ಕೊಲ್ಲೂರು: ವಂಡ್ಸೆ ಸಮೀಪದ ಹಬ್ಬಿ ಹರವರಿ ನಿವಾಸಿ ದಲಿತ ಮಹಿಳೆಯೋರ್ವರಿಗೆ, ಆಕೆ ದುಡಿಯುತ್ತಿರುವ ಗೇರುಬೀಜ ಕಟ್ಟಿಂಗ್ ಉದ್ಯಮಿ ಹಬ್ಬಿ ಹರವರಿಯ ನಿವಾಸಿ ಮನೋಹರ ಗಾಣಿಗ ಎಂಬುವವರು ಆಕೆ ಗೇರುಬೀಜ ಕದ್ದೊಯ್ದಿರುವುದಾಗಿ ಸುಳ್ಳು ಆರೋಪ ಹೊರಿಸಿ ರೀಪಿನಿಂದ ಹೊಡೆದು ಕೈಹಿಡಿದು ಎಳೆದು ದೌರ್ಜನ್ಯ ಎಸಗಿರುವುದಾಗಿ ಕೊಲ್ಲೂರು ಠಾಣೆಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ. ಕೊಲ್ಲೂರು ಎಸ್.ಐ. ಜಯಂತ್ ಅವರು ಪ್ರಕರಣ ದಾಖಲಿಸಿ ಡಿವೈಎಸ್ಪಿ ಮಂಜುನಾಥ ಶೆಟ್ಟಿಯವರು ಪೂರ್ಣ ತನಿಖೆ ನಡೆಸುತ್ತಿದ್ದಾರೆ.
Author: ಸುನಿಲ್ ಹೆಚ್. ಜಿ. ಬೈಂದೂರು
ಇಂಟರ್ನೆಟ್ ಬಳಕೆದಾರರಿಗೆ ಹೊಸ ಕಂಟಕವೊಂದು ಎದುರಾಗಿರುವ ಬಗ್ಗೆ ಸಾಕಷ್ಟು ಚರ್ಚೆಗಳೆದ್ದಿದೆ. ನಿಮ್ಮಿಷ್ಟದ ತಾಣಗಳನ್ನು ವೀಕ್ಷಿಣೆಯನ್ನು ನಿಯಂತ್ರಿಸಲು ಮೊಬೈಲ್ ಸೇವಾ ಕಂಪೆನಿಗಳು ಮುಂದಾಗಿರುವ ಪರಿಣಾಮ ಅಂತರ್ಜಾಲವನ್ನು ಅವಲಂಬಿಸಿರುವ ವ್ಯವಹಾರಗಳು ದುಬಾರಿಯಾಗಬಹುದು ಅಥವಾ ನಿಮ್ಮ ಇಷ್ಟದ ಅಂತರ್ಜಾಲ ತಾಣಗಳು ತೆರೆದುಕೊಳ್ಳದೆ ಇರಬಹುದು. ಒಂದು ವೇಳೆ ಅದು ತೆರೆದುಕೊಂಡರೂ ಹೆಚ್ಚಿಗೆ ಸಮಯ ತೆಗೆದುಕೊಳ್ಳಬಹುದು. ಹೀಗೆ ಜಾಲತಾಣಿಗರ ಸ್ವಾತಂತ್ರ್ಯವನ್ನು ಹಿಡಿದಿಡುವ ಪ್ರಯತ್ನಕ್ಕೆ ಮೊಬೈಲ್ ಸೇವಾ ಕಂಪೆನಿಗಳು ಮುಂದಾಗಿರುವುದಕ್ಕೆ ಭಾರತ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ವಿರೋಧ ವ್ಯಕ್ತವಾಗಿದೆ. ಹೇಗಿದು? ಸೇವಾ ಕಂಪೆನಿಗಳು ತಮಗೆ ಹಣ ನೀಡುವ ಕಂಪೆನಿಗಳ ವೆಬ್ಸೈಟ್ನ್ನು ಉಚಿತವಾಗಿ ನೋಡಲು ಅವಕಾಶ ನೀಡುತ್ತದೆ ಅಥವಾ ವೇಗವಾಗಿ ಓಪನ್ ಆಗುವಂತೆ ಮಾಡುತ್ತದೆ. ಯಾರು ಸೇವಾ ಕಂಪೆನಿಗಳಿಗೆ ಹಣ ನೀಡುವುದಿಲ್ಲವೋ ಆ ಕಂಪೆನಿಗಳ ವೆಬ್ಸೈಟ್ನ್ನು ಬ್ಲಾಕ್ ಮಾಡುತ್ತಾರೆ ಅಥವಾ ತಡವಾಗಿ ಓಪನ್ ಆಗುವಂತೆ ವ್ಯವಸ್ಥೆ ರೂಪಿಸುತ್ತದೆ. ಸೇವಾ ಕಂಪೆನಿಗಳ ಈ ನಿಯಂತ್ರಿತ ನಡೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು ನೆಟ್ ನ್ಯೂಟ್ರಾಲಿಟಿಗೆ ಆಗ್ರಹಿಸುತ್ತಿದ್ದಾರೆ. ಸರಕಾರದ ನಡೆ…
