ಹೊರ ಜಿಲ್ಲೆ ಸಂಚಾರಕ್ಕೆ ಅನುಮತಿಯಿಲ್ಲ. ಹೊರ ರಾಜ್ಯ ಸಂಚಾರಕ್ಕೆ ಸೇವಾಸಿಂಧು ನೊಂದಣಿ ಅಗತ್ಯ: ಉಡುಪಿ ಜಿಲ್ಲಾಧಿಕಾರಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೂಲಿ ಕಾರ್ಮಿಕರು, ಪ್ರವಾಸಿಗರು ಹಾಗೂ ಆರೋಗ್ಯ ಸಂಬಂಧಿ ಕಾರಣವನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಅಂತರ್ಜಿಲ್ಲಾ ಹಾಗೂ ಅಂತರಾಜ್ಯ ಪ್ರಯಾಣಕ್ಕೆ ಎ.17ರ ತನಕವೂ ಅವಕಾಶ ನೀಡಲಾಗುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದಾರೆ.

Call us

Click Here

ಬೇರೆ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಗೆ ತೆರಳಬೇಕಿರುವ ಕೂಲಿ ಕಾರ್ಮಿಕರು, ಆರೋಗ್ಯ ಮತ್ತು ಇನ್ನಿತರ ತುರ್ತು ಕಾರಣಕ್ಕಾಗಿ ತೆರಳಬೇಕಾದವರಿಗೆ ಮಾತ್ರ ಸದ್ಯ ಅನುಮತಿ ನೀಡಲಾಗುತ್ತದೆ. ಬೇರೆ ರಾಜ್ಯಕ್ಕೆ ತೆರಳಬೇಕಾದವರು ಹಾಗೂ ಬೇರೆ ರಾಜ್ಯದಿಂದ ಬರಬೇಕಾದವರು ಸೇವಾ ಸಿಂಧು ವೆಬ್‌ಸೈಟ್ ಮೂಲಕ ನೊಂದಣಿ ಮಾಡಿಕೊಳ್ಳುವುದು ಕಡ್ಡಾಯ. ಆ ಬಳಿಕ  ಅರ್ಜಿ ಪರಿಶೀಲಿಸಿ ಅವರಿಗೆ ಅನುಮತಿ ನೀಡಲಾಗುತ್ತದೆ. ಬದಲಾಗಿ ಜಿಲ್ಲಾಧಿಕಾರಿಗಳ ಕಛೇರಿ, ತಹಶೀಲ್ದಾರರ ಕಛೇರಿ ಎದುರು ಪಾಸ್‌ಗಾಗಿ ಕಾಯುವಂತಿಲ್ಲ ಎಂದವರು ತಿಳಿಸಿದ್ದಾರೆ.

ಸೇವಾ ಸಿಂಧುವಿನಲ್ಲಿ ನೊಂದಣಿ ಹೇಗೆ? (ಹೊರ ರಾಜ್ಯ ಸಂಚಾರ ಮಾಡುವವರಿಗೆ)
ಹೊರರಾಜ್ಯಗಳಿಂದ ಬರುವ ಮತ್ತು ಹೊರರಾಜ್ಯಗಳಿಗೆ ಹೋಗುವ ವಲಸೆ ಕಾರ್ಮಿಕರು, ಯಾತ್ರಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳು ಲಾಕ್‌ಡೌನ್ ಕಾರಣದಿಂದಾಗಿ ಅವರ ಸ್ವಂತ ರಾಜ್ಯಗಳಿಗೆ ತೆರಳಲು ಸಾಧ್ಯವಾಗದೇ ಇಲ್ಲಿಯೇ ಉಳಿದಿದ್ದು, ಅಂತಹವರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡುವ ಬಗ್ಗೆ ಅಗತ್ಯ ಕ್ರಮ ವಹಿಸುವಂತೆ ತಿಳಿಸಲಾಗಿದೆ.

ಉಡುಪಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸ್ತವ್ಯ ಇರುವ ಹೊರರಾಜ್ಯಗಳ ವಲಸೆ ಕಾರ್ಮಿಕರು, ಯಾತ್ರಿಕರು ,ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳನ್ನು ಅವರವರ ರಾಜ್ಯಗಳಿಗೆ ಹೋಗುವ ಹಿನ್ನೆಲೆಯಲ್ಲಿ ಇಂತಹವರು http://sevasindhu.karnataka.gov.in/ ರಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

Click here

Click here

Click here

Click Here

Call us

Call us

ಆದುದರಿಂದ ಉಡುಪಿ ಜಿಲ್ಲೆಗೆ ಹೊರರಾಜ್ಯಗಳಿಂದ ಬರುವ ಮತ್ತು ಹೊರರಾಜ್ಯಗಳಿಗೆ ಹೋಗಲು ಇಚ್ಛಿಸುವವರು ಸದ್ರಿ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸದ್ರಿ ವೆಬ್‌ಸೈಟ್‌ನಲ್ಲಿ ನಿಗಧಿತ ನಮೂನೆಯಲ್ಲಿ ಸಂಪೂರ್ಣ ಮಾಹಿತಿಯನ್ನು ದಾಖಲಿಸುವುದು ಗುರುತಿನ ಬಗ್ಗೆ Voter ID, Aadhar Card, Diving License, PAN Card, Passport ಇವುಗಳಲ್ಲಿ ಯಾವುದಾದರು ಒಂದು ದಾಖಲೆ ಹಾಗೂ ವ್ಯಕ್ತಿಯ ಭಾವಚಿತ್ರವನ್ನು (PDF Format) Upload ಮಾಡುವುದು. ಈ ಬಗ್ಗೆ ಯಾವುದಾದರೂ ಮಾಹಿತಿ / ಸಹಾಯ ಬೇಕಾಗಿದ್ದಲ್ಲಿ ಈ ಕೆಳಗಿನವರನ್ನು ಅಥವಾ Toll Free No: 1077 ನ್ನು ಅಥವಾ ನಾಗರಾಜ್ ರಾವ್, ಜಿಲ್ಲಾ ಅಂಕಿ ಸಂಖ್ಯಾ ಸಂಗ್ರಹಣಾಧಿಕಾರಿ ಮೊ – 9880278233 ಮತ್ತು ಪ್ರಮೋದ್ ಎಸ್ ಆರ್ ಇ District Project Manager ಮೊ – 9482641973 ಇವರನ್ನು ಸಂಪರ್ಕಿಸಬಹುದಾಗಿದೆ.

Leave a Reply