ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ನಾವುಂದ ಪೇಟೆಯ ಬಳಿ ಮಹೇಂದ್ರ ಮಾಕ್ಸಿಮೋ ಮಿನಿ ಟ್ರಕ್ಹಾಗೂ ಬೈಕ್ ನಡುವೆ ನಡೆದ ಅಫಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಕೊನೆಯುಸಿರೆಳೆದ ಘಟನೆ ವರದಿಯಾಗಿದೆ. ನಾವುಂದ ನಿವಾಸಿ ಶಾಹಿಫ್ (25) ಮೃತಪಟ್ಟ ದುರ್ದೈವಿ. ಕುಂದಾಪ್ರ ಡಾಟ್ ಕಾಂ ಸುದ್ದಿ.
ನಾವುಂದಿಂದ ಮರವಂತೆಯತ್ತ ತೆರಳುತ್ತಿದ್ದ ಶಾಹಿದ್ ಬೈಕಿಗೆ ಎದುರಿನಿಂದ ಬಂದ ಗೂಡ್ಸ್ ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಅಲ್ಲಿಯೇ ಬಿದ್ದ ಶಾಹಿದ್ ಗೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಸ್ಥಳೀಯರು ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಸಾಗಿಸಿದರಾದರೂ ತಲೆಗೆ ಏಟು ಬಿದ್ದಿದ್ದರಿಂದ ಮಾರ್ಗಮಧ್ಯದಲ್ಲಿಯೇ ಅವರು ಮೃತಪಟ್ಟರು. ಶಾಹಿಫ್ ತಮ್ಮ ಫ್ಯಾನ್ಸಿ ಅಂಗಡಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