ಹೆಮ್ಮಾಡಿ: ಸಿಗಡಿ ಕೃಷಿ ಲಾಭದಾಯಕ ಉದ್ಯಮವಾಗಿ ಬೆಳೆದಿದ್ದರೂ ಸಿಗಡಿ ಕೃಷಿಕರು ಹತ್ತು- ಹಲವು ಸವಾಲುಗಳು ಎದುರಿಸುತ್ತಿದ್ದಾರೆ. ಕುಂದಾಪುರ ತಾಲೂಕಿನಲ್ಲಿ 20 ವರ್ಷಗಳ ಹಿಂದೆ ಸಿಗಡಿ ಕೃಷಿ ಪರಿಚಯವಾಗಿದ್ದು, 200ಕ್ಕೂ ಅಧಿಕ ಸಂಖ್ಯೆಯಲ್ಲಿ ಇದ್ದ ಸಿಗಡಿ ಕೃಷಿ ಬೆಳೆಗಾರರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಇಳಿಮುಖ ಕಂಡಿದೆ. ಸರಕಾರದ ಸಹಾಯಹಸ್ತ, ಉತ್ತೇಜನ ಕ್ಷೀಣವಾಗಿದ್ದರಿಂದ ಸಿಗಡಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಪ್ರಸಾದ್ ಅಡ್ಯಂತಾಯ ಅವರು ಹೇಳಿದರು. ಸಿಗಡಿ ಬೆಳೆಗೆ ಅಗತ್ಯವಾದ ಆಹಾರ ವಿತರಕರಾದ ತ್ರಾಸಿಯ ಮಹಾಗಣಪತಿ ಟ್ರೇಡಿಂಗ್ ಸರ್ವೀಸಸ್ ಇದರ ಆರಂಭೋತ್ಸವ ಅಂಗವಾಗಿ ಆವಂತಿ ಫೀಡ್ಸ್ ಲಿಮಿಟೆಡ್ ಸಂಸ್ಥೆ ಸಹಭಾಗಿತ್ವದೊಂದಿಗೆ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ಜರಗಿದ ಸಿಗಡಿ ಕೃಷಿಕರ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಿಗಡಿ ಕೃಷಿಕರ ಹಿತಚಿಂತನೆಗಿಂತ ಕೇವಲ ತಮ್ಮ ಉತ್ಪನ್ನಗಳ ಮಾರುಕಟ್ಟೆಗಾಗಿ ಬರುವ ಕಂಪೆನಿಗಳ ಆಸೆ, ಆಮಿಷಗಳಿಗೆ ಸಿಗಡಿ ಕೃಷಿಕರು ಬಲಿಬೀಳದೇ ಉತ್ತಮ ಗುಣಮಟ್ಟದ ಸಿಗಡಿ ಆಹಾರವನ್ನು ಪೂರೈಸುವ ಡೀಲರುಗಳೊಂದಿಗೆ ಬಾಂಧವ್ಯ…
ಕುಂದಾಪುರ: ಮಣಿಪಾಲ ಅಕಾಡೆಮಿಯ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಭಂಡಾರ್ಕಾರ್ ಕಾಲೇಜು ನೀಡುತ್ತಿರುವ ಅತ್ಯುತ್ತಮ ಕೃತಿ ಪ್ರಶಸ್ತಿಗೆ 2013-2014ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಸಣ್ಣ ಕಥಾ ಸಂಕಲನವನ್ನು