Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಬೈಂದೂರು: ಕಾಲ್ತೋಡಿನಲ್ಲಿ ಪ್ರಾಚೀನ ಕನ್ನಡ ಶಾಸನ ಪತ್ತೆ
    Uncategorized

    ಬೈಂದೂರು: ಕಾಲ್ತೋಡಿನಲ್ಲಿ ಪ್ರಾಚೀನ ಕನ್ನಡ ಶಾಸನ ಪತ್ತೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಕುಂದಾಪುರ: ತಾಲೂಕಿನ ಕಾಲ್ತೋಡು ಗ್ರಾಮದ ಉಂತುನ ಹೊಳೆಯ ಈರಣ್ಣನ ಮಕ್ಕಿಯಲ್ಲಿ 13ನೇ ಶತಮಾನದ ಕನ್ನಡ ಶಾಸನವೊಂದು ಪತ್ತೆಯಾಗಿದೆ. ಶಿವಸ್ತುತಿಯೊಂದಿಗೆ ಪ್ರಾರಂಭವಾಗಿರುವ ಶಾಸನದಲ್ಲಿ ಶಕ ವರ್ಷ 1219 ರ ಉಲ್ಲೇಖವಿದ್ದು, ಅದು ಕ್ರಿ.ಶ. 1293ಕ್ಕೆ ಸರಿಹೊಂದುತ್ತದೆ. ಈ ಬಗ್ಗೆ ಸಂಶೋಧಕ ಎಂ.ಎಸ್.ಆರ್.ಎಸ್. ಕಾಲೇಜಿನ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಕುಂದಾಪ್ರ ಡಾಟ್ ಕಾಂ ಗೆ ತಿಳಿಸಿದ್ದಾರೆ.

    Click Here

    Call us

    Click Here

    ಪತ್ತೆಯಾಗಿರುವ ಶಾಸನದಲ್ಲಿ ಶ್ರೀ ಮತ್ಪ್ರಾಪ ಚಕ್ರವರ್ತಿ ದೇವರ‍್ಸ ಎಂಬ ಹೆಸರನ್ನು ಗುರುತಿಸಲಾಗಿದೆ. ಆದರೆ ಶಾಸನದ ವಿವರಗಳಿಂದ ಈ ದೇವರ‍್ಸ ಯಾರು ಎಂದು ಸ್ಪಷ್ಟವಾಗುವುದಿಲ್ಲ. ಶಾಸನೋಕ್ತ ಕಾಲದಲ್ಲಿ ನಾಗದೇವರ‍್ಸ ಎಂಬ ಆಳುಪ ದೊರೆ ತುಳುನಾಡಿನಲ್ಲಿ ಆಳ್ವಿಕೆ ನಡೆಸುತ್ತಿದ್ದ ಮಾಹಿತಿ ಇತರೆ ದಾಖಲೆಗಳಲ್ಲಿ ದೊರೆಯುತ್ತದೆ. ಆದ್ದರಿಂದ ಶಾಸನೋಕ್ತ ದೇವರ‍್ಸ ಆಳುಪ ದೊರೆ ನಾಗದೇವರ‍್ಸನೆಂದು ಭಾವಿಸಬಹುದಾಗಿದೆ. ಈತನ ಆಳ್ವಿಕೆಯ ಕಾಲದಲ್ಲಿ ಹೇರಳಿಯ ಅಂದರೆ ಈಗಿನ ಹೇರಂಜಾಲುವಿನ ಹೆಬ್ಬಾರಿಯರ ಮಠಕ್ಕೆ ಕೊಟ್ಟ ಭೂಮಿ ದಾನವನ್ನು ಶಾಸನದಲ್ಲಿ ದಾಖಲಿಸಲಾಗಿದೆ. ಶಾಸನದ ಕೊನೆಯಲ್ಲಿ ಶಾಪಾಶಯವಿರುವ ಬಗ್ಗೆ ತಿಳಿಸಲಾಗಿದೆ.

    ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ, ಎಡಬಲದಲ್ಲಿ ಎರಡು ನಂದಿಯ ಶಿಲ್ಪಗಳು, ತ್ರಿಶೂಲ, ದೀಪ, ಯೂಪ (ಬಲಿ ಪೀಠ) ಹಾಗು ನಿಧಿಕುಂಭದ ಉಬ್ಬುಶಿಲ್ಪಗಳಿವೆ. ಬಟ್ನಾಡಿಯ ರಾಮಯ್ಯ ಶೆಟ್ಟಿ ಈ ಶಾಸನದ ಇರುವಿಕೆಯನ್ನು ಗುರುತಿಸಿದ್ದು, ಕೊಲ್ಲೂರಿನ ಮುರುಳೀಧರ ಹೆಗ್ಡೆ ಮತ್ತು ರಾಘವೇಂದ್ರ ಐತಾಳ್ ಈ ಶಾಸನದ ಅಧ್ಯಯನಕ್ಕೆ ಸಹಕರಿಸಿದ್ದಾರೆ. ದ್ವಿತೀಯ ಬಿ.ಎ. ಪುರಾತತ್ವ ವಿದ್ಯಾರ್ಥಿಗಳಾದ ಅನಿಲ್, ರಾಜೇಶ್, ವಿಘ್ನೇಶ್, ಲೋಹಿತ್ ಮತ್ತು ಅಂತಿಮ ಎಂ.ಎ. ಪುರಾತತ್ವ ವಿದ್ಯಾರ್ಥಿ ಸುಭಾಷ್ ಹಾಗೂ ಉಂತುನ ಹೊಳೆಯ ಗೋಪಾಲ್ ಮತ್ತು ಕೊಠಾರಿ ಮನೆಯವರ ಶಾಸನವನ್ನು ಪ್ರತಿ ಮಾಡುವಲ್ಲಿ ಸಹಕಾರಿಸಿದ್ದಾರೆ.

    [quote font_size=”15″ bgcolor=”#ffffff” bcolor=”#d6d6d6″ arrow=”yes”]ಶಾಸನೋಕ್ತ ಹೆಬ್ಬಾರಿಯರ ಮಠವನ್ನು ಈಗ ಹೇರಂಜಾಲು ಮಠವೆಂದು ಕರೆಯಲಾಗುತ್ತದೆ. ತುಳುನಾಡಿನ ಹೆಬ್ಬಾರರು ಮೂಲತಃ ಕಂದಾವರದ ಕುಲಕ್ಕೆ ಸೇರಿದವರು, ಪ್ರಸ್ತುತ ಹೇರಂಜಾಲು ಮಠದ ಉಡುಪರ ಕುಲದೇವರು ಕಂದಾವರದ ಕಾರ್ತೀಕನೆ. ಆದರೆ ಹೇರಂಜಾಲು ಮಠದ ಆರಾಧ್ಯ ದೇವತೆ ಶ್ರೀಲಕ್ಷ್ಮಿ. ಲಕ್ಷ್ಮಿಯೂ ಮೂಲತಃ ಶೈವ ದೇವತೆಯೇ. ಶಾಸನದಲ್ಲಿನ ನಿಧಿಕುಂಭದ ಉಬ್ಬುಶಿಲ್ಪ ಸಹ ಮಠದ ಆದಿಲಕ್ಷ್ಮಿಗೆ ನೀಡಿದ ದಾನವೆಂಬುದನ್ನು ಸ್ಪಷ್ಟಪಡಿಸುತ್ತದೆ. ಶಾಸನೋಕ್ತ ಹೆಬ್ಬಾರಿಯರ ಮಠ ಆದಿಶಕ್ತಿ ಆರಾಧನೆಯ ಕರ್ನಾಟಕದ ಅತ್ಯಂತ ಪ್ರಾಚೀನ ಮಠ ಎನ್ನುವುದು ಈ ಶಾಸನದ ಮಹತ್ವದ ವಿಷಯವಾಗಿದೆ.  -ಪ್ರೊ. ಟಿ. ಮುರುಗೇಶಿ, ಇತಿಹಾಸ ಮತ್ತು ಪುರಾತತ್ವ ವಿಭಾಗ, ಎಂ.ಎಸ್.ಆರ್.ಎಸ್. ಕಾಲೇಜು, ಶಿರ್ವ [/quote]

    ancient inscription discovered in Kalthodu - Byndoor (2) ancient inscription discovered in Kalthodu - Byndoor (3)

    Click here

    Click here

    Click here

    Click Here

    Call us

    Call us

    Ancient inscription discovered Byndoor Kalthodu
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಖಂಬದಕೋಣೆ ಸೊಸೈಟಿ: ನಿವೃತ್ತ ಶಾಖಾ ವ್ಯವಸ್ಥಾಪಕರಿಗೆ ಬೀಳ್ಕೊಡುಗೆ, ಸನ್ಮಾನ

    20/05/2026

    ಪಡುಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಹಾಗೂ ಗಣಕಯಂತ್ರ ಹಸ್ತಾಂತರ ಸಮಾರಂಭ

    20/05/2026

    ಎಸ್.ಎಸ್.ಎಲ್.ಸಿ: ರಾಜ್ಯಕ್ಕೆ 5ನೇ ರ್ಯಾಂಕ್‌ ಪಡೆದ ವಿದ್ಯಾರಣ್ಯ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಶಾಲೆಗೆ ಶೇ.100 ಫಲಿತಾಂಶ

    23/04/2026
    Leave A Reply Cancel Reply

    1 × 3 =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.