ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ತೆಕ್ಕಟ್ಟೆ ಶಾಖೆಯ ನೇತೃತ್ವದಲ್ಲಿ NABARD ಸಹಾಯದೊಂದಿಗೆ ಗ್ರಾಹಕರಿಗೆ ಸಹಕಾರಿ ಸಾಕ್ಷರತಾ ಶಿಬಿರ ತೆಕ್ಕಟ್ಟೆ ಶಾಖಾ ವಠಾರದಲ್ಲಿ ನಡೆಯಿತು,
ತೆಕ್ಕಟ್ಟೆ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ ಕುಮಾರ ಅಧ್ಯಕ್ಷತೆ ವಹಿಸಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗ್ರಾಮೀಣ ಭಾಗಗಳಲ್ಲಿ ತನ್ನ ಶಾಖೆಗಳನ್ನು ತರೆಯುವುದರ ಮೂಲಕ ಗ್ರಾಮೀಣ ಜನರ ಆರ್ಥಿಕ ಅವಶ್ಯಕತೆಗಳನ್ನು ಇಡೇರಿಸಿರುವುದಲ್ಲದೇ, ತೆಕ್ಕಟ್ಟೆ ವ್ಯಾಪ್ತಿಯ ಗ್ರಾಹಕರಿಗೆ ಸಹಕಾರಿ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಬಗ್ಗೆ ತೆಕ್ಕಟ್ಟೆ ಶಾಖೆಯ ಶಾಖಾ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರಿಗೆ ಈ ಸಂದರ್ಭದಲ್ಲಿ ತೆಕ್ಕಟ್ಟೆ ಗ್ರಾಮ ಪಂಚಾಯತ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಎಸ್‌ಸಿಡಿಸಿಸಿ ಕುಂದಾಪುರ ಶಾಖಾ ವ್ಯವಸ್ಥಾಪಕರಾದ ಪ್ರವೀಣ ಶೆಟ್ಟಿ ಎಚ್.ಕೆ. ಹಾಗೂ ಉಪ್ಪುಂದ ಶಾಖೆಯ ಶಾಖಾ ವ್ಯವಸ್ಥಾಪಕರಾದ ಶಂಕರ ಶೆಟ್ಟಿ ಇವರು ತಮ್ಮ ಬ್ಯಾಂಕಿನಲ್ಲಿ ಸಿಗುವ ವಿವಿದ ಸೌಲಭ್ಯಗಳ ಬಗ್ಗೆ ಗ್ರಾಹಕರಿಗೆ ಮನವರಿಕೆ ಮಾಡಿದರು.
ಸಂಪನ್ಮೂಲ ವ್ಯಕ್ತಿ ಆಶಾರವರು ಕೇಂದ್ರ ಸರಕಾರದ ಜನ ಸುರಕ್ಷಾ ಯೋಜನೆಯ ಬಗ್ಗೆ ಅರಿವು ಮೂಡಿಸಿದರು. ತೆಕ್ಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಜನಾರ್ಧನ ದೇವಾಡಿಗ, ಉಳ್ಳೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ಶೆಟ್ಟಿ, ಎಸ್‌ಸಿಡಿಸಿಸಿ ಕೇಂದ್ರ ಕಛೇರಿಯ ನಿಯೋಜಿತ ಅಧಿಕಾರಿಗಳಾದ ಹರ್ಷ ಹೆಗ್ಡೆ, ಶಂಭುಲಿಂಗ, ಕೊಟೇಶ್ವರ ಶಾಖೆಯ ಶಾಖಾ ವ್ಯವಸ್ಥಾಪಕರಾದ ಪಿಯದರ್ಶಿನಿ, ವಡೇರಹೋಬಳಿ ಶಾಖೆಯ ಶಾಖಾ ವ್ಯವಸ್ಥಾಪಕರಾದ ಸುಹಾಸಿನಿ, ಸಹಕಾರ ಸಂಘಗಳ ಕುಂದಾಪುರ ವಲಯ ನೀರೀಕ್ಷರಾದ ಸಂದೀಪ ಕುಮಾರ ಶೆಟ್ಟಿ ಹಾಗೂ ಕೋಮೆ ಕೊರವಡಿ VSSN ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಪೂಜಾರಿ ಹಾಗೂ ನವೋದಯ ಪ್ರೇರಕರು, ನಿತ್ಯಾಧಾರ ಸಂಗ್ರಾಹಕರು ಹಾಗೂ ಬ್ಯಾಂಕಿನ ಗ್ರಾಹಕರು ಉಪಸ್ಥಿತರಿದ್ದರು.
ಶಾಖಾ ವ್ಯವಸ್ಥಾಪಕರಾದ ನಿತಿನ್ ಕುಮಾರ ಶೆಟ್ಟಿ ಪ್ರಸ್ತಾವಿಸಿ, ರೇವತಿ ಪ್ರಾರ್ಥಿಸಿ, ರವೀಶ ಕೊರವಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.