ಆಹ್ವಾನಿಸಲಾಗಿದೆ. ಡಾ| ಎಚ್. ಶಾಂತಾರಾಮ್ ಅವರು ಶಿಕ್ಷಣ, ಸಾಹಿತ್ಯ, ಸಂಸ್ಕೃತಿಗಳಲ್ಲಿ ಅಪಾರ ಆಸಕ್ತಿ ಉಳ್ಳವರು. ಜತೆಗೆ ಕ್ರಿಯಾಶೀಲ ವ್ಯಕ್ತಿಗಳನ್ನು, ಸೃಜನಶೀಲ ಮನಸ್ಸುಗಳನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತ ಬಂದಿದ್ದು, ಉಡುಪಿ – ಮಣಿಪಾಲ – ಕುಂದಾಪುರ ಪರಿಸರವನ್ನು ಸಾಹಿತ್ಯಕ ಚಟುವಟಿಕೆ, ನಾಟಕ, ಯಕ್ಷಗಾನ ಪ್ರದರ್ಶನಗಳ ಮೂಲಕ ಸಾಂಸ್ಕೃತಿಕವಾಗಿ ಗಟ್ಟಿಗೊಳ್ಳುವಂತೆ ಮಾಡುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಕಥಾ ಸಂಕಲನದ ನಾಲ್ಕು ಪ್ರತಿಗಳನ್ನು ಎ. 30ರೊಳಗೆ ಡಾ| ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ, ಭಂಡಾರ್ಕಾರ್ ಕಾಲೇಜು ಕುಂದಾಪುರ – 576201 ವಿಳಾಸಕ್ಕೆ ಕಳುಹಿಸಿಕೊಡುವಂತೆ ಕೋರಲಾಗಿದೆ. ಪ್ರಶಸ್ತಿಯು 15,000 ರೂ. ನಗದು ಮತ್ತು ಬೆಳ್ಳಿಯ ಫಲಕವನ್ನು ಒಳಗೊಂಡಿದೆ. ಅಗಸ್ಟ್ 13ರಂದು ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಾಹಿತಿಗಾಗಿ 08254-230369 ಅಥವಾ 9449257263 ಸಂಪರ್ಕಿಸಬಹುದು ಎಂದು…
ಕುಂದಾಪುರ: ಅಲ್ಲಿ ಒಂದಿಷ್ಟು ವಿದ್ಯಾರ್ಥಿಗಳು ಹಾಡು ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದರೆ, ಮತ್ತೊಂದಿಷ್ಟು ಮಂದಿ ಚನ್ನೆಮಣೆಯಂತಹ ಅಪರೂಪದ ಆಟವಾಡುತ್ತಿದ್ದರು. ಕೆಲವರು ಜೇಡಿಮಣ್ಣಿನ ಮಾದರಿಗಳನ್ನು ತಯಾರಿಸುತ್ತಿಸುತ್ತಿದ್ದರೇ, ಕೆಲವರು ಇನ್ನೂ ಮುಂದೆ ಹೋಗಿ ರಗೋಲಿ, ಕುಂಟೆಬಿಲ್ಲೆ ಮುಂತಾದ ಆಟಗಳನ್ನಾಡುವುದರಲ್ಲಿ ಮಗ್ನರಾಗಿದ್ದರು. ಆದರೆ ಇಲ್ಯಾವುದೇ ಸ್ವರ್ಧೆ ಇರಲಿಲ್ಲ. ಬದಲಿಗೆ ವಿದ್ಯಾರ್ಥಿಗಳ ಪ್ರತಿಭೆಯ ಪ್ರದರ್ಶನಕ್ಕೊಂದು ಸಂದರ ವೇದಿಕೆ ನಿರ್ಮಾಣವಾಗಿತ್ತು. ಇಂತಹ ಅಪರೂಪದ ವೇದಿಕೆ ನಿರ್ಮಾಣಗೊಂಡಿದ್ದು ಕುಂದಾಪುರದಲ್ಲಿ ನಡೆದ ‘ಮಕ್ಕಳ ಹಬ್ಬ’ದಲ್ಲಿ. ಇಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ, ಕುಂದಾಪುರ ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕುಂದಾಪುರದ ಪಿ.