲೆಗಳಾದ ಯಕ್ಷಗಾನ, ಹೂವಿನಕೋಲು ಮುಂತಾದವುಗಳನ್ನು ಅವರಿಂದ ಅನಾವರಣಗೊಳ್ಳುವ ಪರಿಯೇ ಬೇರೆಯದ್ದಾಗಿರುತ್ತದೆ. ಕಲೆಯಲ್ಲಿ ನೈಜತೆಯನ್ನು ಕಟ್ಟಿಕೊಡುವ ಗಟ್ಟಿತನ ಅವರಲ್ಲಿದೆ ಎಂದು ಹಂಪಿ ವಿವಿ ಮಾಜಿ ಕುಲಪತಿ ಡಾ| ಬಿ. ಎ. ವಿವೇಕ ರೈ ಹೇಳಿದರು. ಅವರು ಭಂಡಾರ್ಕಾರ್ಸ್ ಕಾಲೇಜಿನ ಸುವರ್ಣ ಮಹೋತ್ಸವದ ನೆನಪಿನ ಸಂಚಿಕೆ ‘ಹೊನ್ನ ಭಂಡಾರ’ವನ್ನು ಡಾ| ಶಾಂತಾರಾಮ್ ಬಯಲು ರಂಗಮಂಟಪದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡುತ್ತಿದ್ದರು. ಸಾವಿರಾರು ಬರಹಗಾರರು, ಕಲಾವಿದರುಗಳನ್ನು ಸಮಾಜಕ್ಕೆ ನೀಡಿರುವ ಹೆಮ್ಮ ಭಂಡಾರ್ಕಾರ್ಸ್ ಕಾಲೇಜಿನದ್ದು. ಇಲ್ಲಿ ಶಿಕ್ಷಣದೊಂದಿಗೆ ರಂಗಭೂಮಿಗೆ ಪ್ರಾಧಾನ್ಯತೆ ನೀಡಿರುವುದು ವಿಶೇಷವಾದುದು ಎಂದು ಅವರು ನುಡಿದರು. ಮುಖ್ಯ ಅತಿಥಿ ನಾಟಕಕಾರ ಡಾ| ಹೆಚ್. ಎಸ್. ಶಿವಪ್ರಕಾಶ್ ಮಾತನಾಡಿ ರಂಗ ಸಂಸ್ಕೃತಿ ರಂಗಭೂಮಿಯ ಪ್ರಜಾಸತ್ತಾತ್ಮಕ ಕಲೆ. ಯಾವುದೇ ದೇಶದಲ್ಲಿ ಇದಕ್ಕೆ ಅಡ್ಡಿ ಉಂಟಾದರೇ ಅದು ದೇಶದ ಪ್ರಜಾಸತ್ತಾತ್ಮಕತೆಗೆ ಉಂಟಾದ ಅಡ್ಡಿ ಎಂದೇ ಅರ್ಥ. ಆಧುನಿಕ ರಂಗಭೂಮಿ ಸಂವಹನ ಸಾಧ್ಯತೆಗಳನ್ನು ವೃದ್ಧಿಸಿಕೊಂಡು ಹೆಚ್ಚು ವಿಕೇಂದ್ರಿಕರಣಗೊಳ್ಳಬೇಕು ಎಂದರು ಅಕಾಡೆಮಿ ಆಫ್…
ಕುಂದಾಪುರ: ಬದುಕಿನಲ್ಲಿ ಮೊದಲು ಸಿದ್ಧಿಯನ್ನು ಸಾಧಿಸಿದರೆ ಮಾತ್ರ ಪ್ರಸಿದ್ಧಿಯನ್ನು ಪಡೆಯಬಹುದು. ನಿಮ್ಮ ನೆಚ್ಚಿನ ಕ್ಷೇತ್ರ ಯಾವುದೇ ಆಗಿರಲಿ ಅಲ್ಲಿಯೇ ಇದ್ದು ಸಾಧಿಸಿ. ಸಣ್ಣ ಸಣ್ಣ ಗೆಲುವನ್ನು ನಮ್ಮದು ಮಾಡಿಕೊಳ್ಳುತ್ತಲೇ ಯಶಸ್ವೀ ವ್ಯಕ್ತಿಗಳಾಗಿ ಬೆಳೆಯಬಹುದು ಎಂದು ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ, ವಾಗ್ಮಿ ಓಂ ಗಣೇಶ್ ಉಪ್ಪುಂದ ಹೇಳಿದರು ಅವರು ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಪತ್ರಿಕೆಯು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ’ಪರಿವರ್ತನೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಟಿ.