Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಪ್ರಜೆಗಳ ಆಡಳಿತ ಉತ್ತಮ ಪ್ರಜಾಕೀಯದ ಗುರಿ: ವೆಂಕಟೇಶ ಆರ್.
    ಊರ್ಮನೆ ಸಮಾಚಾರ

    ಪ್ರಜೆಗಳ ಆಡಳಿತ ಉತ್ತಮ ಪ್ರಜಾಕೀಯದ ಗುರಿ: ವೆಂಕಟೇಶ ಆರ್.

    Updated:11/04/2019No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಬೈಂದೂರು: ‘ದೇಶದಲ್ಲಿ ನಡೆಯುತ್ತಿರುವ ವ್ಯಾಪಾರಿ ಪ್ರವೃತ್ತಿಯ ರಾಜಕಾರಣಿಗಳ ಆಡಳಿತದಿಂದ ಪ್ರಜಾತಂತ್ರ ವ್ಯವಸ್ಥೆ ಅರ್ಥ ಕಳೆದುಕೊಂಡಿದೆ. ಅದರ ಸ್ಥಾನದಲ್ಲಿ ಪ್ರಜೆಗಳ ಆಡಳಿತ ಅಥವಾ ಪ್ರಜಾಕೀಯ ನೆಲೆಗೊಳಿಸಬೇಕು ಎನ್ನುವುದು ಚಿತ್ರನಟ ಉಪೇಂದ್ರ ಸಾರಥ್ಯದ ‘ಉತ್ತಮ ಪ್ರಜಾಕೀಯ ಪಕ್ಷ’ದ ಉದ್ದೇಶ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ  ಪಕ್ಷದ ಅಭ್ಯರ್ಥಿ ವೆಂಕಟೇಶ ಆರ್. ಹೇಳಿದರು.

    Click Here

    Call us

    Click Here

    ಬುಧವಾರ ಇಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇಂದಿನ ಚುನಾವಣೆ ಮತ್ತು ರಾಜಕೀಯದಲ್ಲಿ ಹಣ ಮತ್ತು ತೋಳ್ಬಲ ಮೇಲುಗೈ ಸಾಧಿಸುತ್ತಿವೆ. ಅಭ್ಯರ್ಥಿ ಚುನಾವಣೆ ಗೆಲ್ಲಲು ಹಣ ಹೂಡಿದಾಗ ಗೆದ್ದ ಬಳಿಕ ಲಾಭಸಹಿತ ಹಿಂಪಡೆಯುವ ಅನಿವಾರ್ಯತೆ ಇದ್ದೇ ಇರುತ್ತದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಮಾಡುವ ದುಷ್ಪರಿಣಾಮವನ್ನು ಕಾಣುತ್ತಿದ್ದೇವೆ. ಭ್ರಷ್ಟಾಚಾರದ ಸಾಂಸ್ಥೀಕರಣ ಆಗಿಬಿಟ್ಟಿದೆ. ಪ್ರಜಾಕೀಯ ಇದಕ್ಕೆ ಪರ್ಯಾಯ ಎನಿಸಿದೆ. ಅದು ಜನರ ಆಶೋತ್ತರಗಳನ್ನು, ಬೇಡಿಕೆಗಳನ್ನು ಈಡೇರಿಸುವ ಆಡಳಿತ ನೀಡಲು ಬದ್ಧವಾಗಿದೆ. ಅದು ಯಾವುದೇ ಪ್ರಣಾಳಿಕೆಯನ್ನು ಹೊಂದಿಲ್ಲ. ಪ್ರಚಾರಕ್ಕೆ ವೆಚ್ಚ ಮಾಡುವುದಿಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ಅದರ ಗುರಿ. ಕೆಟ್ಟುಹೋಗಿರುವ ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಅದು ಕೆಲಸ ಮಾಡುತ್ತಿದೆ. ಅದು ಜನರಿಗೆ ಈ ಸಂದೇಶವನ್ನು ಮುಟ್ಟಿಸಲು ಮಾಧ್ಯಮಗಳನ್ನು ಪ್ರಧಾನವಾಗಿ ನೆಚ್ಚಿಕೊಂಡಿದೆ’ ಎಂದು ಅವರು ಹೇಳಿದರು.

    ‘ತಮ್ಮ ಪ್ರಚಾರ ಮತ್ತು ಕಾರ್ಯ ವೈಖರಿಯ ಬಗ್ಗೆ ಹೇಳಿದ ಅವರು ಜನರ ಸಮಸ್ಯೆ, ಬೇಡಿಕೆಗಳನ್ನು ಪ್ರತಿ ಮನೆಗೂ ಪುಟ್ಟ ನಮೂನೆ ವಿತರಿಸಿ ಲಿಖಿತವಾಗಿ ಸಂಗ್ರಹಿಸಲಾಗುತ್ತಿದೆ. ಅದನ್ನು ಜನರ ಆದೇಶ ಎಂದು ಪರಿಗಣಿಸಿ ಆಡಳಿತ ವರ್ಗದ ಮುಂದಿರಿಸಿ, ಚರ್ಚಿಸಿ ಯೋಜನೆ ರೂಪಿಸಿ ಅನುಷ್ಠಾನಿಸಲಾಗುವುದು. ಎಲ್ಲ ಹಂತಗಳಲ್ಲೂ ಗರಿಷ್ಠ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಇರಲಿದೆ. ಇಡೀ ವ್ಯವಸ್ಥೆ ಪ್ರಜೆಗಳ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಎಂಬ ತತ್ವವನ್ನು ಆಧರಿಸಿರುತ್ತದೆ. ತಮ್ಮ ಪಕ್ಷದ ಅಭ್ಯರ್ಥಿಗಳು ಮತ್ತು ಪ್ರತಿನಿಧಿಗಳನ್ನು ಅವರ ಸಮವಸ್ತ್ರ ಮತ್ತು ಅಧಿಕೃತ ಗುರುತು ಚೀಟಿಯಿಂದ ಗುರುತಿಸಬಹುದು’ ಎಂದರು.