ವಿ.ಎಸ್. ಸರೋಜಿನಿ ಮಧುಸೂದನ ಕುಶೆ ಸರಕಾರಿ ಪ್ರೌಡಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ‘ಮಕ್ಕಳ ಹಬ್ಬ’ ಹಲವು ವಿಶೇಷತೆಗಳೊಂದಿಗೆ ಸುಂದರವಾಗಿ ಮೂಡಿಬಂದಿತ್ತು. 18ವರ್ಷದೊಳಗಿನವರಿಗಾಗಿ ಆಯೋಜಿಸಿದ್ದ ಮಕ್ಕಳ ಹಬ್ಬದಲ್ಲಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರುವ ಪ್ರಯತ್ನವನ್ನು ಮಾಡಲಾಗಿತ್ತು. ಜಿಲ್ಲೆಯ ವಿವಿಧ ಸರಕಾರಿ ಹಾಗೂ ವಸತಿ ಶಾಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಹಾಡು, ನೃತ್ಯ, ಏಕಪಾತ್ರ…
ಕೋಟ: ಇಲ್ಲಿನ ಡಾ. ಶಿವರಾಂ ಕಾರಂತ ಅವರ ಹೆಸರಿನಲ್ಲಿ ನಿರ್ಮಾಣಗೊಂಡ ಡಾ. ಕೋಟ ಶಿವರಾಂ ಕಾರಂತ ಥೀಂ ಪಾರ್ಕ್ ಅಭೂತಪೂರ್ವ ಕಲ್ಪನೆಯಾಗಿದ್ದು, ಇದರ ನಿರ್ವಹಣೆ ಮಾಡುತ್ತಿರುವ ಸ್ಥಳಿಯ ಪಂಚಾಯತ್ ಕಾರ್ಯ ಅಭಿನಂದನಾರ್ಹ. ಕಾರಂತರ ಆದರ್ಶಗಳು ಎಲ್ಲೆಡೆ ಪಾಲನೆಯಾಗಬೇಕಾಗಿದೆ. ಕೋಟದ ಕಾರಂತ ಥೀಂ ಪಾರ್ಕಿಗೆ ಈ ಸಾಲಿನ ಬಜೇಟಿನಲ್ಲಿ ಬಿಡುಗಡೆಯಾದ 1 ಕೋಟಿ ರೂ.ವನ್ನು ಶೀಘ್ರ ಬಿಡುಗಡೆಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಪ್ರವಾಸೋಧ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ. ಅವರು ಬುಧವಾರ ಕೋಟದ ಕಾರಂತ ಥೀಂ ಪಾರ್ಕಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು. ಕಾರಂತ ಥೀಂ ಪಾರ್ಕಿನ ಮುಂಭಾಗದಲ್ಲಿರುವ ಡಾ. ಶಿವರಾಮ ಕಾರಂತರ ಪ್ರತಿಮೆಗೆ ಹೂ ಮಾಲೆ ಅರ್ಪಿಸಿದ ಅವರು ಥೀಂ ಪಾರ್ಕಿನ ಒಳಭಾಗದಲ್ಲಿರುವ ಗ್ರಂಥಾಲಯ, ಸಭಾಂಗಣವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಕೋಟ ಅಮ್ರಥೇಶ್ವರಿ ದೇವಳಕ್ಕೆ ಭೇಟಿ: ಹಲವು ಮಕ್ಕಳ ತಾಯಿ ಎಂದೇ ಕರೆಯಲ್ಪಡುವ ಕೋಟದ ಶ್ರೀ ಅಮ್ರಥೇಶ್ವರೀ ದೇವಳಕ್ಕೆ ಭೇಟಿ ನೀಡಿದ ಸಚಿವರು ದೇವಳದಲ್ಲಿ ವಿಶೇಷ…
