Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಖೇಲೋ ಇಂಡಿಯ ಕ್ರೀಡಾಕೂಟ: ಮಂಗಳೂರು ವಿವಿಯ ಪುರುಷ ಹಾಗೂ ಮಹಿಳಾ ತಂಡಕ್ಕೆ ಸಮಗ್ರ ಛಾಂಪಿಯನ್ ಪಟ್ಟ
    alvas nudisiri

    ಖೇಲೋ ಇಂಡಿಯ ಕ್ರೀಡಾಕೂಟ: ಮಂಗಳೂರು ವಿವಿಯ ಪುರುಷ ಹಾಗೂ ಮಹಿಳಾ ತಂಡಕ್ಕೆ ಸಮಗ್ರ ಛಾಂಪಿಯನ್ ಪಟ್ಟ

    Updated:02/03/2020No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ
    ಮೂಡುಬಿದಿರೆ: ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿ.ವಿ ಖೇಲೋ ಇಂಡಿಯ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಪುರುಷ ತಂಡ 64 ಅಂಕಗಳೊಂದಿಗೆ ಹಾಗೂ ಮಹಿಳಾ ತಂಡ 51 ಅಂಕಗಳೊಂದಿಗೆ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು. ಮಂಗಳೂರು ವಿವಿ ಒಟ್ಟು 115 ಅಂಕಗಳೊಂದಿಗೆ ಸಮಗ್ರ ಚಾಂಪಿಯನ್ನಾಗಿ ಹೊರಹೊಮ್ಮಿತು.

    Click Here

    Call us

    Click Here

    ಮಂಗಳೂರು ವಿವಿಯ ಒಟ್ಟು 7 ಚಿನ್ನ, 6 ಬೆಳ್ಳಿ ಹಾಗೂ 5 ಕಂಚಿನ ಪದಕದೊಂದಿಗೆ ಚಾಂಪಿಯನ್ನ ಪಟ್ಟವನ್ನು ತನ್ನಾದಾಗಿಸಿಕೊಂಡಿತು. ಮಂಗಳೂರು ವಿವಿಯನ್ನು ಪ್ರತಿನಿಧಿಸಿದ 32 ವಿದ್ಯಾರ್ಥಿಗಳ ತಂಡದಲ್ಲಿ 30 ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಾಗಿದ್ದರು. ಗಳಿಸಿದ ಒಟ್ಟು 18 ಪದಕಗಳಲ್ಲಿ 17 ಪದಕಗಳು ಆಳ್ವಾಸ್ ವಿದ್ಯಾರ್ಥಿಗಳ ಪಾಲಾಗಿದ್ದವು. ಬೆಳ್ಳಿ ಪದಕ ಪಡೆದ 4*100 ರಿಲೇಯ 4 ಜನರ ತಂಡದಲ್ಲಿ ಇಬ್ಬರು ಆಳ್ವಾಸ್‌ನ ವಿದ್ಯಾರ್ಥಿಗಳಾಗಿದ್ದು, ಉಳಿದಿಬ್ಬರೂ ಉಡುಪಿಯ ಎಂಜಿಎಂ ಕಾಲೇಜು ಹಾಗೂ ಗೋಣಿಕೊಪ್ಪದ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.

    ಮಂಗಳೂರು ವಿವಿಯ ಪುರುಷರ ಪದಕ ಪಟ್ಟಿ
    ಚಿನ್ನ- 4
    ಬೆಳ್ಳಿ-3
    ಕಂಚು- 4
    ಮಂಗಳೂರು ವಿವಿಯ ಮಹಿಳೆಯರ ಪದಕ ಪಟ್ಟಿ
    ಚಿನ್ನ- 3
    ಬೆಳ್ಳಿ-3
    ಕಂಚು- 1
    ಮಂಗಳೂರು ವಿವಿಯ ತಂಡದ ಸಂಖ್ಯೆ
    ಒಟ್ಟು- 32
    ಪುರುಷರು-17
    ಮಹಿಳೆಯರು- 15

    (ಆಳ್ವಾಸ್ ನ ವಿದ್ಯಾರ್ಥಿಗಳು- 30, ಉಡುಪಿಯ ಎಂಜಿಎಂ ಕಾಲೇಜು-01 ಗೋಣಿಕೊಪ್ಪದ ಕಾವೇರಿ ಕಾಲೇಜು -01)

    ಸಮಗ್ರ ತಂಡಗಳ ಅಂಕ
    ಮಂಗಳೂರು ವಿವಿ-115
    ಮಹಾತ್ಮಗಾಂಧಿ ವಿವಿ-94
    ಮದ್ರಾಸ್ ವಿವಿ-59

    Click here

    Click here

    Click here

    Click Here

    Call us

    Call us

    ಪಂದ್ಯಗಳಲ್ಲಿ ಮಂಗಳೂರು ವಿವಿಯ ಪದಕಗಳು
    ಮಹಿಳಾ ವಿಭಾಗದ 100 ಮೀಟರ‍್ಸ್‌ಡ್ಯಾಶ್‌ನ್ನು 11.99 ಸೆಕೆಂಡ್‌ಗಳಲ್ಲಿ ಪೂರೈಸಿದ
    ಆಳ್ವಾಸ್ ಕಾಲೇಜಿನ ವರ್ಷಾಗೆ ಹ್ಯಾಮರ್‌ಥ್ರೋನಲ್ಲಿ 51.80 ಮೀಟರ್ ಎಸೆತದೊಂದಿಗೆ ಚಿನ್ನದ ಪದಕ, ಎತ್ತರಜಿಗಿತದಲ್ಲಿ 1.74 ಮೀಟರ್‌ಎತ್ತರಕ್ಕೆ ಹಾರಿದಎಸ್. ಬಿ ಸುಪ್ರಿಯಾ ಚಿನ್ನದ ಪದಕವನ್ನು ತಮ್ಮದಾಗಿಸಿ ಕೊಂಡಿದ್ದಾರೆ.

    ಟ್ರಿಪಲ್‌ಜಂಪ್ ವಿಭಾಗದಲ್ಲಿ 12.78 ಮೀಟರ್ ಹಾರಿದ ಐಶ್ವರ್ಯಾಬಿ.ಗೆ ಚಿನ್ನದ ಪದಕ ಮತ್ತು 12.10 ಮೀಟರ್ ಹಾರಿದ ಅನುಷಾ ಜಿ. ಗೆ ಕಂಚಿನ ಪದಕ ಲಭಿಸಿದೆ.ಪುರುಷರ ವಿಭಾಗದ 200 ಮೀಟರ್‌ಡ್ಯಾಶ್ ವಿಭಾಗವನ್ನು 21.75 ಸೆಕೆಂಡ್‌ಗಳಲ್ಲಿ ಮುಗಿಸಿದ ವಿಘ್ನೇಶ್ ಎ. ಗೆ ಕಂಚಿನ ಪದಕ ಲಭಿಸಿದೆ.

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಮ್ಯಾನೇಜ್ ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು

    21/05/2026

    ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ

    20/05/2026

    ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ‘ಡಿಜಿಟಲ್ ಕಾಲಘಟ್ಟದಲ್ಲಿ ಮಾಧ್ಯಮ’ ಎಂಬ ವಿಚಾರ ಸಂಕಿರಣ

    30/04/2026
    Leave A Reply Cancel Reply

    4 × 3 =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.