ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು/ವಂಡ್ಸೆ: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳ ನೀತಿಗಳು ರೈತರು, ಕಾರ್ಮಿಕರು ಹಾಗೂ ಬಡವರ್ಗಕ್ಕೆ ಶಾಪವಾಗಿದೆ. ದೇಶದ ನಾಗರಿಕರಿಗೆ ಅನುಕೂಲ ಮಾಡಿಕೊಡುವ ಬದಲಿಗೆ, ಲಾಭದಾಯಕ ಸಂಸ್ಥೆಗಳನ್ನು ಅಂಬಾನಿ, ಅದಾನಿಯಂತಹ ಉದ್ಯಮಿಗಳಿಗೆ ಮಾರಿರುವುದೇ ಮೋದಿ ಸರ್ಕಾರದ ಮಹಾನ್ ಸಾಧನೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು.
ಅವರು ಬೈಂದೂರು ತಹಶೀಲ್ದಾರರ ಕಛೇರಿ ಎದುರು ಹಾಗೂ ವಂಡ್ಸೆ ಪೇಟೆಯಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರತ್ಯೇಕವಾಗಿ ಆಯೋಜಿಸಿದ್ದ ಜನದ್ವನಿ – ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ರಾಜ್ಯ ಸರ್ಕಾರ ಸುಗ್ರಿವಾಜ್ಞೆಯ ಮೂಲಕ ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ, ಕಾರ್ಮಿಕ ವಿರೋಧ ಕಾಯ್ದೆ ತಿದ್ದುಪಡಿ ಮಾಡಿ ರೈತರು ಹಾಗೂ ಕಾರ್ಮಿಕರನ್ನು ಬೀದಿ ತಳ್ಳುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದ ಅವರು ಕೊರೋನಾ ನಿಯಂತ್ರಣದಲ್ಲಿ ವ್ಯಾಪಾಕ ಭ್ರಷ್ಟಾಚಾರ ಕಂಡುಬಂದಿದ್ದು, ಪೆಟ್ರೋಲ್, ಡಿಸೇಲ್ ದರ ಗಗನ್ನಕ್ಕೇರಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಜನರನ್ನು ಸುಲಿಗೆ ಮಾಡುತ್ತಿದೆ. ಇಂತಹ ಸರ್ಕಾರದ ಅವಧಿಯಲ್ಲಿ ಜನಸಾಮಾನ್ಯರು, ಕೂಲಿ ಕಾರ್ಮಿಕರು ಬದುಕು ದುಸ್ತರವಾಗಿದೆ ಎಂದರು.
ಬೈಂದೂರಿನಲ್ಲಿ ಜರುಗಿದ ಜನಧ್ವನಿ – ಪ್ರತಿಭಟನೆಯಲ್ಲಿ ಈ ಸಂದರ್ಭದಲ್ಲಿ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ, ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿ.ಪಂ ಸದಸ್ಯೆ ಗೌರಿ ದೇವಾಡಿಗ, ತಾ.ಪಂ ಸದಸ್ಯ ಜಗದೀಶ ದೇವಾಡಿಗ, ಪ್ರಮೀಳಾ ದೇವಾಡಿಗ, ಕಿಸಾನ್ ಘಟಕದ ರಾಜೇಶ ದೇವಾಡಿಗ, ಪರಿಶಿಷ್ಟ ಪಂಗಡಗಳ ಅಧ್ಯಕ್ಷ ಮಹಾಲಿಂಗ ನಾಯ್ಕ್, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ ಉಪ್ಪುಂದ, ಕಾರ್ಯಾಧ್ಯಕ್ಷ ಪ್ರಶಾಂತ ಪೂಜಾರಿ, ನಾಗರಾಜ ಗಾಣಿಗ, ಮೋಹನ್ ಪೂಜಾರಿ, ವಾಸು ಪೂಜಾರಿ, ಮಣಿಕಂಠ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಬೈಂದೂರು ತಹಶೀಲ್ದಾರ ಬಿ.ಪಿ. ಪೂಜಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ವಂಡ್ಸೆಯಲ್ಲಿ ಜರುಗಿದ ಜನಧ್ವನಿ – ಪ್ರತಿಭಟನೆಯಲ್ಲಿ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ಕುಮಾರ್ ಶೆಟ್ಟಿ, ಮುಖಂಡರುಗಳಾದ ಮಂಜಯ್ಯ ಶೆಟ್ಟಿ, ಅನಂತ ಮೋವಾಡಿ, ಉದಯಕುಮಾರ್ ಶೆಟ್ಟಿ, ಶರತ್ಕುಮಾರ್ ಶೆಟ್ಟಿ, ತಾಪಂ ಸದಸ್ಯ ಉದಯ ಪೂಜಾರಿ, ಕಾಂಗ್ರೆಸ್ ಐಟಿ ಸೆಲ್ ಪ್ರಮುಖ ಚಂದ್ರಶೇಖರ ಶೆಟ್ಟಿ, ಯುತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪ್ರಶಾಂತ ಪೂಜಾರಿ, ಮಹಿಳಾ ಕಾಂಗ್ರೆಸ್ನ ಮಂಜುಳಾ ದೇವಾಡಿಗ ಮೊದಲಾದವರು ಇದ್ದರು.




