ಕುಂದಾಪುರ: ಇನ್ನು ಕೆಲವೇ ವರ್ಷಗಳಲ್ಲಿ ಭಾರತ ಒಂದು ಸೂಪರ್ ಪವರ್ ರಾಷ್ಟ್ರವಾಗುವುದು ಖಚಿತ. ದೇಶದ ಆಸ್ತಿಯಾಗಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸನ್ನು ಕಾಣಬೇಕಿದೆ. ಯೋಗ್ಯರಾದವರು ಮಾತ್ರ ಎಲ್ಲವನ್ನೂ ಎದುರಿಸಿ ಗೌರವಯುತವಾಗಿ ಬಾಳುತ್ತಾರೆ ಎಂದು ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ ದೇಶಪಾಂಡೆ ಹೇಳಿದರು. ಅವರು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಥಾಕರ ದಿನಾಚರಣೆಯಂದು ಕಾಲೇಜಿನ ಸಂಸ್ಥಾಪಕ ಐ.ಎಂ. ಜಯರಾಮ ಶೆಟ್ಟಿ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡುತ್ತಿದ್ದರು. ಇಂದು ವಿಶ್ವ ಸಣ್ಣ ಹಳ್ಳಿಯಂತಾಗಿದೆ. ಕ್ಷಣಮಾತ್ರದಲ್ಲಿ ಜಗತ್ತಿನ ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಪುಸ್ತಕದ ಹುಳುವಾಗದೇ ಸಾಮಾನ್ಯ ಜ್ಞಾನವನ್ನೂ ಹೊಂದಿ ಭಾರತ ವಿಶ್ವ ಮಾರುಕಟ್ಟೆಯೊಂದಿಗೆ ನಡೆಯುತ್ತಿರುವ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಬೇಕಿದೆ. ಇದಕ್ಕೆ ಪೂರಕವಾಗಿ ನಾವು ಕೌಶಲಾಭಿವೃದ್ಧಿಗೆ ಅಗತ್ಯವಾದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಐ.ಎಂ.ಜೆ ಫೌಂಡೇಶನ್ ಲೋಕಾರ್ಪಣೆಗೊಳಿಸಿದರು. ಮಾಜಿ ಶಾಸಕ ಬಿ…
ಕುಂದಾಪುರ: ಅಂತೂ ಇಂತೂ ವಾರಾಹಿ ನೀರಾವರಿ ಕಾಲುವೆಯಲ್ಲಿ ಪ್ರಾಯೋಗಿಕವಾಗಿ ನೀರು ಹರಿಸುವ ಮೂಲಕ 36 ವರ್ಷಗಳಿಂದ ಆಮೆ ನಡಿಗೆಯಂತೆ ಸಾಗಿಬಂದ ಯೋಜನೆಗೆ ಹಸಿರು ನಿಶಾನೆ ತೋರಿಸುವ ಸೂಚನೆ ದೊರೆತಿದೆ. ಯೋಜನೆಯ ಆರಂಭದ ಪ್ರದೇಶವಾದ ಹೊಳೆ ಶಂಕರನಾರಾಯಣದಲ್ಲಿರುವ ಮುಖ್ಯ ಅಣೆಕಟ್ಟಿನಿಂದ 0.36ಕಿ.