    ‘31 ವರ್ಷದ ನಾನು ಪಿಯುಸಿ ವರೆಗೆ ಶಿಕ್ಷಣ ಪಡೆದಿರುವೆ. ಶಿವಮೊಗ್ಗದಲ್ಲಿ ವೆಲ್ಡಿಂಗ್ ವರ್ಕ್‌ಶಾಪ್ ಇದೆ. ಸಮುದಾಯಕ್ಕೆ ಒಳ್ಳೆಯದು ಮಾಡಬೇಕೆಂಬ ಹಂಬಲ ಹೊಂದಿದ್ದರಿಂದ ಉಪೇಂದ್ರ ಅವರಿಂದ ಪ್ರಭಾವಿತನಾಗಿ ಪ್ರಜಾಕೀಯಕ್ಕೆ ಬಂದೆ’ ಎಂದರು.

    ಬೈಂದೂರು ಪ್ರದೇಶದಲ್ಲಿ ಪಕ್ಷದ ಹೊಣೆ ನಿರ್ವಹಿಸುತ್ತಿರುವ ಚೆನ್ನಯ್ಯ ಪೂಜಾರಿ ಉಪ್ಪುಂದ, ವೆಂಕಟೇಶ ಅವರ ಜತೆಗಾರರಾಗಿ ಶಿವಮೊಗ್ಗದಿಂದ ಬಂದಿದ್ದ ಡೇನಿ, ಪ್ರದೀಪ, ರಾಕೇಶ್, ಆದರ್ಶ ಇದ್ದರು.

    Click here

    Click here

    Click here

    Click Here

    Call us

    Call us

     

    ಧ್ಯೇಯಗಳು:  ನಾವು ನಾಯಕರೂ ಅಲ್ಲ,ಸೇವಕರೂ ಅಲ್ಲ, ನಿಮ್ಮಿಂದ ವೇತನ ಪಡೆದು ಕೆಲಸ ಮಾಡುವ ಕಾರ್ಮಿಕರು. ಇದೊಂದು ಸಂಪೂರ್ಣ ಬದಲಾವಣೆಯ ಪ್ರಯತ್ನ. ಕೇವಲೊಂದು ದಿನದ ಪ್ರಜಾಪ್ರಭುತ್ವ ಅಳಿಸಿ ನಿರಂತರ ಪ್ರಜಾಪ್ರಭುತ್ವಕ್ಕಾಗಿ ಯುಪಿಪಿ. ಗೆಲ್ಲುವುದಕ್ಕಾಗಿ ಚುನಾವಣೆಯ ಸಂದರ್ಭದಲ್ಲಿ ಬರುವವನು ರಾಜಕಾರಣಿ. ಗೆದ್ದ ನಂತರ ನಿರಂತರ ಸಂಪರ್ಕದಲ್ಲಿ ಇರುವವನು ಪ್ರಜಾಕಾರಣಿ. ನಿಮ್ಮದೇ ಆದ ಪ್ರಬಲವಾದ ಪ್ರಾದೇಶಿಕ ಪಕ್ಷದಿಂದ ಕೇಂದ್ರದಲ್ಲಿ ನಿಮಗೆ ಯಾವ ಸರ್ಕಾರ ಬೇಕು, ಕೇಂದ್ರದಿಂದ ನಿಮಗೆ ಏನಾಗಬೇಕು-ನಿರ್ಧಾರ ನಿಮ್ಮದೆ’ ಎಂದು ವೆಂಕಟೇಶ್‌ ಹೇಳಿದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ

    23/05/2026

    ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ

    23/05/2026

    ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ

    23/05/2026
    Leave A Reply Cancel Reply

    eight − eight =

    Call us

    Click Here

    Call us

    Call us

    Call us
    Highest Viewed Recently
    • ಅಂಪಾರು ಸಂಜಯ ಗಾಂಧಿ ಆಂಗ್ಲ ಮಾಧ್ಯಮ ಶಾಲೆ: ಗಾಂಧಾರಿ ವಿದ್ಯೆ ತರಬೇತಿ ಶಿಬಿರ
    • ಗಿಳಿಯಾರು ಯುವಕ ಮಂಡಲ ದಶಮಾನೋತ್ಸವ ಸಂಭ್ರಮ
    • ಮಂಗಳೂರು ವಿ.ವಿ ಅಂತರ್ ಕಾಲೇಜು ಮಹಿಳಾ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಆಳ್ವಾಸ್ ಚಾಂಪಿಯನ್‌
    • ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯ- ಸಹಸ್ರ ಪ್ರದಕ್ಷಿಣ ನಮಸ್ಕಾರಕ್ಕೆ ಚಾಲನೆ
    • ಡಾ. ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.