ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೊಲ್ಲೂರು: ದೇವಸ್ಥಾನಗಳನ್ನು ಶೀಘ್ರ ತೆರೆಯಬೇಕು ಎಂಬ ಯೋಚನೆ ಇದ್ದರೂ ‘ಎ’ ದರ್ಜೆಯ ದೇವಸ್ಥಾನಗಳಿಗೆ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ನೀಡುವುದರಿಂದ ಸಾಮಾಜಿಕ ಅಂತರದ ತೊಂದರೆ ಎದುರಾಗುವುದರಿಂದ, ಪರಿಸ್ಥಿತಿ ಅವಲೋಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಕೊಲ್ಲೂರಿನಲ್ಲಿ ಯಕ್ಷಗಾನ ಕಲಾವಿದರಿಗೆ ಆಹಾರ ಕಿಟ್‌ಗಳ ವಿತರಣೆಗೆ ಚಾಲನೆ ನೀಡಿ ಮಾತನಾಡಿ ದೇವಸ್ಥಾನಗಳಲ್ಲಿ ತ್ರಿಕಾಲ ಪೂಜೆಯೂ ಸೇರಿದಂತೆ ಎಲ್ಲಾ ಪೂಜೆಗಳು ನಡೆಯುತ್ತಿದೆ. ಆದರೆ ತೆರೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಮಸ್ಯೆ ಇದೆ ಎಂದರು.
ರಾಜ್ಯದ ಎ ದರ್ಜೆ ದೇವಾಲಯಗಳಿಂದ ಈವರೆಗೆ ಕೋರೋನ ಕಾರಣದಿಂದ ಸಂತ್ರಸ್ಥರಾಗಿರುವವರಿಗೆ ಇಲ್ಲಿಯ ತನಕ 7.5 ಲಕ್ಷ ಊಟ ವಿತರಿಸಲಾಗಿದೆ. ದೇವಸ್ಥಾಗಳಲ್ಲಿ ಪೂಜೆ ಪುರಸ್ಕಾರಗಳಿದ್ದರೂ, ಅರ್ಚಕರಿಗೆ ತಟ್ಟೆಕಾಸಿಲ್ಲದಿರುವುದರಿಂದ ಅರ್ಚಕರಿಗೆ ಕಿಟ್ ವಿತರಿಸಲಾಗುತ್ತಿದೆ. ಜಿಲ್ಲಾಡಳಿತ ಮೂಲಕವೂ ಅಗತ್ಯವುಳ್ಳವರಿಗೆ ಮುಜರಾಯಿ ಇಲಾಖಾ ದೇವಸ್ಥಾಗಳ ಆಹಾರ ಕಿಟ್ ವಿತರಿಸಲಾಗಿದೆ. ಈಗ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಚಿಕ್ಕಮಂಗಳೂರು, ಶಿವಮೊಗ್ಗ ಜಿಲ್ಲೆಯ ಯಕ್ಷಗಾನ ಕಲಾವಿದರು ಮತ್ತು ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಲಾಗುತ್ತಿದೆ ಎಂದರು.

ರಾಜ್ಯದ ಶಾಮಿಯಾನ ಕಾರ್ಮಿಕರು, ಪೋಟೋಗ್ರಾಫರ್, ಮೀನುಗಾರರಲ್ಲಿ ಕೆಲವರು ಮತ್ತು ಟೈಲರಿಂಗ್ ಕೆಲಸ ಮಾಡುವರಿಗೂ ಪ್ಯಾಕೇಜ್ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಪರಿಶೀಲಿಸುವ ಭರವಸೆ ನೀಡಿದ್ದಾರೆ. ದೇವಾಡಿಗ ಸಮಾಜದವರು ವಾದ್ಯ ನುಡಿಸುವರ ಪರ, ಮಡಿಕೆ ಮಾಡುವರು, ಅಡುಗೆ ಕೆಲಸದವರು, ಶೇಂದಿ ತೆಗೆಯುವರ ಸಹಿತ ಅವರವರ ವೃತ್ತಿ ಹಾಗೂ ಸಮಾಜದ ಆಧಾರದಲ್ಲಿ ಬೇಡಿಕೆಯಿಟ್ಟಿದ್ದಾರೆ. ಎಲ್ಲರ ಬೇಡಿಕೆ ಈಡೆರಿಕೆ ಸಲುವಾಗಿ ಸರಕಾರ ತೀರ್ಮಾನ ಕೈಗೊಳ್ಳಬೇಕು. ಕೊರೋನಾದಿಂದ ಬದುಕು ಕಳೆದುಕೊಂಡವರು, ಆತಂಕದಲ್ಲಿರುವರ ಜೊತೆ ಸರಕಾರ ಇದೆ ಎಂದವರು ಭರವಸೆ ನೀಡಿದರು./ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಹೊರ ದೇಶ ಮತ್ತು ರಾಜ್ಯದಿಂದ ಬರುವವರ ಕ್ವಾರಂಟೈನ್‌ಗೆ ಸಕಲ ವ್ಯವಸ್ಥೆ: ಜಿಲ್ಲಾಧಿಕಾರಿ ಜಿ. ಜಗದೀಶ್ – https://kundapraa.com/?p=37398 .
► ಮುಂಬೈಯಿಗರು ಉಡುಪಿ ಜಿಲ್ಲೆಗೆ ಆಗಮಿಸಲು ಅನುಮತಿ. ಸೇವಾಸಿಂಧು ಪಾಸ್, ಕ್ವಾರಂಟೈನ್ ಕಡ್ಡಾಯ – https://kundapraa.com/?p=37387 .
► ಅಂತರಾಜ್ಯ ಸಂಚಾರಕ್ಕೆ ಸೇವಾಸಿಂಧುವಿನಲ್ಲಿ ನೊಂದಣಿ ಅಗತ್ಯ – https://kundapraa.com/?p=37276 .
► ಭಟ್ಕಳದಲ್ಲಿ ಹೆಚ್ಚಿದ ಕೋರೋನಾ ಸೋಂಕು: ಜಿಲ್ಲೆಯ ಶಿರೂರು ಗಡಿಯಲ್ಲಿ ಕಟ್ಟೆಚ್ಚರ – https://kundapraa.com/?p=37403 .
► ಕುಂದಾಪುರ: ಹೊರ ರಾಜ್ಯ, ದೇಶದಿಂದ ಬರುವವರಿಗೆ ಕ್ವಾರಂಟೈನ್ ಮಾಡಲು ಸೂಕ್ತ ವ್ಯವಸ್ಥೆ – https://kundapraa.com/?p=37420 .
► ಕೊರೋನಾ ಹರಡುವಿಕೆ ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ಕಾರ್ಯ ಶ್ಲಾಘನಾರ್ಹ – https://kundapraa.com/?p=37428 .