ಮೀ ದೂರದವರೆಗೆ ಪ್ರಾಯೋಗಿಕವಾಗಿ ಎರಡು ದಿನದ ಹಿಂದೆ ನೀರು ಹಾಯಿಸಲಾಗಿದ್ದು ವಾರಾಹಿ ಕಾಲುವೆಯ ಕನಸು ಕಾಣುತ್ತಿದ್ದ ರೈತರಲ್ಲಿ ಹೊಸ ಹುರುಪು ಮೂಡಿದೆ. ಸಾಕಷ್ಟು ಹೋರಾಟಗಳ ಬಳಿಕ ಸುಧೀರ್ಘ ಯೋಜನೆಗೊಂದು ಅಂತ್ಯ ಹಾಡಲು ಅಂತಿಮ ಹಂತದ ಸಿದ್ಧತೆಗಳು ನಡೆದಿದ್ದು ಎಪ್ರಿಲ್ ತಿಂಗಳಿನಲ್ಲಿಯೇ ಉದ್ಘಾಟನೆಗೊಳ್ಳುವ ಲಕ್ಷಣಗಳು ಗೋಚರಿಸಿವೆ. ವಾರಾಹಿ ಯೋಜನೆ: 36 ವರ್ಷಗಳ ಕನಸು 1979ರಲ್ಲಿ ಸುಮಾರು 15,702 ಹೆಕ್ಟೆರ್ ಪ್ರದೇಶಕ್ಕೆ ನೀರುಣಿಸುವ ಉದ್ದೇಶದಿಂದ ಮಹತ್ವಾಕಾಂಕ್ಷೆಯ ವಾರಾಹಿ ನೀರಾವರಿ ಯೋಜನೆಯನ್ನು ಕೈಗೆತ್ತಿಗೊಳ್ಳಲಾಗಿತ್ತು. ಹೊಸಂಗಡಿ ಗ್ರಾಮದ ಹೊಳೆಶಂಕರನಾರಾಯಣದ ಮೂಲಕ ಹರಿಯುವ ವಾರಾಹಿ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಿ ರೈತರ ಜಮೀನಿಗೆ ವಾರಾಹಿ ನದಿಯ ಎರಡೂ ದಿಕ್ಕಿನಲ್ಲಿ 0.42 ಕಿಮೀ ಉದ್ದದ ಬಲದಂಡೆ ಹಾಗೂ 0.36 ಕಿಮೀ…
ಪ್ರವಾಹದ ಜೊತೆ ಕೊಚ್ಚಿ ಹೋಗುವ ಬದಲು, ಪ್ರವಾಹದೊಂದಿಗೆ ಹರಿದು ಬದುಕುವುದು ಜಾಣತನ: ದುಂಡಿರಾಜ್ ಹನಿಗವನವನ್ನು ಸಾಹಿತ್ಯದ ಒಂದು ಪ್ರಕಾರ ಎಂದು ಗುರುತಿಸಲು ಹಿಂಜರಿಯುತ್ತಿದ್ದ ಕಾಲದಲ್ಲಿ ಹನಿಗವನದಲ್ಲೇ ತನ್ನ ಸಾಹಿತ್ಯ ಕೃಷಿಯನ್ನು ಮುಂದುವರಿಸಿ ಅದಕ್ಕೊಂದು ಮಾನ್ಯತೆ ತಂದುಕೊಟ್ಟವರು ಹನಿಗವಿ ದುಂಡಿರಾಜ್. ತನ್ನ ನಾಲ್ಕೈದು ಸಾಲಿನ ಕವಿತೆಯ ಮೂಲಕ ಕೋಟ್ಯಾಂತರ ಕನ್ನಡಿಗರ ಮನಸ್ಸನ್ನು ಗೆದ್ದ ದುಂಡಿರಾಜ್ ಕುಂದಾಪುರದ ಹಟ್ಟಿಕುದ್ರಿನವರು ಎಂಬುದು ನಮ್ಮೆಲ್ಲರ ಹೆಮ್ಮೆ. ದುಂಡಿರಾಜ್ ಅವರು ಹನಿಗವಿ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಅದರೆ ಅವರು ಹವಿಗವಿಯಾಗುವುದಕ್ಕೂ ಮೊದಲು ಉತ್ತಮ ಬರಹಗಾರರಾಗಿದ್ದರು, ನೀಳ್ಗವಿತೆಗಳನ್ನು ಬರೆಯುತ್ತಿದ್ದರು, ನಾಟಕಗಳನ್ನು