ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾರಿನಲ್ಲಿ ಇರಿಸಿದ್ದ ಹಣವನ್ನು ಹಾಡುಹಗಲೇ ಲಪಟಾಯಿಸಿದ ಘಟನೆ ತಾಲೂಕಿನ ತಲ್ಲೂರು ಪೇಟೆಯಲ್ಲಿ ನಡೆದಿದೆ.
ಕೆಂಚನೂರು ಗ್ರಾಮದ ಕೆ. ಗುಂಡು ಶೆಟ್ಟಿ ಎಂಬುವವರು ತಲ್ಲೂರಿನ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ಗೆ ತೆರಳಿ 2.5 ಲಕ್ಷ ರೂ. ನಗದನ್ನು ಡ್ರಾ ಮಾಡಿಕೊಂಡಿದ್ದರು. ಅದರಲ್ಲಿ 2 ಲಕ್ಷ ರೂ.ಗಳನ್ನು ಕಾರಿನ ಡ್ಯಾಶ್ ಬೋರ್ಡ್ ನಲ್ಲಿಟ್ಟಿದ್ದರು. ಕಾರನ್ನು ತಲ್ಲೂರಿನ ಎಂಡಿ ಫ್ಲ್ಯಾಟಿನ ಎದುರು ಮುಖ್ಯರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿ ಅದೇ ಫ್ಲಾಟ್‌ನಲ್ಲಿರುವ ಮನೆಗೆ ಹೋಗಿದ್ದರು. ಸಂಜೆ ಕಾರಿನ ಬಳಿ ಬಂದಾಗ ಎಡಬದಿಯ ಬಾಗಿಲ ಗಾಜು ಒಡೆದಿರುವುದು ಕಂಡುಬಂದಿದೆ. ಬಾಗಿಲು ತೆರೆದು ನೋಡಿದಾಗ ಡ್ಯಾಶ್ ಬೋರ್ಡ್‌ನಲ್ಲಿಟ್ಟಿದ್ದ ನಗದು ಕಳವಾಗಿತ್ತು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










