ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಆ.22ರ ಶನಿವಾರ 348 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 132, ಉಡುಪಿ ತಾಲೂಕಿನ 165 ಹಾಗೂ ಕಾರ್ಕಳ ತಾಲೂಕಿನ 46 ಮಂದಿಗೆ ಪಾಸಿಟಿವ್ ಬಂದಿದೆ. 5 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದ ಪ್ರಕರಣಗಳು ಒಟ್ಟು 10,016 ಆಗಿದ್ದು, 2,842 ಸಕ್ರೀಯ ಪ್ರಕರಣಗಳಿವೆ.
ಒಟ್ಟು ಪ್ರಕರಣಗಳಲ್ಲಿ 74 ಸಿಂಥಮೇಟಿವ್ ಹಾಗೂ 274 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 171 ಪುರುಷರು, 177 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 178, ILI 42, ಸಾರಿ 2 ಪ್ರಕರಣವಿದ್ದು, 124 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 2 ಮಂದಿ ಅಂತರ್ಜಿಲ್ಲಾ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 51 ಮಂದಿ ಆಸ್ಪತ್ರೆಯಿಂದ ಹಾಗೂ 184 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ.
975 ನೆಗೆಟಿವ್:
ಈ ತನಕ ಒಟ್ಟು 63925 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 53057 ನೆಗೆಟಿವ್, 10016 ಪಾಸಿಟಿವ್ ಬಂದಿದ್ದು, 825 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 975 ನೆಗೆಟಿವ್, 348 ಪಾಸಿಟಿವ್ ಬಂದಿದೆ.
2,842 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 10016 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 7092 ಮಂದಿ ಬಿಡುಗಡೆಯಾಗಿದ್ದು, ಒಟ್ಟು 2842 ಸಕ್ರಿಯ ಪ್ರಕರಣಗಳಲ್ಲಿ 1175 ಮಂದಿ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಮೂಲಕ ನಿಗಾದಲ್ಲಿದ್ದಾರೆ ಹಾಗೂ 1667 ಮಂದಿ ಹೋಮ್ ಐಸೋಲೇಶನಿನಲ್ಲಿದ್ದಾರೆ. ಈವರೆಗೆ ಒಟ್ಟು 82 ಮಂದಿ ಮೃತಪಟ್ಟಿದ್ದಾರೆ.