ರಚಿಸಿದ್ದರು ಎಂಬುದು ಬಹಳಷ್ಟು ಮಂದಿಗೆ ತಿಳಿದಿರದ ವಿಚಾರ. ಅವರು ಇತ್ತಿಚಿಗೆ ಖ್ಯಾತ ಜಾದೂಗಾರ ಓಂಗಣೇಶ್ ಉಪ್ಪುಂದ ಅವರ ಮನೆಯಲ್ಲಿ ಕುಂದಾಪ್ರ ಡಾಟ್ ಕಾಂ ಗೆ ಮಾತಿಗೆ ಸಿಕ್ಕಾಗ ತಮ್ಮ ಬದುಕು, ನಾಡು, ನುಡಿ, ಸಾಹಿತ್ಯದ ಆಗುಹೋಗುಗಳ ಬಗೆಗೆ ಕೆಲಹೊತ್ತು ಮಾತನಾಡಿದರು. ಅದರ ಪೂರ್ಣಪಾಠ ಇಲ್ಲಿದೆ. * ಸಾಹಿತಿಯಾಗಿ ಕನ್ನಡ ನಾಡು, ನುಡಿ, ಸಾಹಿತ್ಯಲೋಕವನ್ನು…
ಗಂಗೊಳ್ಳಿ: ಗಂಗೊಳ್ಳಿಯ ಮೀನುಗಾರರ ಬಹುಕಾಲದ ಬೇಡಿಕೆ ಕೊನೆಗೂ ಈಡೇರುವ ದಿನ ಸನ್ನಿಹಿತವಾಗಿದೆ. ಅನೇಕ ಬಾರಿ ಅವಘಡಗಳು ಸಂಭವಿಸಿದ ಮೇಲೆ ಮೀನುಗಾರರ ಹೋರಾಟದ ನಿರಂತರ ಫಲವಾಗಿ ಎಚ್ಚೆತ್ತುಕೊಂಡ ಸರಕಾರಗಳು, ಗಂಗೊಳ್ಳಿ ಅಳಿವೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಅನುಮೋದನೆ ನೀಡಿದೆ. ಈಗಾಗಲೇ ಹೂಳೆತ್ತಲು ಬೃಹತ್ ಯಂತ್ರಗಳು ಗಂಗೊಳ್ಳಿ ಬಂದರುವಿನಲ್ಲಿ ಲಂಗರು ಹಾಕಿದ್ದು ಎಪ್ರಿಲ್ 5ರಿಂದ ಕೆಲಸ ಆರಂಭಿಸುವ ಲಕ್ಷಣಗಳು ಗೋಚರಿಸುತ್ತಿದೆ. 1972ರಲ್ಲಿ ಹೂಳೆತ್ತಿದ್ದರು: ಗಂಗೊಳ್ಳಿ ಅಳಿವೆಯಲ್ಲಿ ಡ್ರೆಜ್ಜಿಂಗ್ ಸಮಸ್ಯೆ ಇಂದು ನಿನ್ನೆಯದಲ್ಲ. 1972ರಲ್ಲಿ ಮ್ಯಾಂಗನೀಸ್ ಅದಿರನ್ನು ಸಾಗುಸುವ ಸಂದರ್ಭದಲ್ಲಿ ಹೂಳು ತೆಗೆಯಲಾಗಿತ್ತು. ಆನಂತರದಲ್ಲಿ ಹೂಳು ತೆಗೆಯಬೇಕೆಂಬ ಬೇಡಿಕೆಯನ್ನು ಹಲವು ಬಾರಿ ಸರಕಾರದ ಮುಂದೆ ಇಟ್ಟಿದ್ದರಾದರೂ ಸ್ಪಂದನವಿರಲಿಲ್ಲ. ಮೂರು ವರ್ಷಗಳ ಹಿಂದೆ ರಾಜ್ಯ ಹಾಗೂ ಕೇಂದ್ರ ಸರಕಾರದ ಅನುದಾನದಲ್ಲಿ ಬ್ರೇಕ್ ವಾಟರ್ ನಿರ್ಮಾಣದ ಯೋಜನೆ ಕೈಗೆತ್ತಿಕೊಂಡಿದ್ದರಿಂದ ಹೂಳೆತ್ತುವ ವಿಚಾರ ಮರೆಮಾಚುವಂತಾಗಿತ್ತು. ಆದರೆ ಬಂದರು ಹಾಗೂ ಅಳಿವೆ ಭಾಗದಲ್ಲಿ ಹೂಳು ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗುತ್ತಿದ್ದ ಕಾರಣ ಬೋಟುಗಳು ಅಪಘಾತಕ್ಕೆ ತುತ್ತಾಗುತ್ತಿದ್ದವು. ಅದು ಕೆಲವು ಮೀನುಗಾರರು…