ವಿ., ಕಂಪ್ಯೂಟರ್, ಮೊಬೈಲ್‌ಗಳು ಯುವಜನರ ಭಾವನೆಗಳನ್ನು ಸಂಪೂರ್ಣ ನಾಶಮಾಡಿ ಮೇಸ್ತರದ ತೆವಲಾಗಿ ಪರಿಣಮಿಸಿವೆ. ಇವೆಲ್ಲವೂ ಮಾಹಿತಿಯ ಮೂಲವಾಗುವುದೇ ಹೊರತು ಅನುಭವಗಳನ್ನು ಕಟ್ಟಿಕೊಡುವುದಿಲ್ಲ. ಸಾಧ್ಯವಾದಷ್ಟು ನಮ್ಮವರನ್ನು ಪ್ರೀತಿಸೋದನ್ನು ಕಲಿಯೋಣ. ನಮ್ಮ ಹಿರಿಯರು ಪ್ರಕೃತಿಯೊಂದಿಗೆ ಬದುಕುವ; ನಮ್ಮ ದೇಶ, ಜನ, ಸಂಸ್ಕೃತಿ, ಆಚಾರ ವಿಚಾರಗಳೊಂದಿಗೆ ಬದುಕುವ ಮೌಲ್ಯ ನಮ್ಮದಾಗಬೇಕು. ಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳುವ ಯಶಸ್ವಿ ಚಿಂತಕರೇ ಬದುಕಿನಲ್ಲಿ ಶ್ರೇಷ್ಠರಾಗುತ್ತಾರೆ ಎಂದರು. ಕಾಲೇಜಿನ ಪ್ರಾಂಶುಪಾಲೆ…
ನಮ್ಮತನವನ್ನು ಉಳಿಸಿಕೊಳ್ಳುವುದೇ ಬದುಕಿನ ನಿಜವಾದ ಮೌಲ್ಯ: ಓಂ ಗಣೇಶ್ ಕುಂದಾಪುರ: ಬದುಕಿನಲ್ಲಿ ಮೊದಲು ಸಿದ್ಧಿಯನ್ನು ಸಾಧಿಸಿದರೆ ಮಾತ್ರ ಪ್ರಸಿದ್ಧಿಯನ್ನು ಪಡೆಯಬಹುದು. ನಿಮ್ಮ ನೆಚ್ಚಿನ ಕ್ಷೇತ್ರ ಯಾವುದೇ ಆಗಿರಲಿ ಅಲ್ಲಿಯೇ ಇದ್ದು ಸಾಧಿಸಿ. ಸಣ್ಣ ಸಣ್ಣ ಗೆಲುವನ್ನು ನಮ್ಮದು ಮಾಡಿಕೊಳ್ಳುತ್ತಲೇ ಯಶಸ್ವೀ ವ್ಯಕ್ತಿಗಳಾಗಿ ಬೆಳೆಯಬಹುದು ಎಂದು ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ, ವಾಗ್ಮಿ ಓಂ ಗಣೇಶ್ ಉಪ್ಪುಂದ ಹೇಳಿದರು ಅವರು ಕುಂದಾಪ್ರ ಡಾಟ್ ಕಾಂ ಅಂತರ್ಜಾಲ ಪತ್ರಿಕೆಯು ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ’ಪರಿವರ್ತನೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು. ಟಿ.ವಿ., ಕಂಪ್ಯೂಟರ್, ಮೊಬೈಲ್‌ಗಳು ಯುವಜನರ ಭಾವನೆಗಳನ್ನು ಸಂಪೂರ್ಣ ನಾಶಮಾಡಿ ಮೇಸ್ತರದ ತೆವಲಾಗಿ ಪರಿಣಮಿಸಿವೆ. ಇವೆಲ್ಲವೂ ಮಾಹಿತಿಯ ಮೂಲವಾಗುವುದೇ ಹೊರತು ಅನುಭವಗಳನ್ನು ಕಟ್ಟಿಕೊಡುವುದಿಲ್ಲ. ಸಾಧ್ಯವಾದಷ್ಟು ನಮ್ಮವರನ್ನು ಪ್ರೀತಿಸೋದನ್ನು ಕಲಿಯೋಣ. ನಮ್ಮ ಹಿರಿಯರು ಪ್ರಕೃತಿಯೊಂದಿಗೆ ಬದುಕುವ; ನಮ್ಮ ದೇಶ, ಜನ, ಸಂಸ್ಕೃತಿ, ಆಚಾರ ವಿಚಾರಗಳೊಂದಿಗೆ ಬದುಕುವ ಮೌಲ್ಯ ನಮ್ಮದಾಗಬೇಕು. ಮೌಲ್ಯಗಳನ್ನು ತಮ್ಮದಾಗಿಸಿಕೊಳ್ಳುವ…
