ಕುಂದಾಪ್ರ ಡಾಟ್ ಕಾಂ ಸುದ್ದಿ
ಕೋಟ: ವಿಧಾನಪರಿಷತ್ ವಿಪಕ್ಷ ನಾಯಕನಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿ ಬಳಗ ಮತ್ತು ಬಿಜೆಪಿಯ ಪ್ರಮುಖ ಕಾರ್ಯಕರ್ತರು ಕೋಟ ರಾಷ್ಟ್ರೀಯ ಹೆದ್ದಾರಿ ಅಮೃತೇಶ್ವರಿ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ ಗೋಪಾಲ ಬಂಗೇರ ಎಂ.ಸುಬ್ರಾಯ ಆಚಾರ್ಯ,ಉಮೇಶ್ ಪೂಜಾರಿ ಕಲ್ಮಾಡಿ,ಸಂಜೀವ ಪೂಜಾರಿ ,ಶ್ರೀಧರ ಗಾಣಿಗ ಕಲ್ಮಾಡಿ,ಅನಂತ ಪ್ರಭು,ಅಭಿಮಾನಿ ಬಳಗದ ಪ್ರಸಾದ್ ಬಿಲ್ಲವ,ಸುರೇಶ್ ಗಿಳಿಯಾರು ಮಂಜುನಾಥ ಗಿಳಿಯಾರು, ರಾಘವೇಂದ್ರ ಶೆಟ್ಟಿ ಗಿಳಿಯಾರು, ಶಿವರಾಜ್ ಪೂಜಾರಿ ,ಅವಿನಾಶ್ ಶೆಟ್ಟಿ,ಭರತ್ ಶ್ರೀಯಾನ್ ಕಲ್ಮಾಡಿ,ರಘು,ಪೂಜಾರಿ,ರಾಜು ಕೆ.ಎಸ್,ಉದಯ ತಿಂಗಳಾಯ,ಪ್ರಶಾಂತ್ ಸೂರ್ಯ,ನವೀನ್ ಮಣೂರು ಮುಂತಾದವರು ಉಪಸ್ಥಿತರಿದ್ದರು.
ಕೋಟ ಶ್ರೀನಿವಾಸ ಪೂಜಾರಿಯವರ ಅಭಿಮಾನಿಗಳು ಪಟಾಕಿ ಸಿಡಿಸಿದ ನಂತರ ಆ ಸ್ಥಳವನ್ನು ಸ್ವಚ್ಚಗೊಳಿಸಿ ಸಾರ್ವಜನಿಕರ ಪ್ರಶಂಸೆಗೆ ಪ್ರಾತ್ರರಾದರು